ಆಟಿಕೆಯಲ್ಲಿ ಮೂಡಿಬಂತು ಪುರಿ ಜಗನ್ನಾಥ ಯಾತ್ರೆ: ನೆಟ್ಟಿಗರ ಮನ ಗೆದ್ದ ಪುಟಾಣಿಗಳ ಈ ಸಂಭ್ರಮ ನೀವೂ ಕಣ್ತುಂಬಿಕೊಳ್ಳಿ
Viral Video: ಒಡಿಶಾಸದ ಪುರಿ ಜಗನ್ನಾಥ ರಥಯಾತ್ರೆಯು ದೇಶದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದು. ಈಗಾಗಲೇ ರಥ ಯಾತ್ರೆ ಆರಂಭವಾಗಿದೆ. ಈ ವೈಭವದ ನಡುವೆ ಪುಟ್ಟ ಮಕ್ಕಳ ಆಟಿಕೆಯ ರಥ ಯಾತ್ರೆಯ ವಿಡಿಯೊವೊಂದು ಎಲ್ಲರ ಮನ ಗೆದ್ದಿದೆ. ಚಿಕ್ಕ ಮಕ್ಕಳ ಗುಂಪೊಂದು ತಮ್ಮ ಆಟದ ವಸ್ತುಗಳನ್ನೇ ಬಳಸಿ ಈ ಹಬ್ಬದ ಮಾದರಿಯನ್ನು ಮರುಸೃಷ್ಟಿಸಿದ್ದಾರೆ.
ಪುರಿ ರಥಯಾತ್ರೆ ರಿ-ಕ್ರಿಯೇಟ್ ಮಾಡಿದ ಮಕ್ಕಳು -
ಭುವನೇಶ್ವರ, ಜು. 18: ಪುರಿ ಜಗನ್ನಾಥ ರಥಯಾತ್ರೆಯು ದೇಶದ ಪ್ರಮುಖ ಹಬ್ಬಗಳಲ್ಲಿ ಒಂದಿ ಎನಿಸಿಕೊಂಡಿದೆ. ಲಕ್ಷಾಂತರ ಹಿಂದೂಗಳು ಒಂದೆಡೆ ಸೇರುವ ಈ ಧಾರ್ಮಿಕ ಆಚರಣೆ ಜುಲೈ 16ರಂದು ಪ್ರಾರಂಭವಾಗಿದೆ. ಈ ವೈಭವದ ನಡುವೆ ಪುಟ್ಟ ಮಕ್ಕಳ ರಥ ಯಾತ್ರೆ ಮಾದರಿಯ ಆಟದ ವಿಡಿಯೊವೊಂದು ಎಲ್ಲರ ಮನ ಗೆದ್ದಿದೆ. ಚಿಕ್ಕ ಮಕ್ಕಳ ಗುಂಪೊಂದು ತಮ್ಮ ಆಟದ ವಸ್ತುಗಳನ್ನೇ ಬಳಸಿ ಈ ರಥಯಾತ್ರೆಯನ್ನು ಮರುಸೃಷ್ಟಿಸಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೊ (Viral News) ಎಲ್ಲರ ಗಮನ ಸೆಳೆದಿದ್ದು, ಭಾರಿ ವೈರಲ್ ಆಗಿದೆ.
ಆಧುನಿಕ ಯುಗದಲ್ಲಿ ಮಕ್ಕಳು ಮೊಬೈಲ್, ಲ್ಯಾಪ್‌ಟಾಪ್ ಎಂದು ಗ್ಯಾಜೆಟ್‌ನಲ್ಲೇ ಮುಳುಗಿ ಹೋಗುತ್ತಾರೆ. ಈ ನಡುವೆ ಸೃಜನಶೀಲತೆಯಿಂದ ಪುಟ್ಟ ಮಕ್ಕಳ ಆಟಿಕೆ ರಥಯಾತ್ರೆ ಗಮನ ಸೆಳೆದಿದೆ. ಮಕ್ಕಳೆಲ್ಲ ಸೇರಿ ರಥಯಾತ್ರೆಯನ್ನು ಅದ್ಬುತವಾಗಿ ರಿಕ್ರಿಯೇಟ್ ಮಾಡಿದ್ದಾರೆ.
ವಿಡಿಯೊ ನೋಡಿ:
ರಥವನ್ನು ಸಂಕೇತಿಸಲು ಒಂದು ಆಟಿಕೆ ಟ್ರಕ್ ಬಳಸಿದ್ದು ಅಲಂಕಾರಕ್ಕಾಗಿ ಪುಸ್ತಕದ ಹಾಳೆಗಳು ಮತ್ತು ಹೂವುಗಳನ್ನು ಉಪಯೋಗಿಸಿದ್ದಾರೆ. ಬಟ್ಟೆ ಮತ್ತು ಬಣ್ಣ ಬಳಸಿ ತಾವೇ ತಯಾರಿಸಿದ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯ ವಿಗ್ರಹವನ್ನು ತಮ್ಮ ರಥದಲ್ಲಿ ಎಳೆದಿದ್ದಾರೆ. ವಿಡಿಯೊದಲ್ಲಿ ಕೆಲವು ಮಕ್ಕಳು ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರೆಯರ ವೇಷ ಧರಿಸಿದ್ದರೆ ಇನ್ನು ಕೆಲವರು ರಥವನ್ನು ಎಳೆಯುವ ಭಕ್ತರ ಪಾತ್ರಗಳನ್ನು ಉತ್ಸಾಹದಿಂದ ವಹಿಸಿಕೊಂಡಿದ್ದಾರೆ.
ಶಾಲೆಗೆ ಹೋಗಲು ಕಾಯುತ್ತಿದ್ದ ಅಪರಿಚಿತ ಬಾಲಕಿಗೆ ನೆರವಾದ ಬಾಲಕ
ಆಟದ ಸಾಮಗ್ರಿಗಳಲ್ಲೇ ಈ ರಥ ಸಿದ್ಧವಾಗಿದ್ದು ಈ ದೃಶ್ಯ ಬಹಳಷ್ಟು ಮುದ್ದಾಗಿದೆ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ನೋಡಲು ಸರಳವಾಗಿದ್ದರೂ, ಶತಮಾನಗಳಷ್ಟು ಹಳೆಯದಾದ ಹಬ್ಬದ ಸಾರವನ್ನು ಸುಂದರವಾಗಿ ಪ್ರತಿ ಬಿಂಬಿಸುವಂತಿದೆ. ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಅರ್ಥಪೂರ್ಣ ರೀತಿಯಲ್ಲಿ ಕಲಿಸಲು ಮಕ್ಕಳನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಅನೇಕರು ಪೋಷಕರನ್ನು ಶ್ಲಾಘಿಸಿದರು.
ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು "ಇದು ನಾನು ನೋಡಿದ ಅತ್ಯಂತ ಮುದ್ದಾದ ವಿಡಿಯೊ. ಈ ಪುಟ್ಟ ಭಕ್ತರನ್ನು ಜಗನ್ನಾಥ ದೇವರು ಆಶೀರ್ವದಿಸಲಿ" ಎಂದು ಬರೆದಿದ್ದಾರೆ. ಮತ್ತೊಬ್ಬರು ʼʼಮಕ್ಕಳ ಕ್ರಿಯಾಶೀಲತೆಗೆ ಮೆಚ್ಚುಗೆ ನೀಡಲೇಬೇಕುʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.