ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Crime News: ರಾಮಮಂದಿರ ಅವಹೇಳನ ಮಾಡಿದ ವ್ಯಕ್ತಿಗೆ 60 ದಿನಗಳ ಜೈಲುಶಿಕ್ಷೆ

ಅಯೋಧ್ಯೆಯ ರಾಮಮಂದಿರದ ಭಾವಚಿತ್ರದ ಮೇಲೆ ಅವಹೇಳನಕಾರಿ ಬರಹ ಬರೆದು, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಂತ ವ್ಯಕ್ತಿಗೆ ನರಗುಂದದ ಸಿಜೆ ಮತ್ತು ಜೆಎಂಎಫ್ ಸಿ ಕೋರ್ಟ್ 60 ದಿನಗಳ ಜೈಲು ವಾಸ ಹಾಗೂ 5000 ರೂ. ದಂಡವನ್ನು ವಿಧಿಸಿದೆ.

ರಾಮಮಂದಿರ ಅವಹೇಳನ ಮಾಡಿದ ವ್ಯಕ್ತಿಗೆ 60 ದಿನಗಳ ಜೈಲುಶಿಕ್ಷೆ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Feb 22, 2025 7:14 AM

ನರಗುಂದ: ರಾಮಮಂದಿರದ (Ram mandir) ಭಾವಚಿತ್ರದ ಮೇಲೆ ಅವಹೇಳನಕಾರಿ (insult) ಬರಹ ಬರೆದು ಸಾಮಾಜಿಕ ಜಾಲತಾಣದಲ್ಲಿ (Social media) ಹರಿಬಿಟ್ಟಿದ್ದ ಆರೋಪಿಗೆ 60 ದಿನಗಳ ಸಾದಾ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ಕೋರ್ಟ್ (Court Sentence) ಆದೇಶಿಸಿದೆ. ನರಗುಂದದ (Gadag news) ಸಿಜೆ ಮತ್ತು ಜೆಎಂಎಫ್ ಸಿ ಕೋರ್ಟ್, ಅಯೋಧ್ಯೆಯ ರಾಮಮಂದಿರದ ಭಾವಚಿತ್ರದ ಮೇಲೆ ಅವಹೇಳನಕಾರಿ ಬರಹ (Crime news) ಬರೆದು, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಂತ ವ್ಯಕ್ತಿಗೆ 60 ದಿನಗಳ ಜೈಲು ವಾಸ ಹಾಗೂ 5000 ದಂಡವನ್ನು ವಿಧಿಸಿದೆ.

ನರಗುಂದದ ನಿವಾಸಿ ಅಕ್ಬರಸಾಬ ಖಾನ್ ಎಂಬವರು ಅ.24, 2014ರಂದು ರಾಮಮಂದಿರ ಚಿತ್ರದ ಮೇಲೆ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಅಕ್ಷೇಪಾರ್ಹ ಸಾಲುಗಳ್ನು ಬರೆದು ಪೋಸ್ಟ್ ಮಾಡಿದ್ದರು. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ವಿವಾದ ಆಲಿಸಿದಂತ ನ್ಯಾಯಧೀಶರು ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಪರಿಚಯದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಬೆಂಗಳೂರು: ಇತ್ತೀಚೆಗೆ ಕೆ.ಆರ್‌ ಮಾರ್ಕೆಟ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬೆನ್ನಲ್ಲೇ ಅಂತಹುದೇ ಮತ್ತೊಂದು ಪೈಶಾಚಿಕ ಕೃತ್ಯ ರಾಜಧಾನಿಯಲ್ಲಿ ನಡೆದಿದೆ. ತಡರಾತ್ರಿ ಮಹಿಳೆಯ ಮೇಲೆ ನಾಲ್ವರು ಕಾಮುಕರು ಅತ್ಯಾಚಾರ ನಡೆಸಿರುವ ಘಟನೆ ಬೆಂಗಳೂರಿನ ಕೋರಮಂಗಲದ ಜ್ಯೋತಿ ನಿವಾಸ ಜಂಕ್ಷನ್ ಬಳಿ ನಡೆದಿದೆ. ತಡರಾತ್ರಿ 12 ಗಂಟೆಗೆ ಸುಮಾರಿಗೆ ನಾಲ್ವರು ಕಾಮುಕರು ಮಹಿಳೆಯನ್ನು ಭೇಟಿಯಾಗಿದ್ದರು. ಪರಿಚಯಸ್ಥ ಮಹಿಳೆಯನ್ನು ನಾಲ್ವರು ದುಷ್ಕರ್ಮಿಗಳು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ಘಟನೆ ಕುರಿತು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈಗಾಗಲೇ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಊಟಕ್ಕೆಂದು ಮುಚ್ಚಿದ ಹೋಟೆಲ್ ಟೆರೇಸ್ ಮೇಲೆ ಮಹಿಳೆಯನ್ನು ಕರೆದುಕೊಂಡು ಹೋದ ಕಾಮುಕರು, ಬಳಿಕ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಮಹಿಳೆಯ ಮೊಬೈಲ್ ಹಾಗೂ ಪರ್ಸ್‌ ಕಿತ್ತುಕೊಂಡು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಪರಿಚಯಸ್ಥ ಮಹಿಳೆಯನ್ನು ಒಬ್ಬ ಹೋಟೆಲ್‌ ಟೆರೇಸ್ ಮೇಲೆ ಕರೆದಿಕೊಂಡು ಹೋಗಿದ್ದಾನೆ. ಈ ವೇಳೆ ಉಳಿದವರು ಅಲ್ಲೇ ಕಾದು ಕುಳಿತು ಆತನೊಂದಿಗೆ ಸೇರಿಕೊಂಡು ಸಾಮೂಹಿಕ ಆತ್ಯಾಚಾರ ಎಸಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬೆಳಗ್ಗೆ 5 ಗಂಟೆಗೆ ಸಂತ್ರಸ್ತ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಜೊತೆಗೆ, ಮಹಿಳೆಯ ದೂರನ್ನು ಆಧರಿಸಿ ಕೋರಮಂಗಲ ಠಾಣೆಯಲ್ಲಿ ಆತ್ಯಾಚಾರ ಪ್ರಕರಣ ದಾಖಲು ಆಗಿದೆ. ಈ ಪ್ರಕರಣದ ಕುರಿತಂತೆ ಕೋರಮಂಗಲ ಪೊಲೀಸರು ಸದ್ಯ ಮೂವರನ್ನು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Deadly Accident: ಭೀಕರ ರಸ್ತೆ ಅಪಘಾತ; ಕುಂಭಮೇಳಕ್ಕೆ ತೆರಳಿದ್ದ ಆರು ಜನ ಕನ್ನಡಿಗರ ದುರ್ಮರಣ