ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Holi Festival: ಕೆರೂರಲ್ಲಿ ಇಂದು ʼಹೋಳಿ ಹಬ್ಬ ಸಂಭ್ರಮʼ

ಪತ್ರಿ ಮನೆಯಲ್ಲೂ ಕಾಮನಿನಗೆ ಹೋಳಿಗೆ ಇಲ್ಲವೆ ಬೆಲ್ಲ ಸಕ್ಕರೆ ನೈವೇದ್ಯ ಕೊಟ್ಟು ಕಾಮನಿನಗೆ ಅಂತಿಮ ವಿದಾಯ ಹೇಳಿದ್ದು ವಿಶೇಷವಾಗಿತ್ತು. ಇಲ್ಲಿಯ ಹಳಪೇಟೆ, ಚಿನಗುಂಡಿ ಪ್ಲಾಟ, ಇತರೆಡೆಗಳಲ್ಲಿ ಬುಧವಾರ ಬೆಳಗ್ಗಿನ ಜಾವ ಕಾಮದಹನವಾದರೆ ಸಾರ್ವಜನಿಕ ತರಕಾರಿ ಮಾರ್ಕೆಟ್ ಮತ್ತು ಕಿಲ್ಲಾ ಹೊಸಪೇಟೆ ನೆಹರು ನಗರ ಹಾಗೂ ಬಸರಿಗಿಡಪೇಟೆ ಓಣಿ ಮಧ್ಯಾಹ್ನ ದ ವೇಳೆಗೆ ಕಾಮ ದಹನ ಮಾಡಲಾಯಿತು.‌

Holi Festival: ಕೆರೂರಲ್ಲಿ ಇಂದು ʼಹೋಳಿ ಹಬ್ಬ ಸಂಭ್ರಮʼ

ಪಟ್ಟಣದ ನೆಹರು ನಗರ ಓಣಿಯಲ್ಲಿ ಮಾರುತೇಶ್ವರ ದೇವಸ್ಥಾನದಲ್ಲಿ ಹೋಳಿ ಹುಣ್ಣುಮೆ ನಿಮಿತ್ತವಾಗಿ ರತಿ ಮನ್ಮಥ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು -

Ashok Nayak
Ashok Nayak Mar 5, 2026 1:05 PM

ಮಲ್ಲಯ್ಯ ಮೇಡಿ ಕೆರೂರ

ರತಿ ಮನ್ಮಥರ ಮೆರವಣಿಗೆ ವೇಳೆ ಬೆವಿನೆಲೆ ಏಟು

ಕಾಮದಹನ ಬೆಂಕಿಯಲ್ಲಿ ಕಡಲೆಕಾಯಿ ಹುರಿಯುವ ವಿಶೇಷ ಆಚರಣೆ

ಕೆರೂರ: ಪಟ್ಟಣದಲ್ಲಿ ಎರಡು ದಿನಗಳ ರತಿ ಮನ್ಮಥರ ಪ್ರತಿಷ್ಠಾಪಿಸಿ ಬುಧುವಾರ ಗಲ್ಲಿ ಗಲ್ಲಿ ಸುತ್ತಾಡಿ ಮದ್ಯಾಹ್ನ ಕಾಮ ದಹನ ಕಾರ್ಯ ನಡೆಯಿತು. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಹೋಳಿ ಹಬ್ಬವನ್ನು ವೈಶಿಷ್ಟ್ಯ ಪೂರ್ಣವಾಗಿ ನೆಹರು ನಗರ ಓಣಿಯ ಮಾರುತೇಶ್ವರ ದೇವಸ್ಥಾನ ಮುಂದೆ ಕಾಮನ ದಹನ ಮಾಡಿ ಬೆಂಕಿಯನ್ನು ತೆಗೆದುಕೊಂಡು ಹೋಗಿ ಕಡಲೆ ಕಾಯಿ ಹುರಿಯುವ ಸಂಪ್ರದಾಯ ಪಾಲಿಸಲಾಯಿತು.

ರತಿ ಮನ್ಮಥರನ್ನು ಆಯಾ ಓಣಿಗಳಲ್ಲಿ ಪ್ರತಿಷ್ಠಾಪಿಸಿ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಬುಧವಾರ ಆಯಾ ಬಡಾವಣೆಗಳ ಓಣಿ ಹುಡುಗರು ಕಾಮನ ಪ್ರತಿಕೃತಿ ಹೋತು ಬಾಯಿ ಬಾಯಿ ಬಡಿದುಕೋಳುತ್ತೆಲೇ ಮೋಜಿನ ಮೆರವಣಿಗೆ ನೆಡಸಿದ್ದು ಕಂಡುಬಂದಿತು.

ಇದೇ ವೇಳೆ, ಪತ್ರಿ ಮನೆಯಲ್ಲೂ ಕಾಮನಿನಗೆ ಹೋಳಿಗೆ ಇಲ್ಲವೆ ಬೆಲ್ಲ ಸಕ್ಕರೆ ನೈವೇದ್ಯ ಕೊಟ್ಟು ಕಾಮನಿನಗೆ ಅಂತಿಮ ವಿದಾಯ ಹೇಳಿದ್ದು ವಿಶೇಷವಾಗಿತ್ತು. ಇಲ್ಲಿಯ ಹಳಪೇಟೆ, ಚಿನಗುಂಡಿ ಪ್ಲಾಟ,ಇತರೆಡೆಗಳಲ್ಲಿ ಬುಧವಾರ ಬೆಳಗ್ಗಿನ ಜಾವ ಕಾಮದಹನವಾದರೆ ಸಾರ್ವಜನಿಕ ತರಕಾರಿ ಮಾರ್ಕೆಟ್ ಮತ್ತು ಕಿಲ್ಲಾ ಹೊಸಪೇಟೆ ನೆಹರು ನಗರ ಹಾಗೂ ಬಸರಿಗಿಡಪೇಟೆ ಓಣಿ ಮಧ್ಯಾಹ್ನದ ವೇಳೆಗೆ ಕಾಮ ದಹನ ಮಾಡಲಾಯಿತು.‌

ಇದನ್ನೂ ಓದಿ: Holi 2026: ಹಾವೇರಿ ಜಿಲ್ಲೆಯಲ್ಲಿ ಸಡಗರ ಸಂಭ್ರಮದಿಂದ ಹೋಳಿ ಆಚರಣೆ; ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನ

ಬೇವಿನೇಲೆ ಏಟು: ರತಿ ಮನ್ಮಥರ ಮೆರವಣಿಗೆ ಸಂದರ್ಭದಲ್ಲಿ ಬೇವಿನ ಎಲೆಗಳ ತಪ್ಪಲಿನಿಂದ ಏಟು ಹಾಕಿ ಬಾಯಿ ಬಾಯಿ ಬಡಿದು ಕೊಳ್ಳುತ್ತಾ ಕೇಕೇ ಹಾಕುತ್ತು ನಾನಾ ಬಗೆಯಲ್ಲಿ ಮನರಂಜಿಸುತ್ತ ಅಗ್ನಿ ಸ್ಪರ್ಶ ಮಾಡಿದರು.

ಇಂದು ರಂಗಿನಾಟ: ಕಾಮ ದಹನದ ಮರುದಿನ ಕೆರೂರ ಪಟ್ಟಣದಲ್ಲಿ ರಂಗಿನಾಟ ನಡೆಯುವದು ಇಲ್ಲಿಯ ವಾಡಿಕೆಯಂತೆ ಗುರುವಾರ ಬಣ್ಣದಾಟ ನಡೆಯಲಿದೆ. ಈಗಾಗಲೇ ಕೆಲ ಯುವಕರು ಬಣ್ಣದಾಟದ ಕಿರಿಕಿರಿವತಪ್ಪಿಸಲುಬಲು ಊರು ಬಿಟ್ಟು ಬೇರೆ ಬೇರೆ ಕಡೆಗಳಿಗಳಿಗೆ ತೆರಳಿದ್ದಾರೆ. ಮಲ್ಲಕಾಜಪ್ಪ ಗೌಡರ ತಿಪ್ಪಣ್ಣ ಬಂಗಾರಿ ಮಲ್ಲೇಶ ಸೂಳಿಕೇರಿ ಆನಂದ ಪರದೇಶಿ ಅರ್ಜನ ಹರದೂಳಿ ಬಸು ತಂಬೂರಿ ಸುನೀಲ ಗೌಡರ ಮಾರುತಿ ಪರದೇಶಿ ಅಶೋಕ ತಗ್ಗಿ ಅನಿಲ ಮುಳಗುಂದ ಶಿವಾನಂದ ಯಂಡಿಗೇರಿ ಕಪಿಲ ಪ್ಯಾಟಿ ಮಾಹಾಂತೇಶ ಹಳಕಟ್ಟಿ ಪೇಮನಾಥ ಬೀಳಗಿ ಮತ್ತಿತರರಿ ಇದ್ದರು.

ಕಡೆಲೆ ಗಡಿಗೆ ವಿಶೇಷ ವೈಶಿಷ್ಟ್ಯ

ಕಾಮನ ದಹಿಸುವ ಕಟ್ಟಿಗೆ ಬುಡದಲ್ಲಿ ಮೂದಲೇ ಹುದುಗಿಸಿಲಾದ ಕಡಲೆ ಗಡಗಿಯನ್ನು ಉರಿವ ಬೆಂಕಿ ನೆತ್ತಿ ಸುಡುವ ಬಿಸಿಲಿನಲ್ಲಿ ಉದ್ದನೆಯ ಕೋಲಿನ ಸಹಾಯದಿಂದ ತೆಗೆಯು ವಲ್ಲಿ ಓಣಿಯ ಹುಡುಗರು ಹರಸಹಾಸಪಟ್ಟು ಗಡಿಗೆ ತೆಗೆದುಕೊಂಡರು. ಆ ಕಾಮನ ಬೆಂಕಿ ಯಲ್ಲಿ ಬೆಂದ ಕಡಲೆತ ತಿಂದರೆ ಹಲ್ಲುಗಳು ಗಟ್ಟಿ ಆಗುತ್ತದೆ ಎಂಬ ನಂಬಿಕೆಯ ಪ್ರತೀತವಿದೆ ಎಂದು ಹಿರಿಯರಾದ ಶಂಕಪ್ಪ ತಗ್ಗಿ ಹೇಳಿದರು.