ಭಾರತದ ಮೊದಲ ಫ್ಯಾಮಿಲಿ ಲೌಂಜ್ ಪ್ರವೇಶ ಸೌಲಭ್ಯವಿರುವ RuPay ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಲು Paytm ಮತ್ತು AU ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪಾಲುದಾರಿಕೆ
ಭಾರತದ ಮೊಬೈಲ್-ಆಧಾರಿತ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಕಾರ್ಡ್ ಅರ್ಹ ಪೇಟಿಎಂ ಯುಪಿಐ ವಹಿವಾಟುಗಳ ಮೇಲೆ ರಿವಾರ್ಡ್‌ಗಳನ್ನು ನೀಡುವುದರ ಜೊತೆಗೆ, ಪೇಟಿಎಂ ಮೂಲಕ ಬುಕ್ ಮಾಡಿದ ಅರ್ಹ ವಿಮಾನ ಪ್ರಯಾಣಗಳಿಗೆ ಕುಟುಂಬದ ಸದಸ್ಯರಿಗೆ ವಿಮಾನ ನಿಲ್ದಾಣದ ಲೌಂಜ್ ಪ್ರವೇಶ ಸೌಲಭ್ಯವನ್ನೂ ಒದಗಿಸುತ್ತದೆ.
-
ಪೇಟಿಎಂ (One 97 Communications Limited), ಭಾರತದಲ್ಲಿ ಎಂಎಸ್ʼಎಂಇ ಗಳು ಮತ್ತು ಉದ್ಯಮಗಳಿಗೆ ಸೇವೆ ಸಲ್ಲಿಸುತ್ತಿರುವ ಪ್ರಮುಖ ಮರ್ಚೆಂಟ್ ಪಾವತಿ ಸಂಸ್ಥೆ, ಹಣಕಾಸು ಸೇವೆಗಳ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿ ಹಾಗೂ ಮೊಬೈಲ್ ಪಾವತಿಗಳು, QR ಕೋಡ್‌ಗಳು ಮತ್ತು ಸೌಂಡ್‌ಬಾಕ್ಸ್‌ಗಳ ಕ್ಷೇತ್ರದಲ್ಲಿ ಪ್ರವರ್ತಕ ಸಂಸ್ಥೆಯಾಗಿದ್ದು, ಭಾರತದ ಅತಿದೊಡ್ಡ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆಗಿರುವ AU ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡು ಜೀವಮಾನವಿಡೀ ಉಚಿತವಾಗಿರುವ ರುಪೇ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ.
ಭಾರತದ ಮೊಬೈಲ್-ಆಧಾರಿತ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಕಾರ್ಡ್ ಅರ್ಹ ಪೇಟಿಎಂ ಯುಪಿಐ ವಹಿವಾಟುಗಳ ಮೇಲೆ ರಿವಾರ್ಡ್‌ಗಳನ್ನು ನೀಡುವುದರ ಜೊತೆಗೆ, ಪೇಟಿಎಂ ಮೂಲಕ ಬುಕ್ ಮಾಡಿದ ಅರ್ಹ ವಿಮಾನ ಪ್ರಯಾಣಗಳಿಗೆ ಕುಟುಂಬದ ಸದಸ್ಯರಿಗೆ ವಿಮಾನ ನಿಲ್ದಾಣದ ಲೌಂಜ್ ಪ್ರವೇಶ ಸೌಲಭ್ಯವನ್ನೂ ಒದಗಿಸುತ್ತದೆ.
ಇದನ್ನೂ ಓದಿ: ತನ್ನ ಪ್ರಮುಖ ಕ್ರೆಡಿಟ್ ಕಾರ್ಡ್ ಮತ್ತು ಭಾರತದ ಮೊದಲ UPI-ಚಾಲಿತ ಬ್ಯಾಂಕ್ ಶಾಖೆ ಪ್ರಾರಂಭಿಸುತ್ತಿರುವ ಸ್ಲೈಸ್
ಯಾವುದೇ ಸೇರ್ಪಡೆ ಶುಲ್ಕ ಅಥವಾ ವಾರ್ಷಿಕ ಶುಲ್ಕವಿಲ್ಲದ ಪೇಟಿಎಂ AU SFB ಕ್ರೆಡಿಟ್ ಕಾರ್ಡ್‌ನಲ್ಲಿ ದಿನಸಿ ಖರೀದಿ ಮತ್ತು ಕ್ಯಾಬ್ ಪ್ರಯಾಣದ ಪಾವತಿಗಳು ಸೇರಿದಂತೆ ಅರ್ಹ ಪೇಟಿಎಂ UPI ವಹಿವಾಟುಗಳ ಮೇಲೆ 2% ವರೆಗೆ ರಿವಾರ್ಡ್‌ಗಳನ್ನು ಪಡೆಯಬಹುದು. ಇದಲ್ಲದೆ, ಪೇಟಿಎಂ Travel ಬುಕಿಂಗ್‌ಗಳು ಮತ್ತು ಪೇಟಿಎಂ Gold ಖರೀದಿಗಳ ಮೇಲೆ 5% ವರೆಗೆ ರಿವಾರ್ಡ್‌ಗಳು ಲಭ್ಯವಿವೆ. ಸಂಗ್ರಹಿಸಿದ ರಿವಾರ್ಡ್ ಪಾಯಿಂಟ್‌ಗಳನ್ನು ಪ್ರತಿ ಪಾಯಿಂಟ್‌ಗೆ ₹1 ಮೌಲ್ಯದಲ್ಲಿ ಪೇಟಿಎಂ Gold, ವೋಚರ್‌ಗಳು, ಬಿಲ್ ಪಾವತಿಗಳು ಮತ್ತು ಇತರ ಪ್ರಯೋಜನಗಳಿಗಾಗಿ ರಿಡೀಮ್ ಮಾಡಿಕೊಳ್ಳಬಹುದು.
ಕುಟುಂಬದ ಸದಸ್ಯರಿಗೆ ಲೌಂಜ್ ಪ್ರವೇಶ ಸೌಲಭ್ಯ ಒದಗಿಸುವ ಭಾರತದ ಮೊದಲ ಕ್ರೆಡಿಟ್ ಕಾರ್ಡ್ ಆಗಿರುವ ಈ ಕಾರ್ಡ್, ಪೇಟಿಎಂ ಮೂಲಕ ಬುಕ್ ಮಾಡಿದ ಅರ್ಹ ರೌಂಡ್-ಟ್ರಿಪ್ ವಿಮಾನ ಪ್ರಯಾಣಗಳ ಸಂದರ್ಭದಲ್ಲಿ ಒಂದೇ ಸಮಯದಲ್ಲಿ ಗರಿಷ್ಠ ನಾಲ್ಕು ಕುಟುಂಬ ಸದಸ್ಯರಿಗೆ ವಿಮಾನ ನಿಲ್ದಾಣದ ಲೌಂಜ್‌ಗಳನ್ನು ಬಳಸುವ ಅವಕಾಶ ನೀಡುತ್ತದೆ.
ಕಾರ್ಡ್‌ದಾರರು ಪ್ರತಿ ವರ್ಷ ಗರಿಷ್ಠ 12 ಉಚಿತ ಲೌಂಜ್ ಭೇಟಿಗಳ ಪ್ರಯೋಜನವನ್ನು ಪಡೆಯ ಬಹುದು. QR ಕೋಡ್ ಆಧಾರಿತ ಪ್ರವೇಶ ವ್ಯವಸ್ಥೆಯ ಮೂಲಕ ಲೌಂಜ್‌ಗಳಿಗೆ ಪ್ರವೇಶಿಸಬಹು ದಾಗಿದ್ದು, ಭೌತಿಕ ಕಾರ್ಡ್ ಅನ್ನು ಜೊತೆಯಲ್ಲಿ ಕೊಂಡೊಯ್ಯುವ ಅಗತ್ಯವಿರುವುದಿಲ್ಲ.
ಪೇಟಿಎಂ ವಕ್ತಾರರು ತಿಳಿಸಿದ್ದಾರೆ, “ಕುಟುಂಬಗಳು ಒಟ್ಟಾಗಿ ಪ್ರಯಾಣಿಸುವಾಗ, ಕ್ರೆಡಿಟ್ ಕಾರ್ಡ್‌ನ ಪ್ರಯೋಜನಗಳು ಕುಟುಂಬದ ಎಲ್ಲ ಸದಸ್ಯರಿಗೂ ಉಪಯುಕ್ತವಾಗಿರಬೇಕು. AU ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನೊಂದಿಗಿನ ನಮ್ಮ ಪಾಲುದಾರಿಕೆಯು ಈ ಆಲೋಚನೆಯನ್ನು ಲೌಂಜ್ ಪ್ರವೇಶ ಸೌಲಭ್ಯಕ್ಕೂ ವಿಸ್ತರಿಸುತ್ತದೆ. ಇದರ ಜೊತೆಗೆ, ದೈನಂದಿನ ಪೇಟಿಎಂ UPI ಪಾವತಿಗಳ ಮೇಲೆಯೂ ಈ ಕಾರ್ಡ್ ರಿವಾರ್ಡ್‌ಗಳನ್ನು ಒದಗಿಸುತ್ತದೆ.”
ಗ್ರಾಹಕರು ಪೇಟಿಎಂ ಆ್ಯಪ್‌ನಲ್ಲಿ Credit Card ಎಂದು ಹುಡುಕುವ ಮೂಲಕ ಪೇಟಿಎಂ AU SFB ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.