Aryan khan: ಶಾರುಖ್ ಪುತ್ರನ ಅಸಹ್ಯ ವರ್ತನೆ; ಬೆಂಗಳೂರಿನಲ್ಲಿ ದೂರು ದಾಖಲು
ಪಬ್‌ವೊಂದರಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಹಿಂದೂ ಮುಖಂಡರೊಬ್ಬರು ಪೊಲೀಸ್ ಆಯುಕ್ತರು ಮತ್ತು ಡಿಜಿಪಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದರು.
ಆರ್ಯನ್ ಖಾನ್ -
ಬೆಂಗಳೂರು: ಪಬ್‌ವೊಂದರಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಹಿಂದೂ ಮುಖಂಡರೊಬ್ಬರು ಪೊಲೀಸ್ ಆಯುಕ್ತರು ಮತ್ತು ಡಿಜಿಪಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದರು. ಇದೀಗ ವಕೀಲ ಹುಸೇನ್ ಎಂಬುವವರು ಲಿಖಿತವಾಗಿ ದೂರು ನೀಡಿದ್ದಾರೆ. ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ದುರ್ವತ್ರನೆ ತೋರಿದ್ದಾರೆ. ಮಹಿಳೆಯರ ಗೌರವಕ್ಕೆ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಕುರಿತು ಮಾತನಾಡಿರುವ ಸಚಿವ ಜಮೀರ್ ಖಾನ್ ಪುತ್ರ ಝೈದ್ ಖಾನ್ ‘ಆರ್ಯನ್ ಖಾನ್ ನನಗೆ ಹಲವು ವರ್ಷಗಳಿಂದ ಗೊತ್ತು. ನಾವಿಬ್ಬರೂ ಒಂದೇ ಕಡೆ ನಟನೆ ಕಲಿತಿದ್ದೇವೆ. ಅವನು ಬೆಂಗಳೂರಿಗೆ ಬರುತ್ತಿದ್ದೇನೆ ಎಂದು ಮೆಸೇಜ್ ಮಾಡಿದ್ದ. ಹೀಗಾಗಿ ಒಂದು ಓಪನಿಂಗ್ ಸೆರಮನಿಗೆ ಹೋಗಿದ್ದೆವು. ‘ಅಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಜನ ಸೇರಿದ್ದರು. ಇಷ್ಟು ಜನರಿದ್ದರೆ ನನ್ನಿಂದ ಸಾಧ್ಯವಿಲ್ಲ ಎಂದು ಆರ್ಯನ್ ಹೇಳಿದ. ಅವನ ಮ್ಯಾನೇಜರ್ (ಗೆಳೆಯ ಕೂಡ ಹೌದು) ಜನರನ್ನು ಚದುರಿಸುತ್ತೇನೆ ಎಂದು ಹೋದ. ಎಷ್ಟು ಹೊತ್ತಾದರೂ ಬರಲಿಲ್ಲ. ಆಗ ನಾವು ಬಾಲ್ಕನಿಗೆ ಹೋಗಿ ಏನಾಗಿದೆ ಎಂದು ನೋಡಿದೆವು. ಆಗ ಅವನು ಫ್ರೆಂಡ್ ಕಮ್ ಮ್ಯಾನೇಜರ್ಗೆ ಆರ್ಯನ್ ಹಾಗೆ ತೋರಿಸಿದ್ದಾನೆ. ಅದು ಜನರಿಗೆ ತೋರಿಸಿದ್ದಲ್ಲ ಎಂದು ಹೇಳಿದ್ದಾರೆ.
ಹಿಂದೂ ಮುಖಂಡ ತೇಜಸ್ ಗೌಡ ದೂರು
ಶಾರುಖ್ ಖಾನ್ ಪುತ್ರನ ಅಸಭ್ಯ ವರ್ತನೆ ವಿರುದ್ಧ ಹಿಂದೂ ಮುಖಂಡ ತೇಜಸ್ ಗೌಡ ಎಂಬುವವರು ದೂರು ನೀಡಿದ್ದು, ದೂರಿನಲ್ಲಿ ಆರ್ಯನ್ ಖಾನ್, ಶಾಸಕರ ಪುತ್ರರಾದ ಮೊಹಮ್ಮದ್ ನಳಪಾಡ್ ಮತ್ತು ಝಾಯಿದ್ ಖಾನ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಆರ್ಯನ್ ಖಾನ್ ಮಧ್ಯದ ಬೆರಳನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜೊತೆಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಇಬ್ಬರು ಶಾಸಕರ ಪುತ್ರರು ಆರ್ಯನ್ ಖಾನ್ ದುರ್ವರ್ತನೆ ತೋರುತ್ತಿರುವಾಗ ನಗುತ್ತಾ ನಿಂತಿದ್ದರು. ಸಾರ್ವಜನಿಕ ಜವಾಬ್ದಾರಿ ಉಳ್ಳವರಾಗಿದ್ದರೂ, ಅವರು ಈ ಅಸಭ್ಯ ವರ್ತನೆಯನ್ನು ತಡೆಯಲು ಪ್ರಯತ್ನಿಸಲಿಲ್ಲ ಎಂದು ಆರೋಪಿಸಲಾಗಿದೆ.