ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಸಲಿಂಗ ಪ್ರೇಮ; ಹದಿಹರೆಯದ ಬಾಲಕನಿಗೆ ಪಾನೀಯದಲ್ಲಿ ವಿಷ ಬೆರೆಸಿ ಕೊಂದ ಯುವಕ!

ಹದಿಹರೆಯದ ಸಲಿಂಗ ಪ್ರೇಮಿಗಳ ಕಥೆ ಒಂದು ದುರಂತದಲ್ಲಿ ಅಂತ್ಯ ಕಂಡಿದೆ. 19 ವರ್ಷದ ಯುವಕನನ್ನು ತನ್ನ 16 ವರ್ಷದ ಸಂಗಾತಿಯ ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ಅಪ್ರಾಪ್ತ ವಯಸ್ಕನ ತಂದೆ ದೂರು ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಹದಿಹರೆಯದ ಬಾಲಕನಿಗೆ ಪಾನೀಯದಲ್ಲಿ ವಿಷ ಬೆರೆಸಿ ಕೊಂದ ಯುವಕ!

Profile Vishakha Bhat Jul 6, 2025 3:38 PM

ಮುಂಬೈ: ಹದಿಹರೆಯದ ಸಲಿಂಗ ಪ್ರೇಮಿಗಳ ಕಥೆ ಒಂದು ದುರಂತದಲ್ಲಿ ಅಂತ್ಯ ಕಂಡಿದೆ. 19 ವರ್ಷದ ಯುವಕನನ್ನು ತನ್ನ 16 ವರ್ಷದ ಸಂಗಾತಿಯ ಕೊಲೆ (Murder Case) ಆರೋಪದ ಮೇಲೆ ಬಂಧಿಸಲಾಗಿದೆ. ಅಪ್ರಾಪ್ತ ವಯಸ್ಕನ ತಂದೆ ದೂರು ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. 19 ವರ್ಷದ ಯುವಕ ತನ್ನ ಮಗನಿಗೆ ತಂಪು ಪಾನೀಯದಲ್ಲಿ ವಿಷ ಬೆರೆಸಿ ಕುಡಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಪೊಲೀಸರ ಪ್ರಕಾರ, 16 ವರ್ಷದ ಬಾಲಕ ಜೂನ್ 29 ರಂದು ಮನೆಯಿಂದ ವಾಕಿಂಗ್‌ಗೆ ಹೋಗಿದ್ದಾನೆ. ಆದರೆ ಮನೆಗೆ ಹಿಂದಿರುಗಿರಲಿಲ್ಲ. ಹುಡುಕಾಟದ ನಂತರ ಆತ ತನ್ನ ಗೆಳೆಯನ ಮನೆಗೆ ಹೋಗಿದ್ದಾನೆ ಎಂದು ತಿಳಿದು ಬಂದಿದೆ.

ಕುಟುಂಬಸ್ಥರು ಆತನ ಮನೆಗೆ ತಲುಪಿದಾಗ ಅವರ ಮಗ ಹಾಸಿಗೆಯಲ್ಲಿ ಅಸ್ವಸ್ಥನಾಗಿರುವುದು ಕಂಡು ಬಂದಿದೆ. ಆರೋಪಿ ಹತ್ತಿರದಲ್ಲಿ ಕುಳಿತುಕೊಂಡಿದ್ದ ಎಂದು ಮೃತನ ತಂದೆ ಹೇಳಿದ್ದಾರೆ. ನಂತರ ವೈದ್ಯರು ಅಪ್ರಾಪ್ತ ವಯಸ್ಕ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದರು. ಪ್ರಾಥಮಿಕ ತನಿಖೆಯಲ್ಲಿ ಆರೋಪಿಯು ಮೃತನಿಗೆ ತಂಪು ಪಾನೀಯಕ್ಕೆ ವಿಷ ಬೆರೆಸಿರುವುದು ತಿಳಿದು ಬಂದಿದೆ. ಪಾನೀಯದಲ್ಲಿ ಸ್ಪೂಲ್ ಬೆರೆಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ, ಆದರೆ ದೃಢೀಕರಣವು ವಿವರವಾದ ವಿಧಿವಿಜ್ಞಾನ ವರದಿಗಾಗಿ ಕಾಯುತ್ತಿದೆ.

ಆರೋಪಿಯು ನಾಲ್ಕು ತಿಂಗಳ ಹಿಂದೆ ತನ್ನ ಕುಟುಂಬಕ್ಕೆ ತಿಳಿಸದೆ ನಾಗ್ಪುರಕ್ಕೆ ತೆರಳಿದ್ದ. ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇದಕ್ಕೆ ಪೋಷಕರ ವಿರೋಧವಿತ್ತು. ಆತನನ್ನು ಕುಟುಂಬಸ್ಥರು ಮನೆಗೆ ಕರೆದುಕೊಂಡು ಹೋಗಿದ್ದರು. ಇದೇ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Triple Murder Case: ಕೊಲೆಯಾದ ರೌಡಿಶೀಟರ್‌ ಪತ್ನಿಯ ಶಪಥ ಈಡೇರಿಸಲು ತ್ರಿವಳಿ ಕೊಲೆ! 10 ಆರೋಪಿಗಳ ಸೆರೆ

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಯುವಕನೊಬ್ಬ ಬಾಲಕನನ್ನು ಕೊಲೆ ಮಾಡಿ, ಪೆಟ್ರೋಲ್ ಸುರಿದು ಮೃತದೇಹವನ್ನು ಸುಟ್ಟು ಹಾಕಿ ಬಳಿಕ ಉಪ್ಪು ಸಿಂಪಡಿಸಿ ಹೊಲದಲ್ಲಿ ಹೂತಿರುವ ಆಘಾತಕಾರಿ ಘಟನೆ ನಡೆದಿದೆ. ಘಟನೆ ಸಂಬಂಧ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಯುವಕ ನೀಡಿದ ಮಾಹಿತಿ ಮೇರೆಗೆ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಕೊಲೆಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿಯ ಪ್ರಕಾರ, ಇಗ್ಲಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರ 11 ವರ್ಷದ ಬಾಲಕ ಜೂನ್ 17 ರಂದು ನಾಪತ್ತೆಯಾಗಿದ್ದ ಬಗ್ಗೆ ಕುಟುಂಬಸ್ಥರು ದೂರು ದಾಖಲಿಸಿದ್ದರು. ನಂತರ ಪೊಲೀಸರು ಕೊಲೆ ಕೇಸ್‌ ಭೇದಿಸಿದ್ದಾರೆ.