ಫರಿದಾಬಾದ್: ಮೂರು ವರ್ಷದ ಬಾಲಕಿಯೊಬ್ಬಳು ಕೊಳವೆ ಬಾವಿಗೆ (borewell) ಬಿದ್ದಿರುವ ಘಟನೆ ಫರಿದಾಬಾದ್‌ನಲ್ಲಿ (Faridabad) ನಡೆದಿದೆ. ಬಾಲಕಿಯನ್ನು ಸುಮಾರು ಏಳು ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಿ (rescue operation) ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಫರಿದಾಬಾದ್‌ನ ಸಿಹಿ ಎಂಬ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಕೊಳವೆ ಬಾವಿಗೆ ಬಿದ್ದ ಬಾಲಕಿಯನ್ನು ಸೋಮವಾರ ಮುಂಜಾನೆ 3.50ಕ್ಕೆ ಕೊಳವೆ ಬಾವಿಯಿಂದ ಹೊರತೆಗೆಯಲಾಯಿತು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF operation) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಟವಾಡುತ್ತಿದ್ದ ಬಾಲಕಿ ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಕೊಳವೆ ಬಾವಿ ಬಳಿ ನಿಲ್ಲಿಸಿದ್ದ ಟ್ರಕ್‌ನ ಮೇಲೆ ಹತ್ತಲು ಹೋದಾಗ ಕಾಲು ಜಾರಿ ಕೊಳವೆ ಬಾವಿಗೆ ಬಿದ್ದಿದ್ದಾಳೆ. ತಕ್ಷಣವೇ ಅವಳೊಂದಿಗೆ ಆಟವಾಡುತ್ತಿದ್ದ ಇತರ ಮಕ್ಕಳು ಆಕೆಯ ಕುಟುಂಬದವರಿಗೆ ಮತ್ತು ಗ್ರಾಮದ ಹಿರಿಯರಿಗೆ ವಿಷಯ ತಿಳಿಸಿದರು.
ಧರ್ಮಸ್ಥಳ ಅಸಹಜ ಸಾವು: ಅಂಕಿಅಂಶಗಳಲ್ಲಿ ವ್ಯತ್ಯಾಸ: 16 ವರ್ಷಗಳಲ್ಲಿ 30 ಪ್ರಕರಣಗಳ ಏರುಪೇರು
ಗ್ರಾಮಸ್ಥರು ಪೊಲೀಸ್ ನಿಯಂತ್ರಣ ಕೊಠಡಿಗೆ ಈ ಕುರಿತು ಮಾಹಿತಿ ನೀಡಿದರು. ತಕ್ಷಣವೇ ಪೊಲೀಸ್ ಸಿಬ್ಬಂದಿ ಹರಿಯಾಣ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಹಗ್ಗ, ಆಮ್ಲಜನಕದ ಸಿಲಿಂಡರ್ ಮತ್ತು ಇತರ ಜೀವ ರಕ್ಷಕ ಉಪಕರಣಗಳೊಂದಿಗೆ ಸ್ಥಳಕ್ಕೆ ಆಗಮಿಸಿದರು. ಬಾಲಕಿಯ ರಕ್ಷಣೆಗಾಗಿ ಕೊಳವೆ ಬಾವಿ ಪಕ್ಕದಲ್ಲೇ ಗುಂಡಿ ತೆರೆದರು.
ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಘಜಿಯಾಬಾದ್ ಜಿಲ್ಲೆಯ ಉತ್ತರ ಪ್ರದೇಶದ ನಾಗರಿಕ ರಕ್ಷಣಾ ವಿಭಾಗ ಸೇರಿದಂತೆ ಹಲವು ಸಂಸ್ಥೆಗಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬಾಲಕಿಯ ರಕ್ಷಣೆಗೆ ಮುಂದಾದವು.
3 ದಿನಗಳ ಬ್ಯಾಂಕ್ ಮುಷ್ಕರ ಮುಂದೂಡಿಕೆ; ಇಂದು ಎಲ್ಲಾ ಬ್ಯಾಂಕ್‌ಗಳು ಓಪನ್, ಎಂದಿನಂತೆ ಸೇವೆ ಲಭ್ಯ
ನಿರಂತರವಾಗಿ ಸುಮಾರು ಏಳು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸೋಮವಾರ ಮುಂಜಾನೆ ಬಾಲಕಿಯನ್ನು ಕೊಳವೆ ಬಾವಿಯಿಂದ ಹೊರತೆಗೆಯಲಾಯಿತು. ಸ್ಥಳದಲ್ಲಿದ್ದ ವೈದ್ಯಕೀಯ ತಜ್ಞರ ತಂಡದೊಂದಿಗೆ ಆಂಬ್ಯುಲೆನ್ಸ್ ಮೂಲಕ ಆಕೆಯನ್ನು ತಕ್ಷಣವೇ ಚಿಕಿತ್ಸೆಗಾಗಿ ಬಾದ್‌ಶಾ ಖಾನ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು.