ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Share Market: ಸೆನ್ಸೆಕ್ಸ್‌ 961 ಅಂಕ ಕುಸಿತ: ರಿಯಾಲ್ಟಿ, ಫೈನಾನ್ಸ್‌, ಆಟೊ ಸೆಕ್ಟರ್‌ ಇಳಿಕೆ

Stock Market Today: ಫೆಬ್ರವರಿ ಸೆನ್ಸೆಕ್ಸ್‌27ರಂದು 961 ಅಂಕ ಕಳೆದುಕೊಂಡು 81,287ಕ್ಕೆ ಸ್ಥಿರವಾಯಿತು. ನಿಫ್ಟಿ 317 ಅಂಕ ನಷ್ಟದಲ್ಲಿ 25,178ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಹೂಡಿಕೆದಾರರಿಗೆ ಶುಕ್ರವಾರ 5 ಲಕ್ಷ ಕೋಟಿ ರುಪಾಯಿ ನಷ್ಟವಾಯಿತು.

961 ಅಂಕ ಕುಸಿತ ಕಂಡ ಸೆನ್ಸೆಕ್ಸ್‌

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Feb 27, 2026 8:26 PM

ಮುಂಬೈ, ಫೆ. 27: ಭಾರತೀಯ ಷೇರು ಪೇಟೆಗೆ (Share Market) ಸಂಬಂಧಿಸಿ ಇಂದು (ಫೆಬ್ರವರಿ 27) ಶುಭ ಶುಕ್ರವಾರ ಆಗಿರಲಿಲ್ಲ. ಸೆನ್ಸೆಕ್ಸ್‌ 961 ಅಂಕ ಕಳೆದುಕೊಂಡು 81,287ಕ್ಕೆ ಸ್ಥಿರವಾಯಿತು. ನಿಫ್ಟಿ 317 ಅಂಕ ನಷ್ಟದಲ್ಲಿ 25,178ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಹೂಡಿಕೆದಾರರಿಗೆ ಶುಕ್ರವಾರ 5 ಲಕ್ಷ ಕೋಟಿ ರುಪಾಯಿ ನಷ್ಟವಾಯಿತು. ಬಿಎಸ್‌ಇ ಲಿಸ್ಟೆಡ್‌ ಕಂಪನಿಗಳ ಷೇರು ಮೌಲ್ಯ 463 ಲಕ್ಷ ಕೋಟಿ ರುಪಾಯಿಗೆ ಇಳಿಯಿತು. ರಿಯಾಲ್ಟಿ, ಹಣಕಾಸು, ಆಟೊಮೊಬೈಲ್‌, ಎಫ್‌ಎಂಸಿಜಿ ಷೇರುಗಳು ಇಳಿಕೆ ದಾಖಲಿಸಿದವು.

ಸ್ಟಾಕ್‌ ಸೂಚ್ಯಂಕ ಇಳಿಕೆಗೆ 4 ಕಾರಣಗಳಿವು

  • ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರು ಮಾರಾಟ (ಎಫ್‌ಐಐ).
  • ಜಾಗತಿಕ ಮಾರುಕಟ್ಟೆ ಮಂದಗತಿ.
  • ಅಮೆರಿಕ- ಇರಾನ್‌ ಸಂಘರ್ಷ. ಯಾವುದೇ ಡೀಲ್‌ ಆಗದೆ ಮಾತುಕತೆ ವಿಫಲ.
  • ಕಚ್ಚಾ ತೈಲ ದರ ಬ್ಯಾರೆಲ್‌ಗೆ 71 ಡಾಲರ್‌ಗೆ ಏರಿಕೆ.

ಈ ವರ್ಷ ಐಟಿ ಷೇರುಗಳ ಕುಸಿತದ ಹಿನ್ನೆಲೆಯಲ್ಲಿ ರಿಯಾಲ್ಟಿ ಷೇರುಗಳೂ 20 ಪರ್ಸೆಂಟ್‌ ಇಳಿದಿವೆ. ಎಐ ತಂತ್ರಜ್ಞಾನದ ಸಂಚಲನದಿಂದ ಐಟಿ ಸೆಕ್ಟರ್‌ ಕಂಪನಿಗಳಿಗೆ ಆದಾಯ ಕಡಿಮೆ ಆಗಬಹುದು ಎಂಬ ಆತಂಕದಿಂದ ಅವುಗಳ ಷೇರುಗಳು ಇಳಿದಿದ್ದರೆ, ಬೆಂಗಳೂರಿನಂತಹ ನಗರಗಳಲ್ಲಿ ಮನೆಗಳ ಮಾರಾಟ ಕಡಿಮೆ ಆಗಬಹುದು ಎಂಬ ಆತಂಕದಿಂದ ರಿಯಾಲ್ಟಿ ಷೇರುಗಳ ದರಗಳೂ ಇಳಿಯುತ್ತಿವೆ.

ಬ್ಯಾಂಕಿಂಗ್‌, ಮೆಟಲ್‌, ಆಟೊಮೊಬೈಲ್‌, ಎಫ್‌ಎಂಸಿಜಿ ಸೆಕ್ಟರ್‌ನಲ್ಲಿ ಭಾರಿ ಪ್ರಾಫಿಟ್‌ ಬುಕಿಂಗ್‌ ನಡೆಯಿತು. ಸೂಚ್ಯಂಕ ಇಳಿಕೆಗೆ ಇದೂ ಒಂದು ಕಾರಣವಾಯಿತು. ಹೀಗಿದ್ದರೂ, ಸ್ಟಾಕ್‌ ಮಾರ್ಕೆಟ್‌ ಅವಧಿ ಮುಕ್ತಾಯವಾದ ಬಳಿಕ ಸರಕಾರ ಪ್ರಕಟಿಸಿದ ಜಿಡಿಪಿ ಅಂಕಿ ಅಂಶಗಳು ಸಕಾರಾತ್ಮಕವಾಗಿದ್ದು, ಸೋಮವಾರ ಸ್ಟಾಕ್‌ ಮಾರ್ಕೆಟ್‌ ಮೇಲೆ ಪ್ರಭಾವ ಬೀರಲಿದೆಯೇ ಎಂಬ ಕುತೂಹಲ ಮೂಡಿಸಿದೆ.

ಏಪ್ರಿಲ್ 1ರಿಂದ ಬದಲಾಗಲಿದೆ ಹಣಕಾಸು ನಿಯಮ: ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ತಿಳಿದಿರಲಿ ಈ 5 ವಿಷಯ

ಲಾಭ ಗಳಿಸಿದ ಪ್ರಮುಖ ಷೇರುಗಳು

  • ಎಚ್‌ಸಿಎಲ್‌ ಟೆಕ್:‌ 1,389/- (1.14%
  • ಟ್ರೆಂಟ್‌: 3,900/- (1.13%)
  • ಇನ್ಫೋಸಿಸ್‌: 1,300/- (0.8%)
  • ಅಪೊಲೊ ಹಾಸ್ಪಿಟಲ್ಸ್‌: 7,822/- (0.60%)
  • NTPC: 382/- (0.03%)

ನಷ್ಟಕ್ಕೀಡಾದ ಪ್ರಮುಖ ಷೇರುಗಳು

  • ಸನ್‌ ಫಾರ್ಮಾ : 1,737/- (2.73%)
  • ಭಾರ್ತಿ ಏರ್‌ಟೆಲ್‌ : 1,879/- (2.61%)
  • ಎಚ್‌ಡಿಎಫ್‌ಸಿ ಲೈಫ್‌ : 715/- (2.55%)
  • M&M: 3,397/- (2.51%)
  • ಡಾ. ರೆಡ್ಡೀಸ್‌: 1,286/- (2.51)

ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.