ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೈಕ್ ಸವಾರನ ನಿರ್ಲಕ್ಷ್ಯದಿಂದ ಅಪಘಾತ: ಅಕ್ಟಿವಾ ಮೊಪೆಡ್‌ಗೆ ಗುದ್ದಿದ ಸ್ಕಾರ್ಪಿಯೋ ಕಾರು

ದ್ವಿಚಕ್ರ ವಾಹನದ ಹಿಂದೆಯೇ ಇದ್ದ ಸ್ಕಾರ್ಪಿಯೋ ಕಾರು ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಚಿಕ್ಕಬಳ್ಳಾಪುರದತ್ತ ಬರುತ್ತಿದ್ದ ಹೋಂಡಾ ಆಕ್ಟಿವಾ ಗಾಡಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಗಾಡಿ ಜಕಂ ಆಗಿದ್ದರೆ ಬೈಕ್ ಸವಾರ ಕಾರಿನ ಕೆಳಗೆ ಸಿಕ್ಕಿಕೊಂಡಿದ್ದರಿಂದ ತೀವ್ರ ಸ್ವರೂಪದ ಗಾಯಗಳಾಗಿ ಆಸ್ಪತ್ರೆ ಪಾಲಾಗುವಂತೆ ಆಗಿದೆ.

ಜಿಲ್ಲಾಧಿಕಾರಿ ಕಛೇರಿ ಮುಂದೆ ಭೀಕರ ಅಪಘಾತ

ಅಪಘಾತದ ದೃಶ್ಯ

Profile Ashok Nayak May 16, 2025 1:13 PM

ಚಿಕ್ಕಬಳ್ಳಾಪುರ : ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಛೇರಿ ಮುಂದೆಯೇ ಬೈಕ್ ಸವಾರನ ನಿರ್ಲಕ್ಷ್ಯದಿಂದ ಸ್ಕಾರ್ಪಿಯೋ ಕಾರೊಂದು ದ್ವಿಚಕ್ರವಾಹಕ್ಕೆ ಡಿಕ್ಕಿ ಹೊಡೆದಿದ್ದು ಬೈಕ್ ಪುಡಿಪುಡಿ ಯಾಗಿದ್ದು ಸವಾರನಿಗೆ ಕಾಲು ಮುರಿದಿದ್ದು ತಲೆ ಕೈಗೆ ತೀವ್ರತರವಾದ ಪೆಟ್ಟಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ನಡೆದಿದ್ದು ಹೇಗೆ?

ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ನಾರಾಯಸ್ವಾಮಿ ಮತ್ತು ಅವರ ಧರ್ಮಪತ್ನಿ ಸ್ಕಾರ್ಪಿಯೋ ಕಾರಲ್ಲಿ ನಾಮಕರಣ ಕಾರ್ಯಕ್ರಮಕ್ಕೆಂದು ಶಿಡ್ಲಘಟ್ಟದ ಕಡೆ ಹೋಗುತ್ತಿದ್ದರು. ಇದೇ ಮಾರ್ಗದಲ್ಲಿ ಹೋಗುತ್ತಿದ್ದ ಕೆ.ಎ.೦೩ ಜೆಟಿ.೧೩೨೮ ನೊಂದಣಿ ಸಂಖ್ಯೆಯುಳ್ಳ ಹೀರೋ ಫ್ಯಾಷನ್ ಪ್ರೋ ಬೈಕ್ ಸವಾರ ಯಾವ ಸಿಗ್ನಲ್ ನೀಡದೆ ಏಕಾಏಕಿ ಎಡದಿಂದ ಬಲಕ್ಕೆ ವಾಹನವನ್ನು ತಿರುಗಿಸಿದ್ದಾರೆ. ದ್ವಿಚಕ್ರ ವಾಹನದ ಹಿಂದೆಯೇ ಇದ್ದ ಸ್ಕಾರ್ಪಿಯೋ ಕಾರು ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಚಿಕ್ಕಬಳ್ಳಾಪುರದತ್ತ ಬರುತ್ತಿದ್ದ ಹೋಂಡಾ ಆಕ್ಟಿವಾ ಗಾಡಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಗಾಡಿ ಜಕಂ ಆಗಿದ್ದರೆ ಬೈಕ್ ಸವಾರ ಕಾರಿನ ಕೆಳಗೆ ಸಕ್ಕಿಕೊಂಡಿದ್ದರಿಂದ ತೀವ್ರ ಸ್ವರೂಪದ ಗಾಯಗಳಾಗಿ ಆಸ್ಪತ್ರೆ ಪಾಲಾಗುವಂತೆ ಆಗಿದೆ.

ಇದನ್ನೂ ಓದಿ: Crime News: ಸಿಂಗಾಪುರ ಏರ್‌ಲೈನ್ಸ್‌ ವಿಮಾನದಲ್ಲಿ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ: ಭಾರತೀಯ ವಿದ್ಯಾರ್ಥಿಗೆ ಜೈಲು ಶಿಕ್ಷೆ

ಈ ನಡುವೆ ಅಜಾಗರೂಕ ಚಾಲನೆ ಮಾಡಿ ಅಪಘಾತಕ್ಕೆ ಕಾರಣವಾದ ಬೈಕ್ ನಂಬರ್ ಕೆ.ಎ.೦೩ ಜೆಟಿ.೧೩೨೮ ಸವಾರ ಮಾತ್ರ ಆಂಬ್ಯುಲೆನ್ಸ್ನಲ್ಲಿ ಗಾಯಾಳು ಹೋದ ಕೂಡಲೇ ತಾನು ಪರಾರಿಯಾಗಿ ದ್ದಾನೆ.
ಚಿಕ್ಕಬಳ್ಳಾಪುರ ನಗರದಿಂದ ಹೊರಗಿರುವ ಜಿಲ್ಲಾಧಿಕಾರಿ ಕಛೇರಿಗೆ ಜಿಲ್ಲೆಯ ೮ ತಾಲೂಕುಗಳಿಂದ ನೂರಾರು ಸಮಸ್ಯೆಗಳನ್ನು ಹೊತ್ತು ಸಾರ್ವಜನಿಕರು ನಿತ್ಯವೂ ಅಡ್ಡಾಡುತ್ತಿರುತ್ತಾರೆ.ಹೀಗಾಗಿ ಇಲ್ಲಿ ಪ್ರತಿನಿತ್ಯ ಜನಸಂದಣಿ ಇರುವುದು ಸರ್ವೇ ಸಮಾನ್ಯ ಎಂಬತಾಗಿದೆ. ಆದರೆ ಇದೇ ಜಿಲ್ಲಾಧಿಕಾರಿಗಳ ಕಛೇರಿ ಮಂದೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವುದರಿಂದ ರಸ್ತೆಯ ಇಕ್ಕೆಲಗಳಲ್ಲಿ ತಲೆಯೆ ತ್ತಿರುವ ಅಂಗಡಿಗಳ ಕಾರಣಕ್ಕೆ ಬೈಕ್‌ಗಳನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸುತ್ತಾರೆ. ಮೇಲಾಗಿ ಮೊಬೈಲ್ ವಾಹನಗಳಲ್ಲಿ ವ್ಯಾಪಾರ ಮಾಡುವ ಪರಿಪಾಠವೂ ಇಲ್ಲಿ ಬೆಳೆದು ನಿಂತಿದೆ.ಆದರೆ ಸಂಚಾರಿ ಪೊಲೀಸರು ಮಾತ್ರ ನನಗೂ ಇದಕ್ಕೂ ಸಂಬAಧ ಇಲ್ಲವೆಂಬಂತೆ ನಡೆದುಕೊಳ್ಳುತ್ತಿರು ವುದು ಸಾರ್ವಜನಿಕರು ಅಪಾಯಕ್ಕೆ ಸಿಲುಕಲು ಕಾರಣವಾಗಿ ಎನ್ನುತ್ತಿದ್ದಾರೆ.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಮೋಹನ್ ಎಂಬುವವರು ಫೀಲ್ಡ್ ವಿಸಿಟ್‌ ಗಾಗಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದವರು ತನ್ನದಲ್ಲದ ತಪ್ಪಿಗಾಗಿ ಅಪಘಾತವಾಗಿ ರಕ್ತ ಸುರಿಸಿ ಕೊಂಡು ನೋವಿನಲ್ಲಿ ನರಳುವಂತಾಗಿದ್ದು ವಿಧಿಯ ಕ್ರೂರತೆಯನ್ನು ತೋರಿಸುವಂತಿತ್ತು. ಅಪಘಾತವಾಗಿ 20 ನಿಮಿಷ ಆದರೂ ಆಂಬ್ಯುಲೆನ್ಸ್ ಬಾರದ ಕಾರಣ ಗಾಯಗೊಂಡ ಮೋಹನ್ ನರಳಿದ್ದು ಕರಳು ಹಿಂಡುವAತಿತ್ತು.ನೋವು ನೋಡಲಾರದೆ ಅಲ್ಲಿದ್ದ ಸಾರ್ವಜನಿಕರು ಮತ್ತು ಕಾರಿನ ಮಾಲಿಕ ಆಟೋಗೆ ಹತ್ತಿಸಿ ಜಿಲ್ಲಾಸ್ಪತ್ರೆಗೆ ಸಾಗಿಸಬೇಕು ಎಂದು ಮುಂದಾಗುವಷ್ಟರಲ್ಲಿ ಅಮ್ಮ ಆಂಬುಲೆನ್ಸ್ ಬಂದು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಸಾರ್ಥಕತೆ ಮೆರೆಯಿತು.

ಅಪಘಾತವಾದ ಕೂಡಲೇ ರಸ್ತೆಯಲ್ಲಿ ಗಾಡಿಗಳು ನಿಂತು ಜನಜಂಗುಳಿ ಏರ್ಪಟ್ಟರೂ ಒಬ್ಬೇ ಒಬ್ಬ ಪೊಲೀಸ್ ಕೂಡ ಬಂದು ಘಟನೆಯ ಮಾಹಿತಿ ಪಡೆಯಲಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.