ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇರಾನ್- ಇಸ್ರೇಲ್-ಅಮೆರಿಕ ಯುದ್ಧಕ್ಕೆ ಸದ್ಯದಲ್ಲೇ ಪಾಕಿಸ್ತಾನ ಪ್ರವೇಶ? ಕಾರಣ ಇದು

ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಸೌದಿ ಅರೇಬಿಯಾದ ಮೇಲೆ ದಾಳಿ ನಡೆಸಿದೆ. ಹೀಗಾಗಿ ಪಾಕಿಸ್ತಾನವು ಇರಾನ್ ಮತ್ತು ಇಸ್ರೇಲ್ ಯುದ್ಧದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಯಾಕೆಂದರೆ ಅದು ಈ ಬಗ್ಗೆ ಕಳೆದ ವರ್ಷವಷ್ಟೇ ಸೌದಿ ಅರೇಬಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಏನಿದು ಒಪ್ಪಂದ, ಇರಾನ್ ಮೇಲೆ ಪಾಕಿಸ್ತಾನ ದಾಳಿ ಮಾಡಬಹುದೇ ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಇರಾನ್ ಎದುರು ಯುದ್ಧಕ್ಕೆ ನಿಲ್ಲುತ್ತದೆಯೇ ಪಾಕಿಸ್ತಾನ ?

ಸಂಗ್ರಹ ಚಿತ್ರ -

ಇಸ್ಲಾಮಾಬಾದ್: ಸೌದಿ ಅರೇಬಿಯಾದ (attack on saudi) ಮೇಲಿನ ದಾಳಿಯನ್ನು ತನ್ನ ರಾಷ್ಟ್ರದ ಮೇಲಿನ ದಾಳಿ ಎಂದು ಪರಿಗಣಿಸುವುದಾಗಿ ಪಾಕಿಸ್ತಾನವು (pakistan) ಸೌದಿ ಅರೇಬಿಯಾಕ್ಕೆ ಮಾತು ಕೊಟ್ಟಿದೆ. ಅದರಂತೆ ಈಗ ಪಾಕಿಸ್ತಾನಕ್ಕೆ ಇಸ್ಲಾಮಿಕ್ ಗಣತಂತ್ರ ರಾಷ್ಟ್ರವಾದ ಇರಾನ್ (iran and israel war) ವಿರುದ್ದ ಇಸ್ರೇಲ್ ಜೊತೆಗೂಡಿ ಯುದ್ಧ ಮಾಡುವ ಅನಿವಾರ್ಯತೆ ಬಂದರೆ ಅಚ್ಚರಿಯೇನಿಲ್ಲ. ಯುಎಸ್ (US) ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಸೌದಿ ಅರೇಬಿಯಾದ ಮೇಲೆ ದಾಳಿ ನಡೆಸಿದೆ. ಹೀಗಾಗಿ ಪಾಕಿಸ್ತಾನವು ಇರಾನ್ ಮತ್ತು ಇಸ್ರೇಲ್ ಯುದ್ಧದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಇದೀಗ ವಿಶ್ವದ ಎಲ್ಲ ರಾಷ್ಟ್ರಗಳನ್ನು ಭಾಗಿಯಾಗುವಂತೆ ಮಾಡುತ್ತಿದೆ. ಯಾಕೆಂದರೆ ಇದರ ಪರಿಣಾಮ ಈಗ ಜಾಗತಿಕ .ಮಟ್ಟದಲ್ಲಿ ಕಾಣಿಸಿಕೊಂಡಿದೆ. ಇರಾನ್ ಮತ್ತು ಇಸ್ರೇಲ್ ಯುದ್ಧ ಹೀಗೆ ಮುಂದುವರಿದರೆ ಅದರಲ್ಲಿ ಭಾಗಿಯಾಗುವ ದೇಶ ಪಾಕಿಸ್ತಾನ. ಯಾಕೆಂದರೆ ಅದು 2025ರ ಸೆಪ್ಟೆಂಬರ್ ತಿಂಗಳಲ್ಲಿ ಸೌದಿ ಅರೇಬಿಯಾದೊಂದಿಗೆ ಒಪ್ಪಂದ ಒಂದಕ್ಕೆ ಸಹಿ ಮಾಡಿದೆ. ಇದರ ಪ್ರಕಾರ ಸೌದಿ ಅರೇಬಿಯಾದ ಮೇಲಿನ ದಾಳಿಯನ್ನು ಅದು ತನ್ನ ರಾಷ್ಟ್ರದ ಮೇಲಿನ ದಾಳಿ ಎಂದು ಪರಿಗಣಿಸುವುದಾಗಿ ಹೇಳಿದೆ.

Iran Israel War: ಇದುವರೆಗೂ 5 ವಿಮಾನಗಳಲ್ಲಿ 1500 ಮಂದಿ ಗಲ್ಫ್‌ನಿಂದ ಬೆಂಗಳೂರಿಗೆ

ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿದ ಬಳಿಕ ಯುಎಸ್ ನ ಮಿಲಿಟರಿ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದೆ. ಸೌದಿ ಅರೇಬಿಯಾದ ಮೇಲೂ ಇರಾನಿನ ಆತ್ಮಹತ್ಯಾ ಡ್ರೋನ್ ದಾಳಿ ಮಾಡಿದ್ದು, ಇದರಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಪಾಕಿಸ್ತಾನವು ಮಧ್ಯಪ್ರಾಚ್ಯದ ಯುದ್ಧದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸೌದಿ ಅರೇಬಿಯಾದೊಂದಿಗೆ ಪಾಕಿಸ್ತಾನ ಮಾಡಿಕೊಂಡಿರುವ ರಕ್ಷಣಾ ಕಾರ್ಯತಂತ್ರದ ಒಪ್ಪಂದದ (SMDA) ಪ್ರಕಾರ ಸೌದಿ ಅರೇಬಿಯಾ ಪ್ರತಿದಾಳಿಗೆ ಮುಂದಾದರೆ ಪಾಕಿಸ್ತಾನ ಕೂಡ ಅದರ ಜೊತೆ ನಿಲ್ಲಬೇಕಾಗುತ್ತದೆ. ಈ ಸಂದರ್ಭದಲ್ಲಿ ಅದು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಹುದೇ ಎನ್ನುವುದು ಕೂಡ ಸವಾಲಾಗಿದೆ.

ಸೌದಿ ಅರೇಬಿಯಾದ ಮೇಲೆ ಇರಾನ್ ಆಕ್ರಮಣ ಮಾಡಿದ ಮೇಲೆ ಇರಾನ್ ಜೊತೆ ಪಾಕಿಸ್ತಾನ ಯುದ್ಧ ಮಾಡಬೇಕಾದ ಸಂದರ್ಭ ಬರಬಹುದು ಎಂದು ಈಗಾಗಲೇ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಹೇಳಿದ್ದಾರೆ. ನಾವು ಸೌದಿಯ ಜೊತೆ ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದೇವೆ. ಹೀಗಾಗಿ ಇರಾನ್ ಇದನ್ನು ಅರ್ಥಮಾಡಿಕೊಳ್ಳುವಂತೆ ಮಾಡಬೇಕಿದೆ ಎಂದು ಹೇಳಿದ್ದಾರೆ.

ಸೌದಿ ಮತ್ತು ಪಾಕಿಸ್ತಾನ ನಡುವಿನ ಒಪ್ಪಂದ ಪರಮಾಣು ಶಸ್ತ್ರಸಜ್ಜಿತ ಮುಸ್ಲಿಂ ದೇಶವೊಂದು ಗಲ್ಫ್‌ನ ಅತ್ಯಂತ ಶ್ರೀಮಂತ ರಾಷ್ಟ್ರದೊಂದಿಗೆ ಸಂಬಂಧ ಹೊಂದಿದೆ. ಇದು ಭೌಗೋಳಿಕ, ರಾಜಕೀಯವಾಗಿ ತೀವ್ರ ಅಪಾಯಕ್ಕೆ ತನ್ನನ್ನು ತಾನು ಒಳಪಡಿಸಿದಂತಾಗಿದೆ.

2025ರ ಸೆಪ್ಟೆಂಬರ್ ತಿಂಗಳಲ್ಲಿ ದೋಹಾ ಮತ್ತು ಕತಾರ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ ಬಳಿಕ ರಿಯಾದ್ ತನ್ನ ರಕ್ಷಣೆಗಾಗಿ ಹೆಚ್ಚಿನ ಪಾಲುದಾರರನ್ನು ಹುಡುಕಲು ಪ್ರಾರಂಭಿಸಿತ್ತು. ಇದು ಗಲ್ಫ್ ಅನ್ನು ಸುರಕ್ಷಿತವಾಗಿಡುವ ಭರವಸೆ ನೀಡಿರುವ ಅಮೆರಿಕದ ಸಾಮರ್ಥ್ಯದ ಬಗ್ಗೆ ಅನುಮಾನ ಉಂಟು ಮಾಡುವಂತೆ ಮಾಡಿದೆ.

ಜೆನ್‌ ಜಿ ದಂಗೆ ಬಳಿಕ ನೇಪಾಳದ 275 ಸ್ಥಾನಗಳಿಗೆ ಇಂದು ಮತದಾನ

ಇರಾನ್ ಮತ್ತು ಇಸ್ರೇಲ್ ಯುದ್ಧದಲ್ಲಿ ಪಾಕಿಸ್ತಾನ ಸೇರದೇ ಇರುವುದೇ ಒಳ್ಳೆಯದು. ಯಾಕೆಂದರೆ ಒಂದು ವೇಳೆ ಅದು ಸೇರಿಕೊಂಡರೆ ಸಂಘರ್ಷ ಇನ್ನೂ ಹೆಚ್ಚು ಉಲ್ಭಣವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವಿಶ್ಲೇಷಕರು. ಪಾಕಿಸ್ತಾನದ ವಿದೇಶಾಂಗ ಸಚಿವರು ಇರಾನ್ ಗೆ ಕೇವಲ ಎಚ್ಚರಿಕೆ ನೀಡಿದ್ದಾರೆ. ಆದರೆ ಯುದ್ಧದಲ್ಲಿ ಭಾಗಿಯಾಗುವ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ.