ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರತಿಯೊಬ್ಬರೂ ಪಿಪಿಎಫ್ ಖಾತೆ ಹೊಂದಿರಲೇಬೇಕು ಎನ್ನುವುದೇಕೆ ಹಣಕಾಸು ತಜ್ಞರು? ಇಲ್ಲಿದೆ ಮಾಹಿತಿ

ಪ್ರತಿಯೊಬ್ಬರೂ ಪಿಪಿಎಫ್ ಖಾತೆ ಹೊಂದಿರಲೇಬೇಕು. ನಿವೃತ್ತಿಯ ಬಳಿಕ ಪ್ರತಿಯೊಬ್ಬರೂ ಬಡ್ಡಿ ಹಣದಲ್ಲೇ ಜೀವನ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ನಮಗೆ ಪಿಪಿಎಫ್‌ನಲ್ಲಿ ಹೂಡಿಕೆ ಮಾಡುವ ಹಣದಿಂದ ಹೆಚ್ಚು ಆದಾಯ ಪಡೆಯಲು ಸಾಧ್ಯವಿದೆ. ಪಿಪಿಎಫ್ ಸುರಕ್ಷಿತವಾಗಿದೆ ಮತ್ತು ಇದರಲ್ಲಿ ಬಡ್ಡಿ ದರವೂ ಸ್ಥಿರವಾಗಿದೆ. ಅಲ್ಲದೇ ಇದಕ್ಕೆ ಸರ್ಕಾರದಿಂದ ಭದ್ರತೆಯೂ ಇದೆ ಎನ್ನುತ್ತಾರೆ ಹಣಕಾಸು ತಜ್ಞ ಜಗನ್ನಾಥ್.

ಹಣಕಾಸು ತಜ್ಞ ಜಗನ್ನಾಥ್

ಬೆಂಗಳೂರು: ನಾವೆಲ್ಲರೂ ಒಂದಲ್ಲ ಒಂದು ದಿನ ನಿವೃತ್ತರಾಗುತ್ತೇವೆ. ಆಗ ನಾವು ಬಡ್ಡಿ ಹಣದಲ್ಲೇ ಜೀವನ ನಡೆಸಬೇಕಾಗುತ್ತದೆ. ಅದಕ್ಕಾಗಿ ಎಲ್ಲರೂ ಪಿಎಫ್ (PF), ಪಿಪಿಎಫ್ (PPF) ಅಥವಾ ಪೆನ್ಶನ್ (Pension) ಖಾತೆಗಳಲ್ಲಿ ಯಾವುದಾದರೊಂದನ್ನು ಮಾಡಿ ಇಟ್ಟಿರುವುದು ಒಳ್ಳೆಯದು. ಅದರಲ್ಲೂ ಪಿಪಿಎಫ್ ಖಾತೆ ತೆರೆದವರು ಸಾಕಷ್ಟು ಲಾಭವನ್ನು ಪಡೆಯಬಹುದು ಎಂದಿದ್ದಾರೆ ಹಣಕಾಸು ತಜ್ಞ ಜಗನ್ನಾಥ್. 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್‌ ಚಾನಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಪಿಪಿಎಫ್ ಖಾತೆ ತೆರೆಯುವುದರಿಂದ ಸಿಗುವ ಪ್ರಯೋಜನಗಳ ಕುರಿತು ಮಾಹಿತಿ ಹಂಚಿಕೊಂಡರು.

ಅಂಚೆ ಕಚೇರಿ, ಬ್ಯಾಂಕ್ ಸೇರಿದಂತೆ ಕೆಲವು ಹಣಕಾಸು ಸಂಸ್ಥೆಗಳು ಪಿಪಿಎಫ್ ಸೌಲಭ್ಯವನ್ನು ಒದಗಿಸುತ್ತದೆ. ಇದನ್ನು ಸರ್ಕಾರವೇ ನಿರ್ವಹಿಸುವುದರಿಂದ ಇದರಲ್ಲಿ ಹೂಡಿಕೆ ಮಾಡುವ ಹಣಕ್ಕೆ ಯಾವುದೇ ಅಪಾಯವಾಗುವುದಿಲ್ಲ ಎಂದು ಜಗನ್ನಾಥ್ ತಿಳಿಸಿದರು.

ಪಿಪಿಎಫ್ ಖಾತೆಯಲ್ಲಿ ನಾವು ಹೂಡಿಕೆ ಮಾಡುವ ಮೊತ್ತಕ್ಕೆ ಸರಿಯಾಗಿ ಕಂಪನಿಗಳೂ ಕೂಡ ನಿರ್ಧಿಷ್ಟ ಮೊತ್ತವನ್ನು ಹೂಡಿಕೆ ಮಾಡುತ್ತವೆ. ಇವತ್ತು ಉದ್ಯೋಗದಲ್ಲಿರುವ ಎಲ್ಲರಿಗೂ ಪೆನ್ಶನ್ ಆಯ್ಕೆ ಇರುವುದಿಲ್ಲ. ಹೀಗಾಗಿ ಪಿಪಿಎಫ್ ಇವರಿಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಹಣಕಾಸು ತಜ್ಞ ಜಗನ್ನಾಥ್ ಅವರ ವಿಶೇಷ ಸಂದರ್ಶನ ಇಲ್ಲಿದೆ:



ಉದ್ಯೋಗಕ್ಕೆ ಸೇರಿದ ಮೇಲೆ ಪ್ರತಿಯೊಬ್ಬರೂ ಪೆನ್ಶನ್, ಪ್ರಾವಿಡೆಂಟ್ ಫಂಡ್, ಪಿಎಫ್ ಇಟ್ಟುಕೊಳ್ಳುವುದು ಒಳ್ಳೆಯದು. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯಾರೇ ಭಾರತೀಯ ಪ್ರಜೆ ಪ್ರಾರಂಭಿಸಬಹದು. 18 ವರ್ಷದ ಕೆಳಗಿನವರ ಹೆಸರಿನಲ್ಲೂ ಈ ಖಾತೆಯನ್ನು ಅವರ ಪೋಷಕರು ತೆರೆಯಬಹುದಾಗಿದೆ ಎಂದರು.

ಈ ಖಾತೆಯಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂ. ವರೆಗೆ ಇಡಬಹುದು. ಪೋಷಕರು ಮಕ್ಕಳು ಸೇರಿ ತಿಂಗಳಿಗೆ 500 ರೂ.ನಿಂದ ವರ್ಷಕ್ಕೆ ಗರಿಷ್ಠ ಒಂದೂವರೆ ಲಕ್ಷ ರೂ. ವರೆಗೆ ಈ ಖಾತೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಯಾವುದೇ ವಯಸ್ಸಿನಲ್ಲಿ ಈ ಖಾತೆ ತೆರೆಯಬಹುದು. ಆದರೆ ಒಮ್ಮೆ ತೆರೆದ ಖಾತೆಯನ್ನು 15 ವರ್ಷಗಳ ಕಾಲ ಇರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಈ ಖಾತೆಗೆ ಬಡ್ಡಿ, ಚಕ್ರ ಬಡ್ಡಿ ಸೇರಿ ಗರಿಷ್ಠ 90 ಲಕ್ಷ ರೂ. ವರೆಗೆ ಆದಾಯ ಪಡೆಯುವ ಅವಕಾಶವಿದೆ. ಈ ಖಾತೆಯಲ್ಲಿ ಹೂಡಿಕೆ ಮಾಡುವ ಮೊತ್ತಕ್ಕೆ ಶೇ. 7.1ರಷ್ಟು ಬಡ್ಡಿ ನೀಡಲಾಗುತ್ತದೆ. ಈ ಖಾತೆಯನ್ನು ತೆರೆದ ಬಳಿಕ 15 ವರ್ಷದ ಮೇಲೆಯೇ ಅಕೌಂಟ್ ಕ್ಲೋಸ್ ಮಾಡಬಹುದು. ಈ ವೇಳೆ ಸಿಗುವ ಸಂಪೂರ್ಣ ಮೊತ್ತಕ್ಕೆ ತೆರಿಗೆ ವಿನಾಯಿತಿ ಇದೆ ಎಂದರು.

ಪ್ರತಿ ವರ್ಷ ಒಂದೂವರೆ ಲಕ್ಷ ರೂ. ನಂತೆ ಮೂವತ್ತು ವರ್ಷ ಕಟ್ಟಿದರೆ ಅದರ ಬಡ್ಡಿ ಸೇರಿ 90 ಲಕ್ಷ ರೂ. ವರೆಗೆ ಆದಾಯ ಪಡೆಯಲು ಸಾಧ್ಯವಿದೆ. ನಾವು ಹೂಡಿಕೆ ಮಾಡುವಾಗ ಭದ್ರತೆ, ಲಾಭ ಮತ್ತು ಬಡ್ಡಿಯನ್ನು ನೋಡಬೇಕು. ಆದರೆ ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡುವವರಿಗೆ ಇದನ್ನು ಬೇಕಾದಾಗ ತೆಗೆಯಲು ಸಾಧ್ಯವಿಲ್ಲ. ಆದರೆ ಅರೋಗ್ಯ ಸಮಸ್ಯೆ, ಶಿಕ್ಷಣಕ್ಕೆ ಸಂಬಂಧಿಸಿ ಹಣಕಾಸು ತುರ್ತು ಅವಶ್ಯಕತೆ ಇದ್ದಾರೆ ಮರಳಿ ಪಡೆಯಬಹುದು. ಇದರಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ ಮೂರು ವರ್ಷದ ಬಳಿಕ ಸಾಲ ಸೌಲಭ್ಯವೂ ಇದೆ ಎಂದರು.

ಕ್ರೆಡಿಟ್ ಕಾರ್ಡ್‌ನಿಂದ ಲಾಭ ಮಾಡೋದು ಹೇಗೆ? ಈ ಟಿಪ್ಸ್‌ ಫಾಲೋ ಮಾಡಿ

ಪಿಪಿಎಫ್ ಖಾತೆಯಿಂದ ತೆಗೆಯುವ ಸಾಲ ಸೌಲಭ್ಯಕ್ಕೆ ಶೇ.1 ರಷ್ಟು ಹೆಚ್ಚುವರಿ ಬಡ್ಡಿ ವಿಧಿಸಲಾಗುತ್ತದೆ. 36 ತಿಂಗಳ ಅವಧಿಗೆ ಹೂಡಿಕೆ ಮೊತ್ತದ ಶೇ. 25ರಷ್ಟು ಸಾಲವನ್ನು ಪಡೆಯಬಹುದಾಗಿದೆ. ಈ ಖಾತೆ ತೆರೆದವರಿಗೆ ಮಧ್ಯೆ ಸ್ವಲ್ಪ ಹಣ ಮರಳಿ ಪಡೆಯುವ ಅವಕಾಶವೂ ಇದೆ. ಅದು ಒಟ್ಟು ಹೂಡಿಕೆಯ ಶೇ. 25ರಷ್ಟು ಮಾತ್ರ. 15 ವರ್ಷದ ಬಳಿಕ ಖಾತೆಯನ್ನು ಮತ್ತೆ ಐದು ವರ್ಷದವರೆಗೆ ವಿಸ್ತರಣೆ ಮಾಡಬಹುದಾಗಿದೆ. ಈ ವೇಳೆ ಕನಿಷ್ಠ ಮೊತ್ತ ಕೂಡ ಕಟ್ಟಬೇಕಾಗಿಲ್ಲ. ಕಟ್ಟುವವರು ಅದಕ್ಕೆ ಸಂಬಂಧಿಸಿ ದಾಖಲೆಗಳನ್ನು ಒದಗಿಸಬೇಕಾಗುತ್ತದೆ ಎಂದು ಜಗನ್ನಾಥ್ ತಿಳಿಸಿದ್ದಾರೆ.

ಶೇರು ಮಾರುಕಟ್ಟೆಯಲ್ಲಿ ಎಐ ತಂತ್ರಜ್ಞಾನ ಪ್ರಭಾವ ಬೀರುತ್ತಾ? ವಿಶೇಷ ಸಂದರ್ಶನ

ಪಿಪಿಎಫ್ ಖಾತೆಗೆ ಹಣದುಬ್ಬರ ಹೆಚ್ಚಾದಾಗ ಬಡ್ಡಿ ದರ ಕೂಡ ಹೆಚ್ಚಿಸಲಾಗುತ್ತದೆ. 2020ರಿಂದ ಇದರ ಬಡ್ಡಿ ಒಂದೇ ರೀತಿ ಇದೆ ಎಂದ ಅವರು, ಪ್ರತಿಯೊಬ್ಬರೂ ಒಂದು ಟರ್ಮ್ ಪಾಲಿಸಿ, ಮತ್ತು ಪಿಪಿಎಫ್ ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಆಗ ನಾವು ಪೆನ್ಶನ್ ಇಲ್ಲ ಎನ್ನುವ ಚಿಂತೆ ಮಾಡಬೇಕಾಗಿಲ್ಲ ಎಂದು ಅವರು ತಿಳಿಸಿದರು.

ವಿದ್ಯಾ ಇರ್ವತ್ತೂರು

View all posts by this author