Viral Video: ಪ್ರವಾಸಿಗನ ಕಂಜೂಸ್ ಬುದ್ಧಿ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು; ವೈರಲ್ ವಿಡಿಯೊ!
ಪ್ರವಾಸಿಯೊಬ್ಬ ಎರಡು ದೊಡ್ಡ ಚಕ್ರವಿರುವ ಸೂಟ್‌ಕೇಸ್‌ಗಳನ್ನು ರಸ್ತೆಯಲ್ಲಿ ಎಳೆದುಕೊಂಡು ಬೈಕಿನಲ್ಲಿ ಪ್ರಯಾಣ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಪ್ರವಾಸಿಗನ ಈ ಬುದ್ಧಿ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.


ನವದೆಹಲಿ: ಎಲ್ಲಿಗಾದರೂ ಪ್ರಯಾಣ ಬೆಳೆಸಿದಾಗ ಸಾಮಾನ್ಯವಾಗಿ ದೊಡ್ಡ ದೊಡ್ಡ ಬ್ಯಾಗ್‌ಗಳನ್ನು ಹಿಡಿದುಕೊಂಡು ಹೋಗುತ್ತೇವೆ. ಆಗ ಈ ಬ್ಯಾಗ್‌ಗಳನ್ನು ಹೋರೋದಕ್ಕೂ ಆಗದೇ, ಅಲ್ಲೇ ಬಿಡೋದಕ್ಕೂ ಆಗದೇ ಒದ್ದಾಡಿದ ಪ್ರಸಂಗಗಳು ಅದೆಷ್ಟು ಬಾರಿ ನಡೆದಿದೆಯೋ ಏನೋ. ಇನ್ನು ಲಗೇಜ್‌ಗಳಿಗೆಂದೇ ಕ್ಯಾಬ್ ಬುಕ್ ಮಾಡುವವ ಅದೆಷ್ಟೋ ಮಂದಿ ಇದ್ದಾರೆ. ಆದರೆ ಇಲ್ಲೊಬ್ಬ ಪ್ರವಾಸಿ ಎರಡು ದೊಡ್ಡ ಚಕ್ರವಿರುವ ಸೂಟ್‌ಕೇಸ್‌ಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಎಳೆದುಕೊಂಡು ಬೈಕಿನಲ್ಲಿ ಪ್ರಯಾಣ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಇಲ್ಲಿ ಪ್ರವಾಸಿಗನ ಕಂಜೂಸ್ ಬುದ್ಧಿ ಕಂಡು ನೆಟ್ಟಿಗರನ್ನು ಶಾಕ್ ಆಗಿದ್ದಾರೆ.
ಈ ವೈರಲ್ ವಿಡಿಯೊದಲ್ಲಿ, ಪ್ರವಾಸಿಗನೊಬ್ಬ ಬೈಕಿನಲ್ಲಿ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುವಾಗ ತನ್ನ ಎರಡು ದೊಡ್ಡ ಸೂಟ್‌ಕೇಸ್‌ಗಳನ್ನು ಜನನಿಬಿಡ ಬೀದಿಯಲ್ಲಿ ಎಳೆದುಕೊಂಡು ಹೋಗಿದ್ದಾನೆ. ಪ್ರಯಾಣದ ವೆಚ್ಚವನ್ನು ಉಳಿಸಲು ಜನರು ಹೇಗೆಲ್ಲಾ ಮಾಡುತ್ತಾರೆ ಎಂಬುದನ್ನು ಈ ವಿಡಿಯೊದಲ್ಲಿ ನೋಡಬಹುದು ನೋಡಿ. ಕ್ಯಾಬ್ ಅನ್ನು ಬಾಡಿಗೆಗೆ ಪಡೆಯುವುದಕ್ಕಿಂತ ಬೈಕ್ ಕಡಿಮೆ ವೆಚ್ಚದಲ್ಲಿ ಆಗುತ್ತದೆ ಎಂಬುದು ಆ ಪ್ರವಾಸಿಗನ ಯೋಚನೆಯಾಗಿರಬಹುದು.
ಪ್ರವಾಸಿಗ ಸೂಟ್‌ಕೇಸ್ ಸಾಗಿಸಿದ ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. "ನನಗಿದು ತುಂಬಾ ಇಷ್ಟವಾಗಿದೆ" ಎಂದು ಆತನ ಟ್ರಾವೆಲ್ ಹ್ಯಾಕ್ ಅನ್ನು ಕಂಡು ಒಬ್ಬರು ತಿಳಿಸಿದ್ದಾರೆ. ಇನ್ನೊಬ್ಬರು ಪೋಸ್ಟ್‌ಗೆ ಕಾಮೆಂಟ್ ಮಾಡಿ ಅವನನ್ನು "ಜೀನಿಯಸ್" ಎಂದು ಕರೆದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿದಾಗಿನಿಂದ, 8,499 ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ.
ಈ ಸುದ್ದಿಯನ್ನೂ ಓದಿ:Viral Video: ರಾಷ್ಟ್ರಗೀತೆ ವೇಳೆ ಮುಖ್ಯಮಂತ್ರಿಯೇ ಹೀಗಾಡಿದ್ರೆ ಹೇಗೆ? ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೊ
ಇಂತಹ ಕಂಜೂಸ್ ಬುದ್ಧಿಗೆ ಸಂಬಂಧಪಟ್ಟ ಹಲವು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೊದಲ್ಲಿ ರೈಲಿನ ಬೋಗಿಯಲ್ಲಿ ಭಾರೀ ಜನಸಂದಣಿ ಇದ್ದು, ಕುಳಿತುಕೊಳ್ಳಲು ಸ್ಥಳವೂ ಇಲ್ಲ. ಅಂತಹದರಲ್ಲಿ ಒಬ್ಬ ವ್ಯಕ್ತಿಯು ಮಲಗಲು ಪ್ರತ್ಯೇಕ ಬೆರ್ತ್ ಅನ್ನು ರೆಡಿ ಮಾಡಿದ್ದಾನೆ. ಈ ವೈರಲ್ ವಿಡಿಯೊದಲ್ಲಿ, ಆತ ನೈಲಾನ್ ಹಗ್ಗದ ಸಹಾಯದಿಂದ ಬೋಗಿಯೊಳಗಿನ ಛಾವಣಿಯ ಬಳಿ ಎರಡೂ ಬದಿಗಳಲ್ಲಿ ಬಲೆಗಳನ್ನು ಹೆಣೆದು ಮಂಚದ ಹಾಗೇ ಮಾಡಿಕೊಂಡಿದ್ದಾನೆ. ನಂತರ ಅವನು ಮೇಲಕ್ಕೆ ಹತ್ತಿ ಅದರ ಮೇಲೆ ಆರಾಮವಾಗಿ ಮಲಗಿದ್ದಾನೆ. ಇದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ಕ್ಯಾರೆಟ್ ತೊಳೆಯಲು ಈ ರೈತ ಮಾಡಿದ್ದೇನು?
ಇತ್ತೀಚೆಗೆ ರೈತನೊಬ್ಬ ಕ್ಯಾರೆಟ್ ತೊಳೆಯಲು ಇಂಥದ್ದೇ ಒದಮು ಟ್ರಿಕ್ ಮಾಡಿದ್ದಾನೆ. ಕ್ಯಾರೆಟ್ ಮೇಲೆ ಮಣ್ಣು ಜಾಸ್ತಿ ಇರುವುದರಿಂದ ಅದನ್ನು ಅನೇಕ ಬಾರಿ ತೊಳೆಯಬೇಕಾಗುತ್ತದೆ. ಅದಕ್ಕಾಗಿ ಆತ ಕ್ಯಾರೆಟ್‌ಗಳನ್ನು ಅರ್ಧಕ್ಕೆ ಕತ್ತರಿಸಲಾಗಿದ್ದ ಡ್ರಮ್‍ನಲ್ಲಿ ಹಾಕಿದ್ದಾನೆ. ಆ ಡ್ರಮ್ ಒಳಗೆ ಒಂದು ಮಿಷನ್ ಫಿಕ್ಸ್ ಮಾಡಿದ್ದಾನೆ. ಈ ಡ್ರಮ್ ತಿರುಗುತ್ತಿದ್ದಂತೆ ಅದರಲ್ಲಿದ್ದ ಕ್ಯಾರೆಟ್ ಸ್ವಚ್ಛವಾಗುತ್ತದೆ. ರೈತನ ಈ ಅದ್ಭುತ ಟ್ರಿಕ್ ಅನ್ನು ನೋಡಿ ನೆಟ್ಟಿಗರು ಹೊಗಳಿದ್ದಾರೆ.