ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿಎಂ ಸುವೇಂದು ಅಧಿಕಾರಿ ಮೇಲೆ ನಿಗಾ, ಸಿಜೆಪಿ ಪ್ರತಿಭಟನೆಯಲ್ಲಿ ಸೇರಿಕೊಳ್ಳಲು ಪ್ರಯತ್ನ; ತನಿಖೆಯಲ್ಲಿ ಬಹಿರಂಗವಾಯಿತು ಪಾಕಿಸ್ತಾನದ ಭಯೋತ್ಪಾದಕರ ತಂತ್ರ

ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಸೇರಿಕೊಳ್ಳಲು ಪಾಕಿಸ್ತಾನದ ಭಯೋತ್ಪಾದಕರು ಸಂಚು ರೂಪಿಸಿದ್ದರು. ಇದರೊಂದಿಗೆ ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಮೇಲೆ ದಾಳಿಗೆ ನಿರಂತರ ನಿಗಾ ಇರಿಸಿದ್ದರು ಎಂದು ಗುಪ್ತಚರ ಇಲಾಖೆ ಮಾಹಿತಿ ತಿಳಿಸಿದೆ.

ಸಂಗ್ರಹ ಚಿತ್ರ

ನವದೆಹಲಿ: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು (CM Suvendu Adhikari) ಅಧಿಕಾರಿ ಅವರ ಮೇಲೆ ದಾಳಿಗೆ ಭಯೋತ್ಪಾದಕರು ಸಂಚು ರೂಪಿಸಿದ್ದರು. ಅವರ ಚಲನವಲನಗಳ ಮೇಲೆ ನಿಗಾ ಇರಿಸುತ್ತಿದ್ದ ಶಂಕಿತ ಇಬ್ಬರನ್ನು ಬಂಧಿಸಲಾಗಿದೆ. ಇವರು ಪಾಕಿಸ್ತಾನದ (Pakistan) ಭಯೋತ್ಪಾದಕರೊಂದಿಗೆ (Pakistani terrorist) ಸಂಪರ್ಕದಲ್ಲಿದ್ದರು. ದೆಹಲಿಯಲ್ಲಿ (Delhi) ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯಲ್ಲಿ (CJP protest) ಸೇರಿಕೊಳ್ಳಲು ಕೂಡ ಪಾಕಿಸ್ತಾನದ ಭಯೋತ್ಪಾದಕರು ಪ್ರಯತ್ನಿಸಿದ್ದಾರೆ ಎಂದು ಬಂಗಾಳ ವಿಶೇಷ ಕಾರ್ಯಪಡೆ (Bengal Special Task Force) ಶನಿವಾರ ತಿಳಿಸಿದೆ.

ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಇತ್ತೀಚೆಗೆ ದೆಹಲಿ ಜಂತರ್ ಮಂತರ್ ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೂ ಭಯೋತ್ಪಾದಕರಿಗೂ ಸಂಬಂಧವಿದೆಯೇ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಈ ಎಲ್ಲಾ ಮಾಹಿತಿಗಳು ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಹೈಬ್ರಿಡ್‌ ಉಗ್ರರು ಸಕ್ರಿಯ; ದಾಳಿಯ ನಂತರ ಸಾಮಾನ್ಯ ಜನರ ನಡುವೆ ಬೆರೆತು ತಪ್ಪಿಸಿಕೊಳ್ಳುವ ತಂತ್ರ

ವಿಶೇಷ ಕಾರ್ಯಪಡೆಯ ಮಾಹಿತಿ ಪ್ರಕಾರ ಪಾಕಿಸ್ತಾನ ಮೂಲದ ಭಯೋತ್ಪಾದಕರು ಸಿಜೆಪಿ ಪ್ರತಿಭಟನೆಯಲ್ಲಿ ಸೇರಿಕೊಂಡು ಗಲಭೆ ಸೃಷ್ಟಿಸಲು ಪ್ರಯತ್ನಿಸಿದ್ದರು. ಇದಕ್ಕಾಗಿ ಪೊಲೀಸ್ ಸಮವಸ್ತ್ರಗಳನ್ನು ಖರೀದಿಸಲು ಮುಂದಾಗಿದ್ದರು ಎಂಬುದಾಗಿ ಬುದ್ವಾರ್ ನಲ್ಲಿ ಬಂಧನಕ್ಕೊಳಗಾದ ಹಮೀಮ್ ಮೊಂಡಲ್ ತಿಳಿಸಿದ್ದಾನೆ.

ಭಯೋತ್ಪಾದಕರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಗುರಿಯಾಗಿಸಿಕೊಂಡಿದ್ದಾರೆ, ಅವರ ಚಲನವಲನಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಪದೇ ಪದೇ ಕೇಳಲಾಗಿದೆ ಎಂಬುದಾಗಿ ಕೂಡ ಹಮೀಮ್ ಮೊಂಡಲ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.

ಈ ಕುರಿತು ಮಾಹಿತಿ ನೀಡಿದ ಪಶ್ಚಿಮ ಬಂಗಾಳದ ವಿಶೇಷ ಕಾರ್ಯಪಡೆಯ ಐಜಿ ಗೌರವ್ ಶರ್ಮಾ, ಮುಖ್ಯಮಂತ್ರಿಯವರ ಚಲನವಲನಗಳ ಬಗ್ಗೆ ವಿವರಗಳನ್ನು ಸಂಗ್ರಹಿಸುವ ಪ್ರಯತ್ನಗಳು ಭಯೋತ್ಪಾದಕರಿಂದ ನಡೆದಿವೆ. ಶಹಜಾದ್ ಭಟ್ಟಿ ಗ್ಯಾಂಗ್ ಗೆ ಸೇರಿದ ಪಾಕಿಸ್ತಾನ ಮೂಲದ ಭಯೋತ್ಪಾದಕರೊಂದಿಗೆ ಸಂಪರ್ಕದಲ್ಲಿದ್ದ ಹಮೀಮ್ ಮೊಂಡಲ್ ಮತ್ತು ಆತನ ಸಹಚರ ಅರ್ಪಿತಾ ಸರ್ಕಾರ್ ನನ್ನು ಬಂಧಿಸಲಾಗಿದೆ. ಹಮೀಮ್ ಮೊಂಡಲ್ ಫೋನ್ ಮತ್ತು ಆನ್ ಲೈನ್ ಸಂವಹನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆತ ಏನೆಲ್ಲಾ ಮಾಹಿತಿ ಭಯೋತ್ಪಾದಕರಿಗೆ ನೀಡಿದ್ದಾನೆ, ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವ ಕುರಿತು ತನಿಖೆಗಳು ನಡೆಸಲಾಗುತ್ತಿದೆ ಎಂದು ಹೇಳಿದರು.

ಈ ವಿಷಯವು ಅತ್ಯಂತ ಸೂಕ್ಷ್ಮವಾಗಿದೆ. ಹೀಗಾಗಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಇನ್ನಷ್ಟು ಬಂಧನಗಳಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಹನಿ ಟ್ರ್ಯಾಪ್ ಜಾಲ

ಹೌರಾದ ಹಿರಿಯ ರಾಜಕಾರಣಿಯ ಮಗನನ್ನು ಹನಿ ಟ್ರ್ಯಾಪ್ ಮಾಡಿ ಅಪಹರಣ ನಡೆಸು ಹಣ ಸುಲಿಗೆ ಮಾಡುವ ಸಂಚು ರೂಪಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದುದರಿಂದ ಈ ಕುರಿತು ತನಿಖೆ ಪ್ರಾರಂಭಿಸಿದ ತನಿಖಾಧಿಕಾರಿಗಳಿಗೆ ಜಾರ್ಖಂಡ್ ನ ಸಾಹಿಬ್ ಗಂಜ್ ನಲ್ಲಿ ಅನುಮಾನಾಸ್ಪದವಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಮಾಜಿಕ ಮಾಧ್ಯಮ ಖಾತೆಯೊಂದು ಪತ್ತೆಯಾಗಿದೆ. ಇದನ್ನು ಅರ್ಪಿತಾ ಸರ್ಕಾರ್ ನಿರ್ವಹಿಸುತ್ತಿದ್ದನು. ಇದರ ಮೇಲೆ ನಿಗಾ ಇರಿಸಿದ ಅಧಿಕಾರಿಗಳಿಗೆ ಹಮೀಮ್ ಮೊಂಡಲ್ ನ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಆತನನ್ನು ಬಂಧಿಸಿದರು.

ಹಮೀಮ್ ಕೆಲವು ತಿಂಗಳ ಹಿಂದೆ ಬುರ್ದ್ವಾನ್ ಗೆ ತೆರಳುವ ಮೊದಲು ಹೌರಾದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದನು. ಅರ್ಪಿತಾ ಸರ್ಕಾರ್ ಮತ್ತು ಹಮೀಮ್ ಮೊಂಡಲ್ ಮೊದಲು ಇನ್ ಸ್ಟಾಗ್ರಾಮ್ ನಲ್ಲಿ ಭೇಟಿಯಾಗಿದ್ದು, ಸುಮಾರು ನಾಲ್ಕು ವರ್ಷಗಳಿಂದ ಪರಿಚಿತರಾಗಿದ್ದಾರೆ. ಸಚಿವರ ಮಗನನ್ನು ಹನಿ ಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲು ಅರ್ಪಿತಾ ಸರ್ಕಾರ್ ಅನ್ನು ಬಳಸಲು ಯೋಜಿಸಲಾಗಿತ್ತೇ ಎನ್ನುವ ಕುರಿತು ತನಿಖೆಗಳು ನಡಿಯುತ್ತಿದೆ. ಇದರ ಹಿಂದೆ ಪಾಕಿಸ್ತಾನ ಮೂಲದ ಭಯೋತ್ಪಾದಕರ ಕೈವಾಡವಿದೆ ಎನ್ನಲಾಗಿದೆ.

ರಾಣಾ, ಉಜೈರ್, ಅಬಿದ್ ಜಟ್ 333 ಮತ್ತು ಹಮದ್ ಅಲಿಯಾಸ್ ಗಳನ್ನು ಬಳಸಿಕೊಂಡು ಪಾಕಿಸ್ತಾನ ಮೂಲದ ಹಲವಾರು ಭಯೋತ್ಪಾದಕರೊಂದಿಗೆ ಹಮೀಮ್ ಮೊಂಡಲ್ ಸಂಪರ್ಕದಲ್ಲಿದ್ದನು. ಹಮೀಮ್ ಮೊಂಡಲ್ ಸಂಪರ್ಕದಲ್ಲಿದ್ದವರು ಶಹಜಾದ್ ಭಟ್ಟಿ ಗ್ಯಾಂಗ್ ಗೆ ಸೇರಿದವರಾಗಿದ್ದು, ಇವರು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಅವರೆಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಇವರ ನಡುವೆ ನಿರಂತರ ಸಂಭಾಷಣೆ, ಸಂವಹನಗಳು ನಡೆದಿವೆ. ವಾಟ್ಸ್ ಆಪ್, ಇನ್ ಸ್ಟಾ ಗ್ರಾಮ್, ಟೆಲಿಗ್ರಾಮ್ ನಂತಹ ಆಪ್ ಗಳನ್ನು ಬಳಸುತ್ತಿದ್ದರು. ಬಂಧಿತರಿಂದ ಯುನೈಟೆಡ್ ಕಿಂಗ್ಡಮ್ ಮತ್ತು ಮೆಕ್ಸಿಕೊದಲ್ಲಿ ನೀಡಲಾದ ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೂಲಕ ನಡೆಸಿರುವ ಕಾರ್ಯಾಚರಣೆಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಐಜಿ ಗೌರವ್ ಶರ್ಮಾ ತಿಳಿಸಿದ್ದಾರೆ.

2 ಗಂಟೆಗಳಲ್ಲಿ 250 ಕಿಲೋ ಮೀಟರ್... ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಮೊದಲ ಬಾರಿಗೆ ದಾನಿಯ ಹೃದಯ ಸಾಗಾಟ: ರೈಲ್ವೆಯ ಇತಿಹಾಸದಲ್ಲಿ ಸಾಧನೆ

ಜುಲೈ 30 ಮತ್ತು 31ರ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಕೂಡ ಬಂಧಿಸಲಾಗಿದ್ದು,ಬುರ್ದ್ವಾನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಪಾಕಿಸ್ತಾನ ಮೂಲದ ನಿರ್ವಾಹಕರೊಂದಿಗೆ ಅವರ ಸಂಬಂಧಗಳ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author