ಎಲ್‌ಜಿಯ ಕಂಪ್ರೆಸ್ಡ್ ಏರ್ ಸಿಸ್ಟಮ್ ಬಳಸುವ ಮೂಲಕ ವರ್ಷಕ್ಕೆ $160,000 ಮತ್ತು 20 ಲಕ್ಷ ಕೆಡಬ್ಲ್ಯೂಎಚ್ ಉಳಿತಾಯ, ದಕ್ಷತೆ ಹೆಚ್ಚಿಸಿಕೊಂಡ ಮಾನ್+ಹಮ್ಮೆಲ್
ಫಿಲ್ಟರೇಶನ್ ಸಿಸ್ಟಮ್ ಗಳ ಪ್ರಮುಖ ತಯಾರಕರಾಗಿರುವ ಎಲ್ ಜಿ ಸಂಸ್ಥೆಯು ಹಲವು ಉದ್ಯಮಗಳ ಹಳೆಯ ಸಿಸ್ಟಮ್ ಗಳನ್ನು ಬದಲಾಯಿಸಿದೆ. ಆ ಸಿಸ್ಟಮ್ ಗಳು ದಿನಕ್ಕೆ 20ಕ್ಕೂ ಹೆಚ್ಚು ಸಲ ಗಾಳಿ ಸಂಬಂ ಧಿತ ಸಮಸ್ಯೆಗಳನ್ನು ಉಂಟುಮಾಡುತ್ತಿತ್ತು ಮತ್ತು ಉತ್ಪನ್ನ ಹಾನಿ, ಹಾಗೂ ವಿಳಂಬ ಮತ್ತು ವ್ಯರ್ಥ ಸಂಪನ್ಮೂಲಗಳಿಂದ ಲಕ್ಷಾಂತರ ಡಾಲರ್ ಗಳ ನಷ್ಟಕ್ಕೆ ಕಾರಣವಾಗಿತ್ತು.


ಬೆಂಗಳೂರು: ಫಿಲ್ಟರೇಶನ್ ಸಿಸ್ಟಮ್ ಗಳ ತಯಾರಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿ ಯಲ್ಲಿರುವ ಮಾನ್+ ಹಮ್ಮೆಲ್ ಸಂಸ್ಥೆಯು ಎಲ್‌ಜಿ ಈಕ್ವಿಪ್‌ಮೆಂಟ್ಸ್ ಲಿಮಿಟೆಡ್‌ನ (BSE: 522074 | NSE: ELGIEQUIP) ಅಂಗಸಂಸ್ಥೆಯಾದ ಪ್ಯಾಟನ್ಸ್ ಇಂಕ್, ಯುಎಸ್‌ಎ ಜೊತೆಗಿನ ಸಹಭಾಗಿತ್ವದಲ್ಲಿ ತನ್ನ ಕಂಪ್ರೆಸ್ಡ್ ಏರ್ ಸಿಸ್ಟಮ್ ಅನ್ನು ಯಶಸ್ವಿಯಾಗಿ ನವೀಕರಣಗೊಳಿಸಿದೆ. ಎಲ್‌ಜಿಯ ಅತ್ಯಾಧು ನಿಕ ಏರ್ ಕಂಪ್ರೆಸರ್ ಗಳು ಮತ್ತು ಡ್ರೈಯರ್ ಗಳಿಂದ ಚಾಲಿತವಾದ ಈ ಹೊಸ ಸಿಸ್ಟಮ್ ಗಣನೀಯ ವಾಗಿ ವೆಚ್ಚ ಉಳಿತಾಯ ಮಾಡಲಿದ್ದು, ಉತ್ಪಾದನಾ ದಕ್ಷತೆಯಲ್ಲಿ ಸುಧಾರಣೆ ತರಲಿದೆ ಮತ್ತು ಉತ್ಪನ್ನ ಗುಣಮಟ್ಟವನ್ನು ಹೆಚ್ಚಿಸಿಸಲಿದೆ. ಈ ಮೂಲಕ ಮಾನ್+ಹಮ್ಮೆಲ್‌ನ ಉತ್ಪಾದನಾ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಪರಿವರ್ತಿಸಿದೆ.
ಮಾನ್+ಹಮ್ಮೆಲ್ ಆಟೋಮೋಟಿವ್, ಕೃಷಿ, ನಿರ್ಮಾಣ, ಡೇಟಾ ಸೆಂಟರ್ ಗಳು, ಇಂಧನ, ಆಹಾರ ಮತ್ತು ಪಾನೀಯ ಸೇರಿದಂತೆ ಹಲವು ಉದ್ಯಮಗಳಿಗೆ ಸೇವೆ ಸಲ್ಲಿಸುತ್ತದೆ. ಕಂಪನಿಯ ಉತ್ಪಾದನಾ ಪ್ರಕ್ರಿಯೆಗಳು ಕಂಪ್ರೆಸ್ಡ್ ಏರ್ ಮತ್ತು ಶುದ್ಧ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿದ್ದವು, ಆದರೆ ಹಳೆಯ ಮತ್ತು ದೋಷಪೂರಿತ ಏರ್ ಕಂಪ್ರೆಷನ್ ವ್ಯವಸ್ಥೆಯಿಂದ ದಿನಕ್ಕೆ 20ಕ್ಕೂ ಹೆಚ್ಚು ಗಾಳಿ ಸಂಬಂಧಿತ ಸಮಸ್ಯೆಗಳು ಉಂಟಾಗುತ್ತಿದ್ದವು ಮತ್ತು ಗಂಟೆಗೆ 30 ಗ್ಯಾಲನ್ ಗಳಷ್ಟು ನೀರು ಕಲುಷಿತ ವಾಗುತ್ತಿತ್ತು. ಇದರಿಂದ ಕಂಪನಿಗೆ ವರ್ಷಕ್ಕೆ $160,000ಕ್ಕಿಂತ ಹೆಚ್ಚು ನಷ್ಟವಾಗುತ್ತಿತ್ತು. ಜೊತೆಗೆ ವಿಳಂಬ, ಸಂಪನ್ಮೂಲಗಳ ವ್ಯರ್ಥ ಮತ್ತು ಪೂರೈಕೆ ಸರಪಳಿಯಲ್ಲಿ ಸಮಸ್ಯೆ ಇತ್ಯಾದಿ ತೊಂದರೆಗಳು ಉಂಟಾಗುತ್ತಿದ್ದವು.
ಇದನ್ನೂ ಓದಿ: Bangalore News: ಅವಧಿಗೂ ಮುನ್ನ ಜನಿಸಿದ 830 ಗ್ರಾಂ ತೂಕದ ಶಿಶುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ವೈದ್ಯರು!
ಈ ಕುರಿತು ಮಾತನಾಡಿರುವ ಮಾನ್+ಹಮ್ಮೆಲ್ ನ ಮ್ಯಾನುಫ್ಯಾಕ್ಚರಿಂಗ್ ಎಂಜಿನಿಯರಿಂಗ್‌ನ ಹಿರಿಯ ವ್ಯವಸ್ಥಾಪಕ ಸ್ಟೀವನ್ ಓವೆನ್ಸ್ ಅವರು, “ಏರ್ ಸಿಸ್ಟಮ್ ವಿಫಲವಾದಾಗ ಉತ್ಪಾದನೆ ಮಾತ್ರ ನಿಲ್ಲುವುದಿಲ್ಲ, ಜೊತೆಗೆ ಪೂರೈಕೆ ಸರಪಳಿಯಲ್ಲಿ ತೊಂದರೆ ಉಂಟಾಗುತ್ತದೆ. ಉತ್ಪನ್ನ ರವಾನೆಯಲ್ಲಿ ವಿಳಂಬವಾಗುತ್ತದೆ. ನಿರ್ವಹಣಾ ವೆಚ್ಚ ಹೆಚ್ಚಳವಾಗುತ್ತದೆ ಮತ್ತು ಗ್ರಾಹಕರ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತದೆ,” ಎಂದು ಹೇಳಿದರು.
ಮಾನ್+ಹಮ್ಮೆಲ್ ಕಂಪನಿಯು ಪ್ಯಾಟನ್ಸ್ ಜೊತೆ ಸೇರಿಕೊಂಡು ಈ ವ್ಯವಸ್ಥೆಯನ್ನು ಎಲ್‌ಜಿ ಏರ್ ಕಂಪ್ರೆಸರ್ ಗಳು ಮತ್ತು ಡ್ರೈಯರ್ ಗಳ ಜೊತೆಗೆ ಬದಲಾಯಿಸಿತು. ಪ್ಯಾಟನ್ಸ್ ಕಂಪನಿಯು ಮಾನ್+ ಹಮ್ಮೆಲ್ ಕಂಪನಿಯ ಉತ್ಪಾದನಾ ಘಟಕಕ್ಕೆ ಸೂಕ್ತ ರೀತಿಯಲ್ಲಿ ಸರಿಹೊಂದುವ ವ್ಯವಸ್ಥೆಯನ್ನು ರೂಪಿಸಿತು. ಇದರ ಅನುಷ್ಠಾನ ಪ್ರಕ್ರಿಯೆಯು 12 ವಾರಗಳನ್ನು ತೆಗೆದುಕೊಂಡಿದ್ದು, ಈ ಸಮಯ ದಲ್ಲಿ, ಪ್ಯಾಟನ್ಸ್ ಬಾಡಿಗೆ ಕಂಪ್ರೆಸ್ಸರ್ ಗಳನ್ನು ಒದಗಿಸಿ $500,000 ಉಳಿಸಿತು.
ಈ ಕಾರ್ಯಕ್ಕಾಗಿ ಐದು ಎಲ್‌ಜಿ ಇಜಿ-160 ರೋಟರಿ ಸ್ಕ್ರೂ ಏರ್ ಕಂಪ್ರೆಸರ್ ಗಳನ್ನು ಆಯ್ಕೆ ಮಾಡಲಾಗಿದ್ದು, ಅವುಗಳಲ್ಲಿ ಮೂರು ಸ್ಥಿರ-ವೇಗದವು ಸ್ಥಿರವಾಗಿ ಗಾಳಿ ಪೂರೈಕೆಯನ್ನು ಮಾಡಿ ದರೆ, ಎರಡು ವೇರಿಯಬಲ್ ಫ್ರೀಕ್ವೆನ್ಸಿ ಡ್ರೈವ್ (ವಿ ಎಫ್ ಡಿ) ಗಳು ಬೇಡಿಕೆಗೆ ತಕ್ಕಂತೆ ಗಾಳಿಯನ್ನು ಸರಿಹೊಂದಿಸಿ ವಿದ್ಯುತ್ ಅನ್ನು ಉಳಿಸಿದವು. ತೇವಾಂಶವನ್ನು ತೆಗೆದು ಉಪಕರಣ ಹಾನಿಯಾಗ ದಂತೆ ತಡೆಯಲು ಮತ್ತು ಒತ್ತಡದ ಏರಿಳಿತಗಳನ್ನು ತಡೆಯಲು ಮೂರು ಎಲ್‌ಜಿ ಎಆರ್-2350 ಎಂಬ ಉನ್ನತ- ಕಾರ್ಯಕ್ಷಮತೆಯ ಗಾಳಿ ಡ್ರೈಯರ್ ಗಳನ್ನು ಸ್ಥಾಪಿಸಲಾಯಿತು. ಏರ್‌ಮ್ಯಾಟಿಕ್ಸ್ ಸ್ಮಾರ್ಟ್ ಕಂಟ್ರೋಲ್ ಸಿಸ್ಟಮ್ ಕಂಪ್ರೆಸರ್ ಕಾರ್ಯಾಚರಣೆಯನ್ನು ಸ್ವಯಂಚಾಲಿತಗೊಳಿಸಿ ವಿದ್ಯುತ್ ಬಳಕೆಯನ್ನು ಉತ್ತಮಗೊಳಿಸಿತು, ಮತ್ತು ಏರ್‌ಮೇಟ್ ಏರ್ ರಿಸೀವರ್ ಒದ್ದೆ ಮತ್ತು ಒಣ ಟ್ಯಾಂಕ್ ಗಳು ತೇವಾಂಶ ಮಟ್ಟವನ್ನು ಸರಿ ಮಾಡಿದವು. ಅವುಗಳು ತಕ್ಷಣವೇ ಉತ್ತಮ ಪರಿಣಾಮ ನೀಡಿದವು.
ಈ ಬಗ್ಗೆ ಸ್ಟೀವನ್ ಅವರು “ಇದು ಹೊಸ ಘಟಕವನ್ನು ಪಡೆದಂತೆ ಆಯಿತು,” ಎಂದು ಹೇಳಿದರು. ಮಾತು ಮುಂದಿವರಿಸಿ, “ನವೀಕರಣಕ್ಕಿಂತ ಮೊದಲು, ಗಾಳಿಯ ಒತ್ತಡ ಕಡಿಮೆಯಾಗುವುದು, ಹರಿವು ಕಡಿಮೆ ಆಗುವುದು, ಮತ್ತು ತೇವಾಂಶ ಕಲುಷಿತಗೊಳ್ಳುವುದರಿಂದ ನಾವು ನಿರಂತರವಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿತ್ತು. ಪ್ರತಿದಿನ ಉತ್ಪಾದನೆ ನಿಂತು, ನಿರ್ವಹಣಾ ತಂಡಗಳು ಸಮಸ್ಯೆ ಗಳನ್ನು ಸರಿಪಡಿಸಲು ಓಡಾಡುತ್ತಿದ್ದವು, ಮತ್ತು ಪ್ರತಿ ನಿಮಿಷವೂ ಈ ಸಮಸ್ಯೆಯಿಂದ ಹಣ ಕಳೆದು ಕೊಳ್ಳುತ್ತಿದ್ದೆವು. ಹೊಸ ವ್ಯವಸ್ಥೆ ಆರಂಭವಾದ ಮೇಲೆ ಈ ಎಲ್ಲವೂ ಸರಿಯಾಗಿ ಕೆಲಸ ಮಾಡತೊಡ ಗಿತು. ವರ್ಷಗಳಲ್ಲಿ ಮೊದಲ ಬಾರಿಗೆ ಇಡೀ ಘಟಕದಲ್ಲಿ ಸ್ಥಿರವಾದ ಮತ್ತು ವಿಶ್ವಾಸಾರ್ಹದ ಕಂಪ್ರೆಸ್ಡ್ ಏರ್ ಲಭ್ಯವಾಯಿತು” ಎಂದು ಹೇಳಿದರು.
ಸುಧಾರಿತ ಏರ್ ಕಂಪ್ರೆಷನ್ ಸಿಸ್ಟಮ್ ಮಾನ್+ಹಮ್ಮೆಲ್‌ನ ಉತ್ಪನ್ನ ಗುಣಮಟ್ಟವನ್ನು ಸುಧಾರಿಸಿತು. ನವೀಕರಣದ ಮೊದಲು ಗಂಟೆಗೆ 30 ಗ್ಯಾಲನ್ ಗಳಷ್ಟು ನೀರು ಏರ್ ಸಿಸ್ಟಮ್ ಗೆ ಸೇರಿ, ಸೀಲ್‌ಗಳು, ಸಿಲಿಂಡರ್‌ಗಳು ಮತ್ತು ನ್ಯೂಮ್ಯಾಟಿಕ್ ಉಪಕರಣಗಳಿಗೆ ಹಾನಿಯಾಗುತ್ತಿತ್ತು. ಇದರಿಂದ ಉತ್ಪನ್ನ ಜೋಡಣೆಯಲ್ಲಿ ದೋಷಗಳು ಉಂಟಾಗುತ್ತಿದ್ದವು. ಫಿಲ್ಟರೇಶನ್ ಘಟಕಗಳು ಕಂಪ್ರೆಸ್ಡ್ ಏರ್ ಆಧಾರಿತ ಸಮಗ್ರತೆ ಪರೀಕ್ಷೆಗಳಿಗೆ ಒಳಗಾಗುತ್ತಿದ್ದ ಸಂದರ್ಭದಲ್ಲಿ ಒತ್ತಡದ ಏರಿಳಿತಗಳಿಂದ ವೈಫಲ್ಯಗಳು ಮತ್ತು ಸೋರಿಕೆಗಳು ಕಂಡುಬರುತ್ತಿದ್ದವು. ಉತ್ಪನ್ನಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿ ಮರುತಯಾರಿಕೆ ಮಾಡಬೇಕಾಗಿತ್ತು ಅಥವಾ ತ್ಯಾಜ್ಯ ಸೇರಿ ಹೋಗುತ್ತಿದ್ದವು.
ಈ ಕುರಿತು “ನಮ್ಮ ವ್ಯವಸ್ಥೆಗಳು ಸಮಸ್ಯೆ ಹೊಂದಿದ್ದವು, ಫಿಲ್ಟರ್‌ಗಳಲ್ಲಿ ದೋಷಗಳಿದ್ದವು, ಮತ್ತು ಗುಣಮಟ್ಟದ ದೂರುಗಳು ಹೆಚ್ಚಾಗಿದ್ದವು. ನಮ್ಮ ಉತ್ಪನ್ನಗಳು ಅಗತ್ಯ ಗುಣಮಟ್ಟವನ್ನು ತಲು ಪುತ್ತಿರಲಿಲ್ಲ. ನವೀಕರಣದ ನಂತರ, ಈ ಸಮಸ್ಯೆಗಳು ಮಾಯವಾದವು. ನಮಗೆ ಸ್ಥಿರ ಗುಣಮಟ್ಟದ ಗಾಳಿ ಸಿಕ್ಕಿತು, ಇದು ಹೆಚ್ಚು ಸ್ಥಿರ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನ ರಚಿಸಲು ಕಾರಣ ವಾಯಿತು” ಎಂದು ಸ್ಟೀವನ್ಸ್ ವಿವರಿಸಿದರು.
ಉತ್ಪಾದನಾ ದಕ್ಷತೆ ಮತ್ತು ಉತ್ಪನ್ನ ಗುಣಮಟ್ಟ ಸುಧಾರಣೆಯೊಂದಿಗೆ, ಕಂಪನಿಯು ಉತ್ಪಾದನೆ ಯನ್ನು ಹೆಚ್ಚಿಸಿ ಬ್ಯಾಕ್ ಲಾಗ್ ಗಳನ್ನು ತೆರವುಗೊಳಿಸಿತು. ಕೋವಿಡ್-19 ನಂತರ ಮಾನ್+ ಹಮ್ಮೆಲ್‌ಗೆ 60 ಲಕ್ಷ ಯೂನಿಟ್ ಗಳಷ್ಟು ಬ್ಯಾಕ್ ಲಾಗ್ ಇತ್ತು. ಸಂಸ್ಥೆ ಹಿಂದೆ ಉಳಿದಿತ್ತು. ಏರ್ ಕಂಪ್ರೆಷನ್ ವ್ಯವಸ್ಥೆಯ ನವೀಕರಣದ ನಂತರ, ಕಂಪನಿಯು ಈ ಬ್ಯಾಕ್ ಲಾಗ್ ಗಳನ್ನು ಸ್ಥಿರವಾಗಿ ತೆರವುಗೊಳಿಸಿತು.
ಈ ಕುರಿತು ಸ್ಟೀವನ್ಸ್ ಅವರು, “ಗ್ರಾಹಕರಿಗೆ, ಫಿಲ್ಟರೇಶನ್ ಉತ್ಪನ್ನಗಳು ಬಹಳ ಅತ್ಯಗತ್ಯ. ವಿಳಂಬ ಗಳು ಆಟೋಮೋಟಿವ್, ಕೈಗಾರಿಕೆ ಮತ್ತು ಇಂಧನ ಕಾರ್ಯಾಚರಣೆಗಳ ಮೇಲೆ ಬಹಳ ಪರಿಣಾಮ ಬೀರುತ್ತವೆ. ಹಾಗಾಗಿ ಉಪಕರಣಗಳನ್ನು ಸ್ಥಿರವಾಗಿ ಚಾಲನೆಯಲ್ಲಿ ಇಡುವುದು ಬ್ಯಾಕ್ ಲಾಗ್ ತೆರವಿಗೆ ಬಹಳ ಮುಖ್ಯವಾಗಿತ್ತು, ಮತ್ತು ಏರ್ ಕಂಪ್ರೆಸರ್ ನವೀಕರಣ ಇದನ್ನು ಸಾಧ್ಯವಾಗಿಸಿತು. ಇದು ದಕ್ಷತೆಯನ್ನು ಸುಧಾರಿಸಿದ್ದು ಮಾತ್ರವಲ್ಲ, ನಮ್ಮ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಬದಲಾಯಿಸಿತು” ಎಂದು ಹೇಳುತ್ತಾರೆ.
ಪ್ಯಾಟನ್ಸ್ ಮಾನ್+ಹಮ್ಮೆಲ್‌ಗೆ ಪ್ರಾದೇಶಿಕ ಇಂಧನ ಉಪಯುಕ್ತತೆಯಾದ ಡ್ಯೂಕ್ ಎನರ್ಜಿ ಒದಗಿಸಿದ ರಿಬೇಟ್ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಲು ಸಹಾಯ ಮಾಡಿತು. ಹೊಸ ವ್ಯವಸ್ಥೆಯ ಶಕ್ತಿ ಸುಧಾರಣೆಗಳನ್ನು ದಾಖಲಿಸಿ ಪರಿಶೀಲಿಸಲು ಪ್ಯಾಟನ್ಸ್ ಹೆಚ್ಚಿನ ಕೆಲಸವನ್ನು ನಿರ್ವಹಿಸಿತು, ಇದರಲ್ಲಿ ಸಂಕೋಚಕ ಕಾರ್ಯಕ್ಷಮತೆ, ಶಕ್ತಿ ಲೋಡ್ ಕಡಿತ, ಮತ್ತು ಶಾಖ ಮರು ಪಡೆಯುವಿಕೆ ವಿಶ್ಲೇಷಣೆ ಸೇರಿದೆ.
ಪ್ಯಾಟನ್ಸ್ ಸಂಸ್ಥೆಯು ಮಾನ್+ಹಮ್ಮೆಲ್‌ಗೆ ಪ್ರಾದೇಶಿಕ ಇಂಧನ ಯುಟಿಲಿಟಿ ಆದ ಡ್ಯೂಕ್ ಎನರ್ಜಿ ಒದಗಿಸುವ ರಿಬೇಟ್ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಲು ಸಹಾಯ ಮಾಡಿತು. ಹೊಸ ವ್ಯವಸ್ಥೆಯ ಇಂಧನ ಬಳಕೆ ಸುಧಾರಣೆಗಳನ್ನು ಪರಿಶೀಲಿಸಿ ದಾಖಲಿಸುವ ವಿಚಾರದಲ್ಲಿ ಪ್ಯಾಟನ್ಸ್ ಹೆಚ್ಚಿನ ಕೆಲಸವನ್ನು ನಿರ್ವಹಿಸಿತು, ಇದರಲ್ಲಿ ಕಂಪ್ರೆಸರ್ ಕಾರ್ಯಕ್ಷಮತೆ, ವಿದ್ಯುತ್ ಲೋಡ್ ಕಡಿತ, ಮತ್ತು ಶಾಖ ಮರುಪಡೆಯುವಿಕೆ ವಿಶ್ಲೇಷಣೆ ಮತ್ತಿತರ ಕಾರ್ಯಗಳೂ ಸೇರಿದ್ದುವು.
ಪ್ಯಾಟನ್ಸ್, ಮಾನ್+ಹಮ್ಮೆಲ್ ಮತ್ತು ಬಾಹ್ಯ ಎಂಜಿನಿಯರಿಂಗ್ ಸಂಸ್ಥೆಗಳ ಜೊತೆಗಿನ ಹಲವು ಸಭೆಗಳ ನಂತರ, ಡೇಟಾ ಸಂಗ್ರಹಣೆ ಮತ್ತು ರಿಬೇಟ್ ಮಾತುಕತೆಗಳು ಮುಗಿದವು. ಡ್ಯೂಕ್ ಎನರ್ಜಿ ಯಿಂದ ಮಾನ್+ಹಮ್ಮೆಲ್‌ಗೆ $300,000 ರಿಬೇಟ್ ಲಭಿಸಿತು.
ಈ ಕುರಿತು ಪ್ಯಾಟನ್ಸ್ ನ ಸಿಸ್ಟಮ್ಸ್ ಸ್ಪೆಷಲಿಸ್ಟ್ ಟ್ರೇ ಕಾರ್ಟರ್ ಅವರು, “ನಾವು ಸುಲಭ ಮಾರ್ಗವನ್ನು ಆಯ್ಕೆ ಮಾಡಿ ಫ್ಲಾಟ್ ರಿಬೇಟ್ ಒಪ್ಪಿಕೊಳ್ಳು ಸಿದ್ಧರಿರಲಿಲ್ಲ. ಪ್ರತೀ ಉಳಿತಾಯ ಕೂಡ ದಾಖಲಾಗು ವಂತೆ ನೋಡಿಕೊಂಡೆವು. ಕೊನೆಗೆ, ಈ ಯೋಜನೆಯಿಂದ ಎಲ್ಲವನ್ನೂ ಪಡೆದುಕೊಂಡೆವು, ಮತ್ತು ಅದರಿಂದ ಉತ್ತಮ ಫಲ ದೊರಕಿತು,” ಎಂದು ಹೇಳಿದರು.