Murder Case: ಎರಡು ಅಮಾನುಷ ಘಟನೆ; ಹೆತ್ತ ತಾಯಿಯನ್ನೇ ಕತ್ತು ಸೀಳಿ ಕೊಂದ ಇಬ್ಬರು ಪುತ್ರರು!
Murder Case: ಜಮೀನು ಮಾರಾಟ ಮಾಡಿ ಬಂದ ಹಣ ಕೊಡಲಿಲ್ಲ ಎಂದು ಮಗ ತಾಯಿಯ ಕತ್ತು ಕೊಯ್ದ ಘಟನೆ ರಾಮನಗರದಲ್ಲಿ ನಡೆದಿದ್ದರೆ, ಕುಡಿಯಲು ಹಣ ಕೊಡಲಿಲ್ಲ ಎಂದು ಬಾಗಲಕೋಟೆಯಲ್ಲಿ ಮಗ ತಾಯಿಯ ಕುತ್ತಿಗೆ ನರ ಕತ್ತರಿಸಿದ್ದಾನೆ. ಇಬ್ಬರೂ ಪಾಪಿಗಳನ್ನು ಬಂಧಿಸಲಾಗಿದೆ.

-

ಬೆಂಗಳೂರು : ರಾಮನಗರ (Ramanagara) ಹಾಗೂ ಬಾಗಲಕೋಟೆಯಲ್ಲಿ (bagalakote) ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಇಬ್ಬರು ಗಂಡುಮಕ್ಕಳು ತಮ್ಮ ತಾಯಿಯ ಕತ್ತನ್ನೇ ಕತ್ತರಿಸಿ ಕೊಲೆ (Murder case) ಮಾಡಿದ್ದಾರೆ. ಜಮೀನು ಮಾರಾಟ ಮಾಡಿ ಬಂದ ಹಣ ಕೊಡಲಿಲ್ಲ ಎಂದು ಮಗ ತಾಯಿಯ ಕತ್ತು ಕೊಯ್ದ ಘಟನೆ ರಾಮನಗರದಲ್ಲಿ ನಡೆದಿದ್ದರೆ, ಕುಡಿಯಲು ಹಣ ಕೊಡಲಿಲ್ಲ ಎಂದು ಬಾಗಲಕೋಟೆಯಲ್ಲಿ ಮಗ ತಾಯಿಯ ಕುತ್ತಿಗೆ ನರ ಕತ್ತರಿಸಿದ್ದಾನೆ. ಇಬ್ಬರೂ ಪಾಪಿಗಳನ್ನು ಬಂಧಿಸಲಾಗಿದೆ.
ಜಮೀನು ಮಾರಿದ ಹಣಕ್ಕೆ ತಗಾದೆ
ಬೆಂಗಳೂರಿನಲ್ಲಿ (Bengaluru crime news) ಮತ್ತೊಂದು ಭೀಕರ ಹತ್ಯೆ (murder case) ನಡೆದಿದ್ದು, ಮಗನೊಬ್ಬ ತನ್ನ ಹೆತ್ತ ತಾಯಿಯ ಕತ್ತು ಸೀಳಿ ಕೊಲೆ ಮಾಡಿದ ಘಟನೆ ನಡೆದಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಜಾಲಮಂಗಲದಲ್ಲಿ ಸ್ವಂತ ಮಗನೇ ತಾಯಿಯನ್ನು ಕೊಲೆ ಮಾಡಿದ್ದಾನೆ. ಕೊಲೆಯಾದ ಮಹಿಳೆಯನ್ನು ಸರೋಜಮ್ಮ (60) ಎಂದು ಗುರುತಿಸಲಾಗಿದೆ. ಅನಿಲ್ (36) ತಾಯಿಯನ್ನೇ ಕೊಂದ ಮಗ.
ಇದನ್ನೂ ಓದಿ: Priyank Kharge: ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ ಆರೋಪಿ ಬಂಧನ
ಜಮೀನು ಮಾರಾಟ ಮಾಡಿ ಬಂದ ಹಣ ಕೊಡಲಿಲ್ಲ ಎಂದು ತಾಯಿಯಾದ ಸರೋಜಮ್ಮಳ ಕತ್ತು ಕೊಯ್ದಿದ್ದಾನೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಸರೋಜಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕುಡಿಯಲು ಹಣ ಕೊಡಲಿಲ್ಲವೆಂದು ಕೊಂದ
ಮದ್ಯ ಕುಡಿಯಲು ಹಣ ಕೊಡಲಿಲ್ಲ ಎಂದು ಹೆತ್ತ ತಾಯಿಯನ್ನೇ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದಿದೆ. 28 ವರ್ಷದ ವೆಂಕಟೇಶ್ ಗಿರಿಸಾಗರ ಎಂಬ ಪಾಪಿ ಮಗ ತನ್ನ ತಾಯಿ ಶಾವಕ್ಕ ಗಿರಿಸಾಗರ (58) ಅವರ ಕೈಕಾಲು ಕಟ್ಟಿ ಬಾಯಲ್ಲಿ ಬಟ್ಟೆ ತುರುಕಿ, ಕುತ್ತಿಗೆ ಕೊಯ್ದು ಕೊಲೆ ಮಾಡಿ ಬಳಿಕ ಪರಾರಿಯಾಗಿದ್ದಾನೆ.
ಸಂಜೆಯಾದರೂ ಶಾವಕ್ಕ ಕಾಣಿಸದಿದ್ದಾಗ ಅಕ್ಕಪಕ್ಕದವರು ಇಣುಕಿ ನೋಡಿದ್ದಾರೆ. ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿರುವುದು ಗೊತ್ತಾಗಿದೆ. ಕೂಡಲೇ ಕಲಾದಗಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವೆಂಕಟೇಶನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.