ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Religious Conversion Gang: ತಲೆಗೆ 50,000ರೂ. ಇನಾಮು ಹೊಂದಿದ್ದ ಮತಾಂತರ ಗ್ಯಾಂಗ್‌ನ ಮಾಸ್ಟರ್‌ಮೈಂಡ್‌ ಅರೆಸ್ಟ್‌

ಧಾರ್ಮಿಕ ಮತಾಂತರ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಒಬ್ಬ ತನ್ನ ಸಹಚರನೊಂದಿಗೆ ಅರೆಸ್ಟ್‌ ಆಗಿದ್ದಾನೆ. ಬಂಧಿತ ಆರೋಪಿಯನ್ನು ಜಲಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಮತ್ತು ಸಹ ಆರೋಪಿ ನೀತು ಅಲಿಯಾಸ್ ನಸ್ರೀನ್ ಎಂದು ಗುರುತಿಸಲಾಗಿದೆ. ಇವರೊಬ್ಬರೂ ಬಲರಾಂಪುರ ಜಿಲ್ಲೆಯ ಮಧಪುರ ನಿವಾಸಿಗಳು ಎಂದು ತಿಳಿದುಬಂದಿದೆ.

ಮೋಸ್ಟ್‌ ವಾಂಟೆಡ್‌ ಮತಾಂತರ ಗ್ಯಾಂಗ್‌ನ ಮಾಸ್ಟರ್‌ಮೈಂಡ್‌ ಅರೆಸ್ಟ್‌

Profile Rakshita Karkera Jul 6, 2025 11:48 AM

ಲಖನೌ: ಆಮೀಷ, ಬೆದರಿಕೆವೊಡ್ಡಿ ಅಮಾಯಕ ಜನರನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದ ಗ್ಯಾಂಗ್‌ವೊಂದು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳದ ಬಲೆಗೆ ಬಿದ್ದಿದೆ. ಧಾರ್ಮಿಕ ಮತಾಂತರ ಗ್ಯಾಂಗ್‌(Religious Conversion Gang)ನ ಮಾಸ್ಟರ್ ಮೈಂಡ್ ಒಬ್ಬ ತನ್ನ ಸಹಚರನೊಂದಿಗೆ ಅರೆಸ್ಟ್‌ ಆಗಿದ್ದಾನೆ. ಬಂಧಿತ ಆರೋಪಿಯನ್ನು ಜಲಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಮತ್ತು ಸಹ ಆರೋಪಿ ನೀತು ಅಲಿಯಾಸ್ ನಸ್ರೀನ್ ಎಂದು ಗುರುತಿಸಲಾಗಿದೆ.

ಇವರಿಬ್ಬರೂ ಬಲರಾಂಪುರ ಜಿಲ್ಲೆಯ ಮಧಪುರ ನಿವಾಸಿಗಳು ಎಂದು ತಿಳಿದುಬಂದಿದೆ. ಜಲಾಲುದ್ದೀನ್ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದ್ದು, ಪೊಲೀಸರು ಆತನ ಬಂಧನಕ್ಕೆ ರೂ. 50,000 ನಗದು ಬಹುಮಾನವನ್ನೂ ಪೊಲೀಸರು ಘೋಷಿಸಿದ್ದರು. ಸದ್ಯ ಇಬ್ಬರನ್ನು ಕೋರ್ಟ್‌ ಮುಂದೆ ಹಾಜರುಪಡಿಸಲಾಗಿದ್ದು, ಲಖನೌ ಜಿಲ್ಲಾ ಜೈಲಿಗೆ ಕಳುಹಿಸಲಾಯಿತು.

ಈ ಸುದ್ದಿಯನ್ನೂ ಓದಿ: Drishyam 3: ಕಾಯುವಿಕೆಗೆ ಕೊನೆಗೂ ತೆರೆ ಬೀಳುವ ಸಮಯ; ಕ್ರೈಂ ಥ್ರಿಲ್ಲರ್‌ ಚಿತ್ರ ʼದೃಶ್ಯಂ 3ʼ ಆರಂಭಕ್ಕೆ ಮುಹೂರ್ತ ಫಿಕ್ಸ್‌

ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳು ಮತ್ತು ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ, 2021 ರ ಅಡಿಯಲ್ಲಿ ಲಖನೌದ ಗೋಮ್ಟಿನಗರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಈ ಇಬ್ಬರನ್ನು ಅರೆಸ್ಟ್‌ ಮಾಡಲಾಗಿದೆ. ಆರೋಪಿಗಳು ಹಿಂದೂ ಮತ್ತು ಮುಸ್ಲಿಮೇತರ ಸಮುದಾಯಗಳ ವ್ಯಕ್ತಿಗಳನ್ನು ಇಸ್ಲಾಂಗೆ ಮತಾಂತರಿಸಲು ಸಂಘಟಿತ ರೀತಿಯಲ್ಲಿ ಸಂಚು ರೂಪಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಬಡವರು, ಅಸಹಾಯಕ ಕಾರ್ಮಿಕರು, ದುರ್ಬಲ ವರ್ಗಗಳು ಮತ್ತು ವಿಧವೆಯ ಮಹಿಳೆಯರಿಗೆ ಪ್ರೋತ್ಸಾಹ ಧನ, ಆರ್ಥಿಕ ನೆರವು, ವಿವಾಹದ ಭರವಸೆ ಅಥವಾ ಬೆದರಿಕೆಯ ಮೂಲಕ ಬಲವಂತದ ಮತಾಂತರ ಮಾಡುತ್ತಿದ್ದರು ಎನ್ನಲಾಗಿದೆ.

ಇತರ ಇಬ್ಬರು ಆರೋಪಿಗಳಾದ ನವೀನ್ ಅಲಿಯಾಸ್ ಜಮಾಲುದ್ದೀನ್ ಮತ್ತು ಜಲಾಲುದ್ದೀನ್ ಅವರ ಮಗ ಮೆಹಬೂಬ್‌ನನ್ನು ಏಪ್ರಿಲ್ 8 ರಂದು ಬಂಧಿಸಲಾಗಿತ್ತು. ಪ್ರಸ್ತುತ ಲಕ್ನೋ ಜಿಲ್ಲಾ ಜೈಲಿನಲ್ಲಿ ಇರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.