ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Union Budget 2025: ಇದು ಜನತಾ ಜನಾರ್ಧನ ಬಜೆಟ್‌ ಎಂದ ಪ್ರಧಾನಿ ಮೋದಿ

ಕೇಂದ್ರ ಬಜೆಟ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಪ್ರಧಾನಿ ಮೋದಿ ಇದು ಜನತಾ ಜನಾರ್ಧನ ಬಜೆಟ್‌ ಎಂದು ಹೇಳಿದ್ದಾರೆ. ಪರಮಾಣು ಶಕ್ತಿಯಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಇದು ಜನರ ಜೇಬು ತುಂಬುವ ಬಜೆಟ್ ಎಂದ ಪ್ರಧಾನಿ

PM Modi

Profile Vishakha Bhat Feb 1, 2025 4:09 PM

ನವದೆಹಲಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ (Union Budget) ಮಂಡನೆಯಾಗಿದ್ದು, ಇದೀಗ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದು ಜನತಾ ಜನಾರ್ದನನ ಬಜೆಟ್‌ ಎಂದು ಶ್ಲಾಘಿಸಿರುವ ಪ್ರಧಾನಿ ಮೋದಿ, ಇದು ಉಳಿತಾಯ, ಹೂಡಿಕೆ, ಬಳಕೆ ಮತ್ತು ಬೆಳವಣಿಗೆಯನ್ನು ವೇಗವಾಗಿ ಹೆಚ್ಚಿಸುತ್ತದೆ ಎಂದು ಹೇಳಿದರು. ಇದೇ ವೇಳೆ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರನ್ನು ಅಭಿನಂದಿಸಿದರು.

ಹಿಂದೆಲ್ಲ ಸರ್ಕಾರ ಆದಾಯ ಮತ್ತು ಲಾಭವನ್ನು ಹೆಚ್ಚಿಸುವತ್ತ ಮತ್ತು ಖಜಾನೆ ತುಂಬುವುದನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ ಮಂಡನೆಯಾಗುತ್ತಿದೆ. ಆದರೆ ಈಗ ಜನ ಸಾಮಾನ್ಯರ ವೈಯಕ್ತಿಕ ಉಳಿತಾಯ ಮತ್ತು ಅಭಿವೃದ್ಧಿಯತ್ತ ಹೆಚ್ಚು ಗಮನ ಹರಿಸುತ್ತದೆ.

ಬಜೆಟ್‌ನಲ್ಲಿನ ಸುಧಾರಣೆಗಳನ್ನು ಎತ್ತಿ ತೋರಿಸುತ್ತಾ, ಪರಮಾಣು ಶಕ್ತಿಯಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನಿ ಹೇಳಿದರು. "ಪರಮಾಣು ಶಕ್ತಿಯಲ್ಲಿ ಖಾಸಗಿ ವಲಯವನ್ನು ಪ್ರೋತ್ಸಾಹಿಸುವುದು ಐತಿಹಾಸಿಕ" ಎಂದು ಅವರು ಹೇಳಿದರು. ಈ ಕ್ರಮವು ದೇಶದ ಅಭಿವೃದ್ಧಿಯಲ್ಲಿ ನಾಗರಿಕ ಪರಮಾಣು ಶಕ್ತಿಯ ಪಾತ್ರವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.



ಉತ್ಪಾದನಾ ವಲಯದಲ್ಲಿನ ಬಜೆಟ್​ ಕ್ರಮಗಳು ಭಾರತದ ಉತ್ಪಾದನೆಯನ್ನು ದೇಶದ ಮಟ್ಟದಲ್ಲಿ ಮಿಂಚುವಂತೆ ಮಾಡುತ್ತದೆ. ರೈತರಿಗಾಗಿ ಬಜೆಟ್‌ನ ಘೋಷಣೆಗಳು ಕೃಷಿ ವಲಯ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Union Budget 2025: ಚುನಾವಣೆ ನಿಮಿತ್ತ ಬಿಹಾರ ರಾಜ್ಯಕ್ಕೆ ಬಜೆಟ್‌ನಲ್ಲಿ ಬಂಪರ್‌ ಕೊಡುಗೆ!

ಪ್ರವಾಸೋದ್ಯಮದ ಬಗ್ಗೆಯೂ ಮಾತನಾಡಿದ ಪ್ರಧಾನಿ, ಈ ವಲಯಕ್ಕೆ ವಿಶೇಷ ಅನುದಾನವನ್ನು ನೀಡಲಾಗಿದೆ ಎಂದರು. ಶಿಕ್ಷಣ, ಆರ್ಥಿಕ, ಕೃಷಿ ಸೇರಿದಂತೆ ಎಲ್ಲಾ ವಲಯಗಳಿಗೂ ಬಜೆಟ್‌ನಲ್ಲಿ ಅನುದಾನ ಘೋಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.