Crime News: ದೇಶವನ್ನೇ ಬೆಚ್ಚಿ ಬೀಳಿಸೋ ಘಟನೆ! ವಾಕಿಂಗ್‌ಗೆ ಕರ್ಕೊಂಡು ಹೋದ ಅಜ್ಜನಿಂದಲೇ ಮಗುವಿನ ಮೇಲೆ ಅತ್ಯಾಚಾರ
Physical Abuse: ಒಂದು ವರ್ಷದ ಮಗುವನ್ನು ವಿಹಾರಕ್ಕೆಂದು ಕರೆದುಕೊಂಡ ಅಜ್ಜನೇ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ತ್ರಿಪುರಾದ ಪಾಣಿಸಾಗರ್ ಪ್ರದೇಶದಲ್ಲಿ ನಡೆಸಿದೆ. ದಿನಗೂಲಿ ಕೆಲಸಗಾರನಾಗಿದ್ದ ಆರೋಪಿಯನ್ನು ಅಸ್ಸಾಂನ ನೀಲಂಬಜಾರ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.

-

ಅಗರ್ತಲ: ವಿಹಾರಕ್ಕೆಂದು (Outing) 14 ತಿಂಗಳ ಮಗುವನ್ನು ಕರೆದುಕೊಂಡು ಹೋಗಿದ್ದ ಅಜ್ಜನೊಬ್ಬ ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಲೆ (Crime) ಮಾಡಿರುವ ಭೀಕರ ಘಟನೆ ತ್ರಿಪುರಾದ (Tripura) ಪಾಣಿಸಾಗರ್‌ನಲ್ಲಿ ಶನಿವಾರ ನಡೆದಿದೆ. ಆರೋಪಿಯನ್ನು ದಿನಗೂಲಿ ಕಾರ್ಮಿಕ ಜಯನಾಲ್ ಉದ್ದೀನ್ ಎಂದು ಗುರುತಿಸಲಾಗಿದೆ. ತಾಯಿಯೊಂದಿಗೆ ಮಗು ಚಿಕ್ಕಪ್ಪನ ಮನೆಗೆ ಹೋಗುತ್ತಿದ್ದಾಗ ಆರೋಪಿಯು ಮಗುವನ್ನು ವಿಹಾರಕ್ಕೆಂದು ತನ್ನೊಂದಿಗೆ ಕರೆದುಕೊಂಡು ಹೋಗಿದ್ದು ಬಳಿಕ ಹಿಂದಿರುಗಿ ಬಂದಿರಲಿಲ್ಲ. ಆರೋಪಿಯನ್ನು ಭಾನುವಾರ ಪೊಲೀಸರು ಅಸ್ಸಾಂನ (Assam) ನೀಲಂಬಜಾರ್‌ನಲ್ಲಿ ಬಂಧಿಸಿದ್ದಾರೆ.
ಮಗುವಿನ ಮೇಲೆ ಅತ್ಯಾಚಾರ ನಡೆಸಿದ ಬಳಿಕ ಮಗುವನ್ನು ಜೀವಂತವಾಗಿಯೇ ಗದ್ದೆಯಲ್ಲಿ ಆರೋಪಿ ಜಯನಾಲ್ ಉದ್ದೀನ್ ಹೂತು ಹಾಕಿದ್ದಾನೆ. ಅಜ್ಜ ಮಗುವನ್ನು ಕರೆದುಕೊಂಡು ಹೋಗಿ ಸುಮಾರು ಮೂರು ಗಂಟೆಗಳಾದರೂ ಮರಳಿ ಬಾರದೇ ಇದ್ದುದರಿಂದ ಸುದ್ದಿ ಊರೆಲ್ಲ ಹಬ್ಬಿತು. ಎಲ್ಲರೂ ಸೇರಿ ಹುಡುಕಲು ಪ್ರಾರಂಭಿಸಿದರು. ಮಗುವಿನ ಶವ ಗದ್ದೆಯಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪಾಣಿಸಾಗರ್ ಪೊಲೀಸ್ ಠಾಣೆಯ ಅಧಿಕಾರಿ ಸುಮಂತ ಭಟ್ಟಾಚಾರ್ಜಿ ತಿಳಿಸಿದ್ದಾರೆ.
ಏನಾಗಿತ್ತು?
ಶನಿವಾರ ವಿಹಾರಕ್ಕೆಂದು ಮಗುವನ್ನು ಕರೆದುಕೊಂಡು ಹೋಗಿದ್ದ ಜಯನಾಲ್ ಉದ್ದೀನ್ ರಾತ್ರಿ ಎಂಟು ಗಂಟೆಯಾದರೂಮನೆಗೆ ಬರಲಿಲ್ಲ. ಇದು ಕುಟುಂಬ ಮತ್ತು ನೆರೆಹೊರೆಯವರಲ್ಲಿ ಆತಂಕ ಉಂಟು ಮಾಡಿತ್ತು. ಚಿಕ್ಕಪ್ಪನ ಮನೆಗೆ ಮಗುವನ್ನು ತಾಯಿಯ ಅಜ್ಜ ಜಯನಾಲ್ ಉದ್ದೀನ್ ವಿಹಾರಕ್ಕೆಂದು ಕರೆದುಕೊಂಡು ಹೋಗಿದ್ದ. ಕೂಡಲೇ ಕುಟುಂಬವು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿತು. ನೂರಾರು ಗ್ರಾಮಸ್ಥರು ತೀವ್ರ ಹುಡುಕಾಟದಲ್ಲಿ ತೊಡಗಿದರು.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯ ಅಸಾಮಾನ್ಯ ನಡವಳಿಕೆಯನ್ನು ಗುರುತಿಸಿ ಅವನನ್ನು ಅಸ್ಸಾಂನ ನೀಲಂ ಬಜಾರ್‌ನಲ್ಲಿ ಮರುದಿನವೇ ಬಂಧಿಸಿದರು. ವಿಚಾರಣೆ ಸಮಯದಲ್ಲಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ ಮತ್ತು ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ವಿಭಾಗಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪಾಣಿಸಾಗರ್ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ರಾಹುಲ್ ಬಲ್ಹಾರಾ ತಿಳಿಸಿದ್ದಾರೆ. ಮಗುವಿನ ಶವ ಮನೆಯ ಸಮೀಪವಿರುವ ಭತ್ತದ ಗದ್ದೆಯಲ್ಲಿ ಮಣ್ಣಿನಡಿಯಲ್ಲಿ ಪತ್ತೆಯಾಗಿದೆ. ಇದು ಸ್ಥಳೀಯರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.
ಇದನ್ನೂ ಓದಿ: Murder Case: ಐದು ತಿಂಗಳ ಹಿಂದೆಯಷ್ಟೇ ಕೈ ಹಿಡಿದವಳ ಕಥೆನೇ ಮುಗ್ಸಿದ ಪಾಪಿ ಪತಿ
ಮಕ್ಕಳ ಮೇಲೆ ಹೆಚ್ಚುತ್ತಿರುವ ಹಿಂಸಾಚಾರ
ಈಶಾನ್ಯದಲ್ಲಿ ಮಕ್ಕಳು ಮೇಲೆ ಹಿಂಸಾಚಾರಕ್ಕೆ ಸಂಬಂಧಿಸಿದ ಇತ್ತೀಚಿನ ಪ್ರಕರಣಗಳಲ್ಲಿ ಇದು ಒಂದಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಧಿಕೃತ ಮಾಹಿತಿಯ ಪ್ರಕಾರ ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ಅಪರಾಧಗಳ ವರದಿಗಳು ಆತಂಕಕಾರಿ ಏರಿಕೆಯನ್ನು ಕಂಡಿವೆ. ಇದು ತಡೆಗಟ್ಟುವ ಕ್ರಮಗಳು ಮತ್ತು ಕಾನೂನು ಜಾರಿಯಲ್ಲಿನ ವ್ಯವಸ್ಥಿತ ಅಂತರವನ್ನು ಇದು ಎತ್ತಿ ತೋರಿಸುತ್ತದೆ.