ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಲೆಕ್ಟ್ರಿಕ್ ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕಪ್‌ಗಳ ಖರೀದಿ ಸುಲಭಗೊಳಿಸಲು ಟಾಟಾ ಮೋಟಾರ್ಸ್ ಮತ್ತು ಟರ್ನೋ ಸಹಭಾಗಿತ್ವ

ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಳಕೆ ಹೆಚ್ಚುತ್ತಿರುವಂತೆ, ಗ್ರಾಹಕರಿಗೆ ವಾಹನದ ಜೀವಿತಾವಧಿ ಯುದ್ದಕ್ಕೂ ಅದರ ಮೌಲ್ಯದ ಕುರಿತು ಹೆಚ್ಚಿನ ಸ್ಪಷ್ಟತೆ ಮತ್ತು ಭರವಸೆಯ ಅಗತ್ಯವಿದೆ. ಟಾಟಾ ಮೋಟಾರ್ಸ್ ಜೊತೆಗಿನ ನಮ್ಮ ಪಾಲುದಾರಿಕೆಯು ಈ ಅಗತ್ಯಗಳನ್ನು ಪೂರೈಸಲು ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಬದಲಾಗುವುದನ್ನು ಇನ್ನಷ್ಟು ಸುಲಭಗೊಳಿಸಲು ವಿಶೇಷ ಹಣಕಾಸು ಸೌಲಭ್ಯ ಹಾಗೂ ಖಾತರಿಯ ಬೈಬ್ಯಾಕ್ ಬೆಂಬಲವನ್ನು ಒಟ್ಟಿಗೆ ತರುತ್ತದೆ

ಪಿಕಪ್‌ಗಳ ಖರೀದಿ ಸುಲಭಗೊಳಿಸಲು ಟಾಟಾ ಮೋಟಾರ್ಸ್-ಟರ್ನೋ ಸಹಭಾಗಿತ್ವ

-

Profile
Ashok Nayak Nov 11, 2026 9:53 PM

​ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟಾರ್ಸ್, ತನ್ನ ಎಲೆಕ್ಟ್ರಿಕ್ ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕಪ್‌ಗಳ (ಇ- ಎಸ್ ಸಿ ವಿ ಪಿ ಯು) ಗ್ರಾಹಕರಿಗೆ ವಿಶೇಷ ಹಣಕಾಸು ಯೋಜನೆಗಳನ್ನು ಒದಗಿಸಲು ಭಾರತದ ಮೊದಲ ಬ್ಯಾಟರಿ ಇಂಟೆಲಿಜೆನ್ಸ್ ಮತ್ತು ಜೀವಿತಾವಧಿ ನಿರ್ವಹಣಾ ಸಂಸ್ಥೆಯಾದ ಫಿನ್ಜೋ ಇವಿ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (ಟರ್ನೋ) ಜೊತೆಗೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಪಾಲು ದಾರಿಕೆಯ ಅಡಿಯಲ್ಲಿ, ಟಾಟಾ ಮೋಟಾರ್ಸ್ ಗ್ರಾಹಕರಿಗೆ ತ್ವರಿತ ಸಾಲ ವಿತರಣೆ, ಹೊಂದಿ ಕೊಳ್ಳುವ ಮರುಪಾವತಿ ಯೋಜನೆಗಳು ಮತ್ತು ಶೇಕಡಾ 25ರಷ್ಟು ಖಾತರಿಯ ಮರುಖರೀದಿ (ಬೈಬ್ಯಾಕ್) ಭರವಸೆ ದೊರೆಯಲಿದೆ.

​ಈ ಸಂದರ್ಭದಲ್ಲಿ ಮಾತನಾಡಿದ ಟರ್ನೋ ನಿರ್ದೇಶಕ ವರುಣ್ ನಾಯರ್, “ಟರ್ನೋದಲ್ಲಿ, ಇವಿ ಮಾಲೀಕತ್ವದ ಪಯಣವನ್ನು ಸರಳ ಮತ್ತು ಹೆಚ್ಚು ಲಾಭದಾಯಕವಾಗಿಸುವ ಮೂಲಕ ಭಾರತದಾದ್ಯಂತ ಹಸಿರು ಹಾಗೂ ಶೂನ್ಯ-ಹೊರಸೂಸುವಿಕೆಯ ಚಲನಶೀಲತೆಯ ಕಡೆಗಿನ ಬದಲಾವಣೆಯನ್ನು ವೇಗಗೊಳಿಸುವುದು ನಮ್ಮ ಉದ್ದೇಶವಾಗಿದೆ.

ಇದನ್ನೂ ಓದಿ: Tata Motors: ಟಾಟಾ ಮೋಟಾರ್ಸ್ʼನಿಂದ ಹೊಸ ಇಂಟ್ರಾ V40 ಬಿಡುಗಡೆ

ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಳಕೆ ಹೆಚ್ಚುತ್ತಿರುವಂತೆ, ಗ್ರಾಹಕರಿಗೆ ವಾಹನದ ಜೀವಿತಾವಧಿ ಯುದ್ದಕ್ಕೂ ಅದರ ಮೌಲ್ಯದ ಕುರಿತು ಹೆಚ್ಚಿನ ಸ್ಪಷ್ಟತೆ ಮತ್ತು ಭರವಸೆಯ ಅಗತ್ಯವಿದೆ. ಟಾಟಾ ಮೋಟಾರ್ಸ್ ಜೊತೆಗಿನ ನಮ್ಮ ಪಾಲುದಾರಿಕೆಯು ಈ ಅಗತ್ಯಗಳನ್ನು ಪೂರೈಸಲು ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಬದಲಾಗುವುದನ್ನು ಇನ್ನಷ್ಟು ಸುಲಭಗೊಳಿಸಲು ವಿಶೇಷ ಹಣಕಾಸು ಸೌಲಭ್ಯ ಹಾಗೂ ಖಾತರಿಯ ಬೈಬ್ಯಾಕ್ ಬೆಂಬಲವನ್ನು ಒಟ್ಟಿಗೆ ತರುತ್ತದೆ. ಬ್ಯಾಟರಿ ಇಂಟೆಲಿಜೆನ್ಸ್ ಮತ್ತು ಇವಿ ಜೀವಿತಾವಧಿ ನಿರ್ವಹಣೆಯಲ್ಲಿನ ನಮ್ಮ ಪರಿಣತಿ ಹಾಗೂ ಖಾತರಿಯ ಬೈಬ್ಯಾಕ್ ಕಾರ್ಯಕ್ರಮದ ಮೂಲಕ, ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಮಾಲೀಕತ್ವ ಮತ್ತು ಮರುಮಾರಾಟದ ಪ್ರಕ್ರಿಯೆಯಲ್ಲಿ ನಾವು ಹೆಚ್ಚಿನ ಭರವಸೆಯನ್ನು ನಿರ್ಮಿಸುತ್ತಿದ್ದೇವೆ,” ಎಂದು ಹೇಳಿದರು.

​ಈ ಯೋಜನೆ ಕುರಿತು ಪ್ರತಿಕ್ರಿಯಿಸಿದ ಟಾಟಾ ಮೋಟಾರ್ಸ್ ಲಿಮಿಟೆಡ್‌ನ ಎಸ್ ಸಿ ವಿ ಪಿ ಯು ಉಪಾಧ್ಯಕ್ಷ ಹಾಗೂ ಬಿಸಿನೆಸ್ ಹೆಡ್ ಪಿನಾಕಿ ಹಾಲ್ದಾರ್, “ಟಾಟಾ ಮೋಟಾರ್ಸ್ ಸ್ವಚ್ಛ ಪರಿಸರದ ಮೊಬಿಲಿಟಿಯನ್ನು ಎಲ್ಲರಿಗೂ ತಲುಪಿಸಲು ಮತ್ತು ಭಾರತದಲ್ಲಿ ಸುಸ್ಥಿರ ಲಾಸ್ಟ್-ಮೈಲ್ ಸರಕು ಸಾಗಣೆಯ ಪರಿವರ್ತನೆಯನ್ನು ವೇಗಗೊಳಿಸಲು ಬದ್ಧವಾಗಿದೆ. ನಮ್ಮ ಇ- ಎಸ್ ಸಿ ವಿ ಪಿ ಯು ಶ್ರೇಣಿಯು ಅತ್ಯುತ್ತಮ ಕಾರ್ಯಕ್ಷಮತೆ, ವಿಶ್ವಾಸಾರ್ಹತೆ ಮತ್ತು ಕಾರ್ಯಾಚರಣೆಯ ಆರ್ಥಿಕ ಲಾಭಗಳನ್ನು ನೀಡಲು ವಿನ್ಯಾಸಗೊಂಡಿದ್ದರೂ, ವಾಹನದ ಮಾಲೀಕತ್ವವು ಸರಳ, ಊಹಿಸಬಹು ದಾದ ಮತ್ತು ಚಿಂತೆ-ಮುಕ್ತವಾದಾಗ ಮಾತ್ರ ನಿಜವಾದ ಅಳವಡಿಕೆ ವ್ಯಾಪಕವಾಗಿ ಹೆಚ್ಚುತ್ತದೆ. ಟರ್ನೋ ಜೊತೆಗಿನ ನಮ್ಮ ಪಾಲುದಾರಿಕೆಯು ಗ್ರಾಹಕರಿಗೆ ಆರಂಭದಿಂದ ಅಂತ್ಯದವರೆಗಿನ ಸಂಪೂರ್ಣ ಮಾಲೀಕತ್ವದ ಬೆಂಬಲವನ್ನು ನೀಡುವ ಮೂಲಕ ನಮ್ಮ ಇವಿ ಪರಿಸರ ವ್ಯವಸ್ಥೆ ಯನ್ನು ಬಲಪಡಿಸುತ್ತದೆ. ಹಣಕಾಸಿನ ಅಡೆತಡೆಗಳನ್ನು ನಿವಾರಿಸಿ ಮತ್ತು ದೀರ್ಘಾವಧಿಯ ಮರುಮಾರಾಟ ಮೌಲ್ಯವನ್ನು ರಕ್ಷಿಸುವ ಮೂಲಕ, ದೇಶಾದ್ಯಂತದ ಗ್ರಾಹಕರು ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಶೂನ್ಯ-ಹೊರಸೂಸುವಿಕೆಯ ಚಲನಶೀಲತೆಗೆ ಬದಲಾಗುವಂತೆ ನಾವು ಅವರನ್ನು ಸಬಲೀಕರಣಗೊಳಿಸುತ್ತಿದ್ದೇವೆ,” ಎಂದು ತಿಳಿಸಿದರು.​

ವೈವಿಧ್ಯಮಯ ಸರಕು ಸಾಗಣೆ ಅಗತ್ಯಗಳನ್ನು ಪೂರೈಸಲು ವಿವಿಧ ಲೋಡ್ ಡೆಕ್ ಸಂರಚನೆಗಳು ಮತ್ತು ಪೇಲೋಡ್ ಆಯ್ಕೆಗಳಲ್ಲಿ ಲಭ್ಯವಿರುವ ಏಸ್ ಪ್ರೊ ಇವಿ, ಏಸ್ ಇವಿ 1000 ಮತ್ತು ಇಂಟ್ರಾ ಇವಿ ಪಿಕಪ್ ಸೇರಿದಂತೆ ಅತ್ಯಂತ ವಿಸ್ತಾರವಾದ ಇ- ಎಸ್ ಸಿ ವಿ ಪಿ ಯು ಶ್ರೇಣಿಯೊಂದಿಗೆ ಟಾಟಾ ಮೋಟಾರ್ಸ್ ಭಾರತದ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಪರಿವರ್ತನೆಯ ಮುಂಚೂಣಿಯಲ್ಲಿ ಮುಂದುವರಿದಿದೆ. ಈ ವಾಹನಗಳಿಗೆ ಸಮಗ್ರ ಬೆಂಬಲ ವ್ಯವಸ್ಥೆಯ ಬಲವಿದೆ; ಇದರಲ್ಲಿ 150 ಕ್ಕೂ ಹೆಚ್ಚು ನಗರಗಳಲ್ಲಿ 25,000 ಕ್ಕೂ ಅಧಿಕ ಸಾರ್ವಜನಿಕ ಚಾರ್ಜರ್‌ಗಳ ಲಭ್ಯತೆ, ವಾಹನಗಳು ನಿರಂತರವಾಗಿ ಚಾಲನೆಯಲ್ಲಿರಲು (ಹೈ ಅಪ್‌ಟೈಮ್) ದೇಶಾದ್ಯಂತ 200 ಕ್ಕೂ ಹೆಚ್ಚು ಮೀಸಲಾದ ಇವಿ ಬೆಂಬಲ ಕೇಂದ್ರಗಳು, ಸಂಪೂರ್ಣ ಸೇವಾ 2.0 ಅಡಿಯಲ್ಲಿ ಸಮಗ್ರ ಜೀವಿತಾವಧಿ ನಿರ್ವಹಣೆ, ಟಾಟಾ ಮೋಟಾರ್ಸ್‌ನ ಕನೆಕ್ಟೆಡ್ ವೆಹಿಕಲ್ ಪ್ಲಾಟ್‌ಫಾರ್ಮ್ ಆದ ಫ್ಲೀಟ್ ಎಡ್ಜ್ ಮೂಲಕ ವಾಹನ ಸಮೂಹ ನಿರ್ವಹಣೆ, ಹಾಗೂ ಪ್ರಮುಖ ಬ್ಯಾಂಕ್‌ಗಳು, ಎನ್ ಬಿ ಎಫ್ ಸಿಗಳು ಮತ್ತು ಮೊಬಿಲಿಟಿ ಹಣಕಾಸು ಸಂಸ್ಥೆಗಳೊಂದಿಗಿನ ಆಯಕಟ್ಟಿನ ಪಾಲುದಾರಿಕೆಗಳು ಸೇರಿವೆ.