ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯ; ವಿವಾಹವಾಗುವುದಾಗಿ ನಂಬಿಸಿ ದೈಹಿಕ ಕಿರುಕುಳ, 14.8 ಲಕ್ಷ ರುಪಾಯಿ ವಂಚನೆ

ವೈವಾಹಿಕ ವೆಬ್ ಸೈಟ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ನಾಗಪುರ ಮಹಿಳೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿದ್ದಾನೆ. ಮಾತ್ರವಲ್ಲದೆ ಹೊಸ ಉದ್ಯಮ ಪ್ರಾರಂಭಿಸಲು ಸುಮಾರು 14.8 ಲಕ್ಷ ರೂ. ಪಡೆದು ವಂಚನೆಯನ್ನು ಕೂಡ ಮಾಡಿದ್ದಾನೆ ಎಂದು ಆರೋಪಿಸಿರುವ ಮಹಿಳೆ ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ.

ಸಂಗ್ರಹ ಚಿತ್ರ

ನಾಗಪುರ: ಆನ್‌ಲೈನ್ ವೈವಾಹಿಕ ತಾಣದಲ್ಲಿ (Matrimonial Website) ಪರಿಚಯವಾದ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ (physical abuse) ನಡೆಸಿ, ಸುಮಾರು 14.8 ಲಕ್ಷ ರೂ. ವಂಚಿಸಿರುವ ಘಟನೆ ನಾಗಪುರದಲ್ಲಿ (Nagpur) ನಡೆದಿದೆ. ವೈವಾಹಿಕ ವೆಬ್‌ಸೈಟ್‌ನಲ್ಲಿ ನಾಗಪುರದ 31 ವರ್ಷದ ಮಹಿಳೆಯೊಬ್ಬರು ವಿಚ್ಛೇದಿತ ಪುರುಷನನ್ನು ಭೇಟಿಯಾಗಿದ್ದು, ಆತ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಮತ್ತು ಹೊಸ ಉದ್ಯಮ ಪ್ರಾರಂಭಿಸಲೆಂದು 14.8 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿರುವ ಮಹಿಳೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ.

ಆರೋಪಿಯನ್ನು ರಾಘವೇಂದ್ರ ಕಿಶೋರ್ ಅವಸ್ಥಿ (36) ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಆನ್ ಲೈನ್ ವೈವಾಹಿಕ ತಾಣದಲ್ಲಿ ಪರಿಚಯವಾದ ರಾಘವೇಂದ್ರ ಕಿಶೋರ್ ಅವಸ್ಥಿ ತನ್ನ ಮೊದಲ ಪತ್ನಿ ಸತ್ತಿರುವುದಾಗಿ ಮಹಿಳೆಯನ್ನು ನಂಬಿಸಿದ್ದಾನೆ. ಆತನ ಪತ್ನಿ ಇನ್ನೂ ಜೀವಂತವಾಗಿದ್ದಾರೆ ಎಂದು ಮಹಿಳೆಗೆ ಗೊತ್ತಾದ ಮೇಲೆ ಆಕೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ಹಲ್ಲೆ ಪ್ರಕರಣ: ಐವರ ಬಂಧನದ ಬಳಿಕ ಸ್ಪೋಟಕ ಸತ್ಯ ಬಹಿರಂಗ

ಪರಿಚಯವಾದ ಆರಂಭದಲ್ಲೇ ರಾಘವೇಂದ್ರ ಕಿಶೋರ್ ಅವಸ್ಥಿ ಹೊಸ ಉದ್ಯಮ ಪ್ರಾರಂಭಿಸಲು ಹಣದ ಅವಶ್ಯಕತೆ ಇದೆ ಎಂದು ಹೇಳಿ ದೊಡ್ಡ ಮೊತ್ತದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಇದನ್ನು ನಂಬಿದ ಮಹಿಳೆ ಆತನಿಗೆ ಸುಮಾರು 14.8 ಲಕ್ಷ ರೂ. ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ರಾಘವೇಂದ್ರ ಕಿಶೋರ್ ಅವಸ್ಥಿ ಹಲವಾರು ಬಾರಿ ಹಣ ಕೇಳಿದ್ದು, ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ಭರವಸೆಯಿಂದ ಮಹಿಳೆ ತನ್ನ ಉಳಿತಾಯದ ಹಣವನ್ನು ಆತನಿಗೆ ನೀಡಿದ್ದಾರೆ. ಹಣ ಪಡೆಯಲು ಆತ ತನ್ನನ್ನು ಭಾವನಾತ್ಮಕವಾಗಿ ಬಳಸಿದ್ದಾನೆ. ಸಂವಹನದ ವೇಳೆ ಆತ ತನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾನೆ ಎಂದು ಕೂಡ ಮಹಿಳೆ ದೂರಿನಲ್ಲಿ ಹೇಳಿದ್ದಾರೆ.

ರಾಘವೇಂದ್ರ ಕಿಶೋರ್ ಅವಸ್ಥಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸಲು ಅವಸ್ಥಿ ಮತ್ತು ದೂರುದಾರ ಮಹಿಳೆಯ ನಡುವಿನ ಡಿಜಿಟಲ್ ಸಂವಹನಗಳನ್ನು ಪರಿಶೀಲನೆ ನಡೆಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಹೋಟೆಲ್‌ನಲ್ಲಿ ಕುರಿ ಮಟನ್‌ ಎಂದು ಗೋಮಾಂಸದ ಆಹಾರ ಮಾರಾಟ; ಕೇರಳ ಮೂಲದ ಇಬ್ಬರ ಬಂಧನ

ಈ ಘಟನೆಯು ವೈವಾಹಿಕ ತಾಣಗಳ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಕುರಿತು ಚರ್ಚೆಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸೂಚಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author