ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರೆಸ್ಟೋರೆಂಟ್ ಉದ್ಯೋಗಿಯ ದುಷ್ಕೃತ್ಯ; ದಂಪತಿಯ ಖಾಸಗಿ ಕ್ಷಣವನ್ನು ಚಿತ್ರೀಕರಿಸಿದ ಸಿಬ್ಬಂದಿ

Couple’s private video recorded: ರೆಸ್ಟೋರೆಂಟ್‌ ಒಂದರಲ್ಲಿ ಸಿಬ್ಬಂದಿ ದಂಪತಿಯ ಖಾಸಗಿ ದೃಶ್ಯವನ್ನು ಚಿತ್ರೀಕರಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಬೆಳಕಿಗೆ ಬಂದಿದೆ. ರೆಸ್ಟೋರೆಂಟ್ ಸಿಬ್ಬಂದಿಯೊಬ್ಬ ದಂಪತಿ ಖಾಸಗಿ ಕ್ಷಣಗಳಲ್ಲಿ ತೊಡಗಿರುವುದನ್ನು ಚಿತ್ರೀಕರಿಸಿದ್ದಾನೆ. ದಂಪತಿ ಉದ್ಯೋಗಿಯ ಮೇಲೆ ಅನುಮಾನ ವ್ಯಕ್ತಪಡಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ

ಲಖನೌ, ಫೆ.17: ರೆಸ್ಟೋರೆಂಟ್‌ ಒಂದರಲ್ಲಿ ಅಲ್ಲಿನ ಸಿಬ್ಬಂದಿ ದಂಪತಿಯ ಖಾಸಗಿ ದೃಶ್ಯವನ್ನು ಚಿತ್ರೀಕರಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಬಿಜ್ನೋರ್‌ನಲ್ಲಿ ಬೆಳಕಿಗೆ ಬಂದಿದೆ. ಸೆಂಟರ್ ಪಾಯಿಂಟ್ ಎಂಬ ರೆಸ್ಟೋರೆಂಟ್‌ನಲ್ಲಿ ತಂಗಲು ಕೊಠಡಿಗಳನ್ನು ನೀಡಲಾಗುತ್ತಿದೆ. ಹೀಗೆ ತಂಗಿದ ದಂಪತಿಯ ಖಾಸಗಿ ಕ್ಷಣಗಳನ್ನು ಸಿಬ್ಬಂದಿಯೊಬ್ಬ ಚಿತ್ರೀಕರಿಸಿದ್ದಾನೆ. ದಂಪತಿ ಉದ್ಯೋಗಿಯ ಮೇಲೆ ಅನುಮಾನ ವ್ಯಕ್ತಪಡಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸೆಂಟರ್ ಪಾಯಿಂಟ್ ರೆಸ್ಟೋರೆಂಟ್‌ಗೆ ಭೇಟಿ ನೀಡುವ ಸಂಗಾತಿಗಳಿಗೆ ಕೊಠಡಿಗಳನ್ನು ಒದಗಿಸಲಾಗುತ್ತದೆ. ಹಾಗೆನೇ ರೆಸ್ಟೋರೆಂಟ್‌ಗೆ ಬಂದಿದ್ದ ದಂಪತಿಗೆ ಸೋಫಾ ಅಳವಡಿಸಲಾದ ಒಂದು ಸಣ್ಣ ಕೋಣೆಯನ್ನು ಒದಗಿಸಲಾಗಿತ್ತು. ದಂಪತಿ ಅಲ್ಲಿ ಆತ್ಮೀಯ ಚಟುವಟಿಕೆಗಳಲ್ಲಿ ತೊಡಗಿದ್ದರು. ರೆಸ್ಟೋರೆಂಟ್ ಸಿಬ್ಬಂದಿ ಮೆಟ್ಟಿಲುಗಳ ಬದಿಯಲ್ಲಿ ಹಾಕಲಾದ ಬ್ಯಾನರ್‌ನಲ್ಲಿ ರಂಧ್ರ ಮಾಡಿ ಈ ದಂಪತಿಯ ಆತ್ಮೀಯ ಕ್ಷಣಗಳನ್ನು ಮೊಬೈಲ್ ಫೋನ್‌ಗಳ ಮೂಲಕ ರೆಕಾರ್ಡ್ ಮಾಡಿದ್ದಾನೆ.

ಕುಡಿದ ಅಮಲಿನಲ್ಲಿ ರೈಲ್ವೆ ಹಳಿ ಮೇಲೆ ಮಲಗಿದ ಯುವಕ; ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

ಫೆಬ್ರವರಿ 4ರಂದು ದಂಪತಿ ರೆಸ್ಟೋರೆಂಟ್‌ಗೆ ಬಂದು ಒಂದೇ ಕೋಣೆಯಲ್ಲಿದ್ದಾಗ ಈ ಘಟನೆ ಬೆಳಕಿಗೆ ಬಂತು. ಅವರು ಒಬ್ಬ ಉದ್ಯೋಗಿಯ ಮೇಲೆ ಅನುಮಾನಗೊಂಡು ತಮ್ಮ ವೀಡಿಯೊ ಚಿತ್ರೀಕರಣ ಮಾಡುತ್ತಿರುವುದನ್ನು ಕಂಡುಕೊಂಡರು. ಹೀಗಾಗಿ ಅವರು ಅಸಮಾಧಾನ ವ್ಯಕ್ತಪಡಿಸಿ ರೆಸ್ಟೋರೆಂಟ್‌ಗೆ ಸ್ನೇಹಿತರನ್ನೂ ಕರೆದರು. ನಂತರ ಉದ್ಯೋಗಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಅವಕ್ಕಾದರು.

ಈ ಉದ್ಯೋಗಿಯ ಮೊಬೈಲ್ ಫೋನ್‌ನಲ್ಲಿ 200ಕ್ಕೂ ಹೆಚ್ಚು ಜೋಡಿಗಳು ಅನ್ಯೋನ್ಯತೆಯಿಂದ ವರ್ತಿಸುತ್ತಿರುವ ವಿಡಿಯೊ ಕಂಡು ಬಂತು. ನಂತರ ಅವರು ಆ ವಿಡಿಯೊಗಳನ್ನು ಸಾಕ್ಷಿಯಾಗಿ ರೆಕಾರ್ಡ್ ಮಾಡಿಕೊಂಡರು. ಅವರು ಗಲಾಟೆ ಮಾಡಿದಾಗ ಉದ್ಯೋಗಿ ಮೊಬೈಲ್ ಫೋನ್‌ನೊಂದಿಗೆ ಪರಾರಿಯಾಗಿದ್ದಾನೆ. ದಂಪತಿ ತಕ್ಷಣ ಘಟನೆಯನ್ನು ಪೊಲೀಸರಿಗೆ ವರದಿ ಮಾಡಿದ್ದಾರೆ.

ಮಾಹಿತಿ ಪಡೆದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಉಸ್ತುವಾರಿ ಕುಲಬೀರ್ ಸಿಂಗ್ ಸ್ಥಳಕ್ಕಾಗಮಿಸಿದರು. ಅವರು ಪ್ರಕರಣದ ಬಗ್ಗೆ ತನಿಖೆ ನಡೆಸಿದರು. ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ಕೂಡ ಮಾಹಿತಿ ನೀಡಲಾಯಿತು. ಸಿಟಿ ಸಿಒ ಸಂಗ್ರಾಮ್ ಸಿಂಗ್ ಆಗಮಿಸಿ ರೆಸ್ಟೋರೆಂಟ್‌ನ ಸಿಸಿಟಿವಿ ಕ್ಯಾಮರಾದ ಡಿವಿಆರ್ ವಶಪಡಿಸಿಕೊಂಡಿದ್ದಾರೆ.

ಬಾಡಿಗೆಗಿದ್ದ ಮಹಿಳೆಯ ಮನೆಯ ಬಾತ್‍ರೂಮ್‌ನಲ್ಲಿ ಹಿಡನ್ ಕ್ಯಾಮರಾ ಇಟ್ಟಿದ್ದ ಕಾಮುಕ ಅರೆಸ್ಟ್

ಈ ಸಂಬಂಧ ಸಿವಿಲ್ ಲೈನ್ಸ್ ಔಟ್‌ಪೋಸ್ಟ್ ಇನ್‌ಚಾರ್ಜ್ ಕುಲ್ಬೀರ್ ಸಿಂಗ್ ಪ್ರಕರಣ ದಾಖಲಿಸಿದ್ದಾರೆ. ಔಟ್‌ಪೋಸ್ಟ್ ಇನ್‌ಚಾರ್ಜ್ ಕುಲ್ಬೀರ್ ಸಿಂಗ್ ದಾಖಲಿಸಿರುವ ಪ್ರಕರಣದಲ್ಲಿ, ಫೆಬ್ರವರಿ 4ರಂದು ರೆಸ್ಟೋರೆಂಟ್‌ನಲ್ಲಿ ಉದ್ಯೋಗಿ ಸತೇಂದ್ರ ನಡೆಸುತ್ತಿರುವ ಅನೈತಿಕ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ದೂರು ಬಂದ ಬಳಿಕ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ನಂತರ ಕುಲ್ಬೀರ್ ಸಿಂಗ್ ಆಗಮಿಸಿ ತನಿಖೆ ಆರಂಭಿಸಿದರು.

ಆ ರೆಸ್ಟೋರೆಂಟ್ ಸದ್ಯಕ್ಕೆ ಮುಚ್ಚಲ್ಪಟ್ಟಿದೆ. ಇದು ಮಹಿಳಾ ವಕೀಲರೊಬ್ಬರ ಒಡೆತನದಲ್ಲಿದೆ. ಅವರು ಹಗಲಿನಲ್ಲಿ ಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಾರೆ ಮತ್ತು ಸಂಜೆ ಮಾತ್ರ ರೆಸ್ಟೋರೆಂಟ್‌ಗೆ ಬರುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಈ ಸಮಯದಲ್ಲಿ ಅವರ ಸಿಬ್ಬಂದಿಯಿಂದ ಅಂತಹ ಯಾವುದೇ ಘಟನೆ ನಡೆದಿರುವುದು ಅವರಿಗೆ ತಿಳಿದಿಲ್ಲ ಎಂಬುದಾಗಿ ಹೇಳಿದ್ದಾರೆ.