AI Impact: ಶೇರು ಮಾರುಕಟ್ಟೆಯಲ್ಲಿ ಎಐ ತಂತ್ರಜ್ಞಾನ ಪ್ರಭಾವ ಬೀರುತ್ತಾ? ವಿಶೇಷ ಸಂದರ್ಶನ ಇಲ್ಲಿದೆ
ಎಐ ಅಳವಡಿಕೆ ಕಾರಣದಿಂದಾಗಿ ಹೆಸರಾಂತ ಕಂಪೆನಿಗಳು ಉದ್ಯೋಗ ಕಡಿತ ಕ್ರಮಕ್ಕೆ ಮುಂದಾಗಿರುವುದು ನಿಜವಾಗಿಯೂ ಆತಂಕಕಾರಿ ಬೆಳವಣಿಗೆಯಾಗಿದೆ. ಎಐ ಪ್ರಭಾವದಿಂದಾಗಿ ಶೇರು ಮಾರುಕಟ್ಟೆ ಮತ್ತು ಟ್ರೇಡಿಂಗ್ ಮೇಲಾಗುವ ಪರಿಣಾಮಗಳ ಕುರಿತು ಕೌಟಿಲ್ಯ ಕ್ಯಾಪಿಟಲ್(Kautilya Capital)ನ ಸಂಸ್ಥಾಪಕ ಅಶೋಕ್ ದೇವನಾಂಪ್ರಿಯ(Ashok Devanampriya) ಈ ಲೇಖನದಲ್ಲಿ ಮಾಹಿತಿ ನೀಡಿದ್ದಾರೆ.
ಷೇರು ಮಾರುಕಟ್ಟೆಯ ಮೇಲೆ AI ಪರಿಣಾಮದ ಬಗ್ಗೆ ವಿಶೇಷ ಸಂದರ್ಶನ -
ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಎಐ(AI) ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(Artificial Intelligence) ಅಥವಾ ಕೃತಕ ಬುದ್ದಿಮತ್ತೆ ಎಂಬುದು ಬಹಳಷ್ಟು ಸದ್ದು ಮಾಡುತ್ತಿರುವ ವಿಚಾರವಾಗಿದೆ. ಈ ಕೃತಕ ಬುದ್ದಿಮತ್ತೆ ಅಥವಾ ಎಐಯ ಪ್ರಭಾವ ಐಟಿ ಮಾತ್ರವಲ್ಲದೇ ಎಲ್ಲಾ ವಲಯಗಳ ಮೇಲೆ ಭವಿಷ್ಯದಲ್ಲಿ ಬೀರಬಹುದಾಗಿರುವ ಪರಿಣಾಮಗಳ ಕುರಿತಾಗಿ ಇಂದು ವಿಶ್ವವ್ಯಾಪಿ ಚರ್ಚೆ ನಡೆಯುತ್ತಿದೆ.
ಎಐ ಅಳವಡಿಕೆ ಕಾರಣದಿಂದಾಗಿ ಹೆಸರಾಂತ ಕಂಪೆನಿಗಳು ಉದ್ಯೋಗ ಕಡಿತ ಕ್ರಮಕ್ಕೆ ಮುಂದಾಗಿರುವುದು ನಿಜವಾಗಿಯೂ ಆತಂಕಕಾರಿ ಬೆಳವಣಿಗೆಯಾಗಿದೆ. ಎಐ ಪ್ರಭಾವದಿಂದಾಗಿ ಶೇರು ಮಾರುಕಟ್ಟೆ ಮತ್ತು ಟ್ರೇಡಿಂಗ್ ಮೇಲಾಗುವ ಪರಿಣಾಮಗಳ ಕುರಿತು ಕೌಟಿಲ್ಯ ಕ್ಯಾಪಿಟಲ್(Kautilya Capital)ನ ಸಂಸ್ಥಾಪಕ ಅಶೋಕ್ ದೇವನಾಂಪ್ರಿಯ(Ashok Devanampriya) ಈ ಲೇಖನದಲ್ಲಿ ಮಾಹಿತಿ ನೀಡಿದ್ದಾರೆ.
ಎಐ ತಂತ್ರಜ್ಞಾನ ಹಲವಾರು ಕ್ಷೇತ್ರಗಳಲ್ಲಿ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ ಎಂಬ ಆತಂಕಕ್ಕೆ ಇಲ್ಲಿದೆ ಉತ್ತರ ಯಾವುದೇ ಒಂದು ಹೊಸ ತಂತ್ರಜ್ಞಾನ ಪರಿಚಯಿಸಲ್ಪಟ್ಟ ಸಂದರ್ಭದಲ್ಲಿ ಅದಕ್ಕೊಂದು ರೆಸಿಸ್ಟೆನ್ಸ್ ಅಥವಾ ವಿರೋಧ ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಇರುತ್ತದೆ. 80-90ರ ದಶಕದಲ್ಲಿ ಭಾರತಕ್ಕೆ ಐಟಿ ತಂತ್ರಜ್ಞಾನ ಕಾಲಿಟ್ಟಾಗಲೂ ಇದೇ ರೀತಿಯ ಒಂದು ವಿರೋಧಾಭಿಪ್ರಾಯ ಕೇಳಿಬಂದಿತ್ತು. ಆಗಿನ ಕಾಲದ ಆಡಳಿತ ವ್ಯವಸ್ಥೆಯೇ ಐಟಿ ತಂತ್ರಜ್ಞಾನದ ಅಭಿವೃದ್ಧಿಗೆ ಮತ್ತು ಅಂತಹ ಕಂಪೆನಿಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಿರಲಿಲ್ಲ. ಆದರೆ ಇಂದು ಭಾರತ ಐಟಿ ಕ್ಷೇತ್ರದಲ್ಲಿ 40%ಕ್ಕೂ ಹೆಚ್ಚು ರಫ್ತು ಪಾಲುದಾರಿಕೆಯನ್ನು ದಾಖಲಿಸಿದೆ. ಹಲವರು ಈ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ಹಾಗಾಗಿ ಯಾವುದೇ ಹೊಸ ತಂತ್ರಜ್ಞಾನ ಪರಿಚಯವಾದಗ ಅದರಿಂದ 100 ಕೆಲಸ ಹೋದ್ರೆ, 50 ಹೊಸ ಕೆಲಸ ಸೃಷ್ಟಿಯಾಗುತ್ತದೆ.
Viral Video: ಅಭ್ಯಾಸದ ವೇಳೆ ಬಾಸ್ಕೆಟ್‌ಬಾಲ್ ಪೋಲ್ ಕುಸಿದು ರಾಷ್ಟ್ರೀಯ ಆಟಗಾರ ಸಾವು
ಎಐ ತಂತ್ರಜ್ಞಾನ ಹಲವು ಕ್ಷೇತ್ರಗಳಲ್ಲಿ ಹೆಚ್ಚಿನವರ ಕೆಲಸಕ್ಕೆ ಸಂಚಕಾರ ತರುವುದಂತೂ ಸತ್ಯ. ಆದ್ರೆ ಈ ತಂತ್ರಜ್ಞಾನ ಬೆಳೆದಂತೆ ಈ ಕ್ಷೇತ್ರದಲ್ಲಿ ಹಲವಾರು ಅವಕಾಶಗಳು ಸೃಷ್ಟಿಯಾಗುತ್ತದೆ ಎಂಬುದನ್ನು ನಾವು ಮರೆಯಬಾರದು. ಹಾಗಾಗಿ ಹೊಸ ತಂತ್ರಜ್ಞಾನವೊಂದು ಮಾರುಕಟ್ಟೆಗೆ ಬಂದ ಸಂದರ್ಭದಲ್ಲಿ ಅದಕ್ಕೆ ನಾವು ಪೂರಕವಾಗಿ ಸ್ಪಂದಿಸದೇ ಇದ್ದಲ್ಲಿ, ನಾವು ಇದ್ದಲ್ಲೇ ಇರುತ್ತೇವೆ, ಮತ್ತು ಜಗತ್ತು ನಮ್ಮನ್ನು ಬಿಟ್ಟು ಮುಂದೆ ಹೋಗಿರುತ್ತದೆ. ಯಾಕಂದ್ರೆ ಪರಿವರ್ತನೆ ಎಂಬುದು ಜಗದ ನಿಯಮ. ನಿನ್ನೆ ಐಟಿ, ಇಂದು ಎಐ, ನಾಳೆ ಇನ್ನೊಂದು ಹೊಸ ತಂತ್ರಜ್ಞಾನ ಬಂದು ನಮ್ಮ ಮುಂದೆ ನಿಂತಿರುತ್ತದೆ.
ಫಿಲಂ ಇಂಡಸ್ಟ್ರಿಯಲ್ಲಿ ಇಂದು ಕ್ರಾಂತಿಕಾರಿ ಬದಲಾವಣೆಗಳಾಗುತ್ತಿದೆ. ಹಿಂದೆ ಒಂದು ಅವತಾರ್ ಸಿನೆಮಾ ತಯಾರಿಗೆ ಬೇಕಾಗಿದ್ದ ನಿರ್ಮಾಣ ವೆಚ್ಚದ 25% ಬಜೆಟ್ ನಲ್ಲಿ ಇಂದು ಎಐ ತಂತ್ರಜ್ಞಾನ ಬಳಸಿ ಅಂತಹುದೇ ಚಿತ್ರವನ್ನು ತಯಾರಿಸಬಹುದು ಎಂಬುದು ಎಐ ತಂತ್ರಜ್ಞಾನಕ್ಕಿರುವ ಶಕ್ತಿಗೆ ಸಾಕ್ಷಿಯಾಗಿದೆ. ಒಂದು ಬಾಗಿಲು ಮುಚ್ಚಿದ ಸಂದರ್ಭದಲ್ಲಿ ಇನ್ನೊಂದು ಬಾಗಿಲು ತೆರೆದುಕೊಳ್ಳುತ್ತದೆ ಎಂಬ ಮಾತಿನಂತೆ,, ಚಲನಶೀಲ ಜಗತ್ತಿನಲ್ಲಿ ನಾವು ಬದಲಾವಣೆಗೆ ಒಗ್ಗಿಕೊಳ್ಳಬೇಕಾಗಿರುವುದು ಅನಿವಾರ್ಯತೆಯೇ ಆಗಿದೆ.
ಮೊಬೈಲ್ ಫೋನ್ ಗಳು ಬಂದ ಮೇಲೆ ಕೆಮರಾ ಇಂಡಸ್ಟ್ರಿಗೆ ಭಾರೀ ಹೊಡೆತ ಬಿತ್ತು. ಇಷ್ಟು ಮಾತ್ರವಲ್ಲದೇ ಒಂದು ಮೊಬೈಲ್ ಫೋನ್ ನಿಂದ ಕೆಮರಾ, ಗಡಿಯಾರ, ಕ್ಯಾಲುಕ್ಯುಲೇಟರ್ ಸೇರಿದಂತೆ ಹಲವು ಕಂಪೆನಿಗಳಿಗೆ ಹೊಡೆತ ಬಿತ್ತು.
Viral Video: ಇದೆಂಥ ಕೃತ್ಯ? ಕೈಕಾಲುಗಳಿಗೆ ಸಂಕೋಲೆ ಬಿಗಿದಿದ್ದರೂ ದುಡಿಯುತ್ತಿರುವ ಕಾರ್ಮಿಕನ ವಿಡಿಯೊ ವೈರಲ್
ಎಐ ತಂತ್ರಜ್ಞಾನ ಹಲವರ ಕೆಲಸಕ್ಕೆ ಕತ್ತರಿ ಹಾಕುವುದಂತೂ ಸತ್ಯ. 100 ಜನ ಮಾಡುವ ಕೆಲಸವನ್ನು ಎಐ ತಂತ್ರಜ್ಞಾನದ ಮೂಲಕ 10 ಜನ ಮಾಡಬಹುದಾದ್ರೆ ಉಳಿದ 90 ಜನ ಕೆಲಸ ಕಳ್ಕೊಳ್ತಾರೆ. ಅವರಲ್ಲಿ 50 ಜನ ಹೊಸ ರೀತಿಯಲ್ಲಿ ಯೋಚಿಸಿ, ಹೊಸ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಸ್ಪರ್ಧೆಯಲ್ಲಿ ಉಳಿದುಕೊಳ್ತಾರೆ ಎಂಬುದನ್ನು ಯೋಚಿಸಿ ನಾವು ಯಾವುದೇ ಹೊಸ ತಂತ್ರಜ್ಞಾನವನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳೋ ಅಗತ್ಯವಿದೆ.
ಶೇರು ಮಾರುಕಟ್ಟೆ ಮೇಲೆ ಎಐ ಪ್ರಭಾವ
ಎಐ ತಂತ್ರಜ್ಞಾನದಿಂದ ಟ್ರೇಡಿಂಗ್ ಆಟೋಮ್ಯಾಟಿಕ್ ಆಗುತ್ತದೆ ಎಂಬ ಮಾತಿದೆ. ಆದರೆ ಅದು ಸಂಪೂರ್ಣ ಸತ್ಯವಲ್ಲ. ಶೇರು ಮಾರುಕಟ್ಟೆ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನದ ಬಳಕೆಯಿಂದ ಹೂಡಿಕೆದಾರರಿಗೆ ಸರಿಯಾದ ಮಾಹಿತಿ ಮೂಲಕ ಮತ್ತು ಸೂಕ್ತ ಡಾಟಾ ಅನಾಲಿಸಿಸ್ ಮೂಲಕ ಸರಿಯಾದ ರೀತಿಯಲ್ಲಿ ಟ್ರೇಡಿಂಗ್ ಮಾಡಲು ಸಾಧ್ಯವಾಗುತ್ತದೆ. ಎಐ ತಂತ್ರಜ್ಞಾನ ಇನ್ನೂ ಬೆಳೆಯುತ್ತಿರುವ ಕೂಸು. ಅದನ್ನು ಈಗಲೇ ನಾವು ಸರಿಯಾಗಿ ಅರ್ಥ ಮಾಡಿಕೊಂಡು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ಅದು ನಮಗೆ ಪ್ರಯೋಜನಕಾರಿ. ಯಾವುದೇ ತಂತ್ರಜ್ಞಾನವನ್ನು ಅರಿತು ಬಳಸಿದರೆ ಫಲಕಾರಿ ಇಲ್ಲದಿದ್ದರೆ ಅದೇ ನಮಗೆ ಉಪದ್ರವಕಾರಿ ಎಂಬುದು ಸುಳ್ಳಲ್ಲ!