Self Harming: ಶಿಕ್ಷಕನಿಂದ ಲೈಂಗಿಕ ಕಿರುಕುಳ: ಮನನೊಂದು ಆತ್ಮಹತ್ಯೆಗೆ ಶರಣಾದ 14 ವರ್ಷದ ವಿದ್ಯಾರ್ಥಿನಿ: ಡೆತ್ ನೋಟ್‌ನಲ್ಲಿ ಏನಿದೆ?
14 ವರ್ಷದ ವಿದ್ಯಾರ್ಥಿನಿಯೊಬ್ಬಳು ಶಿಕ್ಷಕನ ಲೈಂಗಿಕ ಕಿರುಕುಳದಿಂದ ಬೇಸೆತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಬಾಲಕಿ 4 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದು, ಶಿಕ್ಷಕನ ಲೈಂಗಿಕ ಕಿರುಕುಳದ ಕರ್ಮಕಾಂಡವನ್ನು ವಿವರಿಸಿದ್ದಾಳೆ. ಆರೋಪಿಯನ್ನು ಚೆತ್ರಿ ಎಂದು ಗುರುತಿಸಲಾಗಿದೆ.

ಸಾಂದರ್ಭಿಕ ಚಿತ್ರ.

ಗುವಾಹಟಿ: ಶಿಕ್ಷಕನ ಲೈಂಗಿಕ ಕಿರುಕುಳದಿಂದ ಬೇಸತ್ತು 2 ಬಾರಿ ಆತ್ಮಹತ್ಯೆಗೆ (Self Harming) ಪ್ರಯತ್ನಿಸಿದ್ದ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ 14 ವರ್ಷದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಜೂನ್‌ನಲ್ಲಿ ಮೊದಲ ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಆಕೆಗೆ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಚೇತರಿಸಿಕೊಂಡಿದ್ದಳು. ಜುಲೈಯಲ್ಲಿ ಮತ್ತೊಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದು, 6ರಂದು ಅಸುನೀಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಬಾಲಕಿ 4 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದು, ಶಿಕ್ಷಕನ ಲೈಂಗಿಕ ಕಿರುಕುಳದ ಕರ್ಮಕಾಂಡವನ್ನು ವಿವರಿಸಿದ್ದಾಳೆ (Crime News). ಆರೋಪಿ ಶಿಕ್ಷಕನನ್ನು ಚೆತ್ರಿ ಎಂದು ಗುರುತಿಸಲಾಗಿದೆ.
ಈ ಘಟನೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಬಾಲಕಿಗೆ ನ್ಯಾಯ ಒದಗಿಲು ಹಲವು ಸಂಘಟನೆಗಳು ತೀವ್ರ ಹೋರಾಟ ನಡೆಸುತ್ತಿವೆ. ಪೊಲೀಸರ ಪ್ರಕಾರ, ಈ ವಿದ್ಯಾರ್ಥಿನಿ ಈ ವರ್ಷ ಮೇಯಲ್ಲಿ ಮೊದಲ ಬಾರಿ ಶಿಕ್ಷಕನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಳು. ಮೇ 26ರಂದು ಕ್ಲಾಸ್ ಮುಗಿದ ಬಳಿಕ ಶಾಲೆಯ ಅಡುಗೆ ಮನೆಯಲ್ಲಿ ಶಿಕ್ಷಕ ಚೆತ್ರಿ ನಿದ್ರೆ ಮಾತ್ರೆಯ ಮಿಶ್ರಿತ ಸಾಫ್ಟ್ ಡ್ರಿಂಕ್ ನೀಡಿದ್ದ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Murder Case: ಸಲಿಂಗ ಪ್ರೇಮ; ಹದಿಹರೆಯದ ಬಾಲಕನಿಗೆ ಪಾನೀಯದಲ್ಲಿ ವಿಷ ಬೆರೆಸಿ ಕೊಂದ ಯುವಕ!
ಜೂ. 3ರಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಕಾರಣ ಆಕೆಯ ಆರೋಗ್ಯದಲ್ಲಿ ಸುಧಾರಣೆ ಕಂಡಿತ್ತು. ನಂತರ ಪೋಷಕರು ಪೋಕ್ಸೋ ಕಾಯ್ದೆಯಡಿಯಲ್ಲಿ ಧೋಲ್ಲಾ ಪೊಲೀಸ್ ಠಾಣೆಗೆ ಎಫ್‌ಐಆರ್ ದಾಖಲಿಸಿದರು. ಕುಟುಂಬಸ್ಥರ ದೂರನ್ನಾಧರಿಸಿ ಪೋಲಿಸರು ಜೂ. 11ರಂದು ಆರೋಪಿಯನ್ನು ಬಂಧಿಸಿದರು.
ಜುಲೈ 6ರಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಸಹೋದರ ಶಿಕ್ಷಕ ಚೆತ್ರಿ ವಿರುದ್ಧ ಆತ್ಮಹತ್ಯೆಗೆ ಪ್ರೇರೇಪಣೆ ಆರೋಪದಡಿ ಮತ್ತೊಂದು ಎಫ್‌ಐಆರ್ ದಾಖಲಿಸಿದ್ದಾನೆ. ಸಾಮಾಜಿಕ ಸಂಘಟನೆಗಳು ಶಿಕ್ಷಕನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ.