ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವರ್ಷಕ್ಕೆ 60,000 ಜನರಿಗಿದೆ ಉದ್ಯೋಗ ಅವಕಾಶ

ಪ್ರತಿ ವರ್ಷ ಬ್ಯಾಂಕಿಂಗ್ ಕ್ಷೇತ್ರದಲ್ಲಿ 60,000 ಜನರನ್ನು ಉದ್ಯೋಗಕ್ಕಾಗಿ ನೇಮಿಸಲಾಗುತ್ತದೆ. ಅಂದಾಜು 11 ಪರೀಕ್ಷೆಗಳು ನಡೆಯುತ್ತವೆ. ಕಠಿಣ ಅಭ್ಯಾಸ ಮಾಡಿದರೆ ಸುಲಭವಾಗಿ ಬ್ಯಾಂಕ್‌ಗಳಲ್ಲಿ ಉದ್ಯೋಗ ಪಡೆಯಬಹುದು ಎನ್ನುತ್ತಾರೆ ಹಿರಿಯ ಬ್ಯಾಂಕ್ ಅಧಿಕಾರಿ, ಹಣಕಾಸು ತಜ್ಞ ಡಾ. ಜೆ.ಎನ್. ಜಗನ್ನಾಥ್.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ; ಹೇಗಿದೆ  ಅವಕಾಶ?

ಹಣಕಾಸು ತಜ್ಞ ಡಾ. ಜೆ.ಎನ್. ಜಗನ್ನಾಥ್ -

ಬೆಂಗಳೂರು, ಜ. 14: ಪ್ರತಿ ವರ್ಷ ಬ್ಯಾಂಕ್ (Bank job)ನಲ್ಲಿ ಸುಮಾರು 60,000 ಜನರಿಗೆ ಉದ್ಯೋಗ ಅವಕಾಶ ಲಭಿಸುತ್ತದೆ. ಕ್ಲರ್ಕ್ ಮತ್ತು ಆಫೀಸರ್ ಸೇರಿದಂತೆ ವಿವಿಧ ಹುದ್ದೆಗೆ ವರ್ಷದಲ್ಲಿ 11 ಪರೀಕ್ಷೆಗಳು (bank exam) ನಡೆಯುತ್ತವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶವಿದ್ದರೂ ಕರ್ನಾಟಕದವರು ಇದಕ್ಕೆ ಸೇರುತ್ತಿರುವುದು ಬಹಳ ಕಡಿಮೆ. ಇದೊಂದು ಬೇಸರದ ಸಂಗತಿ ಎಂದು ಹಿರಿಯ ಬ್ಯಾಂಕ್ ಅಧಿಕಾರಿ, ಹಣಕಾಸು ತಜ್ಞ ಡಾ. ಜೆ.ಎನ್. ಜಗನ್ನಾಥ್ ಹೇಳಿದರು. 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್‌ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.

ಕಾಲೇಜು ಮುಗಿಸಿದ ಬಳಿಕ ಹಲವು ಅವಕಾಶಗಳು ಕಾದಿರುತ್ತವೆ. ಉನ್ನತ ಶಿಕ್ಷಣ ಪಡೆಯಬಹುದು, ಕ್ಯಾಂಪಸ್ ಸಂದರ್ಶನಕ್ಕೆ ಹಾಜರಾಗಬಹುದು, ಸ್ವಂತ ಉದ್ಯೋಗ ಮಾಡಬಹುದು. ಸರ್ಕಾರಿ, ಖಾಸಗಿ ವಲಯದಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳಬಹುದು. ಯಾವುದೇ ಉದ್ಯೋಗಕ್ಕೆ ಸೇರಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆ ಎನ್ನುವುದು ಇದ್ದೇ ಇರುತ್ತದೆ. ಇದು ಕಷ್ಟವಿರುತ್ತದೆ. ನಿಜ. ಕಠಿಣ ಪರಿಶ್ರಮ ಪಟ್ಟು ಓದಿ ಬರೆದರೆ ಉದ್ಯೋಗವನ್ನು ಖಂಡಿತಾ ನಮ್ಮದಾಗಿಸಿಕೊಳ್ಳಬಹುದು ಎಂದರು.

ಕಾಲೇಜಿನಲ್ಲಿ ಎಲ್ಲರೂ ಓದುತ್ತಾರೆ. ರ‍್ಯಾಂಕ್‌ ಎಲ್ಲರೂ ಪಡೆಯುತ್ತಾರೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಾಕಷ್ಟು ಮಂದಿ ಹಿಂದೇಟು ಹಾಕುತ್ತಾರೆ ಎಂದ ಅವರು, ಐಟಿ ಕ್ಷೇತ್ರಗಳಿಗಿಂತ ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗ ಭದ್ರತೆ ಇದೆ. ಹಲವು ಸೌಲಭ್ಯಗಳೂ ಇವೆ. ಆದರೆ ಇದು ಹೆಚ್ಚಿನವರಿಗೆ ಗೊತ್ತಿಲ್ಲ ಎಂದು ಹೇಳಿದರು.

ಬ್ಯಾಂಕ್‌ ಉದ್ಯೋಗದ ಸಂಪೂರ್ಣ ವಿಡಿಯೊ ಇಲ್ಲಿದೆ:



ಉತ್ತಮ ತರಬೇತಿ, ವರ್ಗಾವಣೆ, ಉದ್ಯೋಗ ಭದ್ರತೆ ಇರುತ್ತದೆ. ವರ್ಷಕ್ಕೆ ಆರಂಭದಲ್ಲಿ 5 -7 ಲಕ್ಷ ರೂ. ವರೆಗೆ ಆದಾಯ ಇರುತ್ತದೆ. ಚೆನ್ನಾಗಿ ಕೆಲಸ ಮಾಡಿದರೆ ಬಡ್ತಿ, ಕೆಲವೊಂದು ಸೌಲಭ್ಯಗಳೂ ದೊರೆಯುತ್ತದೆ. ಟಿಎ, ಡಿಎ, ಐದು ವರ್ಷಕ್ಕೊಮ್ಮೆ ವೇತನ ಹೆಚ್ಚಳವಾಗುತ್ತದೆ. ವರ್ಷಕ್ಕೊಮ್ಮೆ ಸಂಬಳ ಹೆಚ್ಚಳ, ಅರ್ಹತೆಗೆ ಸರಿಯಾಗಿ ಭತ್ಯೆ ಹೆಚ್ಚಳವಾಗುತ್ತದೆ. ಇವೆಲ್ಲ ಯಾವುದೇ ಉದ್ಯೋಗ ವಲಯದಲ್ಲಿ ಇರುವುದಿಲ್ಲ. ಬ್ಯಾಂಕ್ ನಲ್ಲಿ ಉದ್ಯೋಗ ಮಾಡುವವರಿಗೆ ಪ್ರೋತ್ಸಾಹ ಧನ, ವಿದೇಶಕ್ಕೆ ಹೋಗುವ ಅವಕಾಶ ಕೂಡ ಇರುತ್ತದೆ ಎಂದು ಅವರು ತಿಳಿಸಿದರು.

ಹೊಸ ಕಾರು ಖರೀದಿಸುವ ಮುನ್ನ ಯೋಜನೆ ಹೇಗಿರಬೇಕು?

ಬ್ಯಾಂಕ್ ಉದ್ಯೋಗ ಪಡೆಯಲು ಬಿಎ, ಬಿಕಾಂ ಸೇರಿದಂತೆ ಯಾವುದೇ ಪದವಿ ಪಡೆದರೆ ಸಾಕು. ಬೇರೆ ಬೇರೆ ಊರುಗಳಿಗೆ ವರ್ಗಾವಣೆಯ ಅವಕಾಶ ಕೂಡ ಇಲ್ಲಿದೆ. ಹೀಗಾಗಿ ಸಾಕಷ್ಟು ಜೀವನಾನುಭವವನ್ನು ಪಡೆಯಬಹುದು. ಉದ್ಯೋಗಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಫರ್ನಿಚರ್ ಖರೀದಿ, ನಿರ್ವಹಣೆ ವೆಚ್ಚ, ಪೆಟ್ರೋಲ್, ಮನೋರಂಜನಾ ವೆಚ್ಚಗಳು ಕೂಡ ದೊರೆಯುತ್ತದೆ. ಮನೆ ಕಟ್ಟಲು, ಕಾರು ಖರೀದಿಗೆ ಸಾಲ ಸಿಗುತ್ತದೆ. ಬಡ್ಡಿ ಇಲ್ಲದೆ ಹಬ್ಬಕ್ಕಾಗಿ ಅಡ್ವಾನ್ಸ್ ಕೂಡ ಪಡೆಯಬಹುದು. ಇನ್ನು ಬ್ಯಾಂಕ್ ಉದ್ಯೋಗಿಗಳು ಬ್ಯಾಂಕ್ ನಲ್ಲಿ ಇಡುವ ಠೇವಣಿಗೆ ಶೇ. 1 ರಷ್ಟು ಹೆಚ್ಚು ಬಡ್ಡಿ ಕೂಡ ದೊರೆಯುತ್ತದೆ. ಇನ್ನು ಕಾರ್ಯ ಕ್ಷೇತ್ರದಲ್ಲಿ ಆಧುನಿಕ ವಾತಾವರಣ, ಸಾಮಾಜಿಕವಾಗಿ ಗೌರವವು ದೊರೆಯುತ್ತದೆ ಎಂದು ಅವರು ತಿಳಿಸಿದರು.

ಅಮೇಜಾನ್ ಪೇ ಇಂದ ಭಾರತದಲ್ಲಿ ಹಣಕಾಸು ಸೇವೆಗಳ ಪೋರ್ಟ್‌ಫೋಲಿಯೊ ವಿಸ್ತರಣೆ

ಬ್ಯಾಂಕ್ ವಲಯದಲ್ಲಿ ಕ್ಲರ್ಕ್, ಜೂನಿಯರ್ ಅಸಿಸ್ಟಂಟ್, ಪ್ರೊಬೆಷನರಿ ಅಧಿಕಾರಿ ಹುದ್ದೆ ಸೇರಿದಂತೆ ಬೇರೆ ಬೇರೆ ಹುದ್ದೆಗಳಿರುತ್ತವೆ. ಪ್ರತಿ ವರ್ಷ ಎಸ್ ಬಿಐ, ಐಬಿಬಿಎಸ್, ಐಬಿಬಿಎಸ್, ಆರ್‌ಆರ್‌ಬಿ, ಆರ್‌ಬಿಐ, ಎಲ್ ಐಸಿ, ಖಾಸಗಿ ವಲಯ ಸೇರಿದಂತೆ 11 ಪರೀಕ್ಷೆ ಇರುತ್ತದೆ. ಇದರಲ್ಲಿ ಪ್ರಾಥಮಿಕ, ಮುಖ್ಯ ಪರೀಕ್ಷೆ ಬರೆದ ಬಳಿಕ ಸಂದರ್ಶನ ನಡೆಯುತ್ತದೆ. ಮುಖ್ಯ ಪರೀಕ್ಷೆಯನ್ನು 60 ಅಂಕಗಳಲ್ಲಿ ನಡೆಸಲಾಗುತ್ತದೆ. ಇಲ್ಲಿ ಕೇಳುವ ಲೆಕ್ಕ ಕಷ್ಟವಿರುವುದಿಲ್ಲ. ಎಸ್‌ಎಸ್‌ಎಲ್‌ಸಿ ಒಳಗಿನ ಗಣಿತವನ್ನೇ ಕೇಳಲಾಗುತ್ತದೆ. ಒಟ್ಟಿನಲ್ಲಿ ವೇಗವಾಗಿ ಲೆಕ್ಕ ಮಾಡಬೇಕಿರುವುದಷ್ಟೇ ಇಲ್ಲಿ ಮುಖ್ಯವಾಗಿರುತ್ತದೆ ಎಂದು ಜಗನ್ನಾಥ್ ತಿಳಿಸಿದರು.