ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Abuse: 2 ತಿಂಗಳು ಒತ್ತೆ ಇಟ್ಟುಕೊಂಡು ಗ್ಯಾಂಗ್‌ರೇಪ್‌, ವೇಶ್ಯಾವಾಟಿಕೆಗೆ ತಳ್ಳಲು ಯತ್ನ

Thane Physical Abuse: ಮಹಾರಾಷ್ಟ್ರದ ಡೊಂಬಿವಲಿಯ ಗ್ರಾಮೀಣ ಭಾಗದಲ್ಲಿ 15 ವರ್ಷದ ಬಾಲಕಿಯೊಬ್ಬಳನ್ನು ಎರಡು ತಿಂಗಳ ಕಾಲ ಮನೆಯೊಂದರಲ್ಲಿ ಬಂಧಿಸಿ, ಪದೇ ಪದೇ ಅತ್ಯಾಚಾರ ಮಾಡಿ, ಗರ್ಭಪಾತಕ್ಕೆ ಒತ್ತಾಯಿಸಿ, ವೇಶ್ಯಾವಾಟಿಕೆಗೆ ತಳ್ಳಲಾಗಿದೆ ಎಂಬ ಆಘಾತಕಾರಿ ಘಟನೆ ಭಾನುವಾರ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2 ತಿಂಗಳು ಒತ್ತೆ ಇಟ್ಟುಕೊಂಡು ಗ್ಯಾಂಗ್‌ರೇಪ್‌!

Profile Sushmitha Jain May 26, 2025 11:38 AM

ಡೊಂಬಿವಲಿ: ಮಹಾರಾಷ್ಟ್ರದ (Maharashtra) ಡೊಂಬಿವಲಿಯ (Dombivali) ಗ್ರಾಮೀಣ ಭಾಗದಲ್ಲಿ 15 ವರ್ಷದ ಬಾಲಕಿಯೊಬ್ಬಳನ್ನು ಎರಡು ತಿಂಗಳ ಕಾಲ ಮನೆಯೊಂದರಲ್ಲಿ ಬಂಧಿಸಿ, ಪದೇ ಪದೇ ಅತ್ಯಾಚಾರ ಮಾಡಿ, ಗರ್ಭಪಾತಕ್ಕೆ ಒತ್ತಾಯಿಸಿ, ವೇಶ್ಯಾವಾಟಿಕೆಗೆ (Prostitution) ತಳ್ಳಲಾಗಿದೆ ಎಂಬ ಆಘಾತಕಾರಿ ಘಟನೆ(Thane Physical Abuse) ಭಾನುವಾರ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಒಬ್ಬ ಮಹಿಳೆ ಸೇರಿದಂತೆ ನಾಲ್ವರು ಬಂಧಿತರಾಗಿದ್ದಾರೆ. ಆದರೆ, ಮುಖ್ಯ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೆಲವು ಕಾರ್ಮಿಕರು ಬಾಲಕಿಯನ್ನು ಬಂಧನದಲ್ಲಿಡಲಾಗಿದೆ ಎಂಬ ಮಾಹಿತಿ ಪಡೆದ ನಂತರ ಪೊಲೀಸರಿಗೆ ತಿಳಿಸಿದ್ದಾರೆ. ಇದರ ಆಧಾರದ ಮೇಲೆ ತಿಲಕ್ ನಗರ ಪೊಲೀಸರು ಡೊಂಬಿವಲಿಯ ಗ್ರಾಮೀಣ ಭಾಗದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಪೊಲೀಸರ ಪ್ರಕಾರ, ಬಾಲಕಿಯ ತಾಯಿ ಆಹಾರ ಮಾರಾಟ ಮಾಡುತ್ತಿದ್ದು, ಈ ಮೂಲಕ ಮಸಾಲೆ ಮಾರಾಟಗಾರನಾದ ಮುಖ್ಯ ಆರೋಪಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದರು. ಆರೋಪಿಯು ಕುಟುಂಬಕ್ಕೆ ಪರಿಚಿತನಾಗಿದ್ದ. ಬಾಲಕಿಯು 10ನೇ ತರಗತಿಯ ಪರೀಕ್ಷೆಯ ನಂತರ ತಾಯಿಯೊಂದಿಗಿನ ಜಗಳದಿಂದ ಮನೆ ಬಿಟ್ಟು ಹೋಗಿದ್ದು, ಆರೋಪಿಯು ಆಕೆಯ ಮನವೊಲಿಸಿ ತನ್ನೊಂದಿಗೆ ಕರೆದುಕೊಂಡು ಹೋಗಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅತ್ಯಾಚಾರ ಮತ್ತು ವೇಶ್ಯಾವಾಟಿಕೆ:

ಪೊಲೀಸರ ತನಿಖೆಯ ಪ್ರಕಾರ, ಬಾಲಕಿಯನ್ನು ಎರಡು ತಿಂಗಳ ಕಾಲ ಬಂಧನದಲ್ಲಿಟ್ಟು, ಆರೋಪಿಯು ಆಕೆಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ಆಕೆ ಗರ್ಭಿಣಿಯಾದಾಗ ಆರೋಪಿಯು ಆಕೆಯನ್ನು ಗರ್ಭಪಾತಕ್ಕಾಗಿ ಮತ್ತೊಬ್ಬ ವ್ಯಕ್ತಿಯ ಬಳಿಗೆ ಕರೆದೊಯ್ದಿದ್ದಾನೆ. ನಂತರ ಆಕೆಯನ್ನು ಒಂದು ದಂಪತಿಯ ಮನೆಯಲ್ಲಿ ಇರಿಸಲಾಗಿತ್ತು, ಅಲ್ಲಿ ಆಕೆಯನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಲಾಗಿದೆ.

ಈ ಸುದ್ದಿಯನ್ನು ಓದಿ: Viral Video: ಕಳ್ಳರು ಹೇಗೆ ನುಗ್ಗುತ್ತಾರೆ...ಭುಟ್ಟೋ ಹೇಳಿಕೆಯನ್ನು ಹಾಸ್ಯಾಸ್ಪದವಾಗಿ ನಕಲು ಮಾಡಿದ ಈ ನಟ ; ವಿಡಿಯೋ ನೋಡಿ

ಬಾಲಕಿಯ ಮನೆಯವರು ಆಕೆಯನ್ನು ಹುಡುಕುತ್ತಿರುವಾಗ, ಆರೋಪಿಯು ಅವರಿಗೆ ಸುಳ್ಳು ಮಾಹಿತಿ ನೀಡಿದ್ದಾನೆ. “ನಾನು ಆಕೆಯನ್ನು ಟೌನ್‌ನಲ್ಲಿ ನೋಡಿದೆ, ಅವಳು ತುಂಬಾ ಕೋಪಗೊಂಡಿದ್ದಾಳೆ ವಾಪಸ್ ಬರುವುದಿಲ್ಲ” ಎಂದು ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬವು ಎರಡು ತಿಂಗಳ ನಂತರವೇ ಪೊಲೀಸರ ಮೊರೆ ಹೋಗಿದ್ದಾರೆ.

ಬಾಲಕಿಯ ದೂರಿನ ಆಧಾರದ ಮೇಲೆ, ಒಬ್ಬ ಮಹಿಳೆ ಮತ್ತು ಆಕೆಯ ಪತಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಆದರೆ, ಮುಖ್ಯ ಆರೋಪಿಯು ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ತಂಡಗಳು ಈ ಅಪರಾಧದ ಬಗ್ಗೆ ಮತ್ತಷ್ಟು ತನಿಖೆ ನಡೆಸುತ್ತಿವೆ. ಮುಖ್ಯ ಆರೋಪಿಯನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.