ಕೋಲ್ಕತ್ತಾ: ಪಶ್ಚಿಮ ಬಂಗಾಳದ (West bengal) ಸಚಿವ ಮತ್ತು ಮಗನ ಕುರಿತಾಗಿ ಪ್ರಮುಖ ಮಾಹಿತಿಗಳನ್ನು ಭಯೋತ್ಪಾದಕರೊಂದಿಗೆ (terror link) ಹಂಚಿಕೊಂಡಿರುವ ಆರೋಪದ ಮೇರೆಗೆ ಕಾಲೇಜು ವಿದ್ಯಾರ್ಥಿಯೊಬ್ಬನನ್ನು (Student arrest) ಪಶ್ಚಿಮ ಬಂಗಾಳ ಪೊಲೀಸರ ವಿಶೇಷ ಕಾರ್ಯಪಡೆ (West Bengal Special Task Force) ಸೋಮವಾರ ಬಂಧಿಸಿದೆ. ಇತ್ತೀಚೆಗೆ ಪಾಕಿಸ್ತಾನ ಮೂಲದ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದ ಹಮೀಮ್ ಮೊಂಡಲ್ ಮತ್ತು ಅರ್ಪಿತಾ ಸರ್ಕಾರ್ ಬಂಧನದ ಬಳಿಕ ಈ ಬೆಳವಣಿಗೆ ನಡೆದಿದೆ. ಆದಿತ್ಯ ಸಿಂಗ್ ಬಂಧಿತ ಆರೋಪಿ. ಈತ ಸಚಿವರಿಗೆ ಬೆದರಿಕೆ ಕರೆಯನ್ನು ಕೂಡ ಮಾಡಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಪಾಕಿಸ್ತಾನ ಮೂಲದ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದ ಹಮೀಮ್ ಮೊಂಡಲ್ ಮತ್ತು ಅರ್ಪಿತಾ ಸರ್ಕಾರ್ ಬಂಧನದ ಬಳಿಕ ಸಚಿವರ ಮಗನನ್ನು ಹನಿ ಟ್ರ್ಯಾಪ್ ಮಾಡಲು ಅವರ ಕುರಿತಾದ ಪ್ರಮುಖ ಮಾಹಿತಿಯನ್ನು ಹಮೀಮ್ ಮತ್ತು ಅರ್ಪಿತಾ ಜೊತೆಗೆ ಆದಿತ್ಯ ಸಿಂಗ್ ಹಂಚಿಕೊಂಡಿದ್ದ ಎಂದು ಆರೋಪಿಸಲಾಗಿದೆ.
ಕಾಂಗ್ರೆಸ್ ನಾಯಕ ನಾನಾ ಪಟೋಲೆ ಪಾದಪೂಜೆ ಮಾಡಿದ ಕಾರ್ಯಕರ್ತರು: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ; ವಿಡಿಯೊ ವೈರಲ್
ಹಮೀಮ್ ಮತ್ತು ಅರ್ಪಿತಾ ಅವರ ವಿಚಾರಣೆ ವೇಳೆ ಆದಿತ್ಯ ಸಿಂಗ್ ಹೆಸರು ಕೇಳಿ ಬಂದಿದ್ದರಿಂದ ಎಸ್ ಟಿಎಫ್ ಆತನನ್ನು ಬಂಧಿಸಿದೆ. ಪಶ್ಚಿಮ ಬಂಗಾಳ ಸಚಿವ ಉಮೇಶ್ ರೈ ಅವರ ಮಗನ ಫೋಟೋಗಳನ್ನು ಕ್ಲಿಕ್ ಮಾಡುವ, ದಿನಚರಿ ಮಾಹಿತಿಯನ್ನು ಸಂಗ್ರಹಿಸಿದ್ದ ಆದಿತ್ಯ ಸಿಂಗ್ ಅದನ್ನು ಹಮೀಮ್ ಮತ್ತು ಅರ್ಪಿತಾ ಜೊತೆ ಹಂಚಿಕೊಂಡಿದ್ದಾನೆ. ಆತ ತೆಗೆದಿರುವ ಚಿತ್ರಗಳಲ್ಲಿ ಉಮೇಶ್ ರೈ ಅವರ ಮಗ, ಅವರ ಕಾರು ಮತ್ತು ನಿವಾಸದ ಕೆಲವು ಚಿತ್ರಗಳಿವೆ.
ಹೌರಾ ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುವ ಉಮೇಶ್ ರೈ ಅವರು ಸಚಿವರಾಗಿ ಆಯ್ಕೆಯಾದ ಮೇಲೆ ಸಾಕಷ್ಟು ಬೆದರಿಕೆ ಕರೆಗಳು ಬಂದಿದ್ದವು. ಇದು ಭಯೋತ್ಪಾದಕ ಜಾಲಕ್ಕೆ ಸಂಬಂಧಿಸಿದ್ದು ಎಂಬುದು ಹಮೀಮ್ ಮತ್ತು ಅರ್ಪಿತಾ ಬಂಧನದ ಬಳಿಕ ತಿಳಿದು ಬಂದಿದೆ.
ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿರುವ ಉಮೇಶ್ ರೈ, ನಾನೇನು ಮುಖ್ಯಮಂತ್ರಿ ಅಲ್ಲ. ಆದರೂ ಕೆಲವು ಜನರನ್ನು ನನ್ನ ಹಿಂದೆ ನಿಯೋಜಿಸಲಾಗಿತ್ತು. ಇದಕ್ಕೆ ಸೇರಿದ ಮೂವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಬಲವಾದ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಉಮೇಶ್ ರೈ ಅವರಿಗೆ ಬೆದರಿಕೆ ಕರೆ ಮಾಡಿರುವವರಲ್ಲಿ ಆದಿತ್ಯ ಸಿಂಗ್ ಕೂಡ ಸೇರಿದ್ದಾನೆ. ಹಮೀಮ್‌ಗೆ ಸಚಿವರ ಕುರಿತಾದ ಮಾಹಿತಿಯನ್ನು ಒದಗಿಸಿದ್ದಾನೆ. ಉಮೇಶ್ ರೈ ಅವರ ಮಗನನ್ನು ಹನಿ ಟ್ರ್ಯಾಪ್ ಮಾಡಲು ಸಂಚು ರೂಪಿಸುವಲ್ಲಿ ಆತನ [ಪಾತ್ರವೂ ಇದೆ. ಹೌರಾದಲ್ಲಿ ವಾಸವಾಗಿದ್ದ ಹಮೀಮ್ ವಿದೇಶಿ ಹಣಕಾಸು ನೆರವು ಪಡೆದಿದ್ದಾನೆಯೇ ಇಲ್ಲವೇ ಎನ್ನುವುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಮೀಮ್ ಮತ್ತು ಅರ್ಪಿತಾ ಸರ್ಕಾರ್ ಅವರನ್ನು ಜಾರ್ಖಂಡ್‌ನಲ್ಲಿ ಬಂಧಿಸಲಾಗಿತ್ತು. ಅವರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಮೇಲೆ ದಾಳಿ ಮಾಡಲು ಯೋಜನೆ ಹಾಕಿಕೊಂಡಿದ್ದರು. ಆದಿತ್ಯ ಸಿಂಗ್ ಬಂಧನದಿಂದ ಈಗ ಜಾಲಕ್ಕೆ ಸೇರಿದ ಮೂವರನ್ನು ಕೇವಲ ನಾಲ್ಕು ದಿನಗಳಲ್ಲಿ ಬಂಧಿಸಲಾಗಿದೆ.