ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಮ್ಮನ ಲವ್‌ ಸ್ಟೋರಿಗೆ ಅಣ್ಣ ಬಲಿ; ಎರಡೂವರೆ ವರ್ಷಗಳ ಸೇಡಿಗೆ 30 ವರ್ಷದ ಯುವಕನ ಕೊಲೆ

Bihar Crime: ತಮ್ಮ ಎರಡೂವರೆ ವರ್ಷದ ಹಿಂದೆ ಪ್ರೀತಿಸಿ, ಓಡಿ ಹೋಗಿ ಮದುವೆಯಾದ ಕಾರಣಕ್ಕೆ ಈಗ ಅಣ್ಣ ಬಲಿಯಾಗಿರುವ ಘಟನೆ ಬಿಹಾರದ ಸರನ್‌ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು 30 ವರ್ಷದ ಅಲೋಕ್‌ ಕುಮಾರ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಯುವಕನ ತಂದೆಗೂ ಗಾಯವಾಗಿದೆ.

ತಮ್ಮನ ಮೇಲಿನ ದ್ವೇಷಕ್ಕೆ ಅಣ್ಣನ ಕೊಲೆ

ಅಲೋಕ್‌ ಕುಮಾರ್‌ ಸಿಂಗ್‌ ಮತ್ತು ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Nov 26, 2026 8:27 PM

ಪಾಟ್ನಾ, ನ. 26: ತಮ್ಮ ಎರಡೂವರೆ ವರ್ಷದ ಹಿಂದೆ ಪ್ರೀತಿಸಿ, ಓಡಿ ಹೋಗಿ ಮದುವೆಯಾದ ಕಾರಣಕ್ಕೆ ಈಗ ಅಣ್ಣ ಬಲಿಯಾಗಿದ್ದಾನೆ. ಬಿಹಾರದ ಸರನ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ಯುವಕನನ್ನು 4 ಮಂದಿ ಶಸ್ತ್ರಧಾರಿಗಳು ಮನೆಗೆ ನುಗ್ಗಿ ಹತ್ಯೆ ಮಾಡಿದ್ದಾರೆ (Bihar Crime). ದಾಳಿಯಲ್ಲಿ ಯುವಕ ತಂದೆಗೂ ಗಾಯವಾಗಿದೆ. ಕೆಲವು ವರ್ಷಗಳ ಹಿಂದಿನ ಲವ್‌ಸ್ಟೋರಿಗೆ ಜೀವವೊಂದು ಬಲಿಯಾಗಿರುವ ಈ ಘಟನೆ ನೈನಿ ಗ್ರಾಮದಲ್ಲಿ ಸಂಭವಿಸಿದೆ.

ಮೃತನನ್ನು ಅಲೋಕ್‌ ಕುಮಾರ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಅವರ ತಂದೆ ಜಿತೇಂದ್ರ ಕುಮಾರ್‌ ಸಿಂಗ್‌ಗೂ ಗಂಭೀರ ಗಾಯವಾಗಿದ್ದು, ಅವರು ಛಪ್ರ ಸದಾರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ

ಅಲೋಕ್‌ ಕುಟುಂಬಸ್ಥರ ಪ್ರಕಾರ, ಬುಧವಾರ (ನವೆಂಬರ್‌ 25) ಬೆಳಗ್ಗೆ 11 ಗಂಟೆ ಸುಮಾರಿಗೆ ಅಲೋಕ್‌ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಒಳ ನುಗ್ಗಿದ ನಾಲ್ವರು ಇದ್ದಕ್ಕಿದ್ದಂತೆ ದಾಳಿ ನಡೆಸಿದರು. ತೀರಾ ಸಮೀಪದಲ್ಲೇ ಶೂಟ್‌ ಮಾಡಿದ್ದು, ಅಲೋಕ್‌ ಅಲ್ಲೇ ಕುಸಿದು ಬಿದ್ದರು. ತಡೆಯಲು ಬಂದ ತಂದೆ ಜಿತೇಂದ್ರ ಸಿಂಗ್‌ ಅವರ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿದ್ದು ಅವರು ಗಂಭೀರ ಗಾಯಗೊಂಡಿದ್ದಾರೆ.

ಗುಂಡಿನ ಸದ್ದು ಕೇಳಿ ಕೂಡಲೇ ಧಾವಿಸಿದ ಸ್ಥಳೀಯರು ಅಪ್ಪ-ಮಗ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಷ್ಟರಲ್ಲಾಗಲೇ ಅಲೋಕ್‌ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದರು.

ಸ್ನೂಕರ್‌ ಸ್ಟಿಕ್‌ನಲ್ಲಿ ಹೊಡೆದು ಹೆಡ್‌ಕುಕ್‌ ಹತ್ಯೆ, ಹೆಣ ಸಾಗಿಸುವಾಗ ಸಿಕ್ಕಿಬಿದ್ದ ಹೋಟೆಲ್‌ ಮಾಲಿಕ

ರಕ್ತಸಿಕ್ತ ಲವ್‌ ಸ್ಟೋರಿ

ಈ ದಾಳಿಯ ಹಿಂದೆ ಅಲೋಕ್‌ ಕುಮಾರ್‌ ಸಿಂಗ್‌ನ ಕಿರಿಯ ಸಹೋದರನ ಲವ್‌ ಸ್ಟೋರಿ ಥಳುಕು ಹಾಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಅಲೋಕ್‌ನ ತಮ್ಮ ಅಭಿಷೇಕ್‌ ಕುಮಾರ್‌ ಸುಮಾರು ಎರಡೂವರೆ ವರ್ಷಗಳ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇದಕ್ಕೆ ಯುವತಿಯ ಮನೆಯವರ ವಿರೋಧವಿತ್ತು. ಅದಾಗ್ಯೂ ಅವರಿಬ್ಬರು ಓಡಿ ಹೋಗಿ ಮದುವೆಯಾಗಿದ್ದರು. ಆ ದಂಪತಿಗೆ ಈಗ ಮಗು ಕೂಡ ಇದೆ.

ಈ ಮದುವೆ 2 ಕುಟುಂಬಗಳ ನಡುವೆ ದ್ವೇಷ ಹುಟ್ಟು ಹಾಕಿತು. ಗಲಾಟೆಯಿಂದ ಬೇಸತ್ತು ಅಭಿಷೇಕ್‌ನ ಕುಟುಂಬ ಸದಸ್ಯರು ಬೇರೆ ಊರಿಗೆ ಹೋಗಿ ನೆಲೆಸಿದರು. ಗುಜರಾತ್‌ನಲ್ಲಿ ಉದ್ಯೋಗದಲ್ಲಿರುವ ಜಿತೇಂದ್ರ ಸಿಂಗ್‌ ತಮ್ಮ ಕುಟುಂಬಸ್ಥರೊಂದಿಗೆ ಸುಮಾರು 2 ವರ್ಷಗಳ ಬಳಿಕ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲು ಗ್ರಾಮದಲ್ಲಿರುವ ತಮ್ಮ ಹಿರಿಯರ ಮನೆಗೆ ಆಗಮಿಸಿದ್ದರು. ಅಭಿಷೇಕ್‌ ಉತ್ತರ ಪ್ರದೇಶದ ನೋಯ್ಡಾದಲ್ಲಿ ಕೆಲಸದಲ್ಲಿದ್ದರೆ, ಮೃತ ಅಲೋಕ್‌ ಆಗ್ರಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ರೈಲು ಬೋಗಿ ಒಳಗೆ 54 ವರ್ಷದ ಮಹಿಳೆ ಮೇಲೆ ಅತ್ಯಾಚಾರ, ಭೀಕರ ಹತ್ಯೆ; ಅಪರಾಧಿಯನ್ನು ಪತ್ತೆಹಚ್ಚಲು ನೆರವಾಯ್ತು ಚಿನ್ನದ ಉಂಗುರ

ಪೊಲೀಸ್‌ ತನಿಖೆ ಆರಂಭ

ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡು ಪರಾರಿಯಾದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಮೃತನ ಕುಟುಂಬದವರ ಬಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ. ಆರೋಪಿಗಳು ಪರಾರಿಯಾಗಿರಬಹುದಾದ ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಕೆಲವು ವರ್ಷಗಳ ಹಿಂದಿನ ಸೇಡಿಗೆ ಯುವಕ ಬಲಿಯಾಗಿದ್ದರಿಂದ ಗ್ರಾಮದಲ್ಲಿ ಶೋಕದ ವಾತಾವರಣ ಮನೆ ಮಾಡಿದೆ.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.