ಮಾರುಕಟ್ಟೆಯಲ್ಲಿ ಉತ್ತಮ ವ್ಯಾಪಾರಿಯಾಗೋದು ಹೇಗೆ? ಇಲ್ಲಿದೆ ಉಪಯುಕ್ತ ಟಿಪ್ಸ್
ಯಾರೂ ಹುಟ್ಟಿನಿಂದಲೇ ವ್ಯಾಪಾರಿಯಾಗಿರೋದಿಲ್ಲ. ಶಿಸ್ತು ಬದ್ಧವಾದ ಕಲಿಕೆಯಿಂದ ಉತ್ತಮ ವ್ಯಾಪಾರಿಯಾಗುತ್ತಾನೆ. ವ್ಯಾಪಾರಿಯನ್ನು ರೂಪಿಸಲಾಗುತ್ತದೆ. ಅದು ಹೇಗೆ ಎನ್ನುವುದನ್ನು ಸರಕು ವ್ಯಾಪಾರಿ ರಿಚಾ ಡೆನಿಸ್ ಅವರ ಕಥೆಯೊಂದಿಗೆ ಖ್ಯಾತ ಹೂಡಿಕೆ ತಜ್ಞ ಕೌಟಿಲ್ಯ ಕ್ಯಾಪಿಟಲ್ ಸಂಸ್ಥಾಪಕ ಅಶೋಕ್ ದೇವನಾಂಪ್ರಿಯ ವಿವರಿಸುವುದು ಹೀಗೆ...
ಅಶೋಕ್ ದೇವಾನಾಂಪ್ರಿಯ -
ಬೆಂಗಳೂರು, ಫೆ. 26: ಮಾರುಕಟ್ಟೆಯಲ್ಲಿ ಉತ್ತಮ ವ್ಯಾಪಾರಿಯಾಗೋದು ಸುಲಭವಲ್ಲ. ಅದಕ್ಕಾಗಿ ನಿಯಮ ಪಾಲನೆ ಬಹಳ ಮುಖ್ಯ. ಯಾರೂ ಹುಟ್ಟಿನಿಂದಲೇ ವ್ಯಾಪಾರಿಯಾಗಿರೋದಿಲ್ಲ. ಶಿಸ್ತುಬದ್ಧ ಕಲಿಕೆಯಿಂದ ಯಾರು ಬೇಕಾದರೂ ಉತ್ತಮ ವ್ಯಾಪಾರಿಯಾಗಬಹುದು. ಸರಿಯಾದ ತರಬೇತಿಯನ್ನು ನೀಡಿ ವ್ಯಾಪಾರಿಯನ್ನು ರೂಪಿಸಬಹುದು ಎಂಬುದನ್ನು ಸರಕು ವ್ಯಾಪಾರಿ ರಿಚಾ ಡೆನಿಸ್ (Commodity trader Richa Denis) ನಿರೂಪಿಸಿ ತೋರಿಸಿದ್ದಾರೆ ಎಂದು ಹಣಕಾಸು ತಜ್ಞ, ಕೌಟಿಲ್ಯ ಕ್ಯಾಪಿಟಲ್ ಸ್ಥಾಪಕ (Founder of cautilya Capital) ಅಶೋಕ್ ದೇವಾನಾಂಪ್ರಿಯ (Ashok Devanampriya) ತಿಳಿಸಿದರು. 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.
1984ರಲ್ಲಿ ಖ್ಯಾತ ಸರಕು ವ್ಯಾಪಾರಿಯಾಗಿದ್ದ ರಿಚಾ ಡೆನಿಸ್ ಅವರ ಸ್ನೇಹಿತ ನೀನೊಬ್ಬ ಹುಟ್ಟಿನಿಂದಲೇ ವ್ಯಾಪಾರಿಯಾಗಿದ್ದೀಯ. ಎಲ್ಲರೂ ಹುಟ್ಟಿನಿಂದಲೇ ವ್ಯಾಪಾರಿ ಆಗಿರೋದಿಲ್ಲ ಎನ್ನುತ್ತಾನೆ. ಅದಕ್ಕೆ ರಿಚಾ ಡೆನಿಸ್ ತನ್ನ ಸ್ನೇಹಿತನಿಗೆ ಹೇಳುತ್ತಾರೆ, ವ್ಯಾಪಾರವನ್ನು ಯಾರು ಬೇಕಾದರೂ ಕಲಿಯಬಹುದು. ಅದಕ್ಕೆ ಶಿಸ್ತು ಮುಖ್ಯ ಎನ್ನುತ್ತಾರೆ ಎಂಬುದಾಗಿ ತಿಳಿಸಿದರು.
ಅಶೋಕ್ ದೇವಾನಾಂಪ್ರಿಯ ಅವರೊಂದಿಗಿನ ಸಂದರ್ಶನ ಇಲ್ಲಿದೆ:
ರಿಚಾ ಡೆನಿಸ್ ವ್ಯಾಪಾರಿಯನ್ನು ರೂಪಿಸಬಹುದು ಎನ್ನುವುದನ್ನು ರುಜುವಾತು ಮಾಡಲು 25 ಮಂದಿಗೆ ಉದ್ಯೋಗದ ಆಫರ್ ನೀಡುತ್ತಾರೆ. ಅವರಲ್ಲಿ 22 ಮಂದಿಯನ್ನು ಆಯ್ಕೆ ಮಾಡುತ್ತಾರೆ. ವ್ಯಾಪಾರಿಯಾಗಲು ಬಯಸುವವರಿಗೆ ಶಿಸ್ತು ಮತ್ತು ಸಾಮಾನ್ಯ ಜ್ಞಾನ ಇರಬೇಕು ಎನ್ನುತ್ತಾರೆ. ಅವರಿಗೆಲ್ಲ 3 ತಿಂಗಳ ತರಬೇತಿ ನೀಡಿ ವ್ಯಾಪಾರಿ ಪಾಲಿಸಬೇಕಾದ ನಿಯಮಗಳನ್ನು ಹೇಳಿಕೊಡುತ್ತಾರೆ. ನಿಯಮವನ್ನು ಯಾರಾದರೂ ಉಲ್ಲಂಘಿಸಿದರೆ ಅವರನ್ನು ತಕ್ಷಣ ಕೆಲಸದಿಂದ ತೆಗೆದು ಹಾಕುವುದಾಗಿ ಎಚ್ಚರಿಕೆಯನ್ನು ನೀಡುತ್ತಾರೆ ಎಂದು ಹೇಳಿದರು.
ಷೇರು ಮಾರುಕಟ್ಟೆಯಲ್ಲಿ ಲಾಭ ಮಾಡೋಕೆ ಸಮಯ ನೋಡಲೇಬೇಕು
ಅವರು ತಮ್ಮ ತಂಡಕ್ಕೆ ಟರ್ಟಲ್ ಟ್ರೇಡರ್ಸ್ ಎಂದು ಹೆಸರಿಡುತ್ತಾರೆ. ಇದು ಸಿಂಗಾಪುರದ ಆಮೆಗಳನ್ನು ಸಾಕುವ ರೀತಿ ನೋಡಿ ಅದರಿಂದ ಪ್ರೇರಿತವಾಗಿ ಇಟ್ಟ ಹೆಸರು. ರಿಚಾ ಡೆನಿಸ್ ಆಯ್ಕೆ ಮಾಡಿರುವ 22 ಮಂದಿಯೂ ಕೂಡ ಮುಂದೆ ವ್ಯಾಪಾರದಲ್ಲಿ ಹೆಚ್ಚಿನ ಯಶಸ್ಸು ಪಡೆದರು. ಮಾರುಕಟ್ಟೆ ಬಗ್ಗೆ ಯಾವುದೇ ಮಾಹಿತಿ ಇಲ್ಲದೆಯೂ ಕೂಡ ವ್ಯಾಪಾರಿ ಆಗಬಹುದು ಎಂಬುದನ್ನು ಈ ರಿಚಾ ಡೆನಿಸ್ ಈ ಮೂಲಕ ತೋರಿಸಿಕೊಟ್ಟಿದ್ದಾರೆ. ಇದು ಒಂದು ಯಶಸ್ಸಿನ ಕಥೆ ಎಂದು ಅಶೋಕ್ ವಿವರಿಸಿದರು.
ಉತ್ತಮ ವ್ಯಾಪಾರಿಯಾಗಲು ಬಂದವರ ಪೈಕಿ ಪದವಿ ಪಡೆದವರು ಕೂಡ ಸೋತಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ ಆದವರು ಗೆದ್ದ ಕಥೆಯೂ ಇದೆ. ಮಾರುಕಟ್ಟೆಯಲ್ಲಿ ನಾವು ಸೋಲುವುದರ ಮೇಲೆ ಕಣ್ಣಿಟ್ಟಿರಬೇಕು. ಯಾಕೆಂದರೆ ಗೆಲ್ಲುವುದನ್ನು ಇದು ನಮಗೆ ಕಲಿಸುತ್ತದೆ. ಸರಿಯಾಗಿ ಅಧ್ಯಯನ ಮಾಡುವುದು ಇಲ್ಲಿ ಬಹಳ ಮುಖ್ಯ,. ಒಂದು ನಿಯಮವನ್ನು ಸಾವಿರ ದಿನ ಪ್ರಯೋಗ ಮಾಡಿ ನೋಡಬೇಕು. ಇದು ಯಶಸ್ಸನ್ನು ನಿರ್ಧರಿಸುತ್ತದೆ ಎಂದು ಅಶೋಕ್ ಹೇಳಿದರು.
ಸುಳ್ಳು ಸುದ್ದಿ ಕಂಪನಿಗಳ ಮೇಲೆ ಪರಿಣಾಮ ಬೀರುತ್ತಾ? ಆಗ ಏನು ಮಾಡಬೇಕು?
ವ್ಯಾಪಾರದಲ್ಲಿ ಶಿಸ್ತು ಪಾಲನೆ ಬಹಳ ಮುಖ್ಯ. ಇಲ್ಲಿ ಲಾಭ ಸಿಗದೇ ಹೋದರೂ ನಷ್ಟವಾಗದಂತೆ ಎಚ್ಚರಿಕೆಯಿಂದ ಇರುವುದೇ ನಮ್ಮ ಯಶಸ್ಸನ್ನು ನಿರ್ಧಾರ ಮಾಡುತ್ತದೆ ಎಂದು ಅಶೋಕ್ ದೇವಾನಾಂಪ್ರಿಯ ಹೇಳಿದರು.