ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

3 ದಿನಗಳ ಬ್ಯಾಂಕ್ ಮುಷ್ಕರ ಮುಂದೂಡಿಕೆ; ಇಂದು ಎಲ್ಲಾ ಬ್ಯಾಂಕ್‌ಗಳು ಓಪನ್‌, ಎಂದಿನಂತೆ ಸೇವೆ ಲಭ್ಯ

Bank Strike Deferred: ಇಂದಿನಿಂದ ಸೆ.30ರವರೆಗೆ ಸೆ.30ರವರೆಗೆ ರಾಷ್ಟ್ರವ್ಯಾಪಿ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್‌ ಮುಷ್ಕರ ಕೊನೆ ಕ್ಷಣದಲ್ಲಿ ಮುಂದೂಡಲಾಗಿದೆ. ಮೂರು ದಿನಗಳ ಕಾಲ ದೇಶಾದ್ಯಂತ ನಡೆಯಬೇಕಿದ್ದ ಬ್ಯಾಂಕ್‌ ಮುಷ್ಕರವನ್ನು ಮುಂದೂಡಲಾಗಿದೆ ಎಂದು ಹೇಳಲಾಗಿದೆ.

3 ದಿನಗಳ ಬ್ಯಾಂಕ್ ಮುಷ್ಕರ ಮುಂದೂಡಿಕೆ

ಬ್ಯಾಂಕ್ ಮುಷ್ಕರ ಮುಂದೂಡಿಕೆ -

Vishakha Bhat Heggar
Vishakha Bhat Heggar Sep 28, 2026 7:42 AM

ನವದೆಹಲಿ: ಇಂದಿನಿಂದ ಸೆ.30ರವರೆಗೆ ಸೆ.30ರವರೆಗೆ ರಾಷ್ಟ್ರವ್ಯಾಪಿ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್‌ ಮುಷ್ಕರ ಕೊನೆ ಕ್ಷಣದಲ್ಲಿ ಮುಂದೂಡಲಾಗಿದೆ. ಮೂರು ದಿನಗಳ ಕಾಲ ದೇಶಾದ್ಯಂತ (Bank Strike Deferred) ನಡೆಯಬೇಕಿದ್ದ ಬ್ಯಾಂಕ್‌ ಮುಷ್ಕರವನ್ನು ಮುಂದೂಡಲಾಗಿದೆ ಎಂದು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಭಾನುವಾರ(ಸೆ.27ರಂದು) ತಡರಾತ್ರಿ ಹೇಳಿಕೆ ಬಿಡುಗಡೆ ಮಾಡಿದೆ.

ತಡರಾತ್ರಿ 9:30ರ ಸುಮಾರಿಗೆ ಬ್ಯಾಂಕ್‌ಗಳ ಒಕ್ಕೂಟ ಹಾಗೂ ಭಾರತೀಯ ಬ್ಯಾಂಕುಗಳ ಸಂಘ (IBA) ಸಭೆ ನಡೆಸಿದ್ದು, ಈ ಬೇಡಿಕೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ಒಪ್ಪಿಗೆ ಸಿಗುತ್ತಿದ್ದಂತೆ ಬ್ಯಾಂಕ್ ಒಕ್ಕೂಟಗಳು ತಮ್ಮ ಉದ್ದೇಶಿತ 3 ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಮುಂದೂಡಿವೆ.



ಸಭೆಯಲ್ಲಿ ಚರ್ಚಿಸಿದ್ದೇನು?

ಎಲ್ಲಾ ಶನಿವಾರಗಳನ್ನು ಬ್ಯಾಂಕ್ ರಜೆಯನ್ನಾಗಿ ಮಾಡುವ ವಿಷಯವನ್ನು ಪರಿಶೀಲಿಸಲು IBA ಮತ್ತು UFBU ಜಂಟಿ ಸಮಿತಿಯನ್ನು ತಕ್ಷಣವೇ ರಚಿಸಲಾಗುವುದು. ಈ ಸಮಿತಿಯು ಪ್ರತಿಯೊಂದು ಆಯ್ಕೆಗಳನ್ನು ಅಧ್ಯಯನ ಮಾಡುತ್ತದೆ, ಬಾಧಿತ ಪ್ರತಿಯೊಬ್ಬರೊಂದಿಗೆ ಮಾತನಾಡುತ್ತದೆ ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಅಷ್ಟೇ ಅಲ್ಲದೆ, ಸಭೆಯಲ್ಲಿ ಸ್ಕೇಲ್ IV ಮತ್ತು ಅದಕ್ಕಿಂತ ಹೆಚ್ಚಿನ ಅಧಿಕಾರಿಗಳ PLI ಯೋಜನೆಯನ್ನು ಬದಲಾಯಿಸುವ ಕುರಿತು IBAಯೊಂದಿಗೆ ಮಾತುಕತೆ ಪ್ರಾರಂಭವಾಗಲಿದ್ದು, IBA ಈ ಕುರಿತಂತೆ ಮಾರ್ಪಾಡುಗಳ ಕುರಿಂತೆ ಸರ್ಕಾರದೊಂದಿಗೆ ಪ್ರಸ್ತಾವನೆ ನಡೆಸಲಿದೆ. ಇದರ ಜೊತೆಗೆ 2024ರ ಮಾರ್ಚ್ 8ರಂದು ನಡೆದ ಸಭೆಯ ಮಿನಿಟ್ಸ್‌ ಆಫ್‌ ಮೀಟಿಂಗ್‌ನಲ್ಲಿ ಚರ್ಚಿಸಲಾಗಿರುವ ಇತರೆ ಸಮಸ್ಯೆಗಳ ಕುರಿತು ಪುನರ್‌ಚರ್ಚಿಸಲಿದ್ದು, ಇದನ್ನು ಶೀಘ್ರದಲ್ಲೇ ಇತ್ಯರ್ಥಪಡಿಸಲು ಉಭಯ ಪಕ್ಷಗಳು ಒಪ್ಪಿಗೆ ನೀಡಿವೆ.

ಬ್ಯಾಂಕ್‌ ಉದ್ಯೋಗಾಂಕ್ಷಿಗಳ ಗಮನಕ್ಕೆ: ಬ್ಯಾಂಕ್‌ ಆಫ್‌ ಬರೋಡದ 2,482 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ; ಹೊಸ ವೇಳಾಪಟ್ಟಿ ಇಲ್ಲಿದೆ

ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷ ಆರ್. ಶೇಖರನ್ ಈ ಕುರಿತು ಮಾತನಾಡಿದ್ದು, "ಸಭೆಯಲ್ಲಿ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯ ಬೇಡಿಕೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು IBA ಒಪ್ಪಿಕೊಂಡಿದೆ. ಉನ್ನತ ಮಟ್ಟದ ಸಮಿತಿಯಲ್ಲಿ ಬ್ಯಾಂಕ್ ಯೂನಿಯನ್‌ಗಳ ಯುನೈಟೆಡ್ ಫೋರಮ್‌ನ ಪ್ರತಿನಿಧಿಗಳು ಸಹ ಭಾಗಿಯಾಗಲಿದ್ದಾರೆ. ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ ಸಮಿತಿಯು ಈ ಬೇಡಿಕೆಯ ಬಗ್ಗೆ ಚರ್ಚಿಸುತ್ತದೆ" ಎಂದು ಹೇಳಿದ್ದಾರೆ.