ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime News: ಸಿಂಗಾಪುರ ಏರ್‌ಲೈನ್ಸ್‌ ವಿಮಾನದಲ್ಲಿ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ: ಭಾರತೀಯ ವಿದ್ಯಾರ್ಥಿಗೆ ಜೈಲು ಶಿಕ್ಷೆ

ಆಸ್ಟ್ರೇಲಿಯಾದ ಪರ್ಥ್‌ನಿಂದ ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಸಿಂಗಾಪುರ್ ಏರ್‌ಲೈನ್ಸ್ ವಿಮಾನದಲ್ಲಿ ಸಿಬ್ಬಂದಿಗೆ ಕಿರುಕುಳ ನೀಡದ ಆರೋಪದ ಮೇಲೆ 20 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಬುಧವಾರ ಮೂರು ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಲೈಂಗಿಕ ಕಿರುಕುಳ ಆರೋಪ; ಭಾರತೀಯ ವಿದ್ಯಾರ್ಥಿಗೆ ಜೈಲು ಶಿಕ್ಷೆ

ಸಿಂಗಾಪುರ್ ಏರ್‌ಲೈನ್ಸ್.

Profile Sushmitha Jain May 15, 2025 9:49 PM

ಸಿಂಗಾಪೂರ್: ಆಸ್ಟ್ರೇಲಿಯಾದ ಪರ್ಥ್‌ನಿಂದ (Perth) ಸಿಂಗಾಪುರದ (Singapore) ಚಾಂಗಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಸಿಂಗಾಪುರ್ ಏರ್‌ಲೈನ್ಸ್ (Singapore Airlines) ವಿಮಾನದಲ್ಲಿ ಸಿಬ್ಬಂದಿಗೆ ಕಿರುಕುಳ ನೀಡದ ಆರೋಪದ ಮೇಲೆ 20 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ
(Indian Student) ಬುಧವಾರ ಮೂರು ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಫೆ. 28ರಂದು ಬೆಳಗ್ಗೆ 11:20ಕ್ಕೆ ವಿಮಾನದ ಸಿಬ್ಬಂದಿ ಮಹಿಳೆ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿದ್ದಾಗ ನೆಲದ ಮೇಲಿದ್ದ ಟಾಯ್ಲೆಟ್ ಪೇಪರ್ ತುಂಡನ್ನು ಎತ್ತಲು ಕೆಳಗೆ ಬಾಗಿದ್ದರು. ಆಗ ರಜತ್ ಎಂಬ ಆರೋಪಿಯು ಅವರನ್ನು ಹಿಂದಿನಿಂದ ಹಿಡಿದು, ಶೌಚಾಲಯದ ಒಳಕ್ಕೆ ತಳ್ಳಿಕೊಂಡು ಹೋಗಿದ್ದಾನೆ ಎಂದು ಆರೋಪಿಸಲಾಗಿದೆ.

“ಸಿಬ್ಬಂದಿ ಕೆಳಗೆ ಬಾಗಿದಾಗ, ರಜತ್ ಅವರ ಬಳಿಗೆ ಬಂದು ತನ್ನ ಎರಡೂ ಕೈಗಳನ್ನು ಅವರ ಸೊಂಟದ ಮೇಲೆ ಇರಿಸಿದ. ನಂತರ ಅವನು ಶೌಚಾಲಯದ ಒಳಗೆ ತಳ್ಳಿಕೊಂಡು ಹೋದನು, ಇದರಿಂದಾಗಿ ಸಂತ್ರಸ್ತೆಯೂ ಶೌಚಾಲಯದ ಒಳಗೆ ಸೇರಿಕೊಂಡಳು” ಎಂದು ಡೆಪ್ಯೂಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಯೂಜಿನ್ ಲಾವ್ ಹೇಳಿದ್ದಾರೆ.

ಈ ಕೃತ್ಯವನ್ನು ಗಮನಿಸಿದ ಒಬ್ಬ ಪ್ರಯಾಣಿಕ ತಕ್ಷಣ ಸಿಬ್ಬಂದಿಯನ್ನು ಶೌಚಾಲಯದಿಂದ ಹೊರತಂದು, ರಜತ್‌ನಿಂದ ದೂರವಿರಲು ವಿಮಾನದ ಹಿಂಭಾಗಕ್ಕೆ ಕರೆದೊಯ್ದನು. ಆಸ್ಟ್ರೇಲಿಯಾದ ವಿಶ್ವವಿದ್ಯಾಲಯವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ರಜತ್‌ನನ್ನು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೂಡಲೇ ಬಂಧಿಸಲಾಯಿತು.

ಈ ಸುದ್ದಿಯನ್ನು ಓದಿ: Crime News: ಮತ್ತೊಮ್ಮೆ ಗೋವಿನ ಮೇಲೆ ವಿಕೃತಿ, ಹಸುವಿನ ಕೆಚ್ಚಲು ಕತ್ತರಿಸಿ ಕ್ರೌರ್ಯ

ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ, ಡಿಪಿಪಿ ಲಾವ್ ಈ ಅಪರಾಧವು ಅತ್ಯಂತ ಆಕ್ರಮಣಕಾರಿಯಾಗಿದೆ ಎಂದು ಒತ್ತಿ ಹೇಳಿದರು. ಏಕೆಂದರೆ ವಿಮಾನದಲ್ಲಿ ತಪ್ಪಿಸಿಕೊಳ್ಳುವುದು ಕಷ್ಟ. “ವಾಣಿಜ್ಯ ವಿಮಾನ ಪ್ರಯಾಣವು ಹೆಚ್ಚಿನ ಒತ್ತಡದ ವಾತಾವರಣವಾಗಿದ್ದು, ಇದರಲ್ಲಿ ದೈಹಿಕ ಸಾಮೀಪ್ಯವು ಹೆಚ್ಚಿರುತ್ತದೆ ಮತ್ತು ಅನಗತ್ಯ ದೈಹಿಕ ಸಂಪರ್ಕವನ್ನು ಕಂಡುಹಿಡಿಯುವುದು ಕಷ್ಟ. ಜತೆಗೆ, ಸಂತ್ರಸ್ತೆಗೆ ತಕ್ಷಣದಲ್ಲೇ ತಪ್ಪಿಸಿಕೊಳ್ಳುವ ಮಾರ್ಗವಿಲ್ಲ” ಎಂದು ಲಾವ್ ಹೇಳಿದ್ದಾರೆ.

ರಜತ್‌ನ ವಕೀಲ ರಂಜಿತ್ ಸಿಂಗ್ ತಮ್ಮ ಕಕ್ಷಿದಾರನ ಶಾಲೆಯಲ್ಲಿ ಆತನ ಒಳ್ಳೆಯ ನಡತೆಯನ್ನು ಗಣನೆಗೆ ತೆಗೆದುಕೊಂಡು ಶಿಕ್ಷೆಯನ್ನು ಕಡಿಮೆ ಮಾಡಿ ದಂಡ ವಿಧಿಸಬೇಕೆಂದು ವಾದಿಸಿದರು. ಸಿಂಗಾಪುರ ಕಾನೂನಿನ ಪ್ರಕಾರ, ಕಿರುಕುಳ ಆರೋಪದಲ್ಲಿ ದೋಷಿಯೆಂದು ಕಂಡುಬಂದವರಿಗೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ, ದಂಡ, ಚಾವಟಿ ಶಿಕ್ಷೆ ಅಥವಾ ಎಲ್ಲ ಶಿಕ್ಷೆಗಳನ್ನು ವಿಧಿಸಬಹುದು.