ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಷೇರು ಮಾರುಕಟ್ಟೆಯಲ್ಲಿ ಲಾಭ ಮಾಡೋಕೆ ಸಮಯ ನೋಡಲೇಬೇಕು

ಷೇರು ಮಾರುಕಟ್ಟೆಯಲ್ಲಿ ಸಮಯದ ಪಾತ್ರವೇ ಬಹಳ ದೊಡ್ಡದಾಗಿರುತ್ತದೆ. ಯಾಕೆಂದರೆ ಇಲ್ಲಿ ಪ್ರತಿಯೊಂದು ಸ್ಟಾಕ್ ಕೂಡ ಸಮಯವನ್ನು ನಿರ್ಧರಿಸಿಯೇ ಲಾಭ, ನಷ್ಟವನ್ನು ಉಂಟು ಮಾಡುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಹೂಡಿಕೆ ಅಥವಾ ವ್ಯಾಪಾರ ಮಾಡುವಾಗ ಅವಧಿವನ್ನು ನೋಡಿಕೊಳ್ಳುವುದು ಬಹಳ ಮುಖ್ಯ ಎನ್ನುತ್ತಾರೆ ಖ್ಯಾತ ಹೂಡಿಕೆ ತಜ್ಞ ಕೌಟಿಲ್ಯ ಕ್ಯಾಪಿಟಲ್ ಸಂಸ್ಥಾಪಕ ಅಶೋಕ್ ದೇವನಾಂಪ್ರಿಯ.

ಟೈಮ್ ಸೈಕಲ್ ಮೇಲೆಯೇ ಷೇರು ಮಾರುಕಟ್ಟೆಯ ಚಲನೆ

ಅಶೋಕ್ ದೇವಾನಾಂಪ್ರಿಯ -

ಬೆಂಗಳೂರು, ಫೆ. 25: ಷೇರು ಮಾರುಕಟ್ಟೆಯಲ್ಲಿ (Share market) ಹೂಡಿಕೆ, ವ್ಯಾಪಾರ ಮಾಡಲು ಸಮಯಕ್ಕೆ ನಾವು ಹೆಚ್ಚಿನ ಆದ್ಯತೆ ಕೊಡಲೇಬೇಕು. ಯಾಕೆಂದರೆ ಸಮಯವೇ ಲಾಭ, ನಷ್ಟವನ್ನು ನಿರ್ಧರಿಸುತ್ತದೆ ಎನ್ನುತ್ತಾರೆ ಹಣಕಾಸು ತಜ್ಞ, ಕೌಟಿಲ್ಯ ಕ್ಯಾಪಿಟಲ್ ಸ್ಥಾಪಕ (Founder of cautilya Capital) ಅಶೋಕ್ ದೇವಾನಾಂಪ್ರಿಯ (Ashok Devanampriya). 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್‌ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮತ್ತು ವ್ಯಾಪಾರ ಮಾಡಿಕೊಳ್ಳುವವರು ತಿಳಿದುಕೊಳ್ಳಲೇ ಬೇಕಾದ ಹಲವು ಮಹತ್ವಪೂರ್ಣ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಪ್ರತಿಯೊಬ್ಬರು ಕೂಡ ತಮ್ಮದೇ ಆದ ವಿಧಾನವನ್ನು ಅನುಸರಿಸುತ್ತಾರೆ. ಅದರಲ್ಲಿ ಕೆಲವರು ವ್ಯಾಲ್ಯೂ, ಇನ್ನು ಕೆಲವರು ಗ್ರೋಥ್, ಮತ್ತೆ ಕೆಲವರು ಮೊಮೆಂಟಮ್, ಬ್ರೇಕ್ ಔಟ್, ಕೀ, ವ್ಯಾಲ್ಯೂಮ್ ಬೇಸ್, ಇಂಡಿಕೇಟರ್ ಹೀಗೆ ಬೇರೆ ಬೇರೆ ವಿಧಾನಗಳನ್ನು ಪಾಲಿಸುತ್ತಾರೆ. ಆದರೆ ಕೌಟಿಲ್ಯ ಕ್ಯಾಪಿಟಲ್ ಮಾತ್ರ ಸಮಯಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತದೆ ಎಂದರು.

ಅಶೋಕ್ ದೇವಾನಾಂಪ್ರಿಯ ಅವರೊಂದಿಗಿನ ಸಂದರ್ಶನ ಇಲ್ಲಿದೆ:



ಜೀವನದಲ್ಲಿ ಹೇಗೆ ಒಳ್ಳೆಯ ಮತ್ತು ಕೆಟ್ಟ ಸಮಯ ಎಂದಿರುತ್ತದೋ ಅದೇ ರೀತಿ ಷೇರುಗಳಿಗೂ ಒಳ್ಳೆಯ ಮತ್ತು ಕೆಟ್ಟ ಸಮಯ ಎಂದು ಇದ್ದೇ ಇರುತ್ತದೆ. ಇದು ನಿರ್ಧಾರವಾಗುವುದು ಮಾರುಕಟ್ಟೆಯಲ್ಲಿನ ಬೇಡಿಕೆ ಮೇಲೆ. ಪ್ರತಿಯೊಂದು ವಸ್ತುವಿಗೂ ಬಳಕೆಯ ಸಮಯ ಎಂದು ಇರುತ್ತದೆ. ಉದಾಹರಣೆಗೆ ಮಳೆಗಾಲದಲ್ಲಿ ಬಳಸುವ ವಸ್ತುಗಳನ್ನು ನಾವು ಚಳಿಗಾಲದಲ್ಲಿ ಬಳಸುವುದಿಲ್ಲ. ಚಳಿಗಾಲದಲ್ಲಿ ಬಳಸುವ ವಸ್ತುಗಳನ್ನು ನಾವು ಬೇಸಗೆಯಲ್ಲಿ ಬಳಸುವುದಿಲ್ಲ. ಇದುವೇ ಮಾರುಕಟ್ಟೆಯಲ್ಲಿ ಯಾವ ವಸ್ತುವಿಗೆ ಯಾವಾಗ ಹೆಚ್ಚಿಗೆ ಬೇಡಿಕೆ ಎಂಬುದನ್ನು ನಿರ್ಧರಿಸುತ್ತದೆ ಎಂದು ಹೇಳಿದರು.
ಎಸ್ ಐಪಿಯಲ್ಲಿ 10 ಸಾವಿರದಿಂದ 10 ಕೋಟಿ ರೂ. ಮಾಡುವುದು ಹೇಗೆ ? ಇಲ್ಲಿದೆ ಮಾಹಿತಿ

ಸಾಮಾನ್ಯವಾಗಿ ಭಾರತದಲ್ಲಿ ಪ್ರವಾಸೋದ್ಯಮ ಏಪ್ರಿಲ್, ಮೇಯಲ್ಲಿ ಹೆಚ್ಚು ಲಾಭದಾಯಕವಾಗಿರುತ್ತದೆ. ಅದೇ ದುಬೈಯಲ್ಲಿ ಜುಲೈ, ಆಗಸ್ಟ್‌ನಲ್ಲಿ ಬರುತ್ತದೆ. ಅಂತೆಯೇ ಭಾರತದಲ್ಲಿ ಮಾರುತಿ ಕಾರು ಹೆಚ್ಚು ಮಾರಾಟವಾಗುವ ಸಮಯ ಅಕ್ಟೋಬರ್ ತಿಂಗಳಲ್ಲಿ. ಯಾಕೆಂದರೆ ಅಕ್ಟೋಬರ್ ದೀಪಾವಳಿ ಸಮಯವಾಗಿರುತ್ತದೆ. ಆಗ ಕಾರಿಗೆ ಬೇಡಿಕೆ ಹೆಚ್ಚಾಗಿರುತ್ತದೆ ಎಂದರು.

ಬೇಡಿಕೆಯ ವಿಚಾರದಲ್ಲಿ ಕೆಲವೊಂದು ಸಮಯ ಯಾವತ್ತೂ ಬದಲಾಗುವುದಿಲ್ಲ. ಇದು ಸಂಪೂರ್ಣವಾಗಿ ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯವನ್ನು ಅವಲಂಬಿಸಿರುತ್ತದೆ. ಇದರ ಮೇಲೆಯೇ ಸ್ಟಾಕ್ ಮಾರುಕಟ್ಟೆ ವರ್ತಿಸುತ್ತದೆ. ಇದನ್ನು ನಾವು ತಿಳಿದುಕೊಂಡಿರಬೇಕು ಎನ್ನುತ್ತಾರೆ ಅಶೋಕ್ ದೇವಾನಾಂಪ್ರಿಯ.

ಬಳಕೆ ಎನ್ನುವುದು ಸೀಸನ್ ಮೇಲೆ ನಿರ್ಧರಿತವಾಗಿರುತ್ತದೆ. ಸೀಸನ್ ಮೇಲೆ ನಾವು ಹೂಡಿಕೆಯನ್ನು ಮಾಡಬೇಕು. ಇದಕ್ಕಾಗಿ ನಾವು ಪೂರ್ತಿ ಅಟೋಮ್ಯಾಟ್ ಸಿಸ್ಟಮ್ ಅನ್ನು ಅಳವಡಿಸಿಕೊಂಡಿದ್ದೇವೆ. ಇದರಲ್ಲಿ ಶೇ. 1ರಷ್ಟು ಅಲೋಕೇಷನ್, ಶೇ. 20ರಷ್ಟು ಸ್ಟಾಕ್ ಪ್ಲಸ್ ಮಾಡಿ ಸಂಪೂರ್ಣ 150 ದಿನಗಳ ಸ್ಟಡಿ ಮಾಡಿಕೊಂಡಿದ್ದೇವೆ. ಇದೇ ಮಾಡೆಲ್ ಇಟ್ಟುಕೊಂಡು ಪೂರ್ತಿ ಖಾತೆಗಳನ್ನು ಮಾಡಿಕೊಂಡಿದ್ದೇವೆ. ಇಲ್ಲಿ ಕೂಡ ನಾವು ಟ್ರಾಫಿಕ್ ನಿಯಮವನ್ನು ಅನುಸರಿಸುತ್ತೇವೆ. ಅಪಾಯವಿದ್ದಾಗ ನಿಲ್ಲುವುದು, ಕೊಂಚ ಅಪಾಯವಿದ್ದಾಗ ನಿಧಾನಕ್ಕೆ ಹೋಗುವುದು, ಅಪಾಯವಿಲ್ಲದೆ ಇದ್ದಾಗ ಹೋಗುತ್ತಾ ಇರುವುದು. ಇದು ಪ್ರತಿ ಸ್ಟಾಕ್ ಪ್ರತಿ ಸೀಸನ್‌ನಲ್ಲೇ ವರ್ಕ್ ಆಗುವಂತೆ ಮಾಡುತ್ತದೆ ಎನ್ನುತ್ತಾರೆ ಅವರು.

ಶ್ರೀಮಂತ ರಾಜ್ಯಗಳಲ್ಲಿ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ, ಮೊದಲ ಮೂರು ಸ್ಥಾನ ಪಡೆದ ರಾಜ್ಯಗಳು ಯಾವುವು?

ಪ್ರತಿಯೊಂದು ವಸ್ತುವಿನ ಬಳಕೆಯು ಸೀಸನ್ ಮೇಲೆ ನಿಂತಿರುತ್ತದೆ. ಇಲ್ಲಿ ಬಳಕೆಯು ಮಾರಾಟವನ್ನು ನಿರ್ಧರಿಸಿದರೆ, ಮಾರಾಟವು ಲಾಭವನ್ನು, ಲಾಭವು ಷೇರು ಬೆಲೆಯನ್ನು ನಿರ್ಧರಿಸುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಹೂಡಿಕೆ, ವ್ಯಾಪಾರ ಮಾಡುವಾಗ ಅವಧಿಯ ಸಂಪೂರ್ಣ ಅಧ್ಯಯನ ಮಾಡಿಕೊಂಡಿರುವುದು ಉತ್ತಮ ಎನ್ನುತ್ತಾರೆ ಅಶೋಕ್.