ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Murder Case: ಸ್ನೂಕರ್‌ ಸ್ಟಿಕ್‌ನಲ್ಲಿ ಹೊಡೆದು ಹೆಡ್‌ಕುಕ್‌ ಹತ್ಯೆ, ಹೆಣ ಸಾಗಿಸುವಾಗ ಸಿಕ್ಕಿಬಿದ್ದ ಹೋಟೆಲ್‌ ಮಾಲಿಕ

ಕೊಲೆ ಮಾಡಿ, ಕಾರಿನಲ್ಲಿ ಮೃತದೇಹ ಸಾಗಿಸುವ ವೇಳೆ ಹೋಟೆಲ್‌ ಮಾಲೀಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಹಣಕಾಸು ವ್ಯವಹಾರ ಹಾಗೂ ಹಣ ಕದ್ದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸಾಗರ ಟೌನ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ನೂಕರ್‌ ಸ್ಟಿಕ್‌ನಲ್ಲಿ ಬಡಿದು ಹೆಡ್‌ಕುಕ್‌ ಹತ್ಯೆ, ಹೆಣ ಸಾಗಿಸುವಾಗ ಪತ್ತೆ

ಶವ ಸಾಗಿಸುವಾಗ ಸಿಕ್ಕಿಬಿದ್ದ ಆರೋಪಿ -

ಹರೀಶ್‌ ಕೇರ
ಹರೀಶ್‌ ಕೇರ Apr 2, 2026 10:05 PM

ಶಿವಮೊಗ್ಗ, ಏ.02: ಹೆಡ್‌ಕುಕ್‌ ಒಬ್ಬರನ್ನು ಹೋಟೆಲ್‌ (Hotel) ಮಾಲೀಕ ಸ್ನೂಕರ್‌ ಸ್ಟಿಕ್‌ನಲ್ಲಿ ಹಲ್ಲೆ ಮಾಡಿ ಹತ್ಯೆ (Murder case) ಮಾಡಿದ ಪ್ರಕರಣ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರದಲ್ಲಿ (Sagar) ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಬಿಹಾರ ಮೂಲದ ಟಿಂಕು ಶರ್ಮ (28) ಎಂದು ಗುರುತಿಸಲಾಗಿದೆ. ರೂಫ್ ಟಾಪ್ ಕೆಫೆ & ಗೇಮ್ ಜೋನ್‌ ಹೋಟೆಲ್ ಮಾಲೀಕ ಇಮ್ರಾನ್ (34) ಹತ್ಯೆ ಆರೋಪಿಯಾಗಿದ್ದಾನೆ.

ಕೊಲೆ ಮಾಡಿ, ಕಾರಿನಲ್ಲಿ ಮೃತದೇಹ ಸಾಗಿಸುವ ವೇಳೆ ಹೋಟೆಲ್‌ ಮಾಲೀಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಹಣಕಾಸು ವ್ಯವಹಾರ ಹಾಗೂ ಹಣ ಕದ್ದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸಾಗರ ಟೌನ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪಪ್ರಚಾರದಿಂದ ನೊಂದು ಬಿಎಎಂಎಸ್‌ ವಿದ್ಯಾರ್ಥಿನಿ ಆತ್ಮಹತ್ಯೆ

ಚಿತ್ರದುರ್ಗ: ಅಧ್ಯಾಪಕನ ಜೊತೆ ಸಂಬಂಧ ಕಲ್ಪಿಸಿ ಅಪಪ್ರಚಾರ ಹಿನ್ನೆಲೆ ಮನನೊಂದು ಬಿಎಎಂಎಸ್ ವಿದ್ಯಾರ್ಥಿನಿ (BAMS Student) ನೇಣಿಗೆ ಶರಣಾಗಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ (Holalkere) ನಗರದ ಬಸವ ಲೇಔಟ್‌ನಲ್ಲಿ ನಡೆದಿದೆ. ನಿಖಿತಾ (23) ನೇಣಿಗೆ ಶರಣಾಗಿರುವ ವಿದ್ಯಾರ್ಥಿನಿ.

Chikkaballapuara: ಕಂಟೈನರ್‌ಗೆ ಕಾರು ಡಿಕ್ಕಿ, ಟೆಕ್ಕಿ ಸೇರಿ ಇಬ್ಬರು ಸಾವು

ಡೆತ್ ನೋಟ್ ಬರೆದಿಟ್ಟು ನಿಖಿತಾ ನೇಣಿಗೆ ಶರಣಾಗಿದ್ದಾಳೆ. ಅಧ್ಯಾಪಕ ಡಾ.ರಾಜು ಜೊತೆ ಸಂಬಂಧ ಕಲ್ಪಿಸಿ ಅಪಪ್ರಚಾರ ಮಾಡುತ್ತಿದ್ದ ಹಿನ್ನೆಲೆ ಡೆತ್‌ನೋಟ್‌ನಲ್ಲಿ ಡಾ.ರಾಜು, ಪತ್ನಿ ನಿಶಾ ಹಾಗೂ ಕೆಲ ವಿದ್ಯಾರ್ಥಿನಿಯರ ಹೆಸರು ಬರೆದಿಟ್ಟು ನಿಖಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ ಅಧ್ಯಾಪಕ ರಾಜು, ಪತ್ನಿ ನಿಶಾ ಹಾಗೂ ಕೆಲ ವಿದ್ಯಾರ್ಥಿಗಳ ವಿರುದ್ಧ ಕೇಸ್ ದಾಖಲಾಗಿದೆ. ಘಟನೆ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.