ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತದ ವಾರೆನ್ ಬಫೆಟ್ ರಾಕೇಶ್ ಜುಂಜುನ್ವಾಲಾ ಯಶಸ್ಸಿನ ಗುಟ್ಟೇನು?

ಟೈಟಾನ್, ಸ್ಟಾರ್ ಹೆಲ್ತ್‌ನಂತಹ ಕಂಪನಿಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಹೊಂದಿದ್ದ ಭಾರತದ ವಾರೆನ್ ಬಫೆಟ್ ರಾಕೇಶ್ ಜುಂಜುನ್ವಾಲಾ 5,000 ರುಪಾಯಿಯಿಂದ ಹೂಡಿಕೆ ಪ್ರಾರಂಭಿಸಿ 40 ಸಾವಿರ ಕೋಟಿ ರುಪಾಯಿ ಸಂಪತ್ತು ಗಳಿಸಿ ಷೇರು ಮಾರುಕಟ್ಟೆಯಲ್ಲಿ ರಾಜನಾಗಿ ಮೆರೆದಿರುವುದು ಎಲ್ಲರಿಗೂ ಗೊತ್ತೇ ಇದೆ. ಮಾರುಕಟ್ಟೆಯಲ್ಲಿ ಅವರ ಯಶಸ್ಸಿನ ಮಂತ್ರ ಏನಾಗಿತ್ತು ಗೊತ್ತೇ? ಇಲ್ಲಿದೆ ವಿವರ.

ಅಶೋಕ್ ದೇವಾನಾಂಪ್ರಿಯ ಮತ್ತು ರಾಕೇಶ್ ಜುಂಜುನ್ವಾಲಾ

ಬೆಂಗಳೂರು, ಮಾ. 9: ಮಾರುಕಟ್ಟೆಯಲ್ಲಿ ಹೂಡಿಕೆ (Investment) ಮಾಡುವಾಗ ನಂಬಿಕೆ ಮತ್ತು ದೀರ್ಘಕಾಲದವರೆಗೆ ಕಾಯುವ ತಾಳ್ಮೆ ಇರಬೇಕು. ಇದುವೇ ಭಾರತದ ವಾರೆನ್ ಬಫೆಟ್ (India's Warren Buffett) ರಾಕೇಶ್ ಜುಂಜುನ್ವಾಲಾ (Rakesh Jhunjhunwala) ಅವರ ಸಕ್ಸಸ್ ಸ್ಟೋರಿ. ಟೈಟಾನ್, ಸ್ಟಾರ್ ಹೆಲ್ತ್‌ನಂತಹ ಕಂಪನಿಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಹೊಂದಿದ್ದ ರಾಕೇಶ್ ಜುಂಜುನ್ವಾಲಾ 5,000 ರುಪಾಯಿಯಿಂದ ಹೂಡಿಕೆ ಪ್ರಾರಂಭಿಸಿ 40 ಸಾವಿರ ಕೋಟಿ ರುಪಾಯಿ ಸಂಪತ್ತು ಗಳಿಸಿ ಷೇರು ಮಾರುಕಟ್ಟೆಯಲ್ಲಿ ರಾಜನಾಗಿ ಮೆರೆದಿದ್ದಾರೆ. ಇವರ ಯಶಸ್ಸಿನ ಮಂತ್ರ ಮೌಲ್ಯಯುತವಾದ ಷೇರುಗಳನ್ನು ದೀರ್ಘಕಾಲದವರೆಗೆ ಹಿಡಿದಿಟ್ಟುಕೊಳ್ಳುವುದಾಗಿತ್ತು ಎಂದು ಕೌಟಿಲ್ಯ ಕ್ಯಾಪಿಟಲ್‌ನ ಸ್ಥಾಪಕ ಅಶೋಕ್ ದೇವಾನಾಂಪ್ರಿಯ ತಿಳಿಸಿದರು.

'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್‌ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತದ ವಾರೆನ್ ಬಫೆಟ್ ರಾಕೇಶ್ ಜುಂಜುನ್ವಾಲಾ ಚಾರ್ಟೆಡ್ ಅಕೌಂಟೆಂಟ್ ಆಗಿದ್ದರು. ಅವರ ಅಪ್ಪ ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದರು.

ರಾಕೇಶ್ ಜುಂಜುನ್ವಾಲಾ ಸಕ್ಸಸ್‌ ಸ್ಟೋರಿ ಇಲ್ಲಿದೆ:



ನಗದು ವಹಿವಾಟು ನಡೆಸುತ್ತಿದ್ದ ಕಾಲದಲ್ಲಿ ಅಂದರೆ 1980ರಲ್ಲಿ ಷೇರು ಮಾರುಕಟ್ಟೆಗೆ ಪ್ರವೇಶ ಮಾಡಿದ ಜುಂಜುನ್ವಾಲಾ, ಪ್ರಾರಂಭದಲ್ಲಿ ಸಣ್ಣ ಸಣ್ಣ ಕಂಪನಿಗಳ ಷೇರು ಖರೀದಿ ಮಾಡಿದ್ದರು. ವ್ಯಾಪಾರ ಮತ್ತು ಹೂಡಿಕೆ ಎರಡೂ ಮಾಡುತ್ತಿದ್ದರು. ವೈಶ್ಯ ಬ್ಯಾಂಕ್, ಟೈಟಾಟ್‌ ಕಂಪನಿಯ ಷೇರುಗಳನ್ನು ಕೂಡ ಖರೀದಿ ಮಾಡಿದ್ದರು. ಇವರು ಹೂಡಿಕೆ, ಷೇರು ಖರೀದಿ ಸಂಸ್ಥೆಗಳ ಆಯ್ಕೆಯಲ್ಲಿ ಬಹಳ ಕಾಳಜಿ ತೋರುತ್ತಿದ್ದರು. ಟೈಟಾನ್‌ನ ಷೇರನ್ನು ಆರಂಭದಲ್ಲಿ ಕೇವಲ ನಾಲ್ಕು ರೂಪಾಯಿ ಷೇರು ತೆಗೆದುಕೊಂಡಿದ್ದರು ಎಂದು ತಿಳಿಸಿದರು.

ಮಾರುಕಟ್ಟೆಯಲ್ಲಿ ಉತ್ತಮ ವ್ಯಾಪಾರಿಯಾಗೋದು ಹೇಗೆ? ಇಲ್ಲಿದೆ ಉಪಯುಕ್ತ ಟಿಪ್ಸ್‌

1989ರವರೆಗೆ ಸಣ್ಣ ಸಣ್ಣ ಕಂಪೆನಿಗಳಲ್ಲಿ ಹೂಡಿಕೆ ಮಾಡುತ್ತ ಇದ್ದ ಅವರು 1992ರಲ್ಲಿ ಹರ್ಷ ಮೆಹ್ತಾ ಸ್ಕ್ಯಾಮ್ ಆದ ಮೇಲೆ ಅವರ ಜಾಗವನ್ನು ತಾವು ಪಡೆದುಕೊಂಡರು. ಸಣ್ಣ ಪುಟ್ಟ ನಷ್ಟಕ್ಕೆ ಅವರು ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಒಂದು ಷೇರು ಕೂಡ ಅವರು ಮಾರಾಟ ಮಾಡಲಿಲ್ಲ ಎಂದು ತಿಳಿಸಿದರು.

ಹೆಂಡತಿ ಮಾತು ಕೇಳಿ ಒಂದು ಬಾರಿ ಅವರು ಷೇರು ಮಾರಾಟ ಮಾಡಿ ಮನೆ ತೆಗೆದುಕೊಂಡರು. ಅದು ತಾವು ಮಾಡಿದ ದೊಡ್ಡ ತಪ್ಪು ಎಂದೇ ಹೇಳುತ್ತಿದ್ದರು. ಯಾಕೆಂದರೆ ಆ ಷೇರುಗಳು ಬಳಿಕ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಆದಾಯ ಕೊಡುತ್ತಿತ್ತು ಎಂದಿದ್ದರು.

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಪಾಕಿಸ್ತಾನಕ್ಕೆ ಅಪ್ಪಳಿಸಿದ 'ಪೆಟ್ರೋಲ್ ಬಾಂಬ್‌'; ಏಕಾಏಕಿ 55 ರುಪಾಯಿ ಹೆಚ್ಚಳ

ಒಂದು ಕೋಟಿ ರುಪಾಯಿ ಟೈಟಾನ್ ಮೇಲೆ ಹೂಡಿಕೆ ಮಾಡಿದ್ದ ಅವರು, ಎಂದಿಗೂ ಷೇರುಗಳನ್ನು ಮಾರಾಟ ಮಾಡುವ ಆಸಕ್ತಿ ತೋರಲಿಲ್ಲ. ಮಾರುಕಟ್ಟೆಯಲ್ಲಿ ನನಗೆ ಶೇ. 30-50ರಷ್ಟು ಲಾಭ ಬೇಡ, ಶೇ. 12-15ರಷ್ಟು ಹೆಚ್ಚಳವಾದರೂ ಸಾಕು ಎನ್ನುತ್ತಿದ್ದರು ಎಂದು ಅಶೋಕ್ ಹೇಳಿದರು.

ಮಾರುಕಟ್ಟೆಯಲ್ಲಿ ನಂಬಿಕೆ ಬಹಳ ಮುಖ್ಯ. ಯಾಕೆಂದರೆ ಇದು ಲಾಭವನ್ನೇ ಕೊಟ್ಟೇ ಕೊಡುತ್ತದೆ. ಮಾರುಕಟ್ಟೆಯಲ್ಲಿ ವ್ಯಾಪಾರಿಗಳಾಗಿರುವವರು ಒಂದಲ್ಲ ಒಂದು ದಿನ ಹೂಡಿಕೆದಾರರು ಆಗೇ ಆಗುತ್ತಾರೆ. ನಿರ್ದಿಷ್ಟ ಬೇಡಿಕೆ ಇಟ್ಟುಕೊಂಡು ಶಿಸ್ತು ಬದ್ದವಾಗಿ ವರ್ತಿಸುವುದು ಇಲ್ಲಿ ಮುಖ್ಯವಾಗುತ್ತದೆ ಎಂದು ಜುಂಜುನ್ವಾಲಾ ಅವರು ನಂಬಿದ್ದರು ಎಂದರು.

ವಿದ್ಯಾ ಇರ್ವತ್ತೂರು

View all posts by this author