IPL 206: ಸನ್‌ರೈಸರ್ಸ್ ಹೈದರಾಬಾದ್ ಎದುರು ರಾಯಲ್ ಚಾಲೆಂಜರ್ಸ್‌ಗೆ ಅಧಿಕಾರಯುತ ಗೆಲುವು!
RCB vs SRH Match Highlights: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್ ಗೆಲುವು ಪಡೆಯುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಎಸ್‌ಆರ್‌ಎಚ್ ನೀಡಿದ್ದ 202 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ, 4 ವಿಕೆಟ್ ಕಳೆದುಕೊಂಡು ಗೆದ್ದು ಬೀಗಿತು.
ಸನ್‌ರೈಸರ್ಸ್ ಎದುರು ಆರ್‌ಸಿಬಿಗೆ 6 ವಿಕೆಟ್ ಜಯ. -
ಬೆಂಗಳೂರು: ಜೇಕಬ್ ಡಫಿ (Jacob Duffy) ಮಾರಕ ಬೌಲಿಂಗ್ ಹಾಗೂ ವಿರಾಟ್ ಕೊಹ್ಲಿ (Virat Kohli) ಮತ್ತು ದೇವದತ್ ಪಡಿಕ್ಕಲ್ ಅವರ ಅರ್ಧಶತಕಗಳ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಆರಂಭಿಕ ಪಂದ್ಯದಲ್ಲಿ(RCB vs SRH) ಸನ್‌ರೈಸರ್ಸ್ ಹೈದರಾಬಾದ್ ಎದುರು 6 ವಿಕೆಟ್‌ಗಳ ಅಧಿಕಾರಯುತ ಗೆಲುವು ಪಡೆಯಿತು. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ಶುಭಾರಂಭ ಕಂಡಿದೆ. ಇನ್ನು 200ಕ್ಕೂ ಅಧಿಕ ರನ್ ಗಳಿಸಿದರೂ ಎಸ್‌ಆರ್‌ಎಚ್ ತಂಡ ಬೌಲಿಂಗ್ ವೈಫಲ್ಯದಿಂದ ಸೋಲು ಅನುಭವಿಸಿ ಭಾರಿ ನಿರಾಶೆ ಅನುಭವಿಸಿತು.
ಶನಿವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಸ್‌ಆರ್‌ಎಚ್ ನೀಡಿದ್ದ 202 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ತಂಡ, ವಿರಾಟ್ ಕೊಹ್ಲಿ (69* ರನ್) ಹಾಗೂ ದೇವದತ್ ಪಡಿಕ್ಕಲ್ (61 ರನ್) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ 15.4 ಓವರ್‌ಗಳಿಗೆ 4 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿ ಸುಲಭವಾಗಿ ಗೆಲುವಿನ ಗೆರೆ ದಾಟಿತು. ಆ ಮೂಲಕ 19ನೇ ಆವೃತ್ತಿಯಲ್ಲಿ ಆರ್‌ಸಿಬಿ, ತವರು ಅಭಿಮಾನಿಗಳ ಎದುರು ಶುಭಾರಂಭ ಪಡೆದುಕೊಂಡಿತು.
RCB vs SRH: ʻಫಿಲ್ ಸಾಲ್ಟ್ ಪಡೆದ ಕ್ಯಾಚ್ ವಿವಾದʼ-ಮೂರನೇ ಅಂಪೈರ್ ವಿರುದ್ಧ ಹೆನ್ರಿಚ್ ಕ್ಲಾಸೆನ್ ಆಕ್ರೋಶ!
ದೇವದತ್ ಪಡಿಕ್ಕಲ್ ಅಬ್ಬರ
ಫಿಲ್ ಸಾಲ್ಟ್ ಅವರ ರೂಪದಲ್ಲಿ ಆರ್‌ಸಿಬಿ ಮೊದಲನೇ ವಿಕೆಟ್ ಅನ್ನು ಬಹುಬೇಗ ಕಳೆದುಕೊಂಡಿತು. ಆದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಕ್ರೀಸ್‌ಗೆ ಬಂದ ಕನ್ನಡಿಗ ದೇವದತ್ ಪಡಿಕ್ಕಲ್ ತಮ್ಮ ಬ್ಯಾಟ್ ಮೂಲಕ ಎಫೆಕ್ಟ್ ಮಾಡಿದರು. ಅವರು ಆರಂಭದಿಂದಲೇ ಅಬ್ಬರಿಸಿ 26 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 234.62ರ ಸ್ಟ್ರೈಕ್ ರೇಟ್‌ನಲ್ಲಿ 61 ರನ್ ಚಚ್ಚಿದರು ಹಾಗೂ ವಿರಾಟ್ ಕೊಹ್ಲಿ ಜೊತೆ 101 ರನ್‌ಗಳ ಭರ್ಜರಿ ಜತೆಯಾಟವನ್ನು ಆಡಿದರು.
Picking up exactly where they left off! ❤️
— IndianPremierLeague (@IPL) March 28, 2026
Defending champions #RCB kick off their #TATAIPL 2026 campaign with a clinical, comprehensive victory over #SRH 👏
Updates ▶️ https://t.co/Eo5z0jh4K4 #KhelBindaas | #RCBvSRH | @RCBTweets pic.twitter.com/q3IAaMP3LK
ವಿರಾಟ್ ಕೊಹ್ಲಿ ಅರ್ಧಶತಕ
ಅಭಿಮಾನಿಗಳ ಆರಾಧ್ಯ ದೈವ ವಿರಾಟ್ ಕೊಹ್ಲಿ ಈ ಸೀಸನ್‌ನ ಮೊದಲನೇ ಪಂದ್ಯದಲ್ಲಿಯೇ ಸ್ಪೋಟಕ ಅರ್ಧಶತಕವನ್ನು ಬಾರಿಸಿದರು. ಅವರು ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದರು. ಅವರು ಆಡಿದ 38 ಎಸೆತಗಳಲ್ಲಿ 5 ಸಿಕ್ಸರ್‌ಹಾಗೂ ಅಷ್ಟೇ ಬೌಂಡರಿಗಳೊಂದಿಗೆ ಅಜೇಯ 69 ರನ್‌ಗಳನ್ನು ಬಾರಿಸಿದರು ಹಾಗೂ ತವರು ಅಭಿಮಾನಿಗಳನ್ನು ಭರ್ಜರಿಯಾಗಿ ರಂಜಿಸಿದರು. ಅಷ್ಟೇ ಅಲ್ಲದೆ, ಕೊಹ್ಲಿ ಒಟ್ಟು ಮೂರು ಮಹತ್ವದ ಜೊತೆಯಾಟಗಳನ್ನು ಆಡಿದರು. ಪಡಿಕ್ಕಲ್ ಜೊತೆ ಶತಕದ ಜೊತೆಯಾಟವಾಡಿದ ಕೊಹ್ಲಿ, ರಜತ್ ಪಾಟಿದಾರ್ ಜೊತೆ 53 ರನ್ ಹಾಗೂ ಟಿಮ್ ಡೇವಿಡ್ ಜೊತೆ 40 ರನ್‌ಗಳ ಉಪಯುಕ್ತ ಜೊತೆಯಾಟವನ್ನು ಆಡಿದರು.
Century stand. Match won. Job done! ✅
— IndianPremierLeague (@IPL) March 28, 2026
A masterclass in chasing from @imVkohli and @devdpd07 🤝
Updates ▶️ https://t.co/Eo5z0jh4K4 #TATAIPL | #KhelBindaas | #RCBvSRH | @RCBTweets pic.twitter.com/YWAO7Scjq2
ಎಸ್‌ಆರ್‌ಎಚ್‌ಗೆ ಆರಂಭಿಕ ಆಘಾತ ನೀಡಿದ್ದ ಜೇಕಬ್ ಡಫಿ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಸನ್‌ರೈಸರ್ಸ್ ಹೈದರಾಬಾದ್‌ಗೆ ಮಾರಕ ಬೌಲಿಂಗ್ ಮೂಲಕ ಮೂರು ವಿಕೆಟ್ ಕಿತ್ತು ಜೇಕಬ್ ಡಫಿ ಆರಂಭಿಕ ಆಘಾತ ನೀಡಿದ್ದರು. ಅಪಾಯಕಾರಿ ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಅವರನ್ನು ಮೂರನೇ ಓವರ್‌ನಲ್ಲಿ ಔಟ್ ಮಾಡಿದ್ದರು. ನಂತರ ಐದನೇ ಓವರ್‌ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಔಟ್ ಮಾಡಿದರು. 4 ಓವರ್‌ಗಳಿಗೆ ಕೇವಲ 22 ರನ್ ನೀಡಿ 3 ವಿಕೆಟ್ ಕಿತ್ತ ಡಫಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Pure class. Pure timing. Pure entertainment. 🤌
— IndianPremierLeague (@IPL) March 28, 2026
A spectacular 2️⃣1️⃣-ball 5️⃣0️⃣* from @devdpd07 ❤️
Updates ▶️ https://t.co/Eo5z0jh4K4 #TATAIPL | #KhelBindaas | #RCBvSRH | @RCBTweets pic.twitter.com/3H8rYfRZ08
ಇಶಾನ್ ಕಿಶನ್ ಸ್ಪೋಟಕ ಅರ್ಧಶತಕ
ಒಂದು ತುದಿಯಲ್ಲಿ ವಿಕೆಟ್‌ಗಳನ್ನು ನಿರಂತರವಾಗಿ ಉರುಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಇಶಾನ್ ಕಿಶನ್ ಅಬ್ಬರಿಸಿದರು. ಅವರು ಆಡಿದ 38 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 80 ರನ್‌ಗಳನ್ನು ಸಿಡಿಸಿದರು. ಅಲ್ಲದೆ ಹೆನ್ರಿಚ್ ಕ್ಲಾಸೆನ್ ಅವರ ಜೊತೆ ನಾಲ್ಕನೇ ವಿಕೆಟ್‌ಗೆ 53 ಎಸೆತಗಳಲ್ಲಿ 97 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದ ತಂಡವನ್ನು ಮೇಲೆತ್ತಿದ್ದರು. ಒಂದು ಹಂತದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಕ್ಲಾಸೆನ್ ಹಾಗೂ ಕಿಶನ್ ಅವರ ಬೌಂಡರಿ ಲೈನ್‌ನಲ್ಲಿ ಎರಡು ಸ್ಟನಿಂಗ್ ಕ್ಯಾಚ್‌ಗಳನ್ನು ಫಿಲ್ ಸಾಲ್ಟ್ ಪಡೆಯುವಲ್ಲಿ ಯಶಸ್ವಿಯಾದರು.
RCB vs SRH: ಅರ್ಧಶತಕ ಬಾರಿಸಿ 3000 ಐಪಿಎಲ್ ರನ್‌ಗಳನ್ನು ಪೂರ್ಣಗೊಳಿಸಿದ ಇಶಾನ್ ಕಿಶನ್!
22 ಎಸೆತಗಳಲ್ಲಿ 31 ರನ್ ಗಳಿಸಿ ಹೆನ್ರಿಚ್ ಕ್ಲಾಸೆನ್ ವಿವಾದಾತ್ಮಕ ಕ್ಯಾಚ್‌ಗೆ ವಿಕೆಟ್ ಒಪ್ಪಿಸಿದರೆ, ಕೊನೆಯಲ್ಲಿ ಅಬ್ಬರಿಸಿದ ಅನಿಕೇತ್ 18 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 43 ರನ್ ಚಚ್ಚಿದರು. ಆ ಮೂಲಕ ಹೈದರಾಬಾದ್ ತಂಡ 20 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 201 ರನ್‌ಗಳನ್ನು ಕಲೆ ಹಾಕಿತ್ತು.
ಸ್ಕೋರ್ ವಿವರ
ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಿಗೆ 201-9 (ಇಶಾನ್ ಕಿಶನ್ 80, ಅನಿಕೇತ್ ವರ್ಮಾ 43, ಹೆನ್ರಿಚ್ ಕ್ಲಾಸೆನ್ 31; ಜೇಕಬ್ ಡಫಿ 22ಕ್ಕೆ 3, ರೊಮ್ಯಾರಿಯೊ ಶೆಫರ್ಟ್ 54ಕ್ಕೆ 3)
ರಾಯಲ್ ಚಾಲೆಂಜರ್ಸ್ ಬೆಂಗಳೂರು: 15.4 ಓವರ್‌ಗಳಿಗೆ 203-4 (ವಿರಾಟ್ ಕೊಹ್ಲಿ 69*, ದೇವದತ್ ಪಡಿಕ್ಕಲ್ 61, ರಜತ್ ಪಾಟಿದಾರ್ 31; ಡೇವಿಡ್ ಪೇಯ್ನ್ 35 ಕ್ಕೆ 2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಜೇಕಬ್ ಡಫಿ