ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿಗೆ ಪೌಲಮಿ ಎಸ್ಟೇಟ್ಸ್ ಪಾದಾರ್ಪಣೆ: ಶೀಘ್ರದಲ್ಲೇ ಪೌಲಮಿ ಫ್ಲೋರಿಕ್ ಯೋಜನೆಗೆ ಚಾಲನೆ

ಬೆಂಗಳೂರು ದೇಶದಲ್ಲಿಯೇ ತ್ವರಿತವಾಗಿ ಬದಲಾಗುತ್ತಿರುವ ವಸತಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಹೊಂದಿದ್ದು, ಕಂಪೆನಿಯು ವಿವೇಚನೆಯ ಯೋಜನೆ, ಗುಣಮಟ್ಟ ಮತ್ತು ಗ್ರಾಹಕ ಕೇಂದ್ರ ಅಭಿವೃದ್ಧಿ ಸೂತ್ರಗಳ ಸಿದ್ಧಾಂತದೊಂದಿಗೆ ಬೆಂಗಳೂರಿಗೆ ಕಾಲಿಡುತ್ತಿದೆ. ಸದೃಢ ಮೂಲಸೌಕರ್ಯ, ಉದ್ಯೋಗಾವ ಕಾಶಗಳಿಂದಾಗಿ ಬೆಂಗಳೂರು ಅಭಿವೃದ್ಧಿಗೆ ಹೆಚ್ಚು ಸಾಧ್ಯತೆಗಳಿರುವ ಮಾರುಕಟ್ಟೆಯಾಗಿದ್ದು, ಪೌಲಮಿ ಈಗಾಗಲೇ ಇದನ್ನು ಗುರುತಿಸಿ ಕಾರ್ಯತಂತ್ರ ರೂಪಿಸಿದೆ.

ಶೀಘ್ರದಲ್ಲೇ ಪೌಲಮಿ ಫ್ಲೋರಿಕ್ ಯೋಜನೆಗೆ ಚಾಲನೆ

-

Profile
Ashok Nayak Apr 15, 2026 2:04 PM

ಬೆಂಗಳೂರು: ಹೈದರಾಬಾದ್ ಮೂಲದ ರಿಯಲ್ ಎಸ್ಟೇಟ್ ಕಂಪೆನಿ ಪೌಲಮಿ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್ ತನ್ನ "ಪೌಲಮಿ ಫ್ಲೋರಿಕ್ ಯೋಜನೆಯ ಮೂಲಕ ಬೆಂಗಳೂರು ಮಾರುಕಟ್ಟೆಯನ್ನು ಪ್ರವೇಶಿಸಲಿದೆ. 2005ರಲ್ಲಿ ಆರಂಭಗೊಂಡ ಪೌಲಮಿ ಎಸ್ಟೇಟ್ಸ್ ಬೆಂಗಳೂರಿನಲ್ಲಿ ಮೊದಲ ವಸತಿ ಸಮುಚ್ಚಯವನ್ನು ನಿರ್ಮಿಸಲಿದೆ. ನೂತನ ಯೋಜನೆಗೆ ಶೀಘ್ರವೇ ಚಾಲನೆ ದೊರೆಯಲಿದೆ.

ಬೆಂಗಳೂರು ದೇಶದಲ್ಲಿಯೇ ತ್ವರಿತವಾಗಿ ಬದಲಾಗುತ್ತಿರುವ ವಸತಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಹೊಂದಿದ್ದು, ಕಂಪೆನಿಯು ವಿವೇಚನೆಯ ಯೋಜನೆ, ಗುಣಮಟ್ಟ ಮತ್ತು ಗ್ರಾಹಕ ಕೇಂದ್ರ ಅಭಿವೃದ್ಧಿ ಸೂತ್ರಗಳ ಸಿದ್ಧಾಂತದೊಂದಿಗೆ ಬೆಂಗಳೂರಿಗೆ ಕಾಲಿಡುತ್ತಿದೆ. ಸದೃಢ ಮೂಲಸೌಕರ್ಯ, ಉದ್ಯೋಗಾವಕಾಶಗಳಿಂದಾಗಿ ಬೆಂಗಳೂರು ಅಭಿವೃದ್ಧಿಗೆ ಹೆಚ್ಚು ಸಾಧ್ಯತೆಗಳಿರುವ ಮಾರುಕಟ್ಟೆ ಯಾಗಿದ್ದು, ಪೌಲಮಿ ಈಗಾಗಲೇ ಇದನ್ನು ಗುರುತಿಸಿ ಕಾರ್ಯತಂತ್ರ ರೂಪಿಸಿದೆ.

ಬೆಂಗಳೂರಿನಲ್ಲಿ ವಸತಿ ಮಾರುಕಟ್ಟೆಗೆ ಬೇಡಿಕೆ ಹೆಚ್ಚುತ್ತಲೇ ಇದೆ. 2025ರಲ್ಲಿ ನಗರದಲ್ಲಿ ವಸತಿ ಮೌಲ್ಯ ವರ್ಷದಿಂದ ವರ್ಷಕ್ಕೆ ಶೇ 12ರಷ್ಟು ಹೆಚ್ಚಳವಾಗಿತ್ತು. ರಾಷ್ಟ್ರೀಯಮಟ್ಟದಲ್ಲಿ ಪ್ರೀಮಿಯಂ ಮತ್ತು ಲಕ್ಷುರಿ ಮನೆಗಳ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ 30ರಷ್ಟು ಪುಗತಿ ಕಂಡಿತ್ತು.

ಇದನ್ನೂ ಓದಿ: Bangalore News: ಬೆಂಗಳೂರಿನ ಇಗ್ಗಲೂರಿನಲ್ಲಿ ಪೆಪ್ಸ್ ಮ್ಯಾಟ್ರೆಸ್‌ ನ 91ನೇ ‘ಗ್ರೇಟ್ ಸ್ಲೀಪ್ ಸ್ಟೋರ್’ ಉದ್ಘಾಟನೆ

ಫ್ಲೋರಿಕ್ ಯೋಜನೆ ಬರುತ್ತಿರುವ ಉತ್ತರ ಬೆಂಗಳೂರು 2025ರ ಎರಡನೇ ತ್ರೈಮಾಸಿಕದಲ್ಲಿ ಬೆಂಗಳೂರಿನ ಒಟ್ಟು ವಸತಿ ಮಾರುಕಟ್ಟೆಯ ಶೇ 32ರಷ್ಟು ಪಾಲು ಹೊಂದಿತ್ತು. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 10 ಮತ್ತು ವರ್ಷದಿಂದ ವರ್ಷಕ್ಕೆ ಶೇ 16ರಷ್ಟು ವಸತಿ ಮಾರಾಟ ಪ್ರಮಾಣ ಹೆಚ್ಚಳವಾಗಿತ್ತು. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡೆವಲಪರ್‌ಗಳೂ ಮನೆಗಳ ಗಾತ್ರವನ್ನು ಹೆಚ್ಚಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಇದು ಶೇ 7ರಷ್ಟು ಏರಿಕೆಯಾಗಿದೆ. ಈ ವಿದ್ಯಮಾನಗಳು ನಗರದಲ್ಲಿ ವಿಶಾಲವಾದ, ಉತ್ತಮ ಯೋಜನೆಯ, ಜೀವನಶೈಲಿ ಆಧಾರಿತ ಮನೆಗಳಿಗೆ ಹೆಚ್ಚು ಬೇಡಿಕೆ ಇರುವುದನ್ನು ಸೂಚಿಸುತ್ತದೆ. ಈ ಹಿನ್ನೆಲೆಯಲ್ಲಿಯೇ ಪೌಲಮಿ ಫ್ಲೋರಿಕ್ ಯೋಜನೆ ರೂಪುಗೊಂಡಿದೆ.

ಪೌಲಮಿ ಫ್ಲೋರಿಕ್: ಮುಕ್ತ ವಾತಾವರಣ, ಖಾಸಗಿತನ, ಪರಿಸರ ಮತ್ತು ದಿನನಿತ್ಯದ ಖುಷಿಯ ಸುತ್ತ ಹೆಣೆದ ಸಮುದಾಯ ಪೌಲಮಿ ಫ್ಲೋರಿಕ್ ವಿಶೇಷವಾಗಿ 3 ಬಿಎಚ್‌ ಮನೆಗಳನ್ನು ಹೊಂದಿರುವ ಗಗನಚುಂಬಿ ನಿರ್ಮಾಣ ಯೋಜನೆಯಾಗಿದ್ದು, ಮನೆಯನ್ನು ವಿಳಾಸಕ್ಕಿಂತ ಹೆಚ್ಚಾಗಿ ಕಾಣುವ ಆಧುನಿಕ ನಗರ ಕುಟುಂಬಗಳಿಗಾಗಿಯೇ ರೂಪಿಸಲಾಗಿದೆ. ಮುಕ್ತವಾತಾವರಣ, ಅನುಕೂಲಕರ ಅಂಶಗಳು, ಖಾಸಗಿತನ, ಆರೋಗ್ಯ ಮತ್ತು ದಿನನಿತ್ಯದ ಉತ್ತಮ ಗುಣಮಟ್ಟದ ಜೀವನವನ್ನು ಬಯಸುವವರಿಗಾಗಿಯೇ ಇದನ್ನು ವಿನ್ಯಾಸಗೊಳಿಸಲಾಗಿದೆ.

ಸುಮಾರು 8.66 ಎಕರೆಗಳಷ್ಟು ಪ್ರದೇಶದಲ್ಲಿ ಯೋಜನೆ ತಲೆಯೆತ್ತಲಿದೆ. ಶೇ 85ರಷ್ಟು ಸ್ಥಳವನ್ನು ಮುಕ್ತವಾಗಿರಿಸಲಾಗಿದೆ. ಮುಕ್ತ ಸ್ಥಳಕ್ಕೆ ಒತ್ತು ನೀಡಲಾಗಿದೆ. ಪ್ರಮುಖ ವಸತಿ ಕಾರಿಡಾರ್‌ಗಳಲ್ಲಿ ಜನದಟ್ಟಣೆ ಹೆಚ್ಚುತ್ತಿರುವ ಸಂದರ್ಭಗಳಲ್ಲಿ ಫ್ಲೋರಿಕ್ ಯೋಜನೆಯಲ್ಲಿ ಹೆಚ್ಚು ಖಾಲಿ ಸ್ಥಳ ಮತ್ತು ಮಾನವ ಕೇಂದ್ರಿತ ಪರಿಸರಕ್ಕೆ ಒತ್ತು ನೀಡಲಾಗಿದೆ. ಇಲ್ಲಿ ಪರಿಸರ ಕೇವಲ ಯೋಜನೆಗೆ ಸೇರ್ಪಡೆ ಯಾಗಿರುವ ಅಂಶವಲ್ಲ, ಬದಲಾಗಿ ನಿವಾಸಿಗಳು ಅನುಭವಕ್ಕೆ ಪಡೆಯುವ ಅಂಶವಾಗಿದೆ.

ಯೋಜನೆಯ ಪ್ರಮುಖ ಅಂಶಗಳು ಹೀಗಿವೆ;

* ಸಮಕಾಲೀನ ಕುಟುಂಬ ವಾಸಕ್ಕೆಂದೇ ವಿನ್ಯಾಸಗೊಳಿಸಲಾದ 3ಬಿಎಚ್‌ಕೆ ಮನೆಗಳು

* ಮನೆಗಳ ನಡುವೆ ಸಾಮಾನ್ಯ ಗೋಡೆಗಳಿಲ್ಲದೇ, ಖಾಸಗಿತನ ಮತ್ತು ನಿಶ್ಯಬ್ದ ಮನೆಗಳಿಗೆ ಒತ್ತು

* ಬ್ಲೂಮ್‌ಸ್ಕೋಪ್ಸ್ ಹೆಸರಿನಡಿ ಹೂರಾಶಿಗಳ ಲ್ಯಾಂಡ್‌ಪಿಂಗ್, ಉದ್ಯಾನಗಳು ಮತ್ತು ಹಸಿರು ಪರಿಸರ

* ದಿನನಿತ್ಯದ ಅನುಭವಕ್ಕೆ ಬರುವ ಸುಗಂಧಭರಿತ ಹೊರಾಂಗಣ

* ಸುರಕ್ಷಿತ ಚಲನವಲನ ಮತ್ತು ಪಾದಚಾರಿ ಸ್ನೇಹಿಯಾಗಿರುವ ವಾಹನಮುಕ್ತವಾಗಿರುವ ಎತ್ತರಿಸಿದ ಪೋಡಿಯಂ

* ಶೇಕಡ ನೂರರಷ್ಟು ವಾಸ್ತುಬದ್ಧವಾಗಿರುವ ಮನೆಗಳು

* ಸುಸ್ಥಿರ ದೂರದೃಷ್ಟಿಗಾಗಿ ಐಜಿಬಿಸಿ ಪ್ಲಾಟಿನಂ ಪುಮಾಣಪತ್ರ

ಎಲ್ಲ ವಯೋವರ್ಗದವರಿಗೂ ಸೂಕ್ತವಾದ ಸಮುದಾಯ ನಿರ್ಮಾಣವಾಗುವಂತೆ ಪೌಲಮಿ ಫ್ಲೋರಿಕ್ ರೂಪಿಸಲಾಗಿದೆ. ಒಬ್ಬ ಖರೀದಿದಾರನಿಗಿಂತ ಮಿಗಿಲಾಗಿ ಹೆಚ್ಚು ಸಮಗರವಾದ ಹೆಚ್ಚು ಪೀಳಿಗೆ ವಾಸಿಸುವ ಪರಿಕಲ್ಪನೆ ಇಲ್ಲಿದೆ. ಹೆಚ್ಚು ಮುಕ್ತ ಸ್ಥಳ ಇಷ್ಟಪಡುವ ಮಕ್ಕಳು, ಅನುಕೂಲಕರ ಅಂಶಗಳನ್ನು ಬಯಸುವ ವೃತ್ತಿಪರರು, ಉತ್ತಮ ಯೋಜನೆಯ ಮನೆ ಕೇಳುವ ಕುಟುಂಬಗಳು ಮತ್ತು ಮೌನ, ಹಸಿರು ವಾತಾವರಣ ಮತ್ತು ಸುಖ ಇಷ್ಟಪಡುವ ಹಿರಿಯರಿಗಾಗಿ ಇದನ್ನು ವಿನ್ಯಾಸ ಗೊಳಿಸಲಾಗಿದೆ.

ಕಂಪೆನಿ ಮುಖ್ಯಸ್ಥರು ಹೇಳುವುದೇನು

ಈ ಸಂದರ್ಭದಲ್ಲಿ ಮಾತನಾಡಿದ ಪೌಲಮಿ ಎಸ್ಟೇಟ್ಸ್ ನಿರ್ದೇಶಕರಾದ ಪ್ರಶಾಂತ್ ರಾವ್ ಅವರು “ಮನೆ ಎನ್ನುವುದು ಕೇವಲ ನಿರ್ಮಾಣದ ಚೌಕಟ್ಟಿಗೆ ಸೀಮಿತವಾಗದೇ ನಿವಾಸಿಗಳ ಆತ್ಮವಿಶ್ವಾಸ, ಮನಶ್ಯಾಂತಿ ಮತ್ತು ಅನುಕೂಲತೆಯನ್ನು ಹೆಚ್ಚಿಸುವ ಸ್ಥಳವಾಗಿರಬೇಕು ಎಂದು ಪೌಲಮಿ ನಂಬುತ್ತದೆ. ಹಲವು ವರ್ಷಗಳಿಂದ ನಾವು ಉತ್ತಮ ಯೋಜನೆ, ಗುಣಮಟ್ಟದ ಅನುಷ್ಠಾನ ಮತ್ತು ಹೊಣೆಗಾರಿಕೆಗಾಗಿ ಹೆಸರು ಮಾಡಿದ್ದೇವೆ.

ಬೆಂಗಳೂರು ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಮಾರುಕಟ್ಟೆಯಾಗಿರುವುದರಿಂದ ಇಲ್ಲಿಗೆ ಪ್ರವೇಶ ನಮ್ಮ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ವಿಸ್ತರಣೆ ಮಾತ್ರವಲ್ಲ, ಭವಿಷ್ಯದ ಬದುಕಿಗೆ ಒತ್ತು ನೀಡುವ ಗ್ರಾಹಕರು ಇಲ್ಲಿರುವುದರಿಂದ ನಮ್ಮ ದೂರದೃಷ್ಟಿ ಅದಕ್ಕೆ ಪೂರಕ ವಾಗಿರಲಿದೆ. ಪೌಲಮಿ ಫ್ಲೋರಿಕ್ ಮೂಲಕ ನಾವು ವಿಸ್ತ್ರತ ಯೋಜನೆ, ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ದೀರ್ಘಾವಧಿಯ ಜೀವನವನ್ನು ಆಧರಿಸಿದ ನಮ್ಮ ಸಿದ್ಧಾಂತವನ್ನು ಬೆಂಗಳೂರಿಗೆ ಪರಿಚ ಯಿಸುತ್ತಿದ್ದೇವೆ. ಇದುವರೆಗೆ ನಮ್ಮನ್ನು ರೂಪಿಸಿದ ಗ್ರಾಹಕರ ನಂಬಿಕೆ, ವಿಶ್ವಾಸಾರ್ಹತೆ ಮತ್ತು ಗುಣಮಟ್ಟವನ್ನು ಇಲ್ಲಿಯೂ ನಾವು ಮುಂದುವರೆಸಲಿದ್ದೇವೆ” ಎಂದು ಹೇಳಿದರು.

ಪೌಲಮಿ ಎಸ್ಟೇಟ್ಸ್‌ನ ಮಾರ್ಕೆಟಿಂಗ್ ಮತ್ತು ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥರಾದ ದೇಬಾ ಪ್ರತಿ‍ ಸಿನ್ಮ ಮಾತನಾಡಿ “ಬೆಂಗಳೂರಿನಲ್ಲಿ ಮನೆ ಖರೀದಿಸುವವರು ತ್ವರಿತವಾಗಿ ಬದಲಾಗುತ್ತಿದ್ದಾರೆ. ಯೋಜನೆಯ ಸ್ಥಳ ಮತ್ತು ವಿನ್ಯಾಸಕ್ಕಿಂತ ಹೆಚ್ಚಾಗಿ ಜೀವನ ಗುಣಮಟ್ಟಕ್ಕೆ ಇಲ್ಲಿಯ ಗ್ರಾಹಕರು ಒತ್ತು ನೀಡುತ್ತಾರೆ. ಫ್ಲೋರಿಕ್‌ನಲ್ಲಿ ನಾವು ಮುಕ್ತ ವಾತಾವರಣ, ಖಾಸಗಿತನವನ್ನು ಅರ್ಥಪೂರ್ಣ ವಾಗಿ ಬೆಸೆದಿದ್ದೇವೆ. ಇದು ಬೆಂಗಳೂರಿಗೆ ನಮ್ಮ ಇನ್ನೊಂದು ಯೋಜನೆ ಮಾತ್ರವಲ್ಲ, ಬದಲಿಗೆ ಬೆಂಗಳೂರಿನ ಬಗ್ಗೆ ನಮಗಿರುವ ಅಭಿಪ್ರಾಯದ ಪ್ರತೀಕವಾಗಿದೆ” ಎಂದು ತಿಳಿಸಿದರು.

ಪೌಲಮಿ ಎಸ್ಟೇಟ್ಸ್‌ನ ಚೀಫ್ ಸೇಲ್ಸ್ ಆಫೀಸರ್ ಸಂಜಯ ಕುಮಾರ್ ಝಾ ಅವರು ಮಾತನಾಡಿ “ಬೆಂಗಳೂರಿನಲ್ಲಿ ಖರೀದಿದಾರರು ವಿಶ್ವಾಸಾರ್ಹ ಡೆವಲಪರ್‌ಗಳು ರೂಪಿಸುತ್ತಿರುವ ವಿಶಾಲವಾದ, ಉತ್ತಮ ಯೋಜನೆಯ ಮನೆಗಳನ್ನು ಇಷ್ಟಪಡುತ್ತಾರೆ. ಪ್ರೀಮಿಯಂ ದರ್ಜೆಯ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಇದನ್ನೇ ಸೂಚಿಸುತ್ತದೆ. ಫ್ಲೋರಿಕ್ ಯೋಜನೆಯು ವಿಶೇಷವಾಗಿ ಮೂರು ಬಿಎಚ್‌ಕೆ ಮನೆಗಳ ಯೋಜನೆಯಾಗಿದ್ದು, ಖಾಸಗಿತನ, ಪ್ಲಾನಿಂಗ್ ಮತ್ತು ದೀರ್ಘಾವಧಿಯ ಮೌಲ್ಯದ ಸುತ್ತ ಇದನ್ನು ರೂಪಿಸಲಿ ಎಂದರು.

ಪೌಲಮಿ ಎಸ್ಟೇಟ್ಸ್‌ನ ಮಾರಾಟ ವಿಭಾಗದ ಮುಖ್ಯಸ್ಥರಾದ ಕ್ರಾಂತಿ ಕುಮಾರ್ ಮಾತನಾಡಿ “ಉತ್ತಮ ಸಂಪರ್ಕ, ಮೂಲಸೌಕರ್ಯಗಳಿಂದಾಗಿ ನಗರದ ಉತ್ತರ ಭಾಗವು ವಸತಿ ಸಮುಚ್ಚಯಗಳ ಕಾರಿ ಡಾರ್ ಆಗಿ ಬೆಳೆಯುತ್ತಿದೆ. ಫ್ಲೋರಿಕ್ ಸಹ ಇದರ ಭಾಗವಾಗಲು ಇಚ್ಛಿಸಿದೆ. ಈಗಿನ ಬೇಡಿಕೆ ಮತ್ತು ಭವಿಷ್ಯದ ಮೌಲ್ಯಗಳೆರಡರ ಸುತ್ತ ಈ ಪ್ರೀಮಿಯಂ ಯೋಜನೆ ರೂಪಿಸಲಾಗಿದೆ” ಎಂದರು.

ಪೌಲಮಿ ಎಸ್ಟೇಟ್ಸ್‌ನ ಸ್ಟ್ರಾಟೆಜಿ ಹೆಡ್ ಆಗಿರುವ ಮಾರುತಿ ರಾವ್ ಮಾತನಾಡಿ “ಉತ್ತಮ ಯೋಜನೆ ಮತ್ತು ಗ್ರಾಹಕರು ಇಂದು ಏನು ಬಯಸುತ್ತಿದ್ದಾರೆ ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದ ಮೌಲ್ಯದಲ್ಲಿ ಪೌಲಮಿ ನಂಬಿಕೆ ಇಟ್ಟಿದೆ. ಫ್ಲೋರಿಕ್ ಯೋಜನೆಯಲ್ಲಿಯೂ ನಾವು ಮುಕ್ತ ಸ್ಥಳಾವಕಾಶ, ಖಾಸಗಿತನ ಮತ್ತು ಪ್ರತಿದಿನವನ್ನು ಅರ್ಥಪೂರ್ಣವಾಗಿ ಕಳೆಯಲು ಸಾಧ್ಯ ವಾಗುವಂತೆ ಮಾಡಲಿದ್ದೇವೆ. ದೀರ್ಘಾವಧಿಯ ಅನುಕೂಲಕತೆ ಮತ್ತು ಗ್ರಾಹಕರ ಕಲ್ಯಾಣವನ್ನು ಗಮನದಲ್ಲಿ ಇಟ್ಟುಕೊಂಡಿದ್ದೇವೆ' ಎಂದು ಹೇಳಿದರು.

ಬೆಂಗಳೂರಿನ ಬಗ್ಗೆ ಸಂಸ್ಥೆಯ ದೂರದೃಷ್ಟಿ

ಪೌಲಮಿ ಫ್ಲೋರಿಕ್, ಪೌಲಮಿ ಎಸ್ಟೇಟ್ಸ್ ಸಂಸ್ಥೆಯ ಒಂದೇ ಯೋಜನೆಯಲ್ಲ. ಬೆಂಗಳೂರಿನ ಬಗ್ಗೆ ಸಂಸ್ಥೆ ಹೊಂದಿರುವ ದೀರ್ಘಾವಧಿ ದೃಷ್ಟಿಕೋನದ ಆರಂಭ ಇದಾಗಿದೆ.

ಬೆಂಗಳೂರನ್ನು ಕಂಪೆನಿಯ ಒಂದು ಅವಕಾಶಗಳ ಆಗರವಾಗಿ ಕಂಡಿದೆ. ಸದೃಢವಾದ ಆರ್ಥಿಕತೆ, ನಿರಂತವಾಗಿ ಬದಲಾಗುತ್ತಿರುವ ವಸತಿ ಮಾರುಕಟ್ಟೆ ಮತ್ತು ಖರೀದಿದಾರರ ಹಿನ್ನೆಲೆ, ವಿವೇಚನಾ ಬದ್ಧವಾದ ಯೋಜನೆ ಮತ್ತು ಭವಿಷ್ಯದ ಬದುಕಿಗೆ ಒತ್ತು ನೀಡುವ ಖರೀದಿಗೆ ಪ್ರಾಶಸ್ತ್ರ ಇಲ್ಲಿರುವುದು ಇದಕ್ಕೆ ಕಾರಣ. ದೇಶದಲ್ಲಿ 2026ರಿಂದ 2028ರ ನಡುವೆ ವಸತಿ ಮಾರುಕಟ್ಟೆ ಸ್ಥಿರವಾಗುವ ಸಾಧ್ಯತೆಗಳಿವೆ. ಹೆಚ್ಚುತತಿರುವ ಆದಾಯ ಮತ್ತು ಬೇಡಿಕೆಗೆ ಪೂರಕ ವಾತಾವರಣದಿಂದಾಗಿ ಹೆಚ್ಚು ಸಮತೋಲನ ಮತ್ತು ಸುಸ್ಥಿರವಾಗಿ ಈ ಕ್ಷೇತ್ರ ಬೆಳೆಯುವ ನಿರೀಕ್ಷೆ ಇದೆ.

ಪೌಲಮಿ ಎಸ್ಟೇಟ್ಸ್ ಇತರ ಕಡೆಗಳಲ್ಲಿ ಬೆಳೆದು ಬಂದ ರೀತಿಯಲ್ಲಿಯೇ ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಬೆಳೆಸುವ ಉದ್ದೇಶ ಹೊಂದಿದೆ. ವಿನ್ಯಾಸ ಆಧಾರಿತ ಬೆಳವಣಿಗೆ, ಉತ್ತಮ ಯೋಜನೆ, ಸುಸ್ಥಿರತೆ, ಗ್ರಾಹಕರ ವಿಶ್ವಾಸ ಮತ್ತು ದೀರ್ಘಾವಧಿಯ ಬದ್ಧತೆಗಳು ಕಂಪೆನಿ ಸಿದ್ಧಾಂತವಾಗಿದೆ. ಈ ನಿಟ್ಟಿನಲ್ಲಿ ಫ್ಲೋರಿಕ್, ಕಂಪೆನಿ ಬೆಂಗಳೂರಿನಲ್ಲಿ ಇಟ್ಟಿರುವ ಮೊದಲ ಹೆಜ್ಜೆಯಾಗಿದೆ. ಇದು ಕಂಪೆನಿ ಯ ವಿಸ್ತರಣೆ ಮಾತ್ರವಲ್ಲ, ಒಂದು ಅರ್ಥಪೂರ್ಣ ಹೆಜ್ಜೆ.