ಗಾಜಿಯಾಬಾದ್‌ನಲ್ಲಿ ಮೂವರು ಅಪ್ರಾಪ್ತ ಸಹೋದರಿಯರ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಹೊಸ ಹೊಸ ವಿಷಯಗಳು ತೆರೆದುಕೊಳ್ಳುತ್ತಿವೆ. ಮೂವರು ಅಪ್ರಾಪ್ತ ಸಹೋದರಿಯರ ತಂದೆ ಚೇತನ್ ಕುಮಾರ್ ಹೆಸರು 2015 ರ ಮತ್ತೊಂದು ಆತ್ಮಹತ್ಯೆ ಪ್ರಕರಣದಲ್ಲಿ ಕೇಳಿ ಬಂದಿತ್ತು ಎಂದು ತಿಳಿದು ಬಂದಿದೆ. ಕುಮಾರ್ ಇಬ್ಬರು ಹೆಂಡತಿಯರನ್ನು ಹೊಂದಿದ್ದರೂ ಸಹ, ಆಗ ಅವರ ಲಿವ್-ಇನ್ ಪಾರ್ಟ್‌ನರ್ ಆಗಿದ್ದ ಇನ್ನೊಬ್ಬ ಮಹಿಳೆಯೊಂದಿಗೆ ವಾಸಿಸುತ್ತಿದ್ದರು. ಆ ಮಹಿಳೆ 2015 ರಲ್ಲಿ ಸಾಹಿಬಾಬಾದ್ ಪ್ರದೇಶದ ರಾಜೇಂದ್ರ ನಗರ ಕಾಲೋನಿಯಲ್ಲಿ ಫ್ಲಾಟ್‌ನ ಛಾವಣಿಯಿಂದ ಬಿದ್ದು ಸಾವನ್ನಪ್ಪಿದರು.
ನಂತರ ಪ್ರಕರಣವನ್ನು ಮುಕ್ತಾಯಗೊಳಿಸಲಾಯಿತು, ಸಾವನ್ನು ಆತ್ಮಹತ್ಯೆ ಎಂದು ದಾಖಲಿಸಲಾಗಿತ್ತು. ಆರಂಭದಲ್ಲಿ ಈ ಸಾವನ್ನು ಅನುಮಾನಾಸ್ಪದವೆಂದು ಪರಿಗಣಿಸಲಾಗಿತ್ತು, ಆದರೆ ನಂತರ ತನಿಖೆಯ ನಂತರ ಅದನ್ನು ಆತ್ಮಹತ್ಯೆ ಎಂದು ಘೋಷಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳ ಮಾನಸಿಕ ಸ್ಥಿತಿಯನ್ನು ನಿರ್ಣಯಿಸಲು ಗಾಜಿಯಾಬಾದ್ ತನಿಖೆಯ ಭಾಗವಾಗಿ ಈ ಘಟನೆಯನ್ನು ಈಗ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಮಾರ್ ಅವರ ಕುಟುಂಬ ಸದಸ್ಯರನ್ನು ವಿಚಾರಣೆ ಮಾಡಿದ ನಂತರ, ಕುಮಾರ್ ಅವರಿಗೆ ಸುಜಾತಾ, ಹೀನಾ ಮತ್ತು ಟೀನಾ ಎಂಬ ಮೂರು ಹೆಂಡತಿಯರಿದ್ದರು ಎಂದು ತಿಳಿದು ಬಂದಿದೆ.
ತ್ರಿವಳಿ ಆತ್ಮಹತ್ಯೆ
ಕಳೆದ ಬುಧವಾರ ಪಖಿ (12), ಪ್ರಾಚಿ (14) ಮತ್ತು ನಿಶಿಕಾ (16) ತಮ್ಮ ಅಪಾರ್ಟ್‌ಮೆಂಟ್ ಕಟ್ಟಡದ ಒಂಬತ್ತನೇ ಮಹಡಿಯಿಂದ ಹಾರಿ ಸಾವನ್ನಪ್ಪಿದ್ದರು. ಪೋಷಕರು ತಮ್ಮ ಗೇಮಿಂಗ್ ಚಟವನ್ನು ವಿರೋಧಿಸಿ ಅವರ ಫೋನ್‌ಗಳನ್ನು ಕಸಿದುಕೊಂಡ ಬಳಿಕ ಅವರು ಆತ್ಮಹತ್ಯಗೆ ಶರಣಾಗಿದ್ದರು.
ಮೂವರು ಸಹೋದರಿಯವರು ಸಂಪೂರ್ಣವಾಗಿ ಕೊರಿಯನ್ ಸಂಸ್ಕೃತಿಗೆ ಮಾರು ಹೋಗಿದ್ದರು ಎಂಬ ಸ್ಫೋಟಕ ವಿಚಾರ ಬಯಲಾಗಿದೆ. ನಾವು ಭಾರತೀಯರಲ್ಲ, ಕೊರಿಯನ್ನರು ಎಂದಿರುವ ಬಾಲಕಿಯರು, ಸಾಯುವ ಮುನ್ನ ಡೈರಿಯಲ್ಲಿ ಹಲವು ಶಾಕಿಂಗ್ ವಿಚಾರಗಳನ್ನು ಬರೆದಿಟ್ಟಿರುವುದು ಸದ್ಯ ಪೊಲೀಸರನ್ನೇ ಚಿಂತಿಸುವಂತೆ ಮಾಡಿದೆ.
ಮೂಲಗಳ ಪ್ರಕಾರ, ಮೃತಪಟ್ಟ ಸಹೋದರಿಯರನ್ನು ನಿಶಿಕಾ (16), ಪ್ರಾಚಿ (14) ಮತ್ತು ಪಖಿ (12) ಎಂದು ಗುರುತಿಸಲಾಗಿದೆ. ಈ ಮೂವರು, ಕೊರಿಯನ್ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಅಕೌಂಟ್ಗಳನ್ನು ಸಹ ಹೊಂದಿದ್ದರು. ಆ ಅಕೌಂಟ್ಗಳಲ್ಲಿ ಭಾರಿ ಸಂಖ್ಯೆಯಲ್ಲಿ ಫಾಲೋವರ್ಸ್ ಕೂಡ ಇದ್ದರು. ಕೊರಿಯನ್ ಹೆಸರಿನಲ್ಲಿ ತಮ್ಮನ್ನು ತಾವು ಮರಿಯಾ, ಅಲಿಝಾ ಮತ್ತು ಸಿಂಡಿ ಎಂದು ಪರಿಚಯಿಸಿಕೊಂಡಿದ್ದರು.
ಸಾವಿನಲ್ಲೂ ಒಂದಾದ ದಂಪತಿ; ಪತಿ ಮೃತಪಟ್ಟ ಸುದ್ದಿ ಕೇಳಿ ಪತ್ನಿ ಆತ್ಮಹತ್ಯೆ
ಸುಮಾರು 10 ದಿನಗಳ ಹಿಂದೆ ಸಹೋದರಿಯರ ತಂದೆಗೆ ಈ ಸೋಶಿಯಲ್ ಮೀಡಿಯಾ ಖಾತೆಗಳ ಬಗ್ಗೆ ಗೊತ್ತಾಯಿತು. ತಕ್ಷಣವೇ ಅವುಗಳನ್ನು ಡಿಲೀಟ್ ಮಾಡಿ, ತಮ್ಮ ಮಕ್ಕಳಿಂದ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಸುಮಾರು 2 ಕೋಟಿ ರೂ.ವರೆಗೂ ಸಾಲವನ್ನು ಹೊಂದಿದ್ದ ತಂದೆ ಚೇತನ್ ಕುಮಾರ್, ವಿದ್ಯುತ್ ಬಿಲ್ ಕಟ್ಟಲು ಫೋನ್‌ಗಳನ್ನು ಮಾರಾಟ ಮಾಡಿದ್ದಲ್ಲದೆ, ತನ್ನ ಮಕ್ಕಳಿಗೆ ಮದುವೆ ಮಾಡಿಬಿಡುವುದಾಗಿಯೂ ಬೆದರಿಕೆ ಹಾಕಿದ್ದ. ಇದೆಲ್ಲವೂ, ಆ ಹೆಣ್ಣು ಮಕ್ಕಳ ಸಾವಿಗೆ ಬಹುಮುಖ್ಯ ಕಾರಣವಾಯಿತು ಎಂಬುದು ಬರೆದಿಟ್ಟ ಡೈರಿಯಿಂದ ಸ್ಪಷ್ಟವಾಗಿದೆ.