Crime News: ಮಲತಾಯಿಯಿಂದ ವೇಶ್ಯಾವಾಟಿಕೆಗೆ ಒತ್ತಾಯ; ಕಾಪಾಡಿ ಎಂದು ಕಣ್ಣೀರಿಡುತ್ತಾ ಸಹಾಯಕ್ಕೆ ಅಂಗಲಾಚಿದ 9 ವರ್ಷದ ಬಾಲಕಿ
9 ವರ್ಷದ ಬಾಲಕಿಯೊಬ್ಬಳು ತನ್ನ ಮಲ ತಾಯಿ ತನ್ನನ್ನು ವೇಶ್ಯಾವಾಟಿಕೆಗೆ (Prostitution) ಒತ್ತಾಯಿಸುತ್ತಿದ್ದಾಳೆ ಎಂದು ಆರೋಪಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಬಾಲಕಿಯು ಕಣ್ಣೀರಿಡುತ್ತಾ ತನ್ನ ಗಾಯಗಳನ್ನು ತೋರಿಸುತ್ತಾ, ದತ್ತು ತಾಯಿ ಸೇರಿದಂತೆ ಗೀತಾ, ಅಮಿತ್ ಮತ್ತು ಛುಟ್ಟನ್ ಎಂಬ ಮೂವರ ಮೇಲೆ ಆರೋಪ ಮಾಡಿದ್ದಾಳೆ.


ಆಗ್ರಾ: ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ (Agra) ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 9 ವರ್ಷದ ಬಾಲಕಿಯೊಬ್ಬಳು ತನ್ನ ಮಲ ತಾಯಿ ತನ್ನನ್ನು ವೇಶ್ಯಾವಾಟಿಕೆಗೆ (Prostitution) ಒತ್ತಾಯಿಸುತ್ತಿದ್ದಾಳೆ ಎಂದು ಆರೋಪಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಬಾಲಕಿಯು ಕಣ್ಣೀರಿಡುತ್ತಾ ತನ್ನ ಗಾಯಗಳನ್ನು ತೋರಿಸುತ್ತಾ, ದತ್ತು ತಾಯಿ ಸೇರಿದಂತೆ ಗೀತಾ, ಅಮಿತ್ ಮತ್ತು ಛುಟ್ಟನ್ ಎಂಬ ಮೂವರ ಮೇಲೆ ಆರೋಪ ಮಾಡಿದ್ದಾಳೆ.
ವೈರಲ್ ವಿಡಿಯೊದಲ್ಲಿ ಬಾಲಕಿಯು, "ಇವರು ನನ್ನನ್ನು ಹೊಡೆದು ದೇಹ ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದಾರೆ. ದಯವಿಟ್ಟು ನನ್ನನ್ನು ರಕ್ಷಿಸಿ, ಇವರು ನನ್ನನ್ನು ಕೊಲ್ಲಲು ಬಂದಿದ್ದಾರೆ. ನನ್ನಿಂದ ವೇಶ್ಯಾವಾಟಿಕೆಗೆ ಮಾಡಿಸುತ್ತಿದ್ದಾರೆ" ಎಂದು ಹೇಳಿದ್ದಾಳೆ. ತನ್ನ ಗಾಯಗಳನ್ನು ತೋರಿಸುತ್ತಾ, "ನೋಡಿ, ರಕ್ತ ಸೋರುತ್ತಿದೆ," ಎಂದು ಕೂಗಿದ್ದಾಳೆ. ಈ ವಿಡಿಯೋ ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಆಕ್ರೋಶ ಹುಟ್ಟಿಸಿದ್ದು, ತಕ್ಷಣದ ಕ್ರಮಕ್ಕೆ ಒತ್ತಾಯಿಸಲಾಗಿದೆ.
ವೈರಲ್ ವಿಡಿಯೊ
आगरा: “ये मेरे से धंधा करा रही है, मारने के लिए लाई है, मुझे बचा लो”
— News24 (@news24tvchannel) June 23, 2025
◆ ये शब्द हैं एक 9 साल की बच्ची के जिससे उसकी मुंहबोली मां जबरन देह व्यापार करवाती है
◆ वीडियो सामने आने के बाद पुलिस ने कथित मां को गिरफ्तार कर लिया है #ViralVideo | Agra pic.twitter.com/5qOQnidJRd
ಆಗ್ರಾ ಪೊಲೀಸರು ವಿಡಿಯೋ ವೈರಲ್ ಆದ ಬಳಿಕ ಕ್ರಮಕೈಗೊಂಡಿದ್ದಾರೆ. ಆರೋಪಿತ ದತ್ತು ತಾಯಿಯನ್ನು ವಶಕ್ಕೆ ತೆಗೆದುಕೊಂಡು, ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆಗ್ರಾದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸದರ್ ಹೇಮಂತ್ ಕುಮಾರ್, "9 ವರ್ಷದ ದತ್ತು ಬಾಲಕಿಯ ಆರೋಪದ ಕುರಿತು ಮಾಹಿತಿ ಸಿಕ್ಕಿದ್ದು, ತಕ್ಷಣ ಕಾನೂನು ಕ್ರಮಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ. ಪ್ರಕರಣದ ತನಿಖೆ ಚುರುಕುಗೊಂಡಿದೆ.
ಈ ಸುದ್ದಿಯನ್ನೂ ಓದಿ: Physical Abuse: 2 ತಿಂಗಳು ಒತ್ತೆ ಇಟ್ಟುಕೊಂಡು ಗ್ಯಾಂಗ್ರೇಪ್, ವೇಶ್ಯಾವಾಟಿಕೆಗೆ ತಳ್ಳಲು ಯತ್ನ
ತನಿಖೆಯಲ್ಲಿ, ಬಾಲಕಿಯು ದತ್ತು ತಾಯಿಯಿಂದ ತಪ್ಪಿಸಿಕೊಂಡು ಮನೆಯಿಂದ ಓಡಿಹೋಗಿದ್ದು, ಒಬ್ಬ ವ್ಯಕ್ತಿಯಬಳಿ ತನ್ನ ಯಾತನೆಯನ್ನು ತಿಳಿಸಿದ್ದಾಳೆ. ಆತನ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿತ ಮಹಿಳೆಯನ್ನು ಬಂಧಿಸಿದ್ದಾರೆ. ಇದರ ಜೊತೆಗೆ, ವೇಶ್ಯಾವಾಟಿಕೆಗೆ ಒತ್ತಾಯಿಸಿದ ಮಹಿಳೆಯ ಇಬ್ಬರು ಸಹೋದರರನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ.