ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಚಿನ್ನ ಅಥವಾ ಬೆಳ್ಳಿ ಹೂಡಿಕೆಗೆ ಯಾವುದು ಬೆಸ್ಟ್? ತಜ್ಞರು ಏನಂತಾರೆ? ಇಲ್ಲಿದೆ ವಿವರ

ಇವತ್ತು ಚಿನ್ನ ಮತ್ತು ಬೆಳ್ಳಿಯ ದರ ಪರಸ್ಪರ ಪೈಪೋಟಿ ಕೊಡುವಂತಿದೆ. ಹೀಗಿರುವಾಗ ಹೂಡಿಕೆ ಮಾಡುವಾಗ ಏನೆಲ್ಲ ಅಂಶಗಳನ್ನು ಗಮನಿಸಬೇಕು, ಯಾವ ರೀತಿ ಹೂಡಿಕೆಗೆ ಆದ್ಯತೆ ನೀಡಬೇಕು ಎನ್ನುವ ಕುರಿತು ಖ್ಯಾತ ಹೂಡಿಕೆ ತಜ್ಞ ಕೌಟಿಲ್ಯ ಕ್ಯಾಪಿಟಲ್ ಸಂಸ್ಥಾಪಕ ಅಶೋಕ್ ದೇವನಾಂಪ್ರಿಯ ಅವರು ತಿಳಿಸಿರುವ ಮಾಹಿತಿ ಇಲ್ಲಿದೆ.

ಅಶೋಕ್ ದೇವಾನಾಂಪ್ರಿಯ

ಬೆಂಗಳೂರು, ಮಾ. 12: ಚಿನ್ನವೋ (Gold) ಅಥವಾ ಬೆಳ್ಳಿಯೋ (Silver) ಹೂಡಿಕೆ ಮಾಡುವಾಗ ಗೊಂದಲವಾಗುವುದು ಸಾಮಾನ್ಯ. ಇವತ್ತು ಎರಡೂ ಕೂಡ ಮೌಲ್ಯಯುತವಾಗಿದೆ. ಹೀಗಾಗಿ ಸದ್ಯದ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಎರಡರಲ್ಲೂ ಹೂಡಿಕೆ ಮಾಡಬಹುದು ಎನ್ನುತ್ತಾರೆ ಹಣಕಾಸು ತಜ್ಞ, ಕೌಟಿಲ್ಯ ಕ್ಯಾಪಿಟಲ್ ಸ್ಥಾಪಕ (Founder of cautilya Capital) ಅಶೋಕ್ ದೇವಾನಾಂಪ್ರಿಯ (Ashok Devanampriya). 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್‌ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು ಚಿನ್ನ ಅಥವಾ ಬೆಳ್ಳಿ ಮೇಲೆ ಹೂಡಿಕೆ ಮಾಡುವಾಗ ಗಮನಿಸಲೇಬೇಕಾದ ಕೆಲವು ಅಂಶಗಳ ಕುರಿತು ವಿವರಿಸಿದರು.

ರೋಮನ್ ಸಾಮ್ರಾಜ್ಯದಲ್ಲಿ ಪ್ರತಿ ಗ್ರಾಮ್ ಬಂಗಾರಕ್ಕೆ 12 ಗ್ರಾಂ ಬೆಳ್ಳಿ ಬರುತ್ತಿತ್ತು. ಆಗ ನಾಣ್ಯಗಳನ್ನು ಬೆಳ್ಳಿಯಲ್ಲಿ ಮುದ್ರಿಸಲಾಗುತ್ತಿತ್ತು. ಆಗ ಚಿನ್ನ ಕೇವಲ ಬಂಗಾರಕ್ಕೆ ತಯಾರಿಸಲು ಬಳಕೆಯಾಗುತ್ತಿತ್ತು. ಇವತ್ತು 1 ಗ್ರಾಂ ಬಂಗಾರಕ್ಕೆ 60 ಗ್ರಾಂ ಬೆಳ್ಳಿ ಸಿಗುತ್ತಿದೆ ಎಂದರು.

ಬೆಳ್ಳಿಯ ಪ್ರಮಾಣ ಹೆಚ್ಚಾದರೆ ಅದಕ್ಕೆ ಮಾರುಕಟ್ಟೆಯಲ್ಲಿ ಗೌರವ ಸಿಗುವುದಿಲ್ಲ. ಯಾವತ್ತೂ ಬೆಳ್ಳಿಯ ಪ್ರಮಾಣ ಕಡಿಮೆ ಇದ್ದರೆ ಅದಕ್ಕೆ ಮೌಲ್ಯ ಹೆಚ್ಚು. ಗೋಲ್ಡ್ ಬ್ಯಾಂಕಿಂಗ್ ಬಂದ ಮೇಲೆ ಚಿನ್ನ ಮತ್ತು ಬೆಳ್ಳಿ ಮೌಲ್ಯ ಜಾಸ್ತಿ ಆಗಲು ಪ್ರಾರಂಭವಾಯಿತು. ಕೈಗಾರಿಕೀಕರಣವಾದ ಮೇಲೆ ಹೆಚ್ಚಿನ ಬೆಳ್ಳಿ ಕೈಗಾರಿಕೆಗಳಲ್ಲಿ ಬಳಕೆಯಾಗುತ್ತಿದೆ. ಹೀಗಾಗಿ ಈಗ ಬೆಳ್ಳಿಗೆ ಬೇಡಿಕೆ ಕೂಡ ಹೆಚ್ಚಾಗಿದೆ ಎಂದರು.

ವಿಡಿಯೊ ಇಲ್ಲಿದೆ:



ಕೋವಿಡ್ ಸಮಯದಲ್ಲಿ 1 ಗ್ರಾಂ ಚಿನ್ನಕ್ಕೆ 125 ಗ್ರಾಂ ಬೆಳ್ಳಿ ಸಿಗುತ್ತಿತ್ತು. ಹೀಗಾಗಿ ಬೆಳ್ಳಿ ಮಾರುಕಟ್ಟೆ ಬೇಡಿಕೆ ಕಳೆದುಕೊಂಡಿತ್ತು. ಅನಂತರ ಬೆಳ್ಳಿಯ ಮೌಲ್ಯ ನಿಧಾನಕ್ಕೆ ಹೆಚ್ಚಾಗಿದೆ. ಈಗ 1 ಗ್ರಾಂ ಚಿನ್ನ ಸರಿಸುಮಾರು 60 ಗ್ರಾಂ ಬೆಳ್ಳಿಗೆ ಸಮವಾಗಿದೆ ಎಂದು ಹೇಳಿದರು.

ಮಾರುಕಟ್ಟೆಯಲ್ಲಿ ಉತ್ತಮ ವ್ಯಾಪಾರಿಯಾಗೋದು ಹೇಗೆ? ಇಲ್ಲಿದೆ ಉಪಯುಕ್ತ ಟಿಪ್ಸ್‌

ಬೆಳ್ಳಿಯ ಪ್ರಮಾಣ 1 ಗ್ರಾಂ ಚಿನ್ನಕ್ಕೆ ಹೋಲಿಸಿದರೆ 80ರ ಮೇಲೆ ಹೋದರೆ ಆಗ ಬೆಳ್ಳಿಯ ಮೇಲೆ ಹೂಡಿಕೆ ಮಾಡುವುದು ಸೂಕ್ತ, ಇದಕ್ಕಿಂತ ಕೆಳಗೆ ಇದ್ದರೆ ಚಿನ್ನದ ಮೇಲೆ ಹೂಡಿಕೆ ಮಾಡುವುದು ಒಳ್ಳೆಯದು. ಸದ್ಯದ ಮಾರುಕಟ್ಟೆ ಸ್ಥಿತಿಯಲ್ಲಿ ಚಿನ್ನ, ಬೆಳ್ಳಿ ಮೌಲ್ಯ ಸಮತೋಲನದಲ್ಲಿದೆ. ಹೀಗಾಗಿ ಈಗ ಎರಡರಲ್ಲೂ ಹೂಡಿಕೆ ಮಾಡುವುದು ಸುರಕ್ಷಿತವಾಗಿದೆ ಎಂದರು.

ಷೇರು ಮಾರುಕಟ್ಟೆಯಲ್ಲಿ ಲಾಭ ಮಾಡೋಕೆ ಸಮಯ ನೋಡಲೇಬೇಕು

ಇವತ್ತು ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳಿ ಬಳಕೆಯಾಗುತ್ತಿದೆ. ಹೀಗಾಗಿ ಬೆಳ್ಳಿಯ ಬೇಡಿಕೆ ಎಂದಿಗೂ ಕಡಿಮೆಯಾಗುವುದಿಲ್ಲ. ಅದು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ.ಬೆಳ್ಳಿಯ ಮೌಲ್ಯ ಕಡಿಮೆಯಾಗದೇ ಇರಲು ಇನ್ನೊಂದು ಪ್ರಮುಖ ಕಾರಣವೆಂದರೆ ಅದನ್ನು ಕರಗಿಸಲು ಸಾಧ್ಯವಿಲ್ಲ. ಹೀಗಾಗಿ ಬೆಳ್ಳಿಯ ಮೇಲೆ ಹೂಡಿಕೆ ಸುರಕ್ಷಿತವಾಗಿರುತ್ತದೆ. ಆದರೆ ಅದರ ಪ್ರಮಾಣಗಳನ್ನು ನೋಡಿ ಹೂಡಿಕೆ ಮಾಡಿದರೆ ಲಾಭ ಮಾಡಿಕೊಳ್ಳಬಹುದು ಎನ್ನುತ್ತಾರೆ ಅಶೋಕ್.

ವಿದ್ಯಾ ಇರ್ವತ್ತೂರು

View all posts by this author