UPI: ಅಲರ್ಟ್...ಅಲರ್ಟ್! ಏಪ್ರಿಲ್ 1 ರಿಂದ ಈ ಮೊಬೈಲ್ ಸಂಖ್ಯೆಗಳ ಯುಪಿಐ ಐಡಿ ಸ್ಥಗಿತವಾಗುತ್ತೆ
UPI: ಏಪ್ರಿಲ್ 1 ರಿಂದ ಕೆಲ ಮೊಬೈಲ್ ನಂಬರ್ ಗಳಲ್ಲಿ ಯುಪಿಐ ವಹಿವಾಟುಗಳು ಸ್ಥಗಿತಗೊಳಲಿದ್ದು, ಯುಪಿಐ ಪಾವತಿ ಸೇವೆಯ ಬಳಕೆಯು ವ್ಯಾಪಕವಾಗಿ ಬಳಕೆಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ಸುದ್ದಿ ಗೂಗಲ್ ಪೇ(Google Pay), ಫೋನ್ ಪೇ(PhonePe) ಮತ್ತು ಪೇಟಿಎಂ(Paytm) ಶಾಕ್ ನೀಡಿದೆ

ಯುಪಿಐ

ನವದೆಹಲಿ: ಭಾರತದಲ್ಲಿ ಗೂಗಲ್ ಪೇ(Google Pay), ಫೋನ್ ಪೇ(PhonePe) ಮತ್ತು ಪೇಟಿಎಂ(Paytm) ನಂತಹ ಜನಪ್ರಿಯ ಪೇಮೆಂಟ್(Payment) ಆಪ್ಲಿಕೇಷನ್‌ಗಳ(Applications) ಸಹಾಯದಿಂದ ಇತ್ತೀಚಿಗೆ ಯುಪಿಐ (UPI) ಪಾವತಿ ಸೇವೆಯ ಬಳಕೆಯು ವ್ಯಾಪಕವಾಗಿ ಹೆಚ್ಚುತ್ತಿದೆ. ಸ್ಮಾರ್ಟ್‌ಫೋನ್(SmartPhone) ಮೂಲಕ ಆನ್‌ಲೈನ್(Online)ನಲ್ಲಿ ಹಣವನ್ನು ಕಳುಹಿಸುವವರ ಪ್ರಮಾಣ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವ ಇಂದಿನ ಆನ್‌ಲೈನ್ ಯುಗದಲ್ಲಿ ದೇಶದ ಬಹುಪಾಲು ಜನರು ಜೇಬಿನಲ್ಲಿ ಹಣವನ್ನ ಇಡುವುದನ್ನೇ ಮರೆಯುತ್ತಿದ್ದಾರೆ ಎಂದು ಹೇಳಬಹುದು.
ಹೌದು ಇಡೀ ವಿಶ್ವವೇ ಇದೀಗ ಡಿಜಿಟಲೀಕರಣಗೊಂಡಿದ್ದು, ಪಾವತಿ ವ್ಯವಸ್ಥೆಗಳು ಸಂಪೂರ್ಣ ಡಿಜಿಟಲ್. ಯುಪಿಐ ಮೂಲಕ ಸುಲಭವಾಗಿ ಪಾವತಿ ವ್ಯವಸ್ಥೆ ಜನರ ಜೀವನವನ್ನು ಸುಲಭಗೊಳಿಸಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಗೂಗಲ್ ಪೇ ಸರ್ವೀಸ್ ಲಭ್ಯವಿದೆ. ಜಿ ಪೇ ಮೂಲಕ ಯುಪಿಐ ಪಾವತಿ, ರೀಚಾರ್ಜ್ ಸೇರಿದಂತೆ ಹಲವು ಸೇವೆಗಳನ್ನು ಬಳಕೆ ಮಾಡಲಾಗುತ್ತಿದೆ.
ಆದರೆ ಏಪ್ರಿಲ್ 1 ರಿಂದ ಕೆಲ ಮೊಬೈಲ್ ನಂಬರ್ ಗಳಲ್ಲಿ ಯುಪಿಐ ವಹಿವಾಟುಗಳು ಸ್ಥಗಿತಗೊಳಲಿದ್ದು, UPI ಪಾವತಿ ಸೇವೆಯ ಬಳಕೆಯು ವ್ಯಾಪಕವಾಗಿ ಬಳಕೆಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ಸುದ್ದಿ ಗೂಗಲ್ ಪೇ(Google Pay), ಫೋನ್ ಪೇ(PhonePe) ಮತ್ತು ಪೇಟಿಎಂ(Paytm) ಶಾಕ್ ನೀಡಿದೆ. ಹಾಗಾದ್ರೆ ಯಾವ ಮೊಬೈಲ್ ನಂಬರ್ ಗಳಲ್ಲಿ ಯುಪಿಐ ಸೇವೆ ಸ್ಥಗಿತಗೊಳ್ಳಲಿದೆ..?, ಯುಪಿಐ ಮಾಡಿರುವ ಈ ಹೊಸ ನಿರ್ಧಾರ ಏನು..? ಯುಪಿಐ ಸೇವೆ ತಡೆಯುವುದನ್ನು ತಪ್ಪಿಸುವುದು ಹೇಗೆ..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ..
ಬಳಕೆಯಲ್ಲಿ ಇಲ್ಲದ ಮೊಬೈಲ್ ಸಂಖ್ಯೆಯ ಯುಪಿಐ ನಿಷ್ಕ್ರಿಯ
ಪಾವತಿ ನಿಯಂತ್ರಕ ಎನ್‌ಪಿಸಿಐ ಇತ್ತೀಚೆಗೆ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಥರ್ಡ್ ಪಾರ್ಟಿ ಆ್ಯಪ್‌ಗಳು ಹಾಗೂ ಪಾವತಿ ಸೇವಾ ಪೂರೈಕೆದಾರರಿಗೆ, ಒಂದು ವರ್ಷದವರೆಗೆ ತಮ್ಮ ಐಡಿಯೊಂದಿಗೆ ಯಾವುದೇ ವಹಿವಾಟು ಮಾಡದ ಮೊಬೈಲ್ ನಂಬರ್ ಗಳ ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳಿಸುವಂತೆ ಕೇಳಿಕೊಂಡಿದೆ. ಇಂಥಹ ನಿಷ್ಕ್ರಿಯ ಫೋನ್ ಸಂಖ್ಯೆಯ ಯುಪಿಐ ಐಡಿಯನ್ನು ಏಪ್ರಿಲ್ 1ರ ಬಳಿಕ ನಿಷ್ಕ್ರಿಯಗೊಳಿಸಲಾಗುತ್ತಿದ್ದು, ಇಂಥಹ ಸಂಖ್ಯೆಗಳಿಂದ ವಹಿವಾಟುಗಳು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿದೆ.
ಈ ಸುದ್ದಿಯನ್ನು ಓದಿ: Viral Video: ಪ್ರವಾಸಿಗನ ಕಂಜೂಸ್ ಬುದ್ಧಿ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು; ವೈರಲ್ ವಿಡಿಯೊ!
ಇಂತಹ ನಂಬರ್ ಗಳಲ್ಲಿಯೂ ಸೇವೆ ದೊರಕುವುದಿಲ್ಲ
- ಬ್ಯಾಂಕ್ ಖಾತೆಗೆ ಲಿಂಕ್ ಆಗದ ಅಥವಾ ಬದಲಾವಣೆಗೊಂಡ ಮೊಬೈಲ್ ಸಂಖ್ಯೆಗಳೊಂದಿಗೆ ಯುಪಿಐ ಸೌಲಭ್ಯ ಸ್ಥಗಿತವಾಗಲಿದೆ.
- ಡಿಆ್ಯಕ್ಟಿವ್, ಇನ್ಆ್ಯಕ್ಟಿವ್ ಆಗಿರುವ ಮೊಬೈಲ್ ಸಂಖ್ಯೆಗಳಲ್ಲಿ ಯುಪಿಐ ಸೇವೆ ಬಂದ್ ಆಗಲಿದೆ
- ಕೆವೈಸಿ ಪೂರ್ಣಗೊಳಿಸದ ಮೊಬೈಲ್ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸಲ್ಲ.
ಭದ್ರತೆಯ ದೃಷ್ಟಿಯಿಂದ ಬದಲಾವಣೆ
ಭದ್ರತೆಯ ದೃಷ್ಟಿಯಿಂದ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(NPCI)ವು ಈ ನೂತನ ಮಾರ್ಗಸೂಚಿಯನ್ನು ತಂದಿದ್ದು, ಸೈಬರ್ ಕ್ರೈಂಗಳ ಹೆಚ್ಚಳದಿಂದಾಗಿ ಈ ಬದಲಾವಣೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಲಾಗಿದೆ. ಸಕ್ರಿಯ ಇಲ್ಲದ ಮೊಬೈಲ್ ನಂಬರ್ಗಳು ಯುಪಿಐ ಜೊತೆ ಜೋಡಣೆ ಆಗಿರುವುದರಿಂದ ವಂಚನೆ ಆಗುವ ಸಾಧ್ಯತೆ ಇರುತ್ತದೆ. ಯಾವಾಗ ಮೊಬೈಲ್ ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಬದಲಾವಣೆ ಮಾಡುತ್ತಾರೋ ಅಥವಾ ಬ್ಯಾಂಕ್ ಜೊತೆ ಲಿಂಕ್ ಆಗದ ನಂಬರ್ ಅನ್ನು ನಿಷ್ಕ್ರೀಯಗೊಳಿಸುತ್ತಾರೊ ಆಗ ಅದು ದುರ್ಬಳಕೆ ಆಗುವ ಸಾಧ್ಯತೆ ಇರುತ್ತದೆ. ಹಣಕಾಸು ವರ್ಗಾವಣೆಗಳಲ್ಲಿ ಅನೇಕ ರೀತಿಯ ವಂಚನೆಗಳು ಮೋಸಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂಗಳಿಗೆ ಕೂಡಲೇ ನಿಷ್ಕ್ರೀಯಗೊಂಡಿರುವ ಸಂಖ್ಯೆಗಳಲ್ಲಿನ ಯುಪಿಐ ಸೌಲಭ್ಯವನ್ನು ಬಂದ್ ಮಾಡುವಂತೆ ಎನ್‌ಪಿಸಿಐ ಸೂಚನೆ ನೀಡಿದೆ.
ಇನ್ನು ಯುಪಿಐ ಸೌಲಭ್ಯವನ್ನು ಸ್ಥಗಿತಗೊಳಿಸುವ ಮುನ್ನ ಗ್ರಾಹಕರಿಗೆ ಒಂದು ನೋಟಿಫಿಕೇಷನ್ ಕಳುಹಿಸಲಾಗುತ್ತದೆ. ಆದೇಶ ಕಳುಹಿಸಿದ ನಂತರವೂ ಮೊಬೈಲ್ ನಂಬರ್ ನಿಷ್ಕ್ರೀಯವಾಗಿಯೇ ಇದ್ದರೆ. ಅದನ್ನು ಯುಪಿಐ ಸೇವೆಯಿ>ದ ತೆಗೆದು ಹಾಕಲಾಗುತ್ತದೆ. ಹಾಗಾಗಿ ಗ್ರಾಹಕರು ಕೂಡಲೇ ತಮ್ಮ ನಿಷ್ಕ್ರೀಯವಾಗಿರುವ ಅಥವಾ ಬ್ಯಾಂಕ್ ಖಾತೆಗೆ ಜೋಡನೆಯಾಗದ ಸಂಖ್ಯೆಯನ್ನು ಅಪ್ಡೇಟ್ ಮಾಡಿಕೊಳ್ಳುವ ಮೂಲಕ ಯುಪಿಐ ಸೇವೆ ಸ್ಥಗಿತಗೊಳ್ಳುವುದನ್ನು ತಡೆಯಬಹುದಾಗಿದೆ.