ಬೆಂಗಳೂರು, ಜ. 21: ಉದ್ಯೋಗ ಭದ್ರತೆ ಎನ್ನುವುದು ಈಗ ಇಲ್ಲವೇ ಇಲ್ಲ ಎನ್ನಬಹುದು. ಯಾಕೆಂದರೆ ಅಮೆರಿಕದಲ್ಲಿ ಉಂಟಾಗುತ್ತಿರುವ ಉದ್ಯೋಗ ಕಡಿತ, ಎಐ ತಂತಜ್ಞಾನದ ಪರಿಣಾಮ ವಿಶ್ವದಾದ್ಯಂತ ಉದ್ಯೋಗ ವಲಯದಲ್ಲಿ ತಲ್ಲಣ ಉಂಟಾಗುತ್ತಿದೆ ಎಂದು ಹಣಕಾಸು ತಜ್ಞ, ಕೌಟಿಲ್ಯ ಕ್ಯಾಪಿಟಲ್ ಸ್ಥಾಪಕ (Founder of cautilya Capital) ಅಶೋಕ್ ದೇವಾನಾಂಪ್ರಿಯ (Ashok Devanampriya) ಹೇಳಿದರು. 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿ ಉದ್ಯೋಗ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆ ಮತ್ತು ಅದಕ್ಕಾಗಿ ನಮ್ಮ ತಯಾರಿ ಯಾವ ರೀತಿ ಇರಬೇಕು ಎನ್ನುವ ಕುರಿತು ವಿವರಿಸಿದರು.
ಹಿಂದಿನ ಕಾಲದಲ್ಲಿ ಉದ್ಯೋಗ ಭದ್ರತೆ ಅತ್ಯುತ್ತಮವಾಗಿತ್ತು. ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿರಲಿಲ್ಲ ಮತ್ತು ವೇಗವಾಗಿ ಅಪ್‌ಡೇಟ್ ಕೂಡ ಆಗುತ್ತಿರಲಿಲ್ಲ. ಆದರೆ ಇವತ್ತು ತಂತ್ರಜ್ಞಾನ ಬಹಳಷ್ಟು ವೇಗವಾಗಿ ಬದಲಾಗುತ್ತಿದೆ ಮತ್ತು ಅಪ್‌ಡೇಟ್ ಕೂಡ ಆಗುತ್ತಿದೆ. ಹೀಗಾಗಿ ಹಿಂದೆ ಒಂದು ತಿಂಗಳು ತೆಗೆದುಕೊಳ್ಳುತ್ತಿದ್ದ ಕೆಲಸ ಈಗ ಒಂದು ಗಂಟೆಯಲ್ಲಿ ಮಾಡಲಾಗುತ್ತಿದೆ. ಇದು ಎಲ್ಲ ಕಂಪೆನಿಗಳಲ್ಲೂ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಕಣ್ತಪ್ಪಿನಿಂದ ಬೇರೆಯವರ ಖಾತೆಗೆ ವರ್ಗಾವಣೆಯಾದ ಹಣ ಮರಳಿ ಪಡೆಯುವುದು ಹೇಗೆ?
ಈಗ ತಂತಜ್ಞಾನ ಎನ್ನುವುದು ಪ್ರತಿ ವರ್ಷ ಬದಲಾಗುತ್ತಿದೆ. 45 ವರ್ಷದ ಮೇಲೆ ಹೊಸ ಉದ್ಯೋಗ ಪಡೆಯುವುದು ಕಷ್ಟವಾಗುತ್ತಿದೆ. ಕಾರಣ ತಂತ್ರಜ್ಞಾನ ಅಷ್ಟೊಂದು ವೇಗವಾಗಿ ಬದಲಾಗಿದ್ದು, ಅಪ್‌ಡೇಟ್ ಆಗೋದು ಕಷ್ಟವಾಗುತ್ತಿದೆ ಎಂದು ಹೇಳಿದರು.
ವಿಡಿಯೋ ನೋಡಿ
ಜೆಸಿಬಿ ಎಂಬ ಒಂದೇ ಒಂದು ಮೆಷಿನ್ ಬಂದಿದ್ದಕ್ಕೆ 500 ಮಂದಿ ಉದ್ಯೋಗ ಕಳೆದುಕೊಂಡಿದ್ದರು. ತಂತಜ್ಞಾನ ಬಂದ ಮೇಲೆ ಸಾಕಷ್ಟು ಮಂದಿಯ ಉದ್ಯೋಗದ ಮೇಲೆ ಪರಿಣಾಮ ಬೀರಿದೆ ಎಂದು ಅವರು ಹೇಳಿದರು.
ಅಮರಿಕದಲ್ಲಿದ್ದ ಉದ್ಯೋಗಿಯೊಬ್ಬರ ಸಂಬಳ ಸುಮಾರು ಎರಡೂವರೆ ಲಕ್ಷ ರೂ. ಆಗಿತ್ತು. ಆದರೆ ಅವರು ಇತ್ತೀಚೆಗೆ ಉದ್ಯೋಗ ಕಳೆದುಕೊಂಡಾಗ ತುಂಬಾ ಗೊಂದಲಕ್ಕೆ ಒಳಗಾದರು. ಅವರಿಗೆ ನಾವು ಕೊಟ್ಟ ಸಲಹೆ ಏನೆಂದರೆ ಅವರು ಮಾರಬೇಕೆಂದಿದ್ದ ಆಸ್ತಿ ಮಾರಾಟ ಮಾಡಿ ಅದರಲ್ಲಿ ಒಂದು ನಿರ್ದಿಷ್ಟ ಮೊತ್ತವನ್ನು ರಿಯಲ್ ಎಸ್ಟೇಟ್ ಮೇಲೆ ಹಾಕೋದು ಮತ್ತು ಲೋನ್ ಕ್ಲಿಯರ್ ಮಾಡುವುದು. ಮತ್ತೆ ಉಳಿಕೆಯಾದ ಹಣವನ್ನು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡೋದು. ಇದರಿಂದ ಅವರು ತಾವು ಹಿಂದಿನ ಉದ್ಯೋಗದಲ್ಲಿ ಪಡೆಯುತ್ತಿದ್ದ ಮೊತ್ತಕ್ಕಿಂತಲೂ ಹೆಚ್ಚು ಹಣವನ್ನು ಎಸ್‌ಡಬ್ಲ್ಯುಪಿ ಅಂದರೆ ಸಿಸ್ಟಮ್ಯಾಟಿಕ್ ವಿಥ್ಡ್ರಾವಲ್ ಪ್ಲಾನ್‌ನಲ್ಲಿ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ವರ್ಷಕ್ಕೆ 60,000 ಜನರಿಗಿದೆ ಉದ್ಯೋಗ ಅವಕಾಶ
ಉದ್ಯೋಗ ಕಳೆದುಕೊಂಡಾಗ ಎಸ್‌ಐಪಿಯಲ್ಲಿ ಹೂಡಿಕೆ ಮಾಡಿದ ಹಣವನ್ನು ಎಸ್‌ಡಬ್ಲ್ಯುಪಿಗೆ ಪರಿವರ್ತನೆ ಮಾಡಿಕೊಂಡು ನಿಗದಿತ ಆದಾಯವನ್ನು ಪಡೆಯಬಹುದಾಗಿದೆ. ಮತ್ತೆ ಉದ್ಯೋಗ ಸಿಕ್ಕಿದರೆ ಅದನ್ನು ಎಸ್ಐಪಿ ಆಗಿ ಪರಿವರ್ತಿಸಬಹುದು. ಒಂದು ವೇಳೆ ಉದ್ಯೋಗ ಸಿಗದೇ ಇದ್ದರೆ ಎಸ್‌ಡಬ್ಲ್ಯುಪಿ ಚಲನೆಯಲ್ಲೇ ಇರುತ್ತದೆ ಎಂದು ಅವರು ತಿಳಿಸಿದರು.
ಉದ್ಯೋಗದಿಂದ ನಿವೃತ್ತಿ, ಅನಿರೀಕ್ಷಿತವಾಗಿ ಉದ್ಯೋಗ ಕಳೆದುಕೊಂಡಾಗ ಆದಾಯದ ಚಿಂತೆ ಕಾಡುವುದು ಸಹಜ. ಆದರೆ ಈ ಪರಿಸ್ಥಿತಿಯನ್ನು ಎದುರಿಸಲು ಉದ್ಯೋಗಕ್ಕೆ ಸೇರಿದ ತಕ್ಷಣದಿಂದಲೇ ಹೂಡಿಕೆ ಮಾಡಲು ಪ್ರಾರಂಭಿಸಬೇಕು. ಕನಿಷ್ಠ 5- 10 ವರ್ಷಗಳ ಮುಂಚೆಯೇ ಹೂಡಿಕೆ ಮಾಡುವುದು ಒಳ್ಳೆಯದು. ವಿಪತ್ತಿನ ಕಾಲದಲ್ಲಿ ಅನಿಶ್ಚಿತತೆಯನ್ನು ಎದುರಿಸಲು ಸಣ್ಣ ಮೊತ್ತದ ಹೂಡಿಕೆಯನ್ನು ಪ್ರಾರಂಭಿಸುವುದು ಉತ್ತಮ ಎಂದು ಅವರು ತಿಳಿಸಿದರು.