ಕಥುವಾ: ಪಾಕಿಸ್ತಾನ (pakistan) ಮೂಲದ ಏಳು ಮಂದಿ ವ್ಯಕ್ತಿಗಳ ಹೆಸರಿನಲ್ಲಿದ್ದ ಸುಮಾರು 1.25 ಎಕರೆ ಭೂಮಿಯನ್ನು ಜಮ್ಮು ಮತ್ತು ಕಾಶ್ಮೀರದ (jammu and kashmir) ಕಥುವಾದಲ್ಲಿ (Kathua) ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಪಾಕಿಸ್ತಾನದಲ್ಲಿದ್ದುಕೊಂಡು ರಾಷ್ಟ್ರವಿರೋಧಿ ಕೃತ್ಯದಲ್ಲಿ (anti-national activities) ಭಾಗಿಯಾಗಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಮಲ್ಹಾರ್ ಪೊಲೀಸ್ ಠಾಣೆಯಲ್ಲಿ (Malhar police station) ಪ್ರಕರಣ ದಾಖಲಾಗಿತ್ತು. ವಿಶೇಷ ನ್ಯಾಯಾಲಯದ (special court) ಆದೇಶದ ಮೇರೆಗೆ ಕಥುವಾ ಜಿಲ್ಲೆಯ ಲೋಹೈ ಮಲ್ಹಾರ್ ಪ್ರದೇಶದಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಪೊಲೀಸರು ಶುಕ್ರವಾರ ಜಪ್ತಿ ಮಾಡಿದ್ದಾರೆ.
ಮಲ್ಹಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ 7 ವ್ಯಕ್ತಿಗಳ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Harassment: ಯುವ ವೈದ್ಯೆಗೆ ಬೀದಿ ಕಾಮಣ್ಣನ ಕಿರುಕುಳ, ಹೆಡೆಮುರಿ ಕಟ್ಟಿದ ಪೊಲೀಸರು
ಆರೋಪಿಗಳನ್ನು ಮೊಹಮ್ಮದ್ ಅಯಾಜ್ ಅಲಿಯಾಸ್ ಅದೀಲ್ ಅನ್ಸಾರಿ, ಅಬ್ದುಲ್ ಕರೀಂ ಅಲಿಯಾಸ್ ಬಿಟ್ಟಾ, ಸರ್ಫ್ರಾಜ್ ನವಾಜ್ ಅಲಿಯಾಸ್ ನವಾಜ್ ಅಹ್ಮದ್, ಮೊಹಮ್ಮದ್ ಫಾರೂಕ್ ಅಲಿಯಾಸ್ ಫಾರೂಕ್ ಅಹ್ಮದ್, ಮೊಹಮ್ಮದ್ ಹಫೀಜ್, ಗುಲ್ ಮೊಹಮ್ಮದ್ ಮತ್ತು ಅಖ್ತರ್ ಅಲಿ ಅಲಿಯಾಸ್ ನಿಕು ಎಂದು ಗುರುತಿಸಲಾಗಿದೆ.
ಕಥುವಾ ಜಿಲ್ಲೆಯ ಲೋಹೈ ಮಲ್ಹಾರ್ ಪ್ರದೇಶದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ 10 ಕನಾಲ್ ಅಂದರೆ ಸರಿಸುಮಾರು 1.25 ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
Naxal Encounter: ಭದ್ರತಾ ಪಡೆಗಳಿಂದ 14 ಮಾವೋವಾದಿಗಳ ಎನ್‌ಕೌಂಟರ್; ನಾಯಕ ಸಚಿನ್ ಮಾಂಗ್ಡು ಬಲಿ
ಪಾಕಿಸ್ತಾನದಲ್ಲಿ ನೆಲೆಸಿರುವ ತೆಹಸಿಲ್ ಲೋಹೈ ಮಲ್ಹಾರ್ ನಿವಾಸಿಗಳಾದ ಮೊಹಮ್ಮದ್ ಅಯಾಜ್ ಅಲಿಯಾಸ್ ಅದೀಲ್ ಅನ್ಸಾರಿ, ಅಬ್ದುಲ್ ಕರೀಂ ಅಲಿಯಾಸ್ ಬಿಟ್ಟಾ, ಸರ್ಫ್ರಾಜ್ ನವಾಜ್ ಅಲಿಯಾಸ್ ನವಾಜ್ ಅಹ್ಮದ್, ಮೊಹಮ್ಮದ್ ಫಾರೂಕ್ ಅಲಿಯಾಸ್ ಫಾರೂಕ್ ಅಹ್ಮದ್, ಮೊಹಮ್ಮದ್ ಹಫೀಜ್, ಗುಲ್ ಮೊಹಮ್ಮದ್ ಮತ್ತು ಅಖ್ತರ್ ಅಲಿ ಅಲಿಯಾಸ್ ನಿಕು ಎಂಬವರ ವಿರುದ್ಧ ಈ ಹಿಂದೆ ಪ್ರಕಟಣೆಯನ್ನು ಹೊರಡಿಸಲಾಗಿತ್ತು.
ಏಳು ಮಂದಿ ಆರೋಪಿಗಳು ದೇಶದಿಂದ ಪರಾರಿಯಾಗಿರುವುದರಿಂದ ಕಂದಾಯ ಇಲಾಖೆಯ ಸಹಾಯದಿಂದ ಪೊಲೀಸರು ಬಿಎನ್‌ಎಸ್‌ಎಸ್ ಅಡಿಯಲ್ಲಿ ಎಲ್ಲಾ ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿ ಅವರ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.