ಸೆನ್ಸೆಕ್ಸ್-ನಿಫ್ಟಿ ಫ್ಲಾಟ್, ಬೆಳ್ಳಿ ದರ ಏರಿಕೆ; ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ
ಇವತ್ತು ಸ್ಟಾಕ್ ಮಾರ್ಕೆಟ್ ಫ್ಲಾಟ್ ಆಗಿತ್ತು. ನಿಫ್ಟಿ ಅಲ್ಪ ಏರಿಕೆಯಾದರೆ ಮತ್ತು ಸೆನ್ಸೆಕ್ಸ್ ಅಲ್ಪ ಇಳಿಕೆಯಾಗಿತ್ತು. ಬಂಗಾರ ದರ ಪ್ರತಿ ಗ್ರಾಮ್ ಗೆ 15,851/- ಮಟ್ಟದಲ್ಲಿತ್ತು.ಹೂಡಿಕೆದಾರರು ಇತ್ತೀಚಿನ ಸೂಚ್ಯಂಕ ಏರಿಕೆ ಹಿನ್ನೆಲೆಯಲ್ಲಿ ಪ್ರಾಫಿಟ್ ಬುಕಿಂಗ್ ಮಾಡಿದರು.
ಸಂಗ್ರಹ ಚಿತ್ರ -
ಬೆಂಗಳೂರು: ಇವತ್ತು ಸ್ಟಾಕ್ ಮಾರ್ಕೆಟ್ ಫ್ಲಾಟ್ ಆಗಿತ್ತು. ನಿಫ್ಟಿ ಅಲ್ಪ ಏರಿಕೆಯಾದರೆ ಮತ್ತು ಸೆನ್ಸೆಕ್ಸ್ ಅಲ್ಪ ಇಳಿಕೆಯಾಗಿತ್ತು. ಬಂಗಾರ ದರ (Stock Market) ಪ್ರತಿ ಗ್ರಾಮ್ ಗೆ 15,851/- ಮಟ್ಟದಲ್ಲಿತ್ತು. ಬೆಳ್ಳಿ ಕೇಜಿಗೆ 2 ಲಕ್ಷದ 90 ಸಾವಿರ ರುಪಾಯಿ ಮಟ್ಟದಲ್ಲಿತ್ತು. ಸೆನ್ಸೆಕ್ಸ್ 40 ಅಂಕ ಇಳಿಕೆಯಾಗಿ 84,233ಕ್ಕೆ ಸ್ಥಿರವಾಯಿತು. ನಿಫ್ಟಿ 19 ಅಂಕ ಏರಿಕೆಯಾಗಿ 25,953ಕ್ಕೆ ಸ್ಥಿರವಾಯಿತು.
ಹೂಡಿಕೆದಾರರು ಇತ್ತೀಚಿನ ಸೂಚ್ಯಂಕ ಏರಿಕೆ ಹಿನ್ನೆಲೆಯಲ್ಲಿ ಪ್ರಾಫಿಟ್ ಬುಕಿಂಗ್ ಮಾಡಿದರು. ಅಮೆರಿಕ-ಭಾರತ ಟ್ರೇಡ್ ಡೀಲ್ ಆಗಿರುವುದರಿಂದ ಸ್ಟಾಕ್ ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಜಿಗಿದಿದ್ದವು. ಆದ್ದರಿಂದ ಪ್ರಾಫಿಟ್ ಬುಕಿಂಗ್ ನಡೆಯಿತು. ಇದೀಗ ಮೂರನೇ ತ್ರೈಮಾಸಿಕದ ಕಾರ್ಪೊರೇಟ್ ಕಂಪನಿಗಳ ಫಲಿತಾಂಶದ ಕಡೆಗೆ ಹೂಡಿಕೆದಾರರ ಗಮನ ಹರಿದಿದೆ.
ಜಾಗತಿಕ ಮಟ್ಟದಲ್ಲಿ ಅಮೆರಿಕದ ರಿಟೇಲ್ ಸೇಲ್ಸ್, ಪರ್ಸಿಸ್ಟೆಂಟ್ ಕಂಪನಿಯ ಎಐ ಸಂಬಂಧಿತ ಬೆಳವಣಿಗೆಗಳು, ಅಮೆರಿಕದ ಉದ್ಯೋಗ ಅಂಕಿ ಅಂಶಗಳು ಪ್ರಭಾವ ಬೀರಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಲ್ಲಿ ಮತ್ತೆ ಹೂಡಿಕೆ ಮಾಡುತ್ತಿದ್ದಾರೆ. ಬಿಎಸ್ ಇನಲ್ಲಿ 1950 ಷೇರುಗಳು ಇಳಿಕೆಯಾದರೆ, 2,200 ಷೇರುಗಳು ಲಾಭ ಗಳಿಸಿತು.
ನಿಫ್ಟಿ 50 ಇಂಡೆಕ್ಸ್‌ನಲ್ಲಿ ಲಾಭ ಗಳಿಸಿದ ಪ್ರಮುಖ ಷೇರುಗಳು
ಫಿಲಿಪ್ಸ್ ಕಾರ್ಬನ್: 319/- 8.58% ಏರಿಕೆ
ಈಶರ್ ಮೋಟಾರ್ಸ್: 7,771/- 6.5%
SJVN : 77/- 6.30%
JK ಟೈರ್ : 604/ 5.82%
ಫೋರ್ಸ್ ಮೋಟಾರ್ಸ್ : 24,927/- 5.53%
ನಿಫ್ಟಿ 50 ಇಂಡೆಕ್ಸ್‌ನಲ್ಲಿ ನಷ್ಟಕ್ಕೀಡಾದ ಪ್ರಮುಖ ಷೇರುಗಳು
TCS : 2.53% ಇಳಿಕೆ
ಕೋಲ್ ಇಂಡಿಯಾ: 1.67% Down
ಪಾಲಿ ಮೆಡಿಕೇರ್: 1,388/-
HEG : 529/-
BHEL : 260/-
KPR MILL : 907/-
ನಿಫ್ಟಿ ಐಟಿ ಹೊರತುಪಡಿಸಿ ಉಳಿದ ಬಹುತೇಕ ಇಂಡೆಕ್ಸ್‌ಗಳು ಚೇತರಿಕೆ ದಾಖಲಿಸಿತು.
ಹೆಚ್ಚು ಆಕ್ಟಿವ್ ಆಗಿ ಟ್ರೇಡ್ ಆಗಿದ್ದ ಷೇರುಗಳು:
ವೊಡಾಫೋನ್ ಐಡಿಯಾ
ಟಾಟಾ ಸಿಲ್ವರ್ ಇಟಿಎಫ್
ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್
ರಿಲಯನ್ಸ್ ಇಂಡಸ್ಟ್ರೀಸ್, ಎಸ್‌ಬಿಐ ಸೇರಿದಂತೆ ಪ್ರಮುಖ ಕಂಪನಿಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ಮೂರನೇ ತ್ರೈಮಾಸಿಕದಲ್ಲಿ ಹೂಡಿಕೆಯನ್ನು ಹೆಚ್ಚಿಸಿದ್ದಾರೆ. ಕಳೆದ ವರ್ಷ ಎಫ್‌ಐಐಗಳು 1.6 ಲಕ್ಷ ಕೋಟಿ ರುಪಾಯಿ ಮೌಲ್ಯದ ಷೇರುಗಲನ್ನು ಮಾರಾಟ ಮಾಡಿದ್ದರು. ಹೀಗಿದ್ದರೂ, ಮೂರನೇ ತ್ರೈಮಾಸಿಕದಿಂದ ಟ್ರೆಂಡ್ ಬದಲಾಗುತ್ತಿದೆ. ಮತ್ತೆ ಖರೀದಿಸುತ್ತಿದ್ದಾರೆ. ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್, ಎಕ್ಸಿಸ್ ಬ್ಯಾಂಕ್, ಬಜಾಜ್ ಫಿನ್ ಸರ್ವ್, ಭಾರತ್ ಎಲೆಕ್ಟ್ರಾನಿಕ್ಸ್, ಎಲ್ &ಟಿ, ಏಷ್ಯನ್ ಪೇಂಟ್ಸ್, ಒಎನ್‌ಜಿಸಿಯಲ್ಲೂ ಹೂಡಿಕೆಯನ್ನು ಹೆಚ್ಚಿಸಿದ್ದಾರೆ.
ಷೇರು ವ್ಯಾಪಾರ ಮಾರುಕಟ್ಟೆಯಲ್ಲೂ ಮಾಡಬೇಕು ಗೆರಿಲ್ಲಾ ವಾರ್
ಲೆನ್ಸ್‌ಕಾರ್ಟ್ ಸಲ್ಯೂಷನ್ಸ್ ಲಾಭ-ಆದಾಯ ಹೆಚ್ಚಳ: ಲೆನ್ಸ್ ಕಾರ್ಟ್ ಸಲ್ಯೂಷನ್ಸ್ ಕಳೆದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ 131 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿ ಗಳಿಸಿದ್ದ ಲಾಭ ಕೇವಲ 1.85 ಕೋಟಿ ರುಪಾಯಿ. ಕಂಪನಿಯ ಆದಾಯವೂ 1,669 ಕೋಟಿ ರುಪಾಯಿಗಳಿಂದ 2,308 ಕೋಟಿ ರುಪಾಯಿಗೆ ಏರಿಕೆಯಾಗಿದೆ.
ಭಾರತ ತನ್ನ ತೈಲ ಆಮದು ಮೂಲಗಳನ್ನು ಹೆಚ್ಚಿಸಲು ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ಅಮೆರಿಕ ಮತ್ತು ವೆನಿಜುವೆಲಾದಿಂದ ಕೂಡ ತೈಲವನ್ನು ಖರೀದಿಸುವಂತೆ ಸೂಚಿಸಲಾಗಿದೆ.