ವಿಚ್ಛೇದಿತ ಪತ್ನಿಗೆ ಮಕ್ಕಳನ್ನು ಒಪ್ಪಿಸಲು ಇಚ್ಛಿಸದ ಪತಿ ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ
ಇಬ್ಬರು ಮಕ್ಕಳಿಗೆ ಹಾಗೂ ತನ್ನ ತಾಯಿಗೆ ವಿಷವುಣಿಸಿ ವ್ಯಕ್ತಿಯೊಬ್ಬ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದಲ್ಲಿ ನಡೆದಿದೆ. ಕಲಾಧರನ್ ಎಂಬಾತ ತನ್ನ ಇಬ್ಬರು ಮಕ್ಕಳು ಹಾಗೂ ತಾಯಿಗೆ ಹಾಲಿಗೆ ಕೀಟನಾಶಕ ಬೆರೆಸಿ ಕುಡಿಸಿದ್ದಾನೆ. ಬಳಿಕ ತಾನು ಅದನ್ನು ಕುಡಿದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
(ಸಂಗ್ರಹ ಚಿತ್ರ) -
ತಿರುವನಂತಪುರಂ, ಡಿ. 23: ಕಲಹಗಳು ಕೆಲವೊಮ್ಮೆ ಸಂಪೂರ್ಣ ಕುಟುಂಬವನ್ನೇ ಸರ್ವನಾಶ ಮಾಡಿ ಬಿಡುತ್ತವೆ. ಇಂತಹ ಘಟನೆಯೊಂದು ಇದೀಗ ಕೇರಳದಲ್ಲಿ (Kerala crime) ನಡೆದಿದೆ. ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿಗೆ ಮಕ್ಕಳನ್ನು (custody case) ಒಪ್ಪಿಸಬೇಕಾಗುತ್ತದೆ ಎಂಬ ಚಿಂತೆಯಲ್ಲಿ ಭೀಕರ ಕೃತ್ಯ ಎಸಗಿದ್ದಾನೆ. ಮಕ್ಕಳು ಮತ್ತು ತನ್ನ ತಾಯಿಗೆ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಣ್ಣೂರು (Kannur) ಜಿಲ್ಲೆಯ ಪಯ್ಯನ್ನೂರು ಗ್ರಾಮದ ರಾಮಂತಳಿಯಲ್ಲಿ ಸೋಮವಾರ ರಾತ್ರಿ ಕಲಾಧರನ್ ಎಂಬಾತ ಇಬ್ಬರು ಮಕ್ಕಳು ಹಾಗೂ ತಾಯಿಗೆ ಹಾಲಿಗೆ ಕೀಟನಾಶಕ ಬೆರೆಸಿ ಕುಡಿಸಿದ್ದಾನೆ. ಬಳಿಕ ತಾನು ಅದನ್ನು ಕುಡಿದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಯ್ಯನ್ನೂರು ಗ್ರಾಮದ ರಾಮಂತಳಿಯಲ್ಲಿ ಸೋಮವಾರ ರಾತ್ರಿ ಉಷಾ ಕೆಟಿ (56), ಅವರ ಮಗ ಕಲಾಧರನ್ ಕೆಟಿ (36) ಮತ್ತು ಅವರ ಮಕ್ಕಳಾದ ಹಿಮ (6) ಮತ್ತು ಕಣ್ಣನ್ (2) ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರೆ.
ಸ್ಕ್ಯಾನಿಂಗ್ ರಿಪೋರ್ಟ್‌ನಲ್ಲಿ 'ಗೆಡ್ಡೆ' ಎಂದಿದೆಯೇ? ಆತಂಕ ಬೇಡ; ಎಲ್ಲದಕ್ಕೂ ಶಸ್ತ್ರಚಿಕಿತ್ಸೆ ಬೇಕಿಲ್ಲ!
ಮಕ್ಕಳಿಗೆ ನೀಡಿದ ಹಾಲಿನಲ್ಲಿ ಕೀಟನಾಶಕವಿರುವುದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದು, ಕಲಾಧರನ್ ತನ್ನ ತಾಯಿ ಮತ್ತು ಮಕ್ಕಳಿಗೆ ಕೀಟನಾಶಕ ಬೆರೆಸಿದ ಹಾಲು ಕುಡಿಸಿ ಕೊಂದು ಬಳಿಕ ತಾನೂ ಅದನ್ನು ಕುಡಿದು ನೇಣು ಬಿಗಿದುಕೊಂಡಿರಬಹುದು ಎಂದು ತಿಳಿಸಿದ್ದಾರೆ.
ಮನೆಯ ಕೊಠಡಿಯಲ್ಲಿದ್ದ ಹಾಲು ಮತ್ತು ಕೀಟನಾಶಕವನ್ನು ಹೊಂದಿದ್ದ ಬಾಟಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಕ್ಕಳಿಗೆ ವಿಷ ನೀಡಿದ ಬಳಿಕ ಕಲಾಧರನ್ ಮತ್ತು ಉಷಾ ಕೂಡ ವಿಷ ಸೇವಿಸಿ ನಂತರ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಶವಗಳ ಮರಣೋತ್ತರ ಪರೀಕ್ಷೆಗಳು ಪೂರ್ಣಗೊಂಡಿದ್ದು, ಇಬ್ಬರು ಮಕ್ಕಳಿಗೆ ವಿಷ ನೀಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದ ಜ್ಯುವೆಲ್ಲರಿ ಶಾಪ್‌ನಲ್ಲಿ ಕಳ್ಳರ ಕರಾಮತ್ತು; 3 ಕೋಟಿ ಮೌಲ್ಯದ 140 ಕೆ.ಜಿ ಬೆಳ್ಳಿ ಆಭರಣ ಕಳವು
ಕಲಾಧರನ್ ಮತ್ತು ಅವರ ಪತ್ನಿ ನಯನತಾರಾ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ನಯನತಾರಾ ತಮ್ಮ ಮಕ್ಕಳ ಪಾಲನೆಗಾಗಿ ಪೊಲೀಸರನ್ನು ಸಂಪರ್ಕಿಸಿದ ನಂತರ ನ್ಯಾಯಾಲಯವು ಕಲಾಧರನ್ ಬಳಿ ಮಕ್ಕಳನ್ನು ಹಸ್ತಾಂತರಿಸುವಂತೆ ಸೂಚಿಸಿತು. ಈ ಹಿನ್ನಲೆಯಲ್ಲಿ ಪೊಲೀಸರು ಭಾನುವಾರ ರಾತ್ರಿ ಅವರನ್ನು ಸಂಪರ್ಕಿಸಿದ್ದರು. ಘಟನಾ ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ. ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಮಂಗಳವಾರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನನ್ನು ಕೊಂದ ತಾಯಿಯ ಲಿವ್-ಇನ್ ಸಂಗಾತಿ
ಮೂರು ವರ್ಷದ ಬಾಲಕ ಮಲಗಿದ್ದಾಗ ಆಕಸ್ಮಿಕವಾಗಿ ಬಟ್ಟೆಯ ಮೇಲೆ ಮಲ ವಿಸರ್ಜನೆ ಮಾಡಿದ್ದಕ್ಕೆ ತಾಯಿಯ ಲಿವ್-ಇನ್ ಸಂಗಾತಿಯೇ ಆತನನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದಿದೆ. 44 ವರ್ಷದ ಮೌಲಾಲಿ ಅಲಿಯಾಸ್ ಅಕ್ಬರ್ ರಜಾಕ್ ಕೊಲೆ ಮಾಡಿದಾತ. ಡಿಸೆಂಬರ್ 11ರ ರಾತ್ರಿ ಮದ್ಯ ಸೇವಿಸಿದ್ದ ಮೌಲಾಲಿ ಅಲಿಯಾಸ್ ಅಕ್ಬರ್ ರಜಾಕ್ ತನ್ನ ಬಳಿ ಮಲಗಿದ್ದ ಬಾಲಕ ಫರ್ಹಾನ್‌ನನ್ನು ಕತ್ತು ಹಿಸುಕಿ ಕೊಂದಿದ್ದಾನೆ.
ಬಾಲಕನತಾಯಿ ಶಹನಾಜ್ ಶೇಖ್ ಮನೆಗೆ ಹಿಂದಿರುಗಿದಾಗ ಫರ್ಹಾನ್ ಬಿದ್ದು ಗಾಯಗೊಂಡಿದ್ದಾನೆ ಎಂದು ಅಕ್ಬರ್ ರಜಾಕ್ ಹೇಳಿದ್ದ. ಅನಂತರ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಿದರು. ಆದರೆ ಅಲ್ಲಿ ಮಗು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕನನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂಬುದು ದೃಢಪಟ್ಟಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿ ಅಕ್ಬರ್ ರಜಾಕ್ ನನ್ನು ಬಂಧಿಸಲಾಗಿದೆ.