Gubbi News: ರಾಜ್ಯೋತ್ಸವ ಅಂಗವಾಗಿ ಕವಿಗೋಷ್ಠಿ ಆಯೋಜಿಸಿದ ಗುಬ್ಬಿ ಕಾರ್ಯನಿರತ ಪತ್ರಕರ್ತರ ಸಂಘ
ಸಾಹಿತ್ಯವು ಸಮಾಜ ದಲ್ಲಿ ಜೀವಂತಿಕೆಯನ್ನು ತುಂಬುತ್ತದೆ. ಯುವಜನರಲ್ಲಿ ಸಾಹಿತ್ಯದ ಆಸಕ್ತಿ ಬೆಳೆಸಲು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಯುವ ಕವಿಗಳು ತಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಅಕ್ಷರ ರೂಪದಲ್ಲಿ ಅಭಿವ್ಯಕ್ತಪಡಿಸುವ ಕಲೆಯನ್ನು ಬೆಳೆಸಿಕೊಳ್ಳ ಬೇಕು. ಕವಿತೆಗಳ ಮೂಲಕ ತಮ್ಮದೇ ಆದ ಗುರುತನ್ನು ರೂಪಿಸಿಕೊಳ್ಳುವುದರ ಜತೆಗೆ, ಕಲ್ಪನಾಶಕ್ತಿ ಯನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳಬೇಕು
-
ಗುಬ್ಬಿ: ಯುವ ಕವಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಗುಬ್ಬಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕನ್ನಡ ನಾಡು ನುಡಿ ಜಲ ಗಡಿ ಸಂಬಂಧಿತ ಸ್ವರಚಿತ ಕವನಗಳು, ಗೀತೆಗಳನ್ನು ಕವಿಗಳು ವೇದಿಕೆಯಲ್ಲಿ ಪ್ರಸ್ತುತ ಪಡಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿನ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ತಾಲ್ಲೂಕು ಅಧ್ಯಕ್ಷ ಎಚ್.ಸಿ.ಯತೀಶ್ ಮಾತನಾಡಿ ಕವಿಗಳು ತಮ್ಮ ಕವಿತೆಗಳ ಮೂಲಕ ಸಮಾಜದಲ್ಲಿನ ಡೊಂಕುಗಳನ್ನು ಎತ್ತಿಹಿಡಿದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಕವಿಗೋಷ್ಠಿ ಎಂಬುದು ಕವಿಗಳ ಮನಸ್ಸಿನಲ್ಲಿರುವ ಭಾವನೆಗಳನ್ನು ಅಕ್ಷರಗಳ ಮೂಲಕ ಅಭಿವ್ಯಕ್ತಪಡಿಸಲು ದೊರೆಯುವ ಜೀವಂತ ವೇದಿಕೆಯಾಗಿದೆ. ಕವಿಗಳು ಪದಗಳ ಬಳಕೆ, ಅವುಗಳ ಅರ್ಥ ಹಾಗೂ ಸಾಮಾಜಿಕ ಪರಿಣಾಮಗಳ ಕುರಿತು ಚಿಂತನೆ ನಡೆಸಬೇಕು. ಸಮಾಜದಲ್ಲಿನ ಅಸಮಾನತೆ ಮತ್ತು ಲೋಪದೋಷಗಳನ್ನು ಎತ್ತಿಹಿಡಿಯಬೇಕು. ಪತ್ರಕರ್ತರ ಇಂತಹ ಕಾರ್ಯ ಕ್ರಮಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಸಹಕಾರ ನೀಡಲಿದೆ ಎಂದರು.
ಇದನ್ನೂ ಓದಿ; Gubbi News: ಚೇಳೂರು ಜಿಪಂ ಕ್ಷೇತ್ರಕ್ಕೆ ಮೈತ್ರಿ ಪಕ್ಷದ ಪ್ರಬಲ ಆಕಾಂಕ್ಷಿಯಾಗಿ ಗುಡ್ಡದಹಳ್ಳಿ ಬಸವರಾಜು
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಶಾಂತರಾಜು ಮಾತನಾಡಿ ಸಾಹಿತ್ಯವು ಸಮಾಜ ದಲ್ಲಿ ಜೀವಂತಿಕೆಯನ್ನು ತುಂಬುತ್ತದೆ. ಯುವಜನರಲ್ಲಿ ಸಾಹಿತ್ಯದ ಆಸಕ್ತಿ ಬೆಳೆಸಲು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಯುವ ಕವಿಗಳು ತಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಅಕ್ಷರ ರೂಪದಲ್ಲಿ ಅಭಿವ್ಯಕ್ತಪಡಿಸುವ ಕಲೆಯನ್ನು ಬೆಳೆಸಿಕೊಳ್ಳಬೇಕು. ಕವಿತೆಗಳ ಮೂಲಕ ತಮ್ಮದೇ ಆದ ಗುರುತನ್ನು ರೂಪಿಸಿಕೊಳ್ಳುವುದರ ಜತೆಗೆ, ಕಲ್ಪನಾಶಕ್ತಿಯನ್ನು ಸೃಜನಾ ತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕ ಪ್ರೊ. ಕಾಳಪ್ಪ ಮಾತನಾಡಿ, ಕವಿತೆಗೆ ಸಮಾಜದ ವಿವಿಧ ಆಯಾಮಗಳನ್ನು ಶೋಧಿಸುವ ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತ ಪಡಿಸುವ ಶಕ್ತಿಯಿದೆ. ಯುವ ಕವಿಗಳು ಸಾಹಿತ್ಯ ಕ್ಷೇತ್ರದಲ್ಲಿ ಆತ್ಮವಿಶ್ವಾಸದಿಂದ ಹೆಜ್ಜೆಯಿಟ್ಟು ಮುನ್ನಡೆಯಬೇಕು. ಸಮಾಜದಲ್ಲಿನ ಡೊಂಕುಗಳನ್ನು ತಿದ್ದುವ ಶಕ್ತಿ ಸಾಹಿತ್ಯಕ್ಕಿದ್ದು, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಕವಿಗೋಷ್ಠಿಗಳು ಉತ್ತಮ ವೇದಿಕೆಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಕೆಂಪರಾಜು, ಪ್ರಧಾನ ಕಾರ್ಯದರ್ಶಿ ಕೆ.ಸಂಜಯ್, ಖಜಾಂಚಿ ಆನಂದ್ ದೀಕ್ಷಿತ್, ಪದಾಧಿಕಾರಿಗಳಾದ ಸೋಮಸುಂದರ್, ರಾಘವೇಂದ್ರ, ಲೋಕೇಶ್, ಹನುಮಂತರಾಜು, ಶಿಕ್ಷಕಿ ಜಿ.ಎಂ.ಸಿಂಧು, ಹೇಮಲತಾ, ರಂಗನಾಥ್, ರಂಗಸ್ವಾಮಿ, ಕವಿ ಅರುಣ್, ಲಿಖಿತ.ಜಿ.ಎನ್, ವಸಂತ.ಹೆಚ್.ಎನ್, ಜೀವಿತಾ, ಕಾವೇರಿ ಚಂದ್ರು, ಅಂಜನ್ ಕುಮಾರ್ ಸೇರಿದಂತೆ ಹಲವು ಕವಿಗಳು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು