ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gubbi News: ವಿಜೃಂಭಣೆಯಿಂದ ಜರುಗಿದ ಶ್ರೀ ಬೇಟೆರಾಯಸ್ವಾಮಿ ಬ್ರಹ್ಮರಥೋತ್ಸವ

ಭಾನುವಾರ ಬೆಳಿಗ್ಗೆ ಅಭಿಷೇಕ, ಪ್ರಾಕಾರೋತ್ಸವ ನಡೆದು, ಸಂಜೆ ಸೀತಾಲಕ್ಷ್ಮಿ ಅಮ್ಮನವ ರಿಗೆ ವಿಶೇಷ ಅಲಂಕಾರ, ರಾತ್ರಿ ಶಯನೋತ್ಸವ ನಡೆಯಲಿದೆ. ಮಾ.30 ರಂದು ಬೆಳಿಗ್ಗೆ ಸುಪ್ರಭಾತ ಸೇವೆ, ಅವಭೃತ ಸ್ನಾನ, ವಸಂತ ಮಾಧವ ಪೂಜೆ ನಡೆಯಲಿದೆ. ಸಂಜೆ ಹನುಮಂತೋತ್ಸವ ಮೆರವಣಿಗೆ ನಡೆದು ನಂತರ ಧ್ವಜಾವರೋಹಣ ಸರ್ಕಾರಿ ಸೇವೆ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

ವಿಜೃಂಭಣೆಯಿಂದ ಜರುಗಿದ ಶ್ರೀ ಬೇಟೆರಾಯಸ್ವಾಮಿ ಬ್ರಹ್ಮರಥೋತ್ಸವ

-

Profile
Ashok Nayak Mar 28, 2026 10:47 PM

ಗುಬ್ಬಿ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಬೇಟೆರಾಯಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಜರುಗಿದ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಐದು ದಿನಗಳ ಕಾಲ ಪಾಂಚರಾತ್ರೋಗಮ ವಿಧಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ ದಲ್ಲಿ ಪ್ರಮುಖ ಘಟ್ಟ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಧಿ ವತ್ತಾಗಿ ನಡೆಯಿತು.

ಇದನ್ನೂ ಓದಿ: Gubbi News: ಮಾ.28ರಂದು ಗುಬ್ಬಿ ಶ್ರೀ ಬೇಟೆರಾಯಸ್ವಾಮಿ ಬ್ರಹ್ಮರಥೋತ್ಸವ

ಕಳೆದೆರೆಡು ದಿನದಿಂದ ಅಂಕುರಾರ್ಪಣ ಅಷ್ಟಮಿ ಧ್ವಜಾರೋಹಣ ಕಾರ್ಯಕ್ರಮ, ಗರುಡೋತ್ಸವ ಶ್ರೀರಾಮನವಮಿ ಮಂಟಪಪಡಿ ಪೂಜೆ ಗಜೇಂದ್ರ ಮೋಕ್ಷ ನಂತರ ಸೀತಾ ಕಲ್ಯಾಣೋತ್ಸವ ಮಂತ್ರಘೋಷದೊಂದಿಗೆ ನಡೆದಿತ್ತು. ಅನ್ನಂತರ್ಪಣೆ ಭಕ್ತರಿಂದ ಆಯೋಜಿಸಲಾಗಿತ್ತು.

ಭಾನುವಾರ ಬೆಳಿಗ್ಗೆ ಅಭಿಷೇಕ, ಪ್ರಾಕಾರೋತ್ಸವ ನಡೆದು, ಸಂಜೆ ಸೀತಾಲಕ್ಷ್ಮಿ ಅಮ್ಮನವ ರಿಗೆ ವಿಶೇಷ ಅಲಂಕಾರ, ರಾತ್ರಿ ಶಯನೋತ್ಸವ ನಡೆಯಲಿದೆ. ಮಾ.30 ರಂದು ಬೆಳಿಗ್ಗೆ ಸುಪ್ರಭಾತಸೇವೆ, ಅವಭೃತ ಸ್ನಾನ, ವಸಂತ ಮಾಧವ ಪೂಜೆ ನಡೆಯಲಿದೆ. ಸಂಜೆ ಹನುಮಂತೋತ್ಸವ ಮೆರವಣಿಗೆ ನಡೆದು ನಂತರ ಧ್ವಜಾವರೋಹಣ ಸರ್ಕಾರಿ ಸೇವೆ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.