ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Acid Attack: ಮಾಜಿ ಪತ್ನಿ, 4 ವರ್ಷದ ಮಗುವಿನ ಮೇಲೂ ಆ್ಯಸಿಡ್ ಎರಚಿದ ಪಾತಕಿ

ಕಳೆದ ಹಲವು ವರ್ಷಗಳಿಂದ ಪತಿ ಸುಹೇಲ್ ಹಾಗೂ ಪತ್ನಿ ತಾಸೀನಾ ನಡುವೆ ಜಗಳ ನಡೆಯುತ್ತಿತ್ತು. ಪದೇ ಪದೇ ಗಲಾಟೆ ಹಿನ್ನೆಲೆಯಲ್ಲಿ ಪತಿ ಪತ್ನಿ ಇಬ್ಬರೂ ಮುಸ್ಲಿಂ ಧಾರ್ಮಿಕ ಪದ್ಧತಿಯಂತೆ ವಿಚ್ಛೇದನ ಪಡೆದಿದ್ದರು. ಆಗಾಗ ಗಲಾಟೆ ಮಾಡುತ್ತಿರುವ ಆರೋಪದ ಮೇಲೆ ಸುಹೇಲ್ ವಿರುದ್ಧ ಮಾಜಿ ಪತ್ನಿ ತಾಸೀನಾ ಕೇಸ್ ದಾಖಲು ಮಾಡಿದ್ದಳು.

ಮಾಜಿ ಪತ್ನಿ, 4 ವರ್ಷದ ಮಗುವಿನ ಮೇಲೂ ಆ್ಯಸಿಡ್ ಎರಚಿದ ಪಾತಕಿ

ಆರೋಪಿ ಸುಹೇಲ್ ಬಾಷಾ -

ಹರೀಶ್‌ ಕೇರ
ಹರೀಶ್‌ ಕೇರ Mar 20, 2026 9:59 AM

ಚಿತ್ರದುರ್ಗ, ಮಾ.20: ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ (family members) ಮೇಲೆ ಆ್ಯಸಿಡ್ ದಾಳಿ (Acid Attack) ನಡೆಸಿದ್ದಾನೆ. ಸಾಲದ್ದಕ್ಕೆ 4 ವರ್ಷದ ಮಗುವಿನ ಮೇಲೂ ಆ್ಯಸಿಡ್ ದಾಳಿ ನಡೆಸಿದ್ದಾನೆ. ಇಂಥದ್ದೊಂದು ಭೀಕರ ಘಟನೆ ಚಿತ್ರದುರ್ಗ (Chitradurga) ನಗರದ ಮಾಳಪ್ಪನಹಟ್ಟಿಯ ವಿದ್ಯಾನಗರದಲ್ಲಿ ನಡೆದಿದೆ. ಚಿತ್ರದುರ್ಗ ನಗರದ ಸುಹೇಲ್ ಬಾಷಾ ಎಂಬಾತನೇ ಆ್ಯಸಿಡ್ ದಾಳಿ ಮಾಡಿದ ವ್ಯಕ್ತಿ. ಮಾಜಿ ಪತ್ನಿ ತಾಸೀನಾ ಬಾನು ಹಾಗೂ ಆಕೆಯ ಕುಟುಂಬಸ್ಥರು ಸೇರಿ ಒಟ್ಟೂ 5 ಮಂದಿ ಮೇಲೆ ಆ್ಯಸಿಡ್ ಎರಚಿದ್ದಾನೆ.

ಹಳೆಯ ವೈಷಮ್ಯ ಹಿನ್ನೆಲೆಯಲ್ಲಿ ಸುಹೇಲ್‌ ಬಾಷಾ ತನ್ನ ಹಿಂದಿನ ಪತ್ನಿ ಹಾಗೂ ಕುಟುಂಬಸ್ಥರ ಮೇಲೆ‌ ಆ್ಯಸಿಡ್ ದಾಳಿ ನಡೆಸಿದ್ದಾನೆ. 4 ವರ್ಷದ ಮಗು ಸೇರಿ ಐವರ ಮೇಲೆ ಆ್ಯಸಿಡ್ ಹಾಕಿ ಮಾಜಿ ಪತಿ ಪರಾರಿಯಾಗಿದ್ದಾನೆ. ರಂಜಾನ್ ಹಬ್ಬಕ್ಕೆ ಸಹೋದರಿ ಮನೆಗೆ ಬಂದಿದ್ದ ಮಾಜಿ ಪತ್ನಿ ತಾಸೀನಾ ಬಾನು, ಆಕೆಯ ಕುಟುಂಬಸ್ಥರಾದ ನಗ್ಮಾ, ಇಕ್ರಾ ಫಾತೀಮಾ ಹಾಗೂ 4 ವರ್ಷದ ಮಗು ನೇಹಾ ಸೇರಿ ಒಟ್ಟು ಐವರ ಮೇಲೆ ಆ್ಯಸಿಡ್ ದಾಳಿ ಮಾಡಿ, ಪರಾರಿಯಾಗಿದ್ದಾನೆ‌.

ಜಗಳ ಹಿನ್ನೆಲೆ ವಿಚ್ಛೇದನ ಪಡೆದಿದ್ದ ದಂಪತಿ

ಕಳೆದ ಹಲವು ವರ್ಷಗಳಿಂದ ಪತಿ ಸುಹೇಲ್ ಹಾಗೂ ಪತ್ನಿ ತಾಸೀನಾ ನಡುವೆ ಜಗಳ ನಡೆಯುತ್ತಿತ್ತು. ಪದೇ ಪದೇ ಗಲಾಟೆ ಹಿನ್ನೆಲೆಯಲ್ಲಿ ಪತಿ ಪತ್ನಿ ಇಬ್ಬರೂ ಮುಸ್ಲಿಂ ಧಾರ್ಮಿಕ ಪದ್ಧತಿಯಂತೆ ವಿಚ್ಛೇದನ ಪಡೆದಿದ್ದರು. ಆಗಾಗ ಗಲಾಟೆ ಮಾಡುತ್ತಿರುವ ಆರೋಪದ ಮೇಲೆ ಸುಹೇಲ್ ವಿರುದ್ಧ ಮಾಜಿ ಪತ್ನಿ ತಾಸೀನಾ ಕೇಸ್ ದಾಖಲು ಮಾಡಿದ್ದಳು.

ದೇವರ ಸೇವಕ, ದೇವರೊಂದಿಗೆ ಸೇರಿದರು: ಇಸ್ರೇಲ್‌ ದಾಳಿಯಲ್ಲಿ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆ ದೃಢೀಕರಿಸಿದ ಇರಾನ್‌

ಆ್ಯಸಿಡ್ ದಾಳಿ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ ಬಂಡಾರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮಾಧ್ಯಮಗಳಿಗೆ ಮಾತನಾಡಿದ ಅವರು, ಪತ್ನಿ ತಹಸೀನ್ ಬಾನು, ಮೇಲೆ ಪತಿ ಮಹಮದ್ ಸುಹೇಲ್ ಆ್ಯಸಿಡ್ ಹಾಕಿದ್ದಾನೆ. ಈ ವೇಳೆ ನಾಲ್ಕು ಜನರ ಮೇಲೆ ಆ್ಯಸಿಡ್ ಬಿದ್ದಿದೆ. ಆದರೆ ಯಾರಿಗೂ ಕೂಡ ಅಪಾಯ ಇಲ್ಲ ಎಂದಿದ್ದಾರೆ. ಜೊತೆಗೆ ಮಚ್ಚಿನಿಂದ‌ ಪತ್ನಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಸದ್ಯ ಗಾಯಾಳುಗಳನ್ನು ದಾವಣಗೆರೆಯ ಎಸ್‌ಎಸ್‌ ಆಸ್ಪತ್ರೆಗೆ ಚಿಕಿತ್ಸೆಗೆ ಕಳಿಸಲಾಗಿದೆ. ಆರೋಪಿ ಸುಹೇಲ್ ಬಂಧನಕ್ಕೆ ಈಗಾಗಲೇ ತಂಡ ರಚಿಸಲಾಗಿದೆ ಅಂತ ಮಾಹಿತಿ ನೀಡಿದರು.