ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

25 ವರ್ಷದ ಯುವತಿಯೊಂದಿಗೆ ಮದುವೆಯಾಗಿದ್ದ ರಾಜಕಾರಣಿ ಸಾವು

ಎರಡನೇ ಮದುವೆಯಾಗಿದ್ದ ರಾಜಕಾರಣಿಯೊಬ್ಬರು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಬಿಜೆಪಿಯಿಂದ ಅಮಾನತುಗೊಂಡಿದ್ದ ಮಾಜಿ ಕೌನ್ಸಿಲರ್ ನಯೀಮ್ ಖಾನ್ ವಾರಗಳ ಹಿಂದೆಯಷ್ಟೇ 25 ವರ್ಷದ ಯುವತಿಯನ್ನು ಮದುವೆಯಾಗಿದ್ದ. ಇದೀಗ ಆತ ನಿಗೂಢವಾಗಿ ಸಾವನ್ನಪ್ಪಿದ್ದು, ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತು ತನಿಖೆಗೆ ಕುಟುಂಬ ಆಗ್ರಹಿಸಿದೆ.

ಮದುವೆಯಾಗಿ ವಾರ ಕಳೆದಿಲ್ಲ ವರ ಸಾವು, ವಧುವಿನ ಮೇಲೆ ಶಂಕೆ

(ಸಂಗ್ರಹ ಚಿತ್ರ) -

ಮಧ್ಯಪ್ರದೇಶ: ಮದುವೆಯಾಗಿ ವಾರ ಕಳೆಯುವಷ್ಟರಲ್ಲಿ ರಾಜಕಾರಣಿಯೊಬ್ಬರು (Expelled BJP councillor) ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ. ಸಾಗರ್‌ನ ಲಜಪತ್‌ಪುರ ವಾರ್ಡ್‌ನ 67 ವರ್ಷದ ಮಾಜಿ ಕೌನ್ಸಿಲರ್ ನಯೀಮ್ ಖಾನ್ (Naeem Khan) ಅವರು ವಾರಗಳ ಹಿಂದೆ 25 ವರ್ಷದ ಯುವತಿಯನ್ನು ಮದುವೆಯಾಗಿದ್ದರು. ಆದರೆ ಇದೀಗ ಇವರು ನಿಗೂಢವಾಗಿ ಸಾವನ್ನಪ್ಪಿದ್ದು, ಈ ಕುರಿತು ತನಿಖೆ ನಡೆಸುವಂತೆ ಕುಟುಂಬ ಆಗ್ರಹಿಸಿದೆ. ನಯೀಮ್ ಖಾನ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, ಅವರ ಸಾವಿಗೆ ನವ ವಧುವೇ ಕಾರಣ ಎನ್ನುವ ಅನುಮಾನಗಳು ವ್ಯಕ್ತವಾಗಿವೆ.

ಬಿಜೆಪಿಯಿಂದ ಅಮಾನತುಗೊಂಡಿದ್ದ ನಯೀಮ್ ಖಾನ್ ಶುಕ್ರವಾರ ಮುಂಜಾನೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕಳೆದವಾರವಷ್ಟೇ ಅವರು 25 ವರ್ಷದ ಯುವತಿಯೊಂದಿಗೆ ಎರಡನೇ ಮದುವೆಯಾಗಿದ್ದರು. ಇದು ಭಾರಿ ಸುದ್ದಿಯಾಗಿತ್ತು.

Aryan khan: ಶಾರುಖ್‌ ಪುತ್ರನ ಅಸಹ್ಯ ವರ್ತನೆ; ಬೆಂಗಳೂರಿನಲ್ಲಿ ದೂರು ದಾಖಲು

ಮದುವೆಯ ಬಳಿಕ ಖಾನ್ ಅವರ ಆರೋಗ್ಯದಲ್ಲಿ ಹಠಾತ್ ಏರುಪೇರು ಉಂಟಾಗಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ವೈದ್ಯರು ಅವರು ಸಾವನ್ನಪ್ಪಿರುವುದಾಗಿ ಘೋಷಿಸಿದರು. ನವವಧುವಿನ ಮೇಲೆ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಮರಣೋತ್ತರ ಪರೀಕ್ಷೆಗೆ ಆದೇಶಿಸಿದ್ದು, ಪ್ರಕರಣದ ಕುರಿತು ವಿಚಾರಣೆ ಆರಂಭಿಸಿದ್ದಾರೆ.

ಎರಡು ತಿಂಗಳ ಹಿಂದೆ ನಯೀಮ್ ಖಾನ್ ಮೇಲೆ ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದರಿಂದ ಅವರನ್ನು ಬಿಜೆಪಿ ಅಮಾನತುಗೊಳಿಸಿತ್ತು. ಮದುವೆಯ ಬಳಿಕ ಅವರ ಹೊಸ ಪತ್ನಿ ಗೋಪಾಲ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರಿಂದ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಗುರಿಯಾಗಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ.

ಸೊಸೆ ಶಿಖಾ ಖಾನ್ ಅವಳನ್ನು ಮದುವೆಯಾದ ಬಳಿಕ ಖಾನ್ ತೀವ್ರವಾಗಿ ನೋವು ಅನುಭವಿಸುತ್ತಿದ್ದರು. ಖಾನ್ ಮತ್ತು ಅವರ ಹೊಸ ಪತ್ನಿಯ ನಡುವೆ ನಿತ್ಯವೂ ಜಗಳ ನಡೆಯುತ್ತಿತ್ತು. ಶುಕ್ರವಾರ ಬೆಳಗ್ಗೆ ಆಕೆ ಕರೆ ಮಾಡಿ ಖಾನ್ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಹೇಳಿದ್ದು, ನಾವು ಮನೆಗೆ ಬರುವ ಹೊತ್ತಿಗೆ ಅವರು ನಿಧನರಾಗಿದ್ದಾರೆ ಎಂದು ಖಾನ್ ಕುಟುಂಬ ತಿಳಿಸಿದೆ. ಮತ್ತು ಈ ಕುರಿತು ತನಿಖೆಗೆ ಆದೇಶಿಸಿದೆ.

Shivamogga News: ಶಿವಮೊಗ್ಗದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ ಹೊಮ್ಮರಡಿ ಹಾಗೂ ಪುತ್ರ ಆಕಾಶ್ ಆತ್ಮಹತ್ಯೆ

ಮೊದಲ ಪತ್ನಿಯ ಕುಟುಂಬದಿಂದ ದೂರವಾಗಿರುವ ಖಾನ್ ಶನಿಚಾರಿ ಪ್ರದೇಶದಲ್ಲಿ ಅವರ ಕಚೇರಿಯ ಎದುರಿನ ಮನೆಯಲ್ಲಿ ಎರಡನೇ ಪತ್ನಿಯೊಂದಿಗೆ ವಾಸವಾಗಿದ್ದರು. ಅವರ ಸಾವಿಗೆ ಹೃದಯ ವೈಫಲ್ಯ ಕಾರಣವಾಗಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಈ ಕುರಿತು ದೃಢೀಕರಣಕ್ಕಾಗಿ ಪೊಲೀಸ್ ಅಧಿಕಾರಿಗಳು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.