ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ ಮೇಲೆ ಬಸ್ ಪಲ್ಟಿ; 8 ಮಂದಿ ಸಾವು
ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಚರಂಡಿಗೆ ಉರುಳಿದ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಬಸ್ನಲ್ಲಿ ವೃದ್ಧರು, ಮಕ್ಕಳು ಸೇರಿದಂತೆ ಒಟ್ಟು 25 ಪ್ರಯಾಣಿಕರಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. ಭೋಪಾಲ್ನಿಂದ ರಾಜಸ್ಥಾನದ ಖಾತು ಶ್ಯಾಮ್ ದೇವಾಲಯಕ್ಕೆ ಬಸ್ ಭಕ್ತರನ್ನು ಕರೆದೊಯ್ಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಸಂಗ್ರಹ ಚಿತ್ರ -
ರಾಜಸ್ಥಾನ: ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ (Delhi- Mumbai Expressway) ಸಾಗುತ್ತಿದ್ದ ಬಸ್ಸೊಂದು (Bus accident) ಚರಂಡಿಗೆ ಉರುಳಿದ ಘಟನೆ ರಾಜಸ್ಥಾನದ ಕೋಟಾದಲ್ಲಿ (Rajasthan, Kota) ನಡೆದಿದೆ. ಇದರಿಂದ 8 ಮಂದಿ ಸಾವನ್ನಪ್ಪಿದ್ದಾರೆ. ಭೋಪಾಲ್ನಿಂದ (Bhopal) ರಾಜಸ್ಥಾನದ ಖಾತು ಶ್ಯಾಮ್ ದೇವಾಲಯಕ್ಕೆ ( Khatu Shyam Ji temple) ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಬಸ್ನಲ್ಲಿ ವೃದ್ಧರು, ಮಕ್ಕಳು ಸೇರಿದಂತೆ ಒಟ್ಟು 25 ಪ್ರಯಾಣಿಕರಿದ್ದರು. ಅಪಘಾತ ಸಂಭವಿಸಿದ ತಕ್ಷಣವೇ ಜಿಲ್ಲಾಡಳಿತ ಮತ್ತು ಸ್ಥಳೀಯರ ಸಹಯೋಗದೊಂದಿಗೆ ರಕ್ಷಣಾ ಕಾರ್ಯಾಚರಯನ್ನು ಪ್ರಾರಂಭಿಸಲಾಗಿದೆ. ಚರಂಡಿಗೆ ಬಿದ್ದಿದ್ದ ಬಸ್ಸನ್ನು ಹೊರತೆಗೆಯಲು ಕ್ರೇನ್ ಅನ್ನು ಬಳಸಲಾಯಿತು.
ಭೋಪಾಲ್ನಿಂದ ರಾಜಸ್ಥಾನದ ಖಾತು ಶ್ಯಾಮ್ ದೇವಾಲಯಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್ ಕೋಟಾ ಜಿಲ್ಲೆಯ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ ಮೇಲೆ ಪಲ್ಟಿಯಾಗಿ ಚರಂಡಿಗೆ ಉರುಳಿ ಬಿದ್ದಿದೆ. ಬಸ್ ನಲ್ಲಿದ್ದ ಸುಮಾರು ಎಂಟು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
6ನೇ ಮಹಡಿಯಿಂದ ಹಾಲುಗಲ್ಲದ ಕಂದಮ್ಮನನ್ನು ಎಸೆದ 10 ವರ್ಷದ ಬಾಲಕಿ: ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ
ಈ ಕುರಿತು ಮಾಹಿತಿ ನೀಡಿದ ಕೋಟಾ ಜಿಲ್ಲಾಧಿಕಾರಿ ಪಿಯೂಷ್ ಸಮರಿಯಾ, ಪ್ರಾಥಮಿಕ ತನಿಖೆ ಮಾಹಿತಿ ಪ್ರಕಾರ ಚಾಲಕನಿಗೆ ಬಸ್ನ ಮೇಲಿನ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ 17 ಮಂದಿಯನ್ನು ಎನ್ಎಚ್ಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಎಂಟು ಮಂದಿ ಸವಣ್ಣಪ್ಪದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಎಂಬಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.
ಆಸ್ಪತ್ರೆಗೆ ಕರೆತರುವಾಗಲೇ ಏಳು ಮಂದಿ ಸಾವನ್ನಪ್ಪಿದ್ದರು. ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸಮರಿಯಾ ಅವರು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ, ಗಾಯಗೊಂಡವರನ್ನು ಭೇಟಿಯಾಗಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.
ಕೌಟುಂಬಿಕ ಕಲಹ; ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪತಿ!
ಈ ಘಟನೆ ಸಿಮ್ಲಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಸ್ಪ್ರೆಸ್ವೇಯಲ್ಲಿ 384ನೇ ಸಂಖ್ಯೆಯ ಕಂಬದ ಬಳಿ ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಸಂಭವಿಸಿದೆ. ಚರಂಡಿಯೊಳಗೆ ಶೇಖರಣೆಯಾಗಿದ್ದ ಹೂಳು ಮತ್ತು ನೀರು ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯುಂಟು ಮಾಡಿತ್ತು. ಹಾನಿಗೊಳಗಾದ ವಾಹನವನ್ನು ಹೊರತೆಗೆಯಲು, ಅದರೊಳಗೆ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಲು ಕ್ರೇನ್ಗಳನ್ನು ಬಳಸಲಾಯಿತು.