ಪುಣೆ ಕೋರ್ಟ್ ಆವರಣದಲ್ಲಿ ಹಾಡಹಗಲೇ ಕೊಲೆ ಆರೋಪಿಯನ್ನು ಅಟ್ಟಾಡಿಸಿಕೊಂಡು ಹೋಗಿ ಕೈ ಕತ್ತರಿಸಿದ 6 ಮಂದಿಯ ಗುಂಪು; ಹಲ್ಲೆಯ ವಿಡಿಯೊ ವೈರಲ್
Pune Horror: ವಿಚಾರಣೆಗೆ ಹಾಜರಾದ ಕೊಲೆ ಆರೋಪಿಯ ಮೇಲೆ ಪುಣೆಯ ಕೋರ್ಟ್ ಆವರಣದಲ್ಲೇ 6 ಮಂದಿ ದಾಳಿ ನಡೆಸಿ ಕೈ ಕತ್ತರಿಸಿದ ಭೀಕರ ಘಟನೆ ಬುಧವಾರ ಹಾಡಹಗಲೇ ನಡೆದಿದೆ. ಮಧ್ಯಾಹ್ನ 1 ಗಂಟೆಗೆ ಕುಟುಂಬ ನ್ಯಾಯಾಲಯದ ಸಮೀಪ ಈ ದಾಳಿ ಸಂಭವಿಸಿದೆ.
ಪುಣೆ ಕೋರ್ಟ್ ಆವರಣದಲ್ಲಿ ಕೊಲೆ ಆರೋಪಿ ಮೇಲೆ ಭೀಕರ ದಾಳಿ -
ಮುಂಬೈ, ನ. 25: ವಿಚಾರಣೆಗೆ ಹಾಜರಾದ ಕೊಲೆ ಆರೋಪಿಯ ಮೇಲೆ ಕೋರ್ಟ್ ಆವರಣದಲ್ಲೇ 6 ಮಂದಿ ದಾಳಿ ನಡೆಸಿ ಕೈ ಕತ್ತರಿಸಿದ ಭೀಕರ ಘಟನೆ ಬುಧವಾರ (ನವೆಂಬರ್ 25) ಹಾಡಹಗಲೇ ನಡೆದಿದೆ (Pune Horror). ಪುಣೆಯ ಶಿವಾಜಿನಗರ ಜಿಲ್ಲಾ ಕೋರ್ಟ್ನಲ್ಲಿ ಮಧ್ಯಾಹ್ನ ಈ ದಾಳಿ ನಡೆದಿದ್ದು, ದಾಳಿಗೊಳಗಾದ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿ ಮುಂದುವರಿದಿದೆ. ಮಧ್ಯಾಹ್ನ 1 ಗಂಟೆಗೆ ಕುಟುಂಬ ನ್ಯಾಯಾಲಯದ ಸಮೀಪವಿರುವರ ಗೇಟ್ ನಂಬರ್ 4ರಲ್ಲಿ ಈ ದಾಳಿ ನಡೆದಿದೆ.
ದಾಳಿಗೊಳಗಾದ ವ್ಯಕ್ತಿಯನ್ನು 35 ವರ್ಷದ ಮಂದಾರ್ ಮಾರುತಿ ಕಿವ್ಲೆ ಎಂದು ಗುರುತಿಸಲಾಗಿದ್ದು, ಸದ್ಯ ಸಾಸ್ಸೋನ್ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಪುಣೆ ಕೋರ್ಟ್ ಆವರಣದಲ್ಲಿ ವ್ಯಕ್ತಿ ಮೇಲೆ ದಾಳಿ:
This is the emergence of Kalyug. Shivajinagar Court, Pune, MH. No one helped the 'victim' accused of murder, even after the attackers fled. Prioritized shooting video instead. Humanity challenged. https://t.co/cTwe8fmDOM
— Siddhi Somani 🇮🇳 (@moodiesiddy) November 25, 2026
ದಾಳಿಗೊಳಗಾದ ಕಿವ್ಲೆ ಕೊಲೆ ಆರೋಪಿಯಾಗಿದ್ದು, ಈ ಕಾರಣಕ್ಕೆ ದಾಳಿ ನಡೆದಿರುವ ಸಾಧ್ಯತೆ ಇದೆ. ʼʼಶುಭಮ್ ಸುಭಾಷ್ ಚವಾನ್ ಕೊಲೆ ಆರೋಪಿಯಾಗಿರುವ ಮಂದಾರ್ ಮಾರುತಿ ಕಿವ್ಲೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರತೀಕಾರದ ದಾಳಿ ಇದಾಗಿಬಹುದು ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ತನಿಖೆ ನಡೆಯುತ್ತಿದೆʼʼ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
5 ಮಂದಿಯನ್ನು ಬಲಿ ಪಡೆದ ಹೊಟೇಲ್ ಮೇಲಿನ ಭೀಕರ ದಾಳಿಗೆ ದಾಳಿಯ ಕಾರಣ ಬಹಿರಂಗ
ಸದ್ಯ ಮಂದಾರ್ ಮೇಲೆ ಹಲ್ಲೆ ನಡೆಸಿತ್ತಿರುವ ಭೀಕರ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ. ಅದಲ್ಲಿ ದಾಳಿ ನಡೆಸುತ್ತಿರುವ 6 ಮಂದಿಯ ಮುಖ ಕಾಣಿಸುತ್ತಿದೆ ಎನ್ನಲಾಗಿದೆ.
ಪ್ರಾಥಮಿಕ ತನಿಖೆ ಪ್ರಕಾರ ದಾಳಿಕೋರರು ದ್ವಿಚಕ್ರ ವಾಹನಗಳಲ್ಲಿ ಆಗಮಿಸಿ ಮಂದಾರ್ನನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಬಳಿಕ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾರೆ. ಮಂದಾರ್ನ ಕೈ ಮಣಿಕಟ್ಟಿನ ಬಳಿ ಕತ್ತರಿಸಿಹೋಗಿದೆ ಎಂದು ಹೇಳಲಾಗಿದೆ.
ದಾಳಿ ನಡೆಸಿದ ಬಳಿಕ 6 ಮಂದಿ ಪರಾರಿಯಾಗಿದ್ದಾರೆ. ಸ್ಥಳದಿಂದ 2 ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುಂಡಿನ ದಾಳಿ ನಡೆದಿರುವ ಬಗ್ಗೆ ಸ್ಪಷ್ಟ ಮಾಹಿತಿ ಗೊತ್ತಾಗಿಲ್ಲ. ಸದ್ಯ ಪೊಲೀಸರು ಮತ್ತು ವಿಧಿ ವಿಜ್ಞಾನ ತಂಡದ ಸದಸ್ಯರು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಸಾಕ್ಷಿ ಕಲೆ ಹಾಕುತ್ತಿದ್ದಾರೆ.
ಕಾರಣ ಸ್ಪಷ್ಟವಾಗಿಲ್ಲ
ಮಂದಾರ್ ಮೇಲಿನ ದಾಳಿಗೆ ಕಾರಣ ಸ್ಪಷ್ಟವಾಗಿಲ್ಲ. ತಪ್ಪಿಸಿಕೊಂಡಿರುವ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಸದ್ಯ ಹಾಡಹಗಲೇ, ಕೋರ್ಟ್ ಆವರಣದಲ್ಲಿ ನಡೆದಿರುವ ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ದಾಳಿ ನಡೆದ ಬಳಿಕ ಮಂದಾರ್ ರಕ್ತಸಿಕ್ತ ದೇಹದೊಂದಿಗೆ ನಡೆಯುತ್ತಿರುವುದು ಕಂಡು ಬಂದಿದೆ.
ಹೋಟೆಲ್ ದಾಳಿ ಪ್ರಕರಣ: ಮೂವರು ದಾಳಿಕೋರರ ಹತ್ಯೆ
ಯಾರು ಈ ಮಂದಾರ್ ಮಾರುತಿ ಕಿವ್ಲೆ?
ಪೊಲೀಸರ ಪ್ರಕಾರ ಮಂದಾರ್ ಮಾರುತಿ ಕೊಲೆ ಆರೋಪಿಯಾಗಿದ್ದು, ವಿಚಾರಣೆಗಾಗಿ ಹಾಜರಾದ ವೇಳೆ ದಾಳಿ ನಡೆದಿದೆ. 2025ರ ಏಪ್ರಿಲ್ನಲ್ಲಿ ಸಂತೋಷ್ನಗರ ಕಟ್ರಾಜ್ನಲ್ಲಿ ನಡೆದ ಶುಭಮ್ ಸುಭಾಷ್ ಚವಾನ್ ಕೊಲೆಯ ಹಿಂದೆ ಮಂದಾರ್ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಜೈಲು ಶಿಕ್ಷೆ ಅನುಭವಿಸಿದ್ದ. ಆರ್ಥಿಕ ವಹಿವಾಟು ಮತ್ತು ಜಮೀನು ವಿವಾದಕ್ಕೆ ಸಂಬಂಧಿಸಿ ಈ ಕೊಲೆ ನಡೆದಿತ್ತು. 4 ದಿನಗಳ ಹಿಂದೆಯಷ್ಟೇ ಆತ ಜೈಲಿನಿಂದ ಬಿಡುಗಡೆಯಾಗಿದ್ದ. ಕಾನೂನು ಪ್ರಕ್ರಿಯೆಗಾಗಿ ಆಗಮಿಸಿದ ವೇಳೆ ಹೊಂಚು ಹಾಕಿ ಆಕ್ರಮಣ ನಡೆದಿದೆ.
ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.