ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನೆಯ ಹೊರಗೆ ಸಿಕ್ತು ಪ್ಲಾಸ್ಟಿಕ್ ಚೀಲ, ಕಂಬಳಿಯಲ್ಲಿ ಸುತ್ತಿದ ಅಪರಿಚಿತ ಮಹಿಳೆಯ ಶವ; ಮಾಲೀಕ್‌ ಶಾಕ್‌

Crime News: ಜೈಪುರದ ಮನೆಯೊಂದರ ವರಾಂಡದಲ್ಲಿ ಅಪರಿಚಿತ ಮಹಿಳೆಯೊಬ್ಬಳ ಶವ ಪತ್ತೆಯಾಗಿದ್ದು, ಅದು ಪ್ಲಾಸ್ಟಿಕ್ ಚೀಲ ಮತ್ತು ಬೆಡ್‌ಶೀಟ್‌ನಲ್ಲಿ ಮಡಚಿ ಇಟ್ಟಿರುವ ಸ್ಥಿತಿಯಲ್ಲಿ ಕಂಡುಬಂದಿದೆ. ಯಾರೋ ದುಷ್ಕರ್ಮಿಗಳು ಮಹಿಳೆಯನ್ನು ಕೊಲೆ ಮಾಡಿ ಈ ರೀತಿ ಯಾರದ್ದೋ ಮನೆಯಲ್ಲಿ ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದೆ.

ಸಾಂದರ್ಭಿಕ ಚಿತ್ರ

ಜೈಪುರ: ಮನೆಯ ವರಾಂಡಾದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ ಅಪರಿಚಿತ ಮಹಿಳೆಯ ಶವ ಪತ್ತೆದಾದ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದ (Jaipur) ಶಾಸ್ತ್ರಿ ನಗರ ಪ್ರದೇಶದ ಮನೆಯ ವರಾಂಡಾದಲ್ಲಿ ಬೆಳಕಿಗೆ ಬಂದಿದೆ. ಮೃತದೇಹದ ಮುಖದ (Crime News) ಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದು, ಕೊಲೆಯಿರಬಹುದು ಎಂದು ಶಂಕಿಸಲಾಗಿದೆ

ಪರಶುರಾಮ್ ಪಾರ್ಕ್ ಬಳಿಯ ಸುಭಾಷ್ ಕಾಲೋನಿಯಲ್ಲಿ ಮೂರು ಅಂತಸ್ತಿನ ಕಟ್ಟಡದಲ್ಲಿ ಶವ ಪತ್ತೆಯಾಗಿದೆ. ಮನೆಯ ಮಾಲೀಕರು ಆರಂಭದಲ್ಲಿ ಚೀಲವನ್ನು ಗಮನಿಸಿದರು. ಅದರಲ್ಲಿ ಬಾಡಿಗೆದಾರರ ವಸ್ತುಗಳು ಇರಬಹುದೆಂದು ಭಾವಿಸಿದರು. ಚೀಲ ತೆರೆದಾಗ ಕೆಟ್ಟ ವಾಸನೆ ಬರುತ್ತಿತ್ತು. ಒಳಗೆ ಪರಿಶೀಲಿಸಿದಾಗ ಅದರೊಳಗೆ ಮಹಿಳೆಯ ಶವ ಪತ್ತೆಯಾಗಿತ್ತು. ಆಕೆಯ ಮುಖದ ಮೇಲೆ ಗಾಯದ ಗುರುತುಗಳಿದ್ದವು ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಉತ್ತರ) ಬಜರಂಗ್ ಸಿಂಗ್ ಹೇಳಿದ್ದಾರೆ.

ವಿಚ್ಛೇದಿತ ಪತ್ನಿಗೆ ಮಕ್ಕಳನ್ನು ಒಪ್ಪಿಸಲು ಇಚ್ಛಿಸದ ಪತಿ ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ

ಮನೆಯು ಗುತ್ತಿಗೆದಾರ ದಿವಂಗತ ಸೂರಜ್ ಪ್ರಕಾಶ್ ಸನ್ವಾರಿಯಾ ಎಂಬುವವರಿಗೆ ಸೇರಿತ್ತು. ಅವರ ವಿಧವೆ ಪತ್ನಿ ಮುನ್ನಿ ದೇವಿ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದರೆ, ಮೇಲಿನ ಮಹಡಿಯಲ್ಲಿ ಇಬ್ಬರು ಬಾಡಿಗೆದಾರರು ವಾಸಿಸುತ್ತಿದ್ದಾರೆ.

ದೇಹವನ್ನು ಕಂಬಳಿಯಲ್ಲಿ ಸುತ್ತಿ ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಲಾಗಿತ್ತು. ಹೀಗಾಗಿ, ಇದು ಕೊಳೆತ ವಾಸನೆ ಅಷ್ಟಾಗಿ ಬರದೆ ಇರಲು ಕಾರಣವಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ವಿಧಿವಿಜ್ಞಾನ ತಂಡಗಳು ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಿವೆ. ಶ್ವಾನದಳದ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಸ್ಥಳೀಯ ಯುವಕನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಶವವನ್ನು ಕೆಲವು ಮೀಟರ್‌ಗಳಷ್ಟು ಎಳೆದುಕೊಂಡು ಹೋಗಲಾಗಿದೆ ಎಂದು ಅವರು ಹೇಳಿದರು. ದುಷ್ಕರ್ಮಿಯು ಪಕ್ಕದ ಮನೆಯ ಮುಖ್ಯದ್ವಾರವನ್ನು ತೆರೆದು ಚೀಲವನ್ನು ವರಾಂಡಾದಲ್ಲಿ ಬಿಟ್ಟು ಹೋಗಿರುವಂತೆ ತೋರುತ್ತಿದೆ ಎಂದು ಅವರು ಹೇಳಿದರು.

ಧಾರವಾಡದಲ್ಲಿ ಮರ್ಯಾದಾ ಹತ್ಯೆ

ತಂದೆಯೊಬ್ಬರು ಗರ್ಭಿಣಿ ಮಗಳನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದಿರುವ ಆಘಾತಕಾರಿ ಘಟನೆ ಕರ್ನಾಟಕದ ಧಾರವಾಡದಲ್ಲಿ ನಡೆದಿದೆ. ಬೇರೆ ಜಾತಿಯವನನ್ನು ಮದುವೆಯಾದ ಕಾರಣ ತಂದೆಯು ಮಗಳ ಮೇಲೆ ಕೋಪಗೊಂಡಿದ್ದರು ಎಂದು ಹೇಳಲಾಗಿದೆ. ಹುಬ್ಬಳ್ಳಿಯ ಇನಾಮ್ ವೀರಾಪುರ ಗ್ರಾಮದಲ್ಲಿ ಈ ಭಯಾನಕ ಘಟನೆ ನಡೆದಿದೆ.

ಮಲಗಿದ್ದಾಗ ಆಕಸ್ಮಿಕವಾಗಿ ಮಲ ವಿಸರ್ಜನೆ ಮಾಡಿದ 3 ವರ್ಷದ ಬಾಲಕನ ಹತ್ಯೆ; ತಾಯಿಯ ಗೆಳೆಯನಿಂದಲೇ ಕೃತ್ಯ!

ಭಾನುವಾರ ಸಂಜೆ ತಂದೆ ತನ್ನ ಗರ್ಭಿಣಿ ಮಗಳನ್ನು ಹತ್ಯೆ ಮಾಡಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ಯುವತಿಯ ಕುಟುಂಬವು ತನ್ನ ಜಾತಿಯವರನ್ನು ಮದುವೆಯಾದ ಕಾರಣ ಆಕೆಯ ಮೇಲೆ ಕೋಪಗೊಂಡಿತ್ತು ಎಂದು ತಿಳಿದುಬಂದಿದೆ. ಯುವತಿಯ ತಂದೆ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ಸಂಜೆ 6 ರಿಂದ 6:30 ರ ನಡುವೆ ಈ ಘಟನೆ ನಡೆದಿದೆ. ಹುಡುಗಿಯ ತಂದೆ ತನ್ನ ಮಗಳು ಮಾನ್ಯ ಪಾಟೀಲ್ ಮತ್ತು ಆಕೆಯ ಅತ್ತೆಯ ಮೇಲೆ ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ. ಮಾನ್ಯ ಪಾಟೀಲ್ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಲಾಗಿದೆ. ಅತ್ತೆ ಮಾವಂದಿರಾದ ರೇಣುಕಮ್ಮ ಮತ್ತು ಸುಭಾಷ್ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಅವರ ಮೇಲೂ ತೀವ್ರ ಹಲ್ಲೆ ನಡೆಸಲಾಗಿದೆ. ಗಂಭೀರ ಗಾಯಗಳೊಂದಿಗೆ ಮಾನ್ಯ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ರಾತ್ರಿ 9:30 ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.